Headlines

ಕೇಸು ಹಿಂಪಡೆಯಲಿರುವ ‘ಜನ ನಾಯಗನ್’ ನಿರ್ಮಾಪಕ: ಕಾರಣ? – Kannada News | Jana Nayagan producer to withdraw application against CBFC

ದಳಪತಿ ವಿಜಯ್ (Thalapathy Vijay) ನಟನೆಯ ‘ಜನ ನಾಯಗನ್’ ಸಿನಿಮಾ ರಾಜಕೀಯ ಕಾರಣಗಳಿಂದಾಗಿ ಬಿಡುಗಡೆ ವಿಳಂಬ ಆಗುತ್ತಲೇ ಇದೆ. ತೆಲುಗಿನ ‘ಭಗವಂತ ಕೇಸರಿ’ ಸಿನಿಮಾದ ರೀಮೇಕ್ ಆದ ‘ಜನ ನಾಯಗನ್’ಗೆ ಸಿಬಿಎಫ್​​ಸಿಯು ಸೆನ್ಸಾರ್ ಪ್ರಮಾಣ ಪತ್ರ ನೀಡಲು ನಿರಾಕರಿಸಿದೆ. ಇದನ್ನು ಪ್ರಶ್ನಿಸಿ ‘ಜನ ನಾಯಗನ್’ ನಿರ್ಮಾಪಕರು ಕೋರ್ಟ್ ಮೆಟ್ಟಿಲೇರಿದ್ದಾರಾದರೂ ಅಲ್ಲಿಯೂ ಸಹ ‘ಜನ ನಾಯಗನ್’ ನಿರ್ಮಾಪಕರಿಗೆ ಸೂಕ್ತವಾಗಿ ನ್ಯಾಯ ದೊರಕಿಲ್ಲ ಬದಲಿಗೆ ನ್ಯಾಯ ವಿತರಣೆ ತಡ ಆಗುತ್ತಲೇ ಸಾಗುತ್ತಿದೆ. ಇದರಿಂದಾಗಿ ರೋಸಿ ಹೋಗಿರುವ ನಿರ್ಮಾಪಕರು ದೂರನ್ನೇ ಹಿಂಪಡೆಯಲು…

Read More

ಕ್ಯಾಂಡಿ ಪ್ಯಾಕೆಟ್​ಗಳಲ್ಲಿ ಬ್ಯಾಂಕಾಕ್​ನಿಂದ ಬರುತ್ತಿತ್ತು ಡ್ರಗ್ಸ್! ಬೆಂಗಳೂರು ಏರ್​ಪೋರ್ಟಲ್ಲಿ ಇಬ್ಬರ ಬಂಧನ

ಬೆಂಗಳೂರು, ಫೆಬ್ರವರಿ 12: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIAB) ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಪ್ರತ್ಯೇಕ ಪ್ರಕರಣಗಳಲ್ಲಿ 3 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮೊದಲ ಪ್ರಕರಣದಲ್ಲಿ ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಬಂದಿದ್ದ ಪ್ರಯಾಣಿಕನ ಲಗೇಜ್ ಪರಿಶೀಲನೆ ನಡೆಸಿದ ವೇಳೆ 9.7 ಕೆಜಿ ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಗಿದೆ. ಈ ಗಾಂಜಾದ ಅಂದಾಜು ಮೌಲ್ಯ ಸುಮಾರು 3.39 ಕೋಟಿ ರೂಪಾಯಿ ಎನ್ನಲಾಗಿದೆ. ತಕ್ಷಣವೇ ಪ್ರಯಾಣಿಕನನ್ನು ವಶಕ್ಕೆ…

Read More

ಜೈಲಿನಲ್ಲಿ ಜ್ಞಾನ ಜ್ಯೋತಿ: ಪರಪ್ಪನ ಅಗ್ರಹಾರದಲ್ಲಿ ದೇಶದ ಮೊದಲ ಶಿಶುಪಾಲನಾ ಕೇಂದ್ರ ಆರಂಭ! – Kannada News | Nation’s First: Parappana Agrahara Jail Launches Special Child Care Unit for Inmates’ Children

