Headlines

Dharmasthala Temple: ಚಂದ್ರ ಗ್ರಹಣ ಹಿನ್ನೆಲೆ ಧರ್ಮಸ್ಥಳದಲ್ಲಿ ದೇವರ ದರ್ಶನ ಸಮಯ ಬದಲಾವಣೆ – Kannada News | Dharmasthala Temple Alters Darshan Timings for March 3rd Lunar Eclipse

ದಕ್ಷಿಣ ಕನ್ನಡ, ಫೆಬ್ರವರಿ 28: ಮಾರ್ಚ್ 3 ರಂದು ಸಂಭವಿಸಲಿರುವ ರಕ್ತ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಭಕ್ತಾದಿಗಳ ದೇವರ ದರ್ಶನ ಸಮಯವನ್ನು ತಾತ್ಕಾಲಿಕವಾಗಿ ಬದಲಾಯಿಸಲಾಗಿದೆ. ದೇವಸ್ಥಾನದ ಆಡಳಿತ ಮಂಡಳಿಯು ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಭಕ್ತರಿಗೆ ಅಗತ್ಯ ಸೂಚನೆಗಳನ್ನು ನೀಡಿದೆ. ಪ್ರಕಟಣೆಯ ಪ್ರಕಾರ, ಮಾರ್ಚ್ 3 ರಂದು ಮಧ್ಯಾಹ್ನ 1:30ರವರೆಗೆ ಮಾತ್ರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿರುತ್ತದೆ. ರಕ್ತ ಚಂದ್ರಗ್ರಹಣದ ಅವಧಿ ಮುಗಿದ ನಂತರ, ಅಂದರೆ ರಾತ್ರಿ 7:30ರಿಂದ ಪುನಃ…

Read More

ಚಿಕ್ಕಪ್ಪ ಪವನ್ ಕಲ್ಯಾಣ್ ದಾಖಲೆ ಮುರಿದ ರಾಮ್ ಚರಣ್ – Kannada News | Ram Charan’s Peddi Movie beats Pawan Kalyan’s OG movie record

ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ಹಲವು ಮುಂದೂಡಿಕೆಗಳ ಬಳಿಕ ಕೊನೆಗೂ ಜೂನ್ 4 ರಂದು ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರವನ್ನು ಚಿತ್ರತಂಡ ಇನ್ನೂ ಪ್ರಾರಂಭ ಮಾಡಿಲ್ಲ. ಪ್ರಸ್ತುತ ಸಿನಿಮಾದ ಪ್ರೀ ರಿಲೀಸ್ ಸೇಲ್​​ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ. ಸಿನಿಮಾಕ್ಕೆ ಸಾಕಷ್ಟು ಹೈಪ್ ಸೃಷ್ಟಿಯಾಗಿದ್ದು, ಸಿನಿಮಾ ಪ್ಯಾನ ಇಂಡಿಯಾ ಲೆವೆಲ್​​ನಲ್ಲಿ ಬಿಡುಗಡೆ ಆಗಲಿದೆ. ಅಮೆರಿಕ ಅದರಲ್ಲೂ ಉತ್ತರ ಅಮೆರಿಕ ಮಾರುಕಟ್ಟೆಯ ಮೇಲೆ ಹೆಚ್ಚು ಗಮನವನ್ನು ‘ಪೆದ್ದಿ’ ಚಿತ್ರತಂಡ ವಹಿಸಿದೆ. ಇದೀಗ ‘ಪೆದ್ದಿ’ ಸಿನಿಮಾವು ನಾಯಕ ರಾಮ್…

Read More

ಅತಿಯಾದ ಫಾಸ್ಟ್ ಫುಡ್ ಸೇವನೆಯಿಂದ 11ನೇ ತರಗತಿ ವಿದ್ಯಾರ್ಥಿನಿ ಸಾವು – Kannada News | Amroha Fast Food Tragedy: The Silent Killer Damaging Children’s Digestion

