ಭಾರತದ ಜನರೇ ನೆಹರೂ, ಇಂದಿರಾ ಗಾಂಧಿಗೆ ಸಮಸ್ಯೆಯಾಗಿದ್ದರು; ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ – Kannada News | Nehru, Indira Gandhi saw Indians as problems PM Modi attacks Congress in Rajya Sabha

ನವದೆಹಲಿ, ಫೆಬ್ರವರಿ 5: ಇಂದು ವಿರೋಧ ಪಕ್ಷದ ಸಂಸದರ ಗದ್ದಲದ ನಡುವೆ ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (PM Modi) ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ಮಾಜಿ ಪ್ರಧಾನಿಗಳಾದ ನೆಹರೂ, ಇಂದಿರಾ ಗಾಂಧಿಯ ಹೆಸರನ್ನು ಕೂಡ ಪ್ರಸ್ತಾಪಿಸಿದ ಮೋದಿ, “ಅವರಿಬ್ಬರಿಗೂ ಭಾರತೀಯರು ಸಮಸ್ಯೆಯಾಗಿದ್ದರು. ಕಾಂಗ್ರೆಸ್ ಅವಧಿಯಲ್ಲಿ ಒಪ್ಪಂದ ಎಂದರೆ ಬೋಫೋರ್ಸ್ ಎಂಬಂತಾಗಿತ್ತು. ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ವಿಷನ್, ಐಡಿಯಾ, ಪ್ಲಾನ್ ಇರಲಿಲ್ಲ” ಎಂದು ಕಿಡಿಕಾರಿದ್ದಾರೆ. “ಕಾಂಗ್ರೆಸ್ 2014ರಲ್ಲಿ ಒಂದು ಅವ್ಯವಸ್ಥೆಯನ್ನು ಬಿಟ್ಟು…

Read More

ಪರಪ್ಪನ ಅಗ್ರಹಾರದಲ್ಲಿ ಕಳ್ಳಾಟಕ್ಕೆ ಬಿದ್ದಿಲ್ಲ ಬ್ರೇಕ್! 200 ಮೊಬೈಲ್ ಫೋನ್​ಗಳ​ ಜೊತೆ ಇನ್ನೂ ಏನೇನು ಸಿಕ್ತು ಗೊತ್ತಾ? – Kannada News | Parappana Agrahara Crackdown:Raids Seize 200+ Mobiles, Expose Illegal Activities

200 ಮೊಬೈಲ್ ಫೋನ್​ಗಳ​ ಜೊತೆ ಇನ್ನೂ ಏನೇನು ಸಿಕ್ತು ಗೊತ್ತಾ? ಬೆಂಗಳೂರು, ಜನವರಿ 28: ಪರಪ್ಪನ ಅಗ್ರಹಾರ (Parappana Agrahara) ಕೇಂದ್ರ ಕಾರಾಗೃಹದಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಬ್ರೇಕ್ ಬೀಳದಂತಾಗಿದ್ದು, ಜೈಲಾಧಿಕಾರಿಗಳು ಎರಡು ತಿಂಗಳಿಂದ ನಿರಂತರ ದಾಳಿ ನಡೆಸುತ್ತಿದ್ದಾರೆ. ಈ ವೇಳೆ ಕೈದಿಗಳು ಬಚ್ಚಿಟ್ಟುಕೊಂಡಿದ್ದ ಹಲವು ಮೊಬೈಲ್​ಗಳು, ಇಯರ್ ಫೋನ್​ಗಳು ಸಿಕ್ಕಿದ್ದು, ಈ ನಿಷೇಧಿತ ವಸ್ತುಗಳನ್ನು ಇಟ್ಟುಕೊಂಡವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಕೈದಿ ನೋಡಲು ಬಂದಾಕೆಯಿಂದ ಹಣ ನೀಡಲು ಯತ್ನ ಜೈಲಿನಲ್ಲಿ ಟವರ್–1ರ 6ನೇ ಬ್ಯಾರಕ್‌ನ…

Read More

ಗ್ಯಾಸ್ ಸಿಲಿಂಡರ್ ಕೊರತೆಯಿಂದ ಗ್ರಾಹಕರ ಜೇಬಿಗೂ ಕತ್ತರಿ! ಹೋಟೆಲ್‌ಗಳಲ್ಲಿ ಇಡ್ಲಿ-ದೋಸೆ ಬೆಲೆ ಎಷ್ಟಾಗಿದೆ ಗೊತ್ತಾ?