ಪರಪ್ಪನ ಅಗ್ರಹಾರದಲ್ಲಿ ದೇಶದ ಮೊದಲ ಶಿಶುಪಾಲನಾ ಕೇಂದ್ರ ಆರಂಭ! Image Credit source: The New Indian Express ಬೆಂಗಳೂರು, ಮೇ 07: ಪರಪ್ಪನ ಅಗ್ರಹಾರ (Parappana Agrahara) ತನ್ನಲ್ಲಿ ನಡೆಯುವ ಅಕ್ರಮಗಳ ಕಾರಣಕ್ಕೆ ಯಾವಗಲೂ ಸುದ್ದಿಯಲ್ಲಿರುತ್ತದೆ. ಈಗ ಮತ್ತೊಮ್ಮೆ ಕೇಂದ್ರ ಕಾರಾಗೃಹ ಸುದ್ದಿ ಮಾಡಿದೆ. ಆದರೆ ಅಲ್ಲಿ ನಡೆಯುವ ಅಕ್ರಮದಿಂದಲ್ಲ; ಬದಲಾಗಿ ದೇಶದ ಮೊದಲ ವಿಶೇಷ ಶಿಶುಪಾಲನಾ ಕೇಂದ್ರ ಆರಂಭಿಸುತ್ತಿರುವ ಕಾರಣದಿಂದಾಗಿ. ಹೌದು, ತಾಯಂದಿರು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುವಾಗ, ಅವರನ್ನೇ ಅವಲಂಬಿಸಿರುವ ಹಸುಗೂಸುಗಳು ಮತ್ತು…

Read More

21 ದಿನಗಳ ಅವಧಿಗೆ ವಿಶೇಷ ಅಧಿಕಾರ ವಹಿಸಿಕೊಂಡ ಲಸಿತ್ ಮಾಲಿಂಗ – Kannada News | Lasith Malinga Appointed SriLanka Fast Bowling Consultant for 2026 T20 World Cup Prep

2026 ರ ಟಿ 20 ವಿಶ್ವಕಪ್ ಫೆಬ್ರವರಿ 7 ರಂದು ಪ್ರಾರಂಭವಾಗಲಿದೆ. ಈ ಪಂದ್ಯಾವಳಿಯನ್ನು ಭಾರತ ಮತ್ತು ಶ್ರೀಲಂಕಾ ಆಯೋಜಿಸಲಿದ್ದು, ಎಲ್ಲಾ ತಂಡಗಳು ತಮ್ಮ ಸಿದ್ಧತೆಗಳನ್ನು ತೀವ್ರಗೊಳಿಸಿವೆ. ಏತನ್ಮಧ್ಯೆ, ಶ್ರೀಲಂಕಾದ ಮಾಜಿ ಕ್ರಿಕೆಟಿಗ ಲಸಿತ್ ಮಾಲಿಂಗ ಅವರಿಗೆ ಮಹತ್ವದ ಜವಾಬ್ದಾರಿ ಸಿಕ್ಕಿದೆ. ಆದಾಗ್ಯೂ, ಅವರ ಈ ಅಧಿಕಾರಾವಧಿ ಕೇವಲ 21 ದಿನಗಳವರೆಗೆ ಮಾತ್ರ ಇರಲಿದೆ. Source link

Read More

ಭುಗಿಲೆದ್ದ ಮಂತ್ರಾಲಯ ರಾಯರ ಜಪದ ಕಟ್ಟೆ ವಿವಾದ: ಸರ್ವೆ ವೇಳೆ ಹೈಡ್ರಾಮಾ, ರೈತರು ಪೊಲೀಸ್ ವಶಕ್ಕೆ

ರಾಯಚೂರು, ಏಪ್ರಿಲ್​ 13: ಮಂತ್ರಾಲಯ ರಾಯರು (Mantralaya Rayaru) ತಪಸ್ಸು ಮಾಡಿದ್ದ ಜಪದ ಕಟ್ಟೆ ಸಮೀಪವಿರುವ ಜಮೀನಿನ ವಿವಾದ (Land Dispute) ಇದೀಗ ತಾರಕ್ಕೇರಿದೆ. ಸರ್ಕಾರದ ಆದೇಶದನ್ವಯ ಇಂದು ಸರ್ವೆ ಕಾರ್ಯ ನಡೆಯುತ್ತಿದ್ದ ವೇಳೆ ಕೆಲ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ತಳ್ಳಾಟ-ನೂಕಾಟ ಉಂಟಾಗಿದ್ದು, ದೊಡ್ಡ ಹೈಡ್ರಾಮಾವೇ ನಡೆದು ಹೋಗಿದೆ‌‌. ಏನಿದು ಪ್ರಕರಣ? ರಾಯಚೂರು ತಾಲ್ಲೂಕಿನ ಬಿಚ್ಚಾಲಿ ಗ್ರಾಮದಲ್ಲಿ ಮಂತ್ರಾಲಯ ರಾಯರ 13 ವರ್ಷಗಳ ಕಾಲ ತಪಸ್ಸು ಮಾಡಿದ್ದಾರೆ. ರಾಯರ ತಪಸ್ಸು ಮಾಡಿದ ಜಪದ ಕಟ್ಟೆ…

