Headlines

ಕ್ಯಾನ್ಸರ್ ಔಷಧಿ ಬೆಲೆ ಕಡಿಮೆಗೊಳಿಸಲು ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿ, ತೀರ್ಪಿಗಾಗಿ ಕಾಯುತ್ತಲೇ ಪ್ರಾಣ ಬಿಟ್ಟ ಮಹಿಳೆ! – Kannada News | Kerala Woman Filed Petition For Cheaper Breast Cancer Drug She Died Waiting For Court Verdict

ತಿರುವನಂತಪುರಂ, ಜುಲೈ 11: ಕೆಲವೊಮ್ಮೆ ನ್ಯಾಯಾಲಯದ ವಿಳಂಬದ ತೀರ್ಪಿನಿಂದಾಗಿ ಆ ಅರ್ಜಿ ಸಲ್ಲಿಸಿದ ವ್ಯಕ್ತಿಗಳಿಗೆ ಯಾವೆಲ್ಲ ರೀತಿಯ ತೊಂದರೆಗಳಾಗುತ್ತವೆ ಎಂಬುದಕ್ಕೆ ಜ್ವಲಂತ ಉದಾಹರಣೆಯೊಂದು ಕೇರಳದಲ್ಲಿ ನಡೆದಿದೆ. ಕೇರಳದ ಎರ್ನಾಕುಲಂ ಮೂಲದ ಸ್ತನ ಕ್ಯಾನ್ಸರ್ ಪೀಡಿತ ಮಹಿಳೆಯೊಬ್ಬರು 2022ರ ಜೂನ್‌ನಲ್ಲಿ ಕೇರಳ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಸ್ತನ ಕ್ಯಾನ್ಸರ್​​ನಿಂದ (Breast Cancer) ಬಳಲುತ್ತಿದ್ದ ಈ ಮಹಿಳೆ ಪ್ರತಿ ತಿಂಗಳು ಆ ಕ್ಯಾನ್ಸರ್​​ನ ಔಷಧಿಗೆ ಲಕ್ಷಾಂತರ ರೂ. ಖರ್ಚು ಮಾಡಲಾಗದೆ ಕ್ಯಾನ್ಸರ್​​ನ ಔಷಧದದ ಬೆಲೆಯನ್ನು ಕಡಿಮೆಗೊಳಿಸಲು ಆದೇಶ ನೀಡಿ…

Read More

NEET ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಿ, ಯಾವುದೇ ರಾಜಿ ಬೇಡ; ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸೂಚನೆ – Kannada News | Union Education Minister Dharmendra Pradhan Chairs High Level Meeting on NEET UG Re Exam

ನವದೆಹಲಿ, ಮೇ 19: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ (NEET Paper Leak Case) ಸಿಬಿಐ ತನಿಖೆಯ ಬಳಿಕ ಈಗಾಗಲೇ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಕೋಚಿಂಗ್ ಕ್ಲಾಸ್​​ನಲ್ಲಿಯೇ ಪ್ರಶ್ನೆ ಪೇಪರ್​ಗಳನ್ನು ಹಂಚಲಾಗಿತ್ತು ಎಂಬ ವಿಷಯ ಹೊರಬಿದ್ದಿದೆ. ಇದರ ನಡುವೆ ಕೇಂದ್ರ ಸರ್ಕಾರವು ನೀಟ್ ಮರು ಪರೀಕ್ಷೆಯ ಬಗ್ಗೆ ಗಮನಹರಿಸಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಪರಿಶೀಲನಾ ಸಭೆಯಲ್ಲಿ ಬಿಗಿ ಭದ್ರತೆ, ಸಿಸಿಟಿವಿ ಕಣ್ಗಾವಲು ಮತ್ತು ಪಾರದರ್ಶಕವಾಗಿ ಪರೀಕ್ಷೆಯ ನಿರ್ವಹಣೆಯ ಕುರಿತು ಪ್ರಮುಖ…

Read More

‘ಸಿಟಿ ಲೈಟ್ಸ್’ ಬಿಡುಗಡೆಗೆ ಸೇಫ್ ದಿನ ನಿಗದಿ ಮಾಡಿದ ದುನಿಯಾ ವಿಜಿ – Kannada News | Vinay Rajkumar and Duniya Vijay’s City Lights movie release date announced

