ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು, 25ಕ್ಕೂ ಹೆಚ್ಚು ಮಂದಿಗೆ ಗಾಯ – Kannada News | 3 people dead over 25 injured in Madhya Pradesh Dewas firecracker factory blast
ನವದೆಹಲಿ, ಮೇ 14: ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ಭಾರೀ ಸ್ಫೋಟ (Blast) ಸಂಭವಿಸಿದೆ. ದೇವಾಸ್‌ನ ಟೋಂಕ್ ಕಲಾನ್ ಪ್ರದೇಶದಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಉಂಟಾದ ಸ್ಫೋಟದಲ್ಲಿ ಧೀರಜ್, ಸನ್ನಿ ಮತ್ತು ಸುಮಿತ್ ಎಂಬ ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ, ಇತರ 25 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ 13 ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಸ್ಫೋಟದ ಪರಿಣಾಮದಿಂದ ದೇಹದ ಭಾಗಗಳು 20-25 ಅಡಿ ದೂರದಲ್ಲಿ ಹಾರಿಬಿದ್ದಿವೆ. ಇದರಿಂದ ಅನೇಕ ಕಾರ್ಮಿಕರಿಗೆ ತೀವ್ರವಾದ ಸುಟ್ಟ ಗಾಯಗಳಾಗಿವೆ. ಪಟಾಕಿ ಕಾರ್ಖಾನೆಯಲ್ಲಿ 200ಕ್ಕೂ ಹೆಚ್ಚು…