ರಾಮಾಯಣದ ಬಗ್ಗೆ ಪ್ರಕಾಶ್ ರಾಜ್ ಮಾತನಾಡಿದ ವಿಡಿಯೋ ವೈರಲ್; ತೀವ್ರ ಟೀಕೆ – Kannada News | Prakash Raj gets trolled for saying Ram a North Indian and Ravan a South Indian
ಬಹುಭಾಷಾ ನಟ ಪ್ರಕಾಶ್ ರಾಜ್ (Prakash Raj) ಅವರು ರಾಜಕೀಯದ ವಿಷಯಗಳ ಬಗ್ಗೆ ಆಗಾಗ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ಬಿಜೆಪಿ ನಿಲುವುಗಳನ್ನು ಅವರು ಆಗಾಗ ವಿರೋಧಿಸುತ್ತಾರೆ. ಆ ಕಾರಣದಿಂದ ಅವರನ್ನು ವಿರೋಧಿಗಳು ಟ್ರೋಲ್ ಮಾಡುತ್ತಾರೆ. ಕೇರಳ ಸಾಹಿತ್ಯ ಉತ್ಸವದ ವೇದಿಕೆಯಲ್ಲಿ ಪ್ರಕಾಶ್ ರಾಜ್ ಅವರು ಮಾತನಾಡಿದ್ದ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಅವರು ರಾಮಾಯಣದ (Ramayana) ಬಗ್ಗೆ ಮಾತನಾಡಿದ್ದಾರೆ. ಈಗಿನ ರಾಜಕೀಯ ಪರಿಸ್ಥಿತಿಯ ವಿಡಂಬನೆಗೆ ಅವರು ರಾಮಾಯಣವನ್ನು ಉದಾಹರಣೆಯಾಗಿ ತೆಗೆದುಕೊಂಡಿದ್ದಾರೆ. ಆದರೆ ಅವರು ಮಾತನಾಡಿದ್ದನ್ನು ಅನೇಕರು ಖಂಡಿಸುತ್ತಿದ್ದಾರೆ….