Headlines

T20 World Cup: ಏಕಾಂಗಿ ಹೋರಾಟ ನೀಡಿ ತಂಡದ ಮಾನ ಉಳಿಸಿದ ಸೂರ್ಯಕುಮಾರ್

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಅಮೆರಿಕ ವಿರುದ್ಧದ ಮೊದಲ ಪಂದ್ಯದೊಂದಿಗೆ 2026 ರ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ತನ್ನ ಅಭಿಯಾನವನ್ನು ಆರಂಭಿಸಿತು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡವು ನಿರಾಶಾದಾಯಕ ಆರಂಭ ಪಡೆದುಕೊಂಡಿತು. ಪವರ್‌ಪ್ಲೇನಲ್ಲಿಯೇ ತಂಡವು ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. ಆರಂಭಿಕ ಜೋಡಿ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಬೇಗನೆ ವಿಕೆಟ್ ಒಪ್ಪಿಸಿದರು. ಪರಿಣಾಮವಾಗಿ ಆರನೇ ವಿಕೆಟ್ ಪತನಕ್ಕೆ ತಂಡದ ಸ್ಕೋರ್​ಬೋರ್ಡ್​ನಲ್ಲಿ ಇದಿದ್ದು ಕೇವಲ 77 ರನ್‌. ಈ…

Read More

ಫ್ಯಾಟಿ ಲಿವರ್ ಕಿಡ್ನಿಗೂ ಅಪಾಯವೇ? ಲಿವರ್ ಮತ್ತು ಕಿಡ್ನಿಗಿರುವ ಕನೆಕ್ಷನ್ ಏನು? ತಜ್ಞರಿಂದ ತಿಳಿದುಕೊಳ್ಳಿ

ಇತ್ತೀಚಿನ ದಿನಗಳಲ್ಲಿ ಫ್ಯಾಟಿ ಲಿವರ್ (Fatty Liver) ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. ಅಸ್ವಸ್ಥ ಆಹಾರ ಪದ್ಧತಿ, ಅತಿಯಾದ ತೂಕ, ವ್ಯಾಯಾಮದ ಕೊರತೆ ಮತ್ತು ಕುಳಿತುಕೊಂಡೇ ಕೆಲಸ ಮಾಡುವ ಜೀವನಶೈಲಿ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಸಾಮಾನ್ಯವಾಗಿ ಜನರು ಇದನ್ನು ಕೇವಲ ಲಿವರ್‌ಗೆ ಸಂಬಂಧಿಸಿದ ಸಮಸ್ಯೆ ಎಂದು ಭಾವಿಸುತ್ತಾರೆ. ಆದರೆ ತಜ್ಞರ ಪ್ರಕಾರ, ಫ್ಯಾಟಿ ಲಿವರ್ ದೇಹದ ಇತರೆ ಅಂಗಾಂಗಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಅದರಲ್ಲೂ ಕಿಡ್ನಿ ಆರೋಗ್ಯದ ಮೇಲೆ ಇದರ ಪ್ರಭಾವ ಹೆಚ್ಚಾಗಬಹುದು ಎಂದು ಎಚ್ಚರಿಕೆ…

Read More

ಪುಣೆ ನಿಲ್ದಾಣಕ್ಕೆ ಬರುವಾಗ ಹಳಿ ತಪ್ಪಿದ ಮುಂಬೈ-ಸೋಲಾಪುರ ವಂದೇ ಭಾರತ್ ರೈಲು – Kannada News | Mumbai Solapur Vande Bharat Express train derails while entering Pune station

ಪುಣೆ, ಏಪ್ರಿಲ್ 27: ಮಹಾರಾಷ್ಟ್ರದ ಪುಣೆ ರೈಲು ನಿಲ್ದಾಣವನ್ನು ಪ್ರವೇಶಿಸುವಾಗ ವಂದೇ ಭಾರತ್ ಎಕ್ಸ್‌ಪ್ರೆಸ್‌ನ (Vande Bharat Express) ಒಂದು ಬೋಗಿ ಹಳಿ ತಪ್ಪಿತು. ಇಂದು ಸಂಜೆ 7.30ರ ಸುಮಾರಿಗೆ ನಿಲ್ದಾಣ ಪ್ರವೇಶಿಸುವಾಗ ರೈಲಿನ ನಾಲ್ಕನೇ ಬೋಗಿಯ ಒಂದು ಟ್ರಾಲಿ ಡೈಮಂಡ್ ಕ್ರಾಸಿಂಗ್‌ನಲ್ಲಿ ಹಳಿ ತಪ್ಪಿತು ಎಂದು ಕೇಂದ್ರ ರೈಲ್ವೆ ಇಲಾಖೆ ತಿಳಿಸಿದೆ. ಈ ಘಟನೆಯಲ್ಲಿ ಯಾವುದೇ ಸಾವು ಅಥವಾ ಗಾಯಗಳಾಗಿಲ್ಲ. ರೈಲು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ನಿಂದ ಹೊರಟು ಮಹಾರಾಷ್ಟ್ರದ ಸೋಲಾಪುರಕ್ಕೆ ಹೋಗಬೇಕಿತ್ತು. ಇನ್ನಷ್ಟು…

Read More

ಶಾಪಿಂಗ್ ಮಾಲ್​​​ನ ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ಹೇಗೆ ನೋಡಿ – Kannada News | Fire Department Staff recuses 9 People Who stuck In Shopping Mall Lift at Shivamogga