Read More

ಭಾರತಕ್ಕೆ ತೈಲ ಮತ್ತು ಅನಿಲ ಪೂರೈಕೆ ಹೆಚ್ಚಿಸಲು ಸಿದ್ಧ: ರಷ್ಯಾ ಅಭಯ

ನವದೆಹಲಿ, ಏಪ್ರಿಲ್ 3: ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದಾಗಿ ಗಲ್ಫ್ ರಾಷ್ಟ್ರಗಳಿಂದ ಭಾರತಕ್ಕೆ ತೈಲ ಮತ್ತು ಅನಿಲ ಪೂರೈಕೆ ಸ್ಥಗಿತಗೊಂಡಿದೆ. ಇದರಿಂದ ಭಾರತದ ಇಂಧನ ಕ್ಷೇತ್ರ ಒತ್ತಡಕ್ಕೆ ಸಿಲುಕಿದೆ. ರಷ್ಯಾದಿಂದ ಒಂದಷ್ಟು ತೈಲ ಪೂರೈಕೆಯಾಗುತ್ತಿರುವುದು ಸಮಾಧಾನದ ಸಂಗತಿ. ಆದರೆ, ಭಾರತದ ತೈಲ ಮತ್ತು ಅನಿಲದ ಅಗತ್ಯತೆ ಅಗಾಧವಾಗಿದೆ. ಹೀಗಾಗಿ, ಹೆಚ್ಚಿನ ಪ್ರಮಾಣದ ತೈಲ ಮತ್ತು ಅನಿಲವು ಭಾರತಕ್ಕೆ ನಿರಂತರವಾಗಿ ಸರಬರಾಜಾಗುವುದು ಅಗತ್ಯ. ಇದೇ ವೇಳೆ, ಭಾರತದ ನೆರವಿಗೆ ರಷ್ಯಾ ಮುಂದಾಗಿದೆ. ಭಾರತಕ್ಕೆ ತೈಲ ಮತ್ತು ಎಲ್​ಎನ್​ಜಿ (LNG) ಪೂರೈಕೆ…

Read More

ಲೇ ಆಫ್ ಅಂದ್ರೆ ಭಯವಿಲ್ಲ, ಇದು ಹೊಸ ಆರಂಭ!: ಕೆಲಸ ಕಳೆದುಕೊಂಡರೂ ಸಂಭ್ರಮಿಸಿದ ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್

ಬೆಂಗಳೂರು, ಏ.8: ಬೆಂಗಳೂರಿನಲ್ಲಿ ದಿನಕ್ಕೊಂದು ಲೇ ಆಫ್ ಸುದ್ದಿಗಳು ಬರುತ್ತಿದೆ. ಎಐ ಪರಿಣಾಮದಿಂದ, ಇನ್ನು ಅನೇಕರ ಕಾರಣದಿಂದ ಕೆಲಸ ಕಳೆದುಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಇದೆ. ಲೇ ಆಫ್ ಆದ್ರೆ ಎಲ್ಲರಿಗೂ ಆತಂಕ ಆಗುತ್ತಿದೆ. ಮುಂದಿನ ಜೀವನ ಹೇಗೆ? ಇಎಂಐಗಳನ್ನು ಕಟ್ಟುವುದು ಎಂಬ ಯೋಚನೆಗಳು ಇರುತ್ತದೆ. ಆದರೆ ಇಲ್ಲೊಬ್ಬರು ಐಟಿ ಉದ್ಯೋಗಿ ಅಷ್ಟು ದೊಡ್ಡ ಕೆಲಸವನ್ನು ಕಳೆದುಕೊಂಡು ಬಿಂದಾಸ್​​ ಆಗಿದ್ದಾರೆ. ಬೆಂಗಳೂರು ಮೂಲದ ಟೆಕ್ಕಿಯೊಬ್ಬರು ಕೆಲಸ ಕಳೆದುಕೊಂಡ ನಂತರ ಪೋಸ್ಟ್​​ವೊಂದನ್ನು ಹಂಚಿಕೊಂಡಿದ್ದಾರೆ. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ…

