ಭೀಕರ ಅಪಘಾತ : ದೇವರ ದರ್ಶನಕ್ಕೆ ಹೋಗಿ ಬರುತ್ತಿದ್ದ ನವದಂಪತಿ ಸ್ಥಳದಲ್ಲೇ ಸಾವು – Kannada News | A Haveri based Newly Married Couple Dies In Road Accident in nh 48 Kadadahalli
ಹಾವೇರಿ, (ಮಾರ್ಚ್ 01): ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ನವದಂಪತಿ (New Couple) ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾವೇರಿ (Haveri) ಜಿಲ್ಲೆ ಶಿಗ್ಗಾಂವಿ ತಾಲೂಕಿನ ಕಡಹಳ್ಳಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ. ಕಾರ್ತಿಕ್ ಹೂಗಾರ(34), ಐಶ್ವರ್ಯಾ(30) ಮೃತ ದುರ್ದೈವಿಗಳು. ಕಾರ್ತಿಕ್, ಐಶ್ವರ್ಯಾ 15 ದಿನಗಳಿಂದ ಅಷ್ಟೇ ಮದುವೆಯಾಗಿದ್ದು, ಹೊಸ ಸಂಸಾರ ಪ್ರಾರಂಭಿಸುವ ಮುನ್ನ ದೇವರ ದರ್ಶನಕ್ಕೆ ಹೋಗಿ ಒಳ್ಳೇದು ಮಾಡಪ್ಪ ಎಂದು ಬೇಡಿಕೊಂಡು ಊರಿಗೆ ವಾಪಸ್ ಆಗುತ್ತಿದ್ದರು. ಆದ್ರೆ, ವಿಧಿ ಅರ್ಧ…