ಹೊರಗಿನ ಆಹಾರಗಳನ್ನು ತಿನ್ನುವ ಮುನ್ನ ಸಾವಿರ ಬಾರಿ ಯೋಚನೆ ಮಾಡಬೇಕು. ಏಕೆಂದರೆ ಅದು ನಮ್ಮ ದೇಹದ ಮೇಲೆ ದೊಡ್ಡ ಪರಿಣಾಮವನ್ನು ಉಂಟು ಮಾಡಬಹುದು. ಇದೀಗ ಇದಕ್ಕೆ ಸಂಬಂಧಿಸಿದಂತೆ ಸುದ್ದಿ ಭಾರೀ ವೈರಲ್​​ ಆಗಿದೆ. ಫಾಸ್ಟ್ ಫುಡ್(Fast Food )ತಿಂದು ಇದೀಗ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ನಡೆದಿದೆ. 11ನೇ ತರಗತಿಯ ವಿದ್ಯಾರ್ಥಿನಿ ಫಾಸ್ಟ್ ಫುಡ್ ಸೇವಿಸಿ, ತೀವ್ರ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾಳೆ. ಅಹಾನಾ ಎಂಬ ಬಾಲಕಿ ದೆಹಲಿಯ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ ಎಂದು…

Read More

ಮೊದಲ ಓವರ್​ನಲ್ಲೇ ತೂಫಾನ್… ಹೊಸ ಇತಿಹಾಸ ನಿರ್ಮಾಣ – Kannada News | Most expensive 1st over of WPL season

ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಮೊದಲ ಓವರ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾಗಿದೆ. ಅದು ಕೂಡ ಬರೋಬ್ಬರಿ 23 ರನ್​ಗಳಿಸುವ ಮೂಲಕ. ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ತಂಡವು ಪ್ರಥಮ ಓವರ್​ನಲ್ಲಿ ಬರೋಬ್ಬರಿ 23 ರನ್​ ಕಲೆಹಾಕಿತು. ಹೀಗೆ 23 ರನ್​ ಬಿಟ್ಟು ಕೊಟ್ಟಿರುವುದು ಆರ್​ಸಿಬಿ ತಂಡದ ಮಾಜಿ ವೇಗಿ ರೇಣುಕಾ ಸಿಂಗ್ ಠಾಕೂರ್. ಗುಜರಾಜ್ ಜೈಂಟ್ಸ್ ಪರ ಮೊದಲ…

Read More

SRH vs RR: ಅತಿ ಹೆಚ್ಚು ಸಿಕ್ಸರ್; ಕ್ರಿಸ್ ಗೇಲ್ ದಾಖಲೆ ಮುರಿದ ವೈಭವ್ ಸೂರ್ಯವಂಶಿ

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಸಿಕ್ಸರ್ ಮತ್ತು ಬೌಂಡರಿಗಳ ಮಳೆ ಸುರಿಸಿ ಕೇವಲ 29 ಎಸೆತಗಳಲ್ಲಿ 97 ರನ್ ಬಾರಿಸಿದರು. ಕೂದಲೆಳೆ ಅಂತರದಲ್ಲಿ ಶತಕ ವಂಚಿತರಾದ ವೈಭವ್ ಕೇವಲ 3 ರನ್‌ಗಳಿಂದ ಐಪಿಎಲ್ ಇತಿಹಾಸದಲ್ಲಿ ಅತಿ ವೇಗದ ಶತಕವನ್ನು ತಪ್ಪಿಸಿಕೊಂಡರು. ವೈಭವ್ ಈ ಶತಕವನ್ನು ಪೂರೈಸಿದ್ದರೆ, ಅದು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗದ ಶತಕವಾಗುತ್ತಿತ್ತು. ಈ ಮೂಲಕ ವೈಭವ್ ಕ್ರಿಸ್ ಗೇಲ್ ಅವರ ದಾಖಲೆಯನ್ನು ಮುರಿಯುತ್ತಿದ್ದರು. 2013 ರ ಐಪಿಎಲ್‌ನಲ್ಲಿ ಕ್ರಿಸ್ ಗೇಲ್…

Read More

ಚಿನ್ನಕ್ಕಿಂತಲೂ ಬಿಟ್​ಕಾಯಿನ್ ಒಂದು ಕೈ ಮೇಲೆ ಎನ್ನುತ್ತಿದ್ದ ಮಾರ್ಕ್ ಕ್ಯೂಬನ್ ಈಗ ಕೈಚೆಲ್ಲಿ ಕೂತ ಕಥೆ..!