Read More

ಕಾಮಕಾಂಡ ಪ್ರಕರಣ: ಮೂಡುಬಿದಿರೆ ಠಾಣೆ ಇನ್ಸ್‌ಪೆಕ್ಟರ್ ಸಂದೇಶ್​​ಗೆ ಬಿಗ್ ಶಾಕ್

ಮಂಗಳೂರು, (ಮಾರ್ಚ್ 17): ಕೌಟುಂಬಿಕ ಕಲಹದ ವಿಚಾರಕ್ಕೆ ದೂರು ನೀಡಲು ಬಂದ ಮಹಿಳೆಯರನ್ನು ಅಸಭ್ಯವಾಗಿ ಮಂಚಕ್ಕೆ ಕರೆದ ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ (moodbidri inspector Sandesh) ವಿರುದ್ಧ ಈಗ ರಾಜ್ಯ ಮಹಿಳಾ ಆಯೋಗವು ಸಿಡಿದೆದ್ದಿದ್ದು, ಸುಮೋಟೋ ಕೇಸ್ ದಾಖಲಿಸಿಕೊಂಡಿದೆ. ಅಲ್ಲದೇ ಈ ಪ್ರಕರಣ ಸಂಬಂಧ ವರದಿ ನೀಡುವಂತೆ ಮಂಗಳೂರ ನಗರ ಪೊಲೀಸ್ ಕಮಿಷನರ್​ಗೆ ಪತ್ರ ಬರೆದಿದೆ. ಇದರ ಬೆನ್ನಲ್ಲೇ ಇನ್ಸ್​ಪೆಕ್ಟರ್​​ ಸಂದೇಶನನ್ನು ಅಮಾನತು ಮಾಡಿ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ಆದೇಶ…

Read More

SSLC, PUC ಪರೀಕ್ಷಾ ವೇಳಾಪಟ್ಟಿ ಪ್ರಕಟ: ಇಲ್ಲಿದೆ ಪರೀಕ್ಷೆ ಶುರುವಾಗುವ ಸಮಯ ವಿವರ – Kannada News | Minister Madhu Bangarappa Announces Karnataka SSLC And Second PUC Exams Time Table 2026

ಬೆಂಗಳೂರು, (ಫೆಬ್ರವರಿ 17): ಇದೇ ಫೆಬ್ರವರಿ 28ರಿಂದ ಮಾರ್ಚ್‌ 17ರ ವರೆಗೆ ದ್ವಿತೀಯ ಪಿಯುಸಿ (2nd PUC Exmas) ಹಾಗೂ ಮಾರ್ಚ್‌ 18 ರಿಂದ ಏಪ್ರಿಲ್‌ 2 ರ ವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು (SSLC Exams 2026) ನಡೆಯಲಿವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಫೆ.28 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ, ಮಾ. 18 ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿದೆ. ದ್ವಿತೀಯ ಪಿಯುಸಿ ಪರೀಕ್ಷೆಗಳು…

Read More

ಪ್ರಧಾನಿ ಮೋದಿ ಜೊತೆ ಟ್ರಂಪ್ ಮಾಡಿಕೊಂಡ ವ್ಯಾಪಾರ ಒಪ್ಪಂದದ 7 ಹೈಲೈಟ್ಸ್ ಇಲ್ಲಿವೆ – Kannada News | PM Modi and Donald Trump announce India US trade deal Key Highlights

ನವದೆಹಲಿ, ಫೆಬ್ರವರಿ 3: ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಭಾರತೀಯ ಸರಕುಗಳ ಮೇಲೆ ಶೇ. 50ರಷ್ಟು ಸುಂಕವನ್ನು ವಿಧಿಸಿದ ನಂತರ ನಿನ್ನೆ (ಸೋಮವಾರ) ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಭಾರತದೊಂದಿಗೆ ವ್ಯಾಪಾರ ಒಪ್ಪಂದವನ್ನು ಘೋಷಿಸಿದ್ದಾರೆ. ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ರೂತ್ ಸೋಶಿಯಲ್‌ನಲ್ಲಿ ಘೋಷಿಸಿದ ಈ ವ್ಯಾಪಾರ ಒಪ್ಪಂದವು ಹಲವಾರು ಅಂಶಗಳನ್ನು ಒಳಗೊಂಡಿದೆ. ಆದರೆ, ಟ್ರಂಪ್ ಘೋಷಿಸಿದ ಈ ಅಂಶಗಳ ಬಗ್ಗೆ ಭಾರತ ಸರ್ಕಾರ ಇನ್ನೂ ಸರಿಯಾದ ಸ್ಪಷ್ಟನೆ ನೀಡಿಲ್ಲ. ಕೇವಲ ವ್ಯಾಪಾರ…

Read More