ದುನಿಯಾ ವಿಜಯ್ (Duniya Vijay), ಯಶಸ್ವಿ ನಾಯಕನ ಜೊತೆಗೆ ಯಶಸ್ವಿ ನಿರ್ದೇಶಕ ಸಹ. ಈ ವರೆಗೆ ಅವರು ನಿರ್ದೇಶನ ಮಾಡಿರುವ ಎರಡೂ ಸಿನಿಮಾಗಳು ಹಿಟ್ ಎನಿಸಿಕೊಂಡಿವೆ. ದುನಿಯಾ ವಿಜಿ ನಿರ್ದೇಶಿಸಿದ ಎರಡೂ ಸಿನಿಮಾಗಳಲ್ಲಿ ಅವರೇ ನಾಯಕರಾಗಿದ್ದರು. ಆದರೆ ಇದೇ ಮೊದಲ ಬಾರಿಗೆ ದುನಿಯಾ ವಿಜಯ್ ಮತ್ತೊಬ್ಬ ನಾಯಕನಿಗಾಗಿ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಅದುವೇ ‘ಸಿಟಿ ಲೈಟ್ಸ್’. ಚಾರ್ಲಿ ಚಾಪ್ಲಿನ್ ಅವರ ಜನಪ್ರಿಯ ಸಿನಿಮಾದ ಹೆಸರನ್ನೇ ಇರಿಸಿ ಸಿನಿಮಾ ನಿರ್ದೇಶನ ಮಾಡಿದ್ದಾರೆ ದುನಿಯಾ ವಿಜಿ, ಸಿನಿಮಾನಲ್ಲಿ ವಿನಯ್ ರಾಜ್​​ಕುಮಾರ್…

Read More

ಮೊಬೈಲ್ ಇದ್ರೆ ಸಾಕು ರೇಷನ್ ಕಾರ್ಡ್‌ ಇ-ಕೆವೈಸಿ ಸ್ಥಿತಿ ಪರಿಶೀಲಿಸ್ಬಹುದು – Kannada News | Ration Card: Check your ration card status on your mobile from the comfort of your home.

ರೇಷನ್ ಕಾರ್ಡ್ ಇ-ಕೆವೈಸಿಯೂ (Ration Card E-KYC) ಪಡಿತರ ಚೀಟಿದಾರರ ಗುರುತನ್ನು ಆಧಾರ್  ಕಾರ್ಡ್‌ ಮೂಲಕ ದೃಢೀಕರಿಸುವ ಪ್ರಕ್ರಿಯೆಯಾಗಿದೆ. ಸರ್ಕಾರದ ಸೌಲಭ್ಯಗಳನ್ನು ಪಡೆಯಲು, ನಕಲಿ ಕಾರ್ಡ್‌ಗಳನ್ನು ತಪ್ಪಿಸಲು ಹಾಗೂ ಅರ್ಹರಿಗೆ ನೇರವಾಗಿ ಸಬ್ಸಿಡಿ ತಲುಪಿಸಲು ರೇಷನ್ ಕಾರ್ಡ್ ಇ-ಕೆವೈಸಿ ಮಾಡುವುದು ಕಡ್ಡಾಯವಾಗಿದೆ. ಆದರೆ ನಿಮ್ಮ ರೇಷನ್ ಕಾರ್ಡ್ ಇ-ಕೆವೈಸಿ ಆಗಿದೆಯೇ ಎಂದು ನೀವು ಮೊಬೈಲ್‌ನಲ್ಲಿ ಪರಿಶೀಲಿಸಬಹುದು. ಆನ್ಲೈನ್‌ನಲ್ಲಿ ಪರಿಶೀಲಿಸುವುದು ಹೇಗೆ? ಹಂತ 1: ನೀವು ಅಧಿಕೃತ ಆಹಾರ ಕರ್ನಾಟಕ ವೆಬ್‌ಸೈಟ್ ಗೆ ಭೇಟಿ ನೀಡಿ. ಹಂತ 2:…