ಬೆಂಗಳೂರು, ಮಾರ್ಚ್​ 14: ಅಮೇರಿಕಾ, ಇರಾನ್ ಮತ್ತು ಇಸ್ರೇಲ್ ನಡುವಣ ಯುದ್ಧದ ಪರಿಣಾಮವಾಗಿ ದೇಶದೆಲ್ಲೆಡೆ ಎಲ್​ಪಿಜಿ ( LPG) ಗ್ಯಾಸ್ ಸಿಲಿಂಡರ್ ಕೊರತೆ ತೀವ್ರವಾಗಿದ್ದು, ಬೆಂಗಳೂರಿನ ಹೋಟೆಲ್ ಮಾಲೀಕರಿಗೂ ಇದರ ಬಿಸಿ ತಟ್ಟಿರುವುದು ಹೊಸ ವಿಷಯವೇನಲ್ಲ. ಹೀಗಿರುವಾಗ ಹೋಟೆಲ್ ಉದ್ಯಮವನ್ನು ಉಳಿಸಿಕೊಳ್ಳಲು ಕೆಲ ಹೋಟೆಲ್ ಮಾಲೀಕರು ಅನಿವಾರ್ಯವಾಗಿ ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಖರೀದಿಸಲು ಮುಂದಾಗಿದ್ದಾರೆ. ಇದರಿಂದ ಆಹಾರ ಪದಾರ್ಥಗಳ ಬೆಲೆಯೂ ಹೆಚ್ಚಾಗಿದ್ದು, ಗ್ರಾಹಕ ಜೇಬಿಗೆ ಬಿಸಿ ಮುಟ್ಟಿಸಿವೆ. ದುಬಾರಿ ಮೊತ್ತದಲ್ಲಿ ಸಿಲಿಂಡರ್ ಮಾರಾಟ ಯುದ್ಧದ…

Read More

ಪ್ರೇಮಿಗಳ ದಿನಾಚರಣೆ: ಪಾರು-ದೇವದಾಸ್ ಬದಲಿಗೆ ಚಂದ್ರ-ದೇವದಾಸ್ ಪ್ರೇಮಕತೆ – Kannada News | Lokesh Kanagaraj starrer DC Movie promo released

ಭಾರತದ ಜನಪ್ರಿಯ ಪ್ರೇಮಕತೆಗಳೆಂದರೆ ಪಾರು-ದೇವದಾಸ್ ಕತೆ ನೆನಪಿಗೆ ಬರುತ್ತದೆ. ಹಲವಾರು ಭಾಷೆಗಳಲ್ಲಿ ಪಾರು-ದೇವದಾಸ್ ಕತೆ ಸಿನಿಮಾ ಸಹ ಆಗಿದೆ. ಪ್ರತಿ ಬಾರಿಯೂ ಪಾರು-ದೇವದಾಸ್ ಕತೆಯನ್ನು ಬೇರೆ ಬೇರೆ ರೀತಿಯಲ್ಲಿ ಹೇಳಲಾಗಿದೆ. ಆದರೆ ಇದೇ ಮೊದಲ ಬಾರಿಗೆ ದೇವದಾಸ್ ಮತ್ತು ಚಂದ್ರ ಪ್ರೇಮಕತೆ ತೆರೆ ಮೇಲೆ ಬರಲು ಸಜ್ಜಾಗಿದೆ. ದೇವದಾಸ್-ಪಾರು ಪ್ರೇಮಕತೆಯಲ್ಲಿ ಬರುವ ವೇಶ್ಯೆಯ ಹೆಸರು ಚಂದ್ರ. ದೇವದಾಸ್-ಪಾರು ಕತೆಯಲ್ಲಿ ಚಂದ್ರ ಒಂದು ರೀತಿ ಪೋಷಕ ಪಾತ್ರವಷ್ಟೆ ಆದರೆ ಈಗ ನಿರ್ದೇಶಕರೊಬ್ಬರು ಚಂದ್ರ ಅನ್ನೇ ನಾಯಕಿಯನ್ನಾಗಿಸಿ ದೇವದಾಸ್ ಮತ್ತು…