ಬಿಟ್​ಕಾಯಿನ್ ಸಾಂದರ್ಭಿಕ ಚಿತ್ರImage Credit source: Getty Images ವಾಷಿಂಗ್ಟನ್, ಮೇ 29: ಒಂದಾನೊಂದು ಕಾಲದಲ್ಲಿ ಕ್ರಿಪ್ಟೋಕರೆನ್ಸಿ (crypto currency) ಪರವಾಗಿ ಅತ್ಯಂತ ಪ್ರಬಲವಾಗಿ ಧ್ವನಿ ಎತ್ತುತ್ತಿದ್ದ ಅಮೆರಿಕದ ಬಿಲಿಯನೇರ್ ಉದ್ಯಮಿ ಮತ್ತು ‘ಶಾರ್ಕ್ ಟ್ಯಾಂಕ್’ (Shark Tank) ಕಾರ್ಯಕ್ರಮದ ಮಾಜಿ ಹೂಡಿಕೆದಾರ ಮಾರ್ಕ್ ಕ್ಯೂಬನ್ (Mark Cuban) ಈಗ ವರಸೆ ಬದಲಿಸಿದ್ದಾರೆ. ತಮಗೆ ಸೇರಿದ ಬಹುಪಾಲು ಬಿಟ್‌ಕಾಯಿನ್ (Bitcoin) ಹೂಡಿಕೆಯನ್ನು ಮಾರಾಟ ಮಾಡಿರುವುದಾಗಿ ಅವರು ಬಹಿರಂಗಪಡಿಸಿದ್ದಾರೆ. ಜಾಗತಿಕ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಸುರಕ್ಷಿತ…

Read More

ಮುಂಬೈ ಇಂಡಿಯನ್ಸ್​ಗೆ ನ್ಯಾಯ… ಡೆಲ್ಲಿ ಕ್ಯಾಪಿಟಲ್ಸ್​ಗೆ ಅನ್ಯಾಯ..!

IPL 2026: ಐಪಿಎಲ್ 2026ರ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಓವರ್ ಮಧ್ಯದಲ್ಲಿ ಗ್ಲೌಸ್ ಬದಲಾಯಿಸಿದ್ದು ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಕ್ರಿಕೆಟ್ ಅಭಿಮಾನಿಗಳು ಮತ್ತು ವಿಶ್ಲೇಷಕರು ಅಂಪೈರ್‌ಗಳ ನಿರ್ಧಾರದ ಬಗ್ಗೆ ಪ್ರಶ್ನೆ ಎತ್ತುತ್ತಿದ್ದಾರೆ. ಏನಿದು ಘಟನೆ? ಆರ್‌ಸಿಬಿ ವಿರುದ್ಧದ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮಾಡುತ್ತಿದ್ದಾಗ, ಓವರ್ ಮುಗಿಯುವ ಮೊದಲೇ ಹೊಸ ಗ್ಲೌಸ್ ಬೇಕೆಂದು ಕೇಳಿದರು. ಆರಂಭದಲ್ಲಿ ಅಂಪೈರ್‌ಗಳು ಇದಕ್ಕೆ ಅನುಮತಿ ನೀಡದಿದ್ದರೂ, ನಂತರ ಪಾಂಡ್ಯ…