Read More

ಐದು ಕಿಲೋ ಎಲ್​ಪಿಜಿ ಸಿಲಿಂಡರ್ ಹಂಚಿಕೆ ಎರಡು ಪಟ್ಟು ಹೆಚ್ಚಳ; ವಲಸೆ ಕಾರ್ಮಿಕರಿಗೆ ನಿರಾಳ

ನವದೆಹಲಿ, ಏಪ್ರಿಲ್ 7: ಎಲ್​ಪಿಜಿ ಬಿಕ್ಕಟ್ಟಿನಿಂದ ಬಹಳ ಕಷ್ಟ ಎದುರಿಸುತ್ತಿರುವ ವರ್ಗಗಳಲ್ಲಿ ವಲಸಿಗ ಕಾರ್ಮಿಕರಿದ್ದಾರೆ (Migrant workers). ಇವರಿಗೆ ನಿರಾಳ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಸಣ್ಣ ಎಲ್​ಪಿಜಿ ಸಿಲಿಂಡರ್​ಗಳ ಪೂರೈಕೆಯನ್ನು ಹೆಚ್ಚಿಸಿದೆ. ವರದಿಗಳ ಪ್ರಕಾರ ಸರ್ಕಾರವು ಎಲ್ಲಾ ರಾಜ್ಯಗಳಿಗೂ 5 ಕಿಲೋ ತೂಕದ ಫ್ರೀ ಟ್ರೇಡ್ ಎಲ್​ಪಿಜಿ ಸಿಲಿಂಡರ್​ಗಳ (5 kg free trade LPG cylinder) ಹಂಚಿಕೆಯನ್ನು ಎರಡು ಪಟ್ಟು ಹೆಚ್ಚಿಸಿದೆ. ಇದರಿಂದ ಈ ಸಣ್ಣ ಗ್ಯಾಸ್ ಸಿಲಿಂಡರ್ ಲಭ್ಯತೆ ದ್ವಿಗುಣಗೊಂಡಿದೆ. ವಲಸಿಗ ಕಾರ್ಮಿಕರಿಗೆ…

Read More

ಗೌತಮ್ ಗಂಭೀರ್ ಸಲಹೆಯಿಂದ ಭಾರತದ ವಿರುದ್ಧ ಅಬ್ಬರಿಸಿದ ಗುರ್ಬಾಝ್! – Kannada News | Gurbaz Smashes Historic ODI Ton Against India After Gambhir’s Tips

ಟೀಮ್ ಇಂಡಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ್ ತಂಡದ ಆರಂಭಿಕ ದಾಂಡಿಗ ರಹಮಾನುಲ್ಲಾ ಗುರ್ಬಾಝ್ ಸ್ಫೋಟಕ ಶತಕ ಸಿಡಿಸಿದ್ದರು. ಈ ಶತಕದ ಬೆನ್ನಲ್ಲೇ, ಈ ಸಾಧನೆಯ ಹಿಂದೆ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಅಮೂಲ್ಯ ಸಲಹೆಗಳಿರುವ ವಿಚಾರ ಬಹಿರಂಗವಾಗಿದೆ. ಈ ವಿಚಾರವನ್ನು ಬಹಿರಂಗಪಡಿಸಿದ್ದು ಮತ್ಯಾರೂ ಅಲ್ಲ, ರಹಮಾನುಲ್ಲಾ ಗುರ್ಬಾಝ್. ಇದಕ್ಕೂ ಮುನ್ನ ನಡೆದ ಏಕೈಕ ಟೆಸ್ಟ್ ಪಂದ್ಯದ ಮುಕ್ತಾಯದ ನಂತರ, ತಮ್ಮ ಬ್ಯಾಟಿಂಗ್ ಶೈಲಿ ಹಾಗೂ ಶಾಟ್ ಆಯ್ಕೆಯನ್ನು ಸುಧಾರಿಸಿಕೊಳ್ಳಲು ಗುರ್ಬಾಝ್ ಅವರು…

Read More

‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್

ಕಿಚ್ಚ ಸುದೀಪ್ ಅವರು ‘ಮಾರ್ಕ್’ ಸಿನಿಮಾ ವೀಕ್ಷಣೆಗೆ ಮೈಸೂರಿನ ಸಂಗಮ ಚಿತ್ರಮಂದಿರಕ್ಕೆ ತೆರಳಿದ್ದರು. ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಸುದೀಪ್, ಅಭಿಮಾನಿಗಳಿಗೆ ಹೊಸ ವರ್ಷದ ವಿಶ್ ತಿಳಿಸಿದರು. ‘ನಗ್ತಾ ಇರಿ, ಖುಷಿ ಖುಷಿಯಿಂದ ಇರಿ’ ಎಂದು ಕೋರಿದ್ದಾರೆ. ಅವರ ವಿಶ್​​ಗೆ ಫ್ಯಾನ್ಸ್ ಖುಷಿಯಾಗಿದ್ದಾರೆ. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ. Source link

Read More

ಮಹಿಳೆಯರಲ್ಲಿ ವಿಟಮಿನ್ ಡಿ ಕೊರತೆಯಾದಾಗ ಈ ರೀತಿಯ ಲಕ್ಷಣಗಳು ಕಂಡುಬರುತ್ತೆ, ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ! – Kannada News | Women and Vitamin D Deficiency: Signs and Solutions