Read More

ಅಪಹರಿಸಿ ಸ್ನೇಹಿತನ ಕೊಲೆ ಕೇಸ್: ನಾಪತ್ತೆಯಾಗಿದ್ದ ಡೆಲಿವರಿ ಬಾಯ್​​ ಮಿಸ್ಟ್ರಿ ಬಯಲು; ಐವರು ಅರೆಸ್ಟ್​​​

ಹಾಸನ, ಮಾರ್ಚ್​ 23: ಕೇವಲ 7 ಸಾವಿರ ರೂ ಹಣಕ್ಕಾಗಿ ಗಾಂಜಾ ಅಮಲಿನಲ್ಲಿ ಗೆಳೆಯನ್ನೇ ಹತ್ಯೆಗೈದ (kill) ಪ್ರಕರಣವನ್ನು ಬೇಧಿಸಿರುವ ಪೊಲೀಸರು ಐವರ ಹೆಡೆಮುರಿ ಕಟ್ಟಿದ್ದಾರೆ. ವರುಣ್​​ನ್ನ ಸಿನಿಮೀಯ ರೀತಿಯಲ್ಲಿ ಅಪಹರಿಸಿ ಕರೆತಂದು ಕೂಡಿ ಹಾಕಿ ಸ್ನೇಹಿತರ ಗ್ಯಾಂಗ್​​ ಹಲ್ಲೆ ಮಾಡಿ ಬಳಿಕ ಕೊಲೆಗೈದು ಎರಡು ದಿನ ಶವದ ಜೊತೆ ಕಳೆದು ಬಳಿಕ ಸುಟ್ಟು ಎಸ್ಕೇಪ್ ಆಗಿದ್ದವರ ಬೆನ್ನಟ್ಟಿದ ಪೊಲೀಸರು, ನಾಪತ್ತೆ ಕೇಸ್​​ನ ಮಿಸ್ಟ್ರಿಯನ್ನ ಬಯಲು ಮಾಡಿದ್ದಾರೆ. ಕೊಟ್ಟ ಸಾಲ ವಾಪಸ್ ಕೊಟ್ಟಿಲ್ಲ ಎನ್ನುವ ಒಂದೇ ಕಾರಣಕ್ಕೆ…

Read More

ಇರಾನ್ ಮೇಲೆ ಭೀಕರ ದಾಳಿ ನಿರ್ಧಾರದಿಂದ ಹಿಂದೆ ಸರಿದ ಟ್ರಂಪ್: ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ 2 ವಾರಗಳ ಕದನ ವಿರಾಮ ಘೋಷಣೆ!

ವಾಷಿಂಗ್ಟನ್/ಟೆಹ್ರಾನ್, ಏಪ್ರಿಲ್ 8: ಇರಾನ್ (Iran) ಮೇಲೆ ವಿನಾಶಕಾರಿ ದಾಳಿ ನಡೆಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ನೀಡಿದ್ದ ಗಡುವು ಮುಗಿಯಲು ಕೇವಲ ಎರಡು ಗಂಟೆಗಳಿರುವಾಗ ಬಹು ದೊಡ್ಡ ರಾಜತಾಂತ್ರಿಕ ಬೆಳವಣಿಗೆ ನಡೆದಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥರ ಮನವಿಯ ಮೇರೆಗೆ ಟ್ರಂಪ್ ತಮ್ಮ ಬಾಂಬ್ ದಾಳಿಯ ನಿರ್ಧಾರವನ್ನು ಸ್ಥಗಿತಗೊಳಿಸಿದ್ದು, ಎರಡು ವಾರಗಳ ಕದನ ವಿರಾಮಕ್ಕೆ (US Iran Ceasefire) ಸಮ್ಮತಿಸಿದ್ದಾರೆ. ಹಾರ್ಮುಜ್ ಜಲಸಂಧಿ ತೆರೆಯಲು ಇರಾನ್ ಸಮ್ಮತಿ ಕಳೆದ…