Read More

ಭಾರಿ ಮಳೆ ಗಾಳಿಗೆ ಹೊಸಕೋಟೆ ಟೋಲ್ ಪ್ಲಾಜಾ ಬಳಿ ಮುರಿದು ಬಿದ್ದ ಬೃಹತ್ ಜಾಹೀರಾತು ಫಲಕ

ಬೆಂಗಳೂರು, (ಮೇ 22): ಭಾರೀ ಮಳೆಗೆ (heavy rain) ಹೊಸಕೋಟೆ (Hoskote) ಟೋಲ್ ಸಮೀಪ ಬೃಹತ್ ಜಾಹೀರಾತು ಫಲಕ ಧರೆಗೆ ಬಿದ್ದಿದೆ. ದೊಡ್ಡ ಅಮಾನಿಕೆರೆ ನಾಲದ ರಾಜಕಾಲುವೆ ದಂಡೆ ಮೇಲೆ ಇದ್ದ ಬೃಹತ್ ಜಾಹಿರಾತು ಫಲಕ ಮತ್ತು ಎರಡು ಬೃಹತ್ ಕಂಬಗಳು ಗುರುವಾರ ಸಂಜೆ ಬಿರುಗಾಳಿಯ ರಭಸಕ್ಕೆ ಹೆದ್ದಾರಿ ಸರ್ವಿಸ್ ರಸ್ತೆಯಲ್ಲಿ ಚಲಿಸುತ್ತಿದ್ದ ಈಚರ್ ವಾಹನದ ಮೇಲೆ ಬಿದ್ದಿದೆ. ನಾಮಫಲಕ ಬಿದ್ದ ರಭಸಕ್ಕೆ ಕ್ಯಾಂಟರ್ ವಾಹನ ಸಂಪೂರ್ಣ ನುಚ್ಚುನೂರಾಗಿದ್ದು, ಬಾರಿ ಅನಾಹುತ ತಪ್ಪಿದಂತಾಗಿದೆ. ಈ ಘಟನೆಯಿಂದಾಗಿ ಸರ್ವಿಸ್…

Read More

ಈ ವಾರ ಒಟಿಟಿಗೆ ಬಂದ ಸಿನಿಮಾಗಳಿವು, ‘ಜೆರಾಕ್ಸ್’ ಮಿಸ್ ಮಾಡ್ಬೇಡಿ – Kannada News | OTT Release this week from April 20 to April 25

ನಾಗಭೂಷಣ್, ಓಂ ಪ್ರಕಾಶ್ ರಾವ್ ಇನ್ನೂ ಹಲವು ಪ್ರತಿಭಾವಂತ ಕಲಾವಿದರು ನಟಿಸಿರುವ ‘ಜೆರಾಕ್ಸ್’ ಹೆಸರಿನ ಕನ್ನಡ ವೆಬ್ ಸರಣಿ ಈ ವಾರ ಒಟಿಟಿಗೆ ಬಂದಿದೆ. ಮನುಷ್ಯರನ್ನು ಝೆರಾಕ್ಸ್ ಮಾಡುವ ಭಿನ್ನ ರೀತಿಯ ಕಾನ್ಸೆಪ್ಟ್ ಅನ್ನು ಈ ವೆಬ್ ಸರಣಿ ಒಳಗೊಂಡಿದೆ. ವೆಬ್ ಸರಣಿಯನ್ನು ಜೀ5ನಲ್ಲಿ ವೀಕ್ಷಿಸಬಹುದಾಗಿದೆ. Source link

Read More

Bengaluru Traffic advisory: ವಾಹನ ಸವಾರರ ಗಮನಕ್ಕೆ, ಬೆಂಗಳೂರಿನ ಈ ರಸ್ತೆಗಳಲ್ಲಿಂದು ಸಂಚಾರ ಬದಲಾವಣೆ – Kannada News

ಬೆಂಗಳೂರು, ಜೂನ್ 11: ಬೆಂಗಳೂರಿನ (Bengaluru) ಫ್ರೀಡಂ ಪಾರ್ಕ್‌ನಲ್ಲಿ ಇಂದು (ಜೂನ್ 11, ಗುರುವಾರ) ಕರ್ನಾಟಕ ದಲಿತ ಸಂಘಟನೆಗಳ ಸಮಿತಿ ವತಿಯಿಂದ ಬೃಹತ್ ಪ್ರತಿಭಟನಾ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪ್ರತಿಭಟನೆ ನಡೆಯಲಿದ್ದು, ಸುಗಮ ವಾಹನ ಸಂಚಾರಕ್ಕಾಗಿ ಬೆಂಗಳೂರು ಸಂಚಾರ ಪೊಲೀಸರು ತಾತ್ಕಾಲಿಕ ಸಂಚಾರ ನಿರ್ಬಂಧ ಹಾಗೂ ಸಂಚಾರಕ್ಕೆ ಪರ್ಯಾಯ ಮಾರ್ಗಗಳಳನ್ನು ಪ್ರಕಟಿಸಿದ್ದಾರೆ. ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆ ಇರುವುದರಿಂದ ವಾಹನ ಸವಾರರು ಮುನ್ನೆಚ್ಚರಿಕೆ ವಹಿಸುವಂತೆ ಕೋರಲಾಗಿದೆ….

Read More