ಇತ್ತೀಚಿನ ದಿನಗಳಲ್ಲಿ, ಮಹಿಳೆಯರಲ್ಲಿ ವಿಟಮಿನ್ ಡಿ (Vitamin D) ಕೊರತೆ ವೇಗವಾಗಿ ಹೆಚ್ಚುತ್ತಿರುವುದು ಕಂಡುಬರುತ್ತಿದೆ. ಇದಕ್ಕೆಲ್ಲಾ ಬದಲಾಗುತ್ತಿರುವ ಜೀವನಶೈಲಿಯೇ ಕಾರಣವಾಗಿದೆ. ಮನೆ ಅಥವಾ ಆಫೀಸ್ ಒಳಗಡೆ ಹೆಚ್ಚು ಸಮಯ ಕಳೆಯುವುದು, ಬಿಸಿಲಿಗೆ ಹೋಗದಿರುವುದು ಮತ್ತು ಸನ್‌ಸ್ಕ್ರೀನ್ ಅನ್ನು ಅತಿಯಾಗಿ ಬಳಸುವುದು ದೇಹದಲ್ಲಿ ವಿಟಮಿನ್ ಡಿ ಉತ್ಪಾದಿಸುವ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಅದರ ಜೊತೆಗೆ ಆಹಾರದಲ್ಲಿ ಪೋಷಕಾಂಶಗಳ ಕೊರತೆ, ಹಾಲು ಮತ್ತು ಡೈರಿ ಉತ್ಪನ್ನಗಳ ಬಳಕೆಯನ್ನು ಕಡಿಮೆ ಮಾಡುವುದು, ಬೊಜ್ಜು ಮತ್ತು ಹಾರ್ಮೋನುಗಳ ಬದಲಾವಣೆ ಸಹ ಇದಕ್ಕೆ…

Read More

ಮೊದಲ ಗೆಲುವನ್ನು 11 ಮಂದಿಗೆ ಅರ್ಪಿಸಿದ RCB

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್​-19 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶುಭಾರಂಭ ಮಾಡಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ ಉದ್ಘಾಟನಾ ಪಂದ್ಯದಲ್ಲಿ ಎಸ್​ಆರ್​ಹೆಚ್ ತಂಡವನ್ನು ಬಗ್ಗು ಬಡಿದು ಆರ್​ಸಿಬಿ ಗೆಲುವಿನ ಖಾತೆ ತೆರೆದಿದೆ. “ಈ ಗೆಲುವನ್ನು ನಾವು ಕಳೆದುಕೊಂಡ ಆ 11 ಅಭಿಮಾನಿಗಳಿಗೆ ಅರ್ಪಿಸುತ್ತೇವೆ”  ಎಂದಿದ್ದಾರೆ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್. 2026ರ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದ…

Read More

ಮೀಸಲಾತಿ ಕುರಿತು ಶಿಲ್ಪಾ ಶೆಟ್ಟಿ ನಕಲಿ ಹೇಳಿಕೆ ವೈರಲ್: ‘ಸಂಪೂರ್ಣ ಸುಳ್ಳು’ ಎಂದು ಖಂಡಿಸಿದ ನಟಿ – Kannada News | Shilpa Shetty Slams Fake Reservation Statement Viral Post Clarification

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ಅವರ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಒಂದು ನಕಲಿ ಪೋಸ್ಟ್ ಹರಿದಾಡುತ್ತಿದೆ. ಅದನ್ನು ನೋಡಿದ ಅನೇಕರು ಶಿಲ್ಪಾ ಶೆಟ್ಟಿ ಅವರನ್ನು ಕಟುವಾಗಿ ಟೀಕಿಸಲು ಆರಂಭಿಸಿದ್ದಾರೆ. ವೈರಲ್ ಆಗಿರುವ ಪೋಸ್ಟ್​ನಲ್ಲಿ ಶಿಲ್ಪಾ ಶೆಟ್ಟಿ ಅವರು ಜಾತಿ ಆಧಾರಿತ ಮೀಸಲಾತಿ (Reservation) ಬಗ್ಗೆ ವಿರೋಧಿ ನಿಲುವು ಹೊಂದಿದ್ದಾರೆ ಎಂಬುದನ್ನು ಸೂಚಿಸಲಾಗಿದೆ. ಆದರೆ ಅದು ನಕಲಿ ಪೋಸ್ಟ್ ಆಗಿದ್ದು, ಅದರ ವಿರುದ್ಧ ಶಿಲ್ಪಾ ಶೆಟ್ಟಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಪಷ್ಟನೆ ನೀಡಿದ ಶಿಲ್ಪಾ…

Read More