Read More

ಹಾಪುರದಲ್ಲಿ ಭೀಕರ ರಸ್ತೆ ಅಪಘಾತ: ಬಸ್ ಮತ್ತು ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ, ಆರು ಮಂದಿ ಸಾವು, ಹಲವರ ಸ್ಥಿತಿ ಗಂಭೀರ

ಲಕ್ನೋ, ಏಪ್ರಿಲ್ 13: ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ಸಂಭವಿಸಿದ ಎರಡು ಭೀಕರ ರಸ್ತೆ ಅಪಘಾತ(Accident)ಗಳು ಹಲವು ಕುಟುಂಬಗಳಲ್ಲಿ ಕತ್ತಲನ್ನು ತುಂಬಿವೆ. ಮದುವೆಯ ಸಂಭ್ರಮ ಮುಗಿಸಿ ಬರುತ್ತಿದ್ದವರು ಸಾವಿನ ಮನೆ ಸೇರಿದ್ದರೆ, ಇನ್ನೊಂದೆಡೆ ಸರಣಿ ಅಪಘಾತಕ್ಕೆ ಅಮಾಯಕ ಜೀವಗಳು ಬಲಿಯಾಗಿವೆ. ಉತ್ತರ ಪ್ರದೇಶದ ಹಾಪುರದಲ್ಲಿ ಮದುವೆ ಬಸ್ ಅಪಘಾತಕ್ಕೀಡಾದರೆ, ಬಿಹಾರದ ಕಟಿಹಾರ್‌ನಲ್ಲಿ ವಾಹನಗಳ ನಡುವಿನ ಸರಣಿ ಡಿಕ್ಕಿ ಹಲವರ ಪ್ರಾಣಪಕ್ಷಿ ಹಾರಿಸಿದೆ. ಹಾಪುರ: ಮದುವೆ ಮೆರವಣಿಗೆ ಮುಗಿಸಿ ಬರುವಾಗ ಮೃತ್ಯುವಿನ ಅಟ್ಟಹಾಸ ಉತ್ತರ ಪ್ರದೇಶದ ಹಾಪುರದ…

Read More

ಪೇರಳೆ ಹಣ್ಣು ಕದ್ದಿದ್ದಕ್ಕೆ ಬಾಲಕಿಗೆ ಇಂಥಾ ಶಿಕ್ಷೆಯೇ?

ಉನಾ, ಏಪ್ರಿಲ್ 06: ಪೇರಳೆ(Guava) ಹಣ್ಣು ಕದ್ದಿದ್ದಕ್ಕೆ ಬಾಲಕಿಗೆ ಶಿಕ್ಷೆ ನೀಡಿರುವ ಘಟನೆ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯಲ್ಲಿ ನಡೆದಿದೆ. ಮನೆಯ ಹೊರಗಿರುವ ಮರದಲ್ಲಿ ಪೇರಳೆ ಹಣ್ಣು ಕದ್ದಿದ್ದಕ್ಕೆ ನಿವೃತ್ತ ಸೇನಾ ಅಧಿಕಾರಿಯೊಬ್ಬರು ಅಪ್ರಾಪ್ತ ಬಾಲಕಿಗೆ ಕಠಿಣ ಶಿಕ್ಷೆ ನೀಡಿದ್ದಾರೆ. ಆಕೆಯನ್ನು ಕಟ್ಟಿಹಾಕಿ ಥಳಿಸಿದ್ದಾರೆ. ಮಾಹಿತಿಯ ಪ್ರಕಾರ, ಬಾಲಕಿ ವಲಸೆ ಕುಟುಂಬದ ಮಗಳು, ಆರೋಪಿಯ ನಿವಾಸದ ಬಳಿಯ ಮರದಿಂದ ಪೇರಳೆ ಹಣ್ಣುಗಳನ್ನು ಕಿತ್ತುಕೊಂಡಿದ್ದು ಆಕೆಯ ಅಪರಾಧ ಎಂದು ಹೇಳಲಾಗಿದೆ. ಆರೋಪಿಯು ಬಾಲಕಿಯನ್ನು ತನ್ನ ಮನೆಯೊಳಗೆ ಕರೆದೊಯ್ದು, ಸರಪಳಿಯಿಂದ…

Read More

ಇದು ಯಾವ ಸೀಮೆಯ ಬೌಲಿಂಗ್: ಪಾಕ್ ಸ್ಪಿನ್ನರ್ ಶೈಲಿಗೆ ಗ್ರೀನ್​ ಆಕ್ರೋಶ – Kannada News | PAK vs AUS: Cameron Green was unhappy with Usman Tariq’s bowling action

ಪಾಕಿಸ್ತಾನ್ ವಿರುದ್ಧದ 2ನೇ ಟಿ20 ಪಂದ್ಯದಲ್ಲೂ ಆಸ್ಟ್ರೇಲಿಯಾ ತಂಡ ಸೋಲನುಭವಿಸಿದೆ. ಈ ಬಾರಿ ಸೋತಿದ್ದು ಬರೋಬ್ಬರಿ 90 ರನ್​ಗಳ ಅಂತರದಿಂದ. ಈ ಸೋಲಿನ ಬೆನ್ನಲ್ಲೇ ಪಾಕ್ ಸ್ಪಿನ್ನರ್ ಉಸ್ಮಾನ್ ತಾರಿಖ್ ಅವರ ಬೌಲಿಂಗ್ ಶೈಲಿಯ ಬಗ್ಗೆ ಚರ್ಚೆಗಳು ಶುರುವಾಗಿದೆ. ಈ ಪಂದ್ಯದಲ್ಲಿ 20 ಎಸೆತಗಳನ್ನು ಎದುರಿಸಿದ್ದ ಕ್ಯಾಮರೋನ್ ಗ್ರೀನ್ 2 ಸಿಕ್ಸರ್ ಹಾಗೂ 1 ಫೋರ್​ನೊಂದಿಗೆ 35 ರನ್ ಬಾರಿಸಿದ್ದರು. ಆದರೆ ಯಾವಾಗ ಉಸ್ಮಾನ್ ತಾರಿಖ್ ಸ್ಪಿನ್ ದಾಳಿ ಶುರು ಮಾಡಿದರೂ ಕ್ಯಾಮರೋನ್ ಗ್ರೀನ್ ರನ್​ಗಳಿಸಲು ತಡಕಾಡಿದರು….

Read More

ಅವಧಿಗೂ ಮುನ್ನವೇ ಫೋಟೋ ಶೂಟ್ ಬಗ್ಗೆ ಭಾರೀ ಚರ್ಚೆ: ಸಿಎಂ ಬದಲಾವಣೆಯೋ? ಸ್ಪೀಕರ್ ಚೇಂಜ್? ಸಂಪುಟ ಪುನರ್ ರಚನೆಯೋ?

ಬೆಂಗಳೂರು, (ಮಾರ್ಚ್ 25): ಸರ್ಕಾರದ (Karnataka Government) ಅವಧಿ ಇನ್ನೂ ಎರಡು ವರ್ಷ ಬಾಕಿ ಇರುವಾಗಲೇ ವಿಧಾನಸೌಧದಲ್ಲಿ ಶಾಸಕರ ಗ್ರೂಪ್ ಫೋಟೋ ಶೂಟ್ (MLAs Group photoshoot) ನಡೆದಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಯಾಕಂದ್ರೆ, ಸಾಮಾನ್ಯವಾಗಿ ವಿಧಾನಸಭೆ ಅವಧಿ ಮುಕ್ತಾಯಗೊಳ್ಳುವ ಸಂದರ್ಭದಲ್ಲಿ ಸ್ಪೀಕರ್ ಸಮ್ಮುಖದಲ್ಲಿ ಶಾಸಕರ ಗ್ರೂಪ್ ಫೋಟೋ ತೆಗೆದುಕೊಳ್ಳುವುದು ಸಂಪ್ರದಾಯವಾಗಿದೆ. ಆದ್ರೆ, ಅವಧಿಗೂ ಮುನ್ನವೇ ಸ್ಫೀಕರ್ ಯುಟಿ ಖಾದರ್,  (UT Khader)ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಮುಂಭಾಗದಲ್ಲಿ ಶಾಸಕರ ಫೋಟೋ ಶೂಟ್ ಮಾಡಿಸಿರುವುದು ಅನುಮಾನಗಳಿಗೆ…

Read More