ಶಿವಮೊಗ್ಗ, (ಮೇ 19):  ಶಾಪಿಂಗ್ ಮಾಡಲೇಂದು ತೆರಳಿದ್ದ 9 ಜನರು ಲಿಫ್ಟ್​​ನಲ್ಲಿ (Lift) ಸಿಲುಕಿ ಪರದಾಡಿರುವ ಘಟನೆ ಶಿವಮೊಗ್ಗ ನಗರದ (Shivamogga) ಶಾಪಿಂಗ್ ಮಾಲ್​​​​​ನಲ್ಲಿ (Shopping Mall) ನಡೆದಿದೆ. ಶಿವಮೊಗ್ಗ ನಗರದ ಆಲ್ಕೋಳ ವೃತ್ತದ ಬಳಿ ಇರುವ ಶಾಪಿಂಗ್ ಮಾಲ್ ನ ಲಿಫ್ಟ್​​ನಲ್ಲಿ ಅರ್ಧ ಗಂಟೆ ಕಾಲ ಸಿಲುಕಿದ್ದು, ಕೊನೆಗೆ ಅಗ್ನಿ ಶಾಮಕ ಸಿಬ್ಬಂದಿ ಹರಸಾಹಸಪಟ್ಟು ರಕ್ಷಣೆ ಮಾಡಿದ್ದಾರೆ. ಭರತ್ (37), ಅನುಷಾ (35), ಅನೀಸ್ ಫಾತಿಮಾ (44), ಮುಸರತ್ (39), ಸೂಬಿಯಾ (31), ಮಿಜ್ಜಾ (09),…

Read More

ಕೊಡಗಿನಲ್ಲಿ ಅಮಾನುಷ ಕೃತ್ಯ: ಬಲವಂತದ ಮತಾಂತರಕ್ಕೆ ತಾಯಿಯೇ ಸಾಥ್​​; ಮಗನ ಮರ್ಮಾಂಗಕ್ಕೆ‌ ಕತ್ತರಿ – Kannada News | Mother Accused of Forcing 9 Year Old Son to Convert and Undergo Circumcision

ಕೊಡಗು, ಜೂನ್​​ 19: ಆತ 9 ವರ್ಷದ ಬಾಲಕ. ತಾಯಿಯೇ (Mother) ಸರ್ವಸ್ವ ಅಂದುಕೊಂಡಿದ್ದ. ತಾಯಿ ಜೊತೆಯೇ ವಾಸವಾಗಿದ್ದ. ಆದರೆ ಆ ಮಹಾತಾಯಿ ಮಾಡಿರುವ ಅನಾಚಾರ ಮಾತ್ರ ನಿಜಕ್ಕೂ ಭಯಾನಕ. ಅನ್ಯಧರ್ಮದ ಯುವಕರೊಂದಿಗೆ ಸೇರಿ ಮಗನ (Son) ಮರ್ಮಾಂಗವನ್ನು ಕತ್ತರಿಸಿ ಬಲವಂತದ ಮತಾಂತರ ಮಾಡಿಸಿದ್ದಾಳೆ. ಇಂತಹದೊಂದು ಅಮಾನುಷ ಕೃತ್ಯಕ್ಕೆ ಇಡಿ ಕೊಡಗು ಜಿಲ್ಲೆ ಬೆಚ್ಚಿಬಿದ್ದಿದೆ. ಮುಖ್ಯಾಂಶಗಳು ಸುನ್ನತ್ ಹೆಸರಲ್ಲಿ ಬಾಲಕನ ಮರ್ಮಾಂಗಕ್ಕೆ‌ ಕತ್ತರಿ ಮಗನನ್ನ ಬಲವಂತದ ಮತಾಂತರಕ್ಕೆ ಸಾಥ್ ನೀಡಿದ ತಾಯಿ ಅನ್ಯಧರ್ಮದ ಯುವಕರ ಬಂಧನ​​ ನಡೆದಿದ್ದೇನು?…

Read More

Mann Ki Baat: ಭಾರತದ ಅಭಿವೃದ್ಧಿಗೆ ಸೌರ ಹಾಗೂ ಪವನ ಶಕ್ತಿ ಬಹಳ ಮುಖ್ಯ: ಪ್ರಧಾನಿ ಮೋದಿ – Kannada News | Mann Ki Baat Focuses on Census Drive and Buddha’s Teachings

ನವದೆಹಲಿ, ಏಪ್ರಿಲ್ 26: ಭಾರತದ ಅಭಿವೃದ್ಧಿಗೆ ಸೌರಶಕ್ತಿ ಮತ್ತು ಪವನ ಶಕ್ತಿ ಅತ್ಯಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ನಾವು ವಿದ್ಯುತ್ ಅನ್ನು ಸಂರಕ್ಷಿಸಬೇಕು ಮತ್ತು ಸೌರ, ಪವನ ಶಕ್ತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಮನ್​ಕಿ ಬಾತ್​ನಲ್ಲಿ ಹೇಳಿದ್ದಾರೆ. ದಕ್ಷಿಣ ಅಮೆರಿಕದ ಚಿಲಿಯಲ್ಲಿರುವ ಒಂದು ಸಂಸ್ಥೆಯು ಭಗವಾನ್ ಬುದ್ಧನ ಬೋಧನೆಗಳನ್ನು ಪ್ರಚಾರ ಮಾಡುತ್ತಿದೆ. ಲಡಾಖ್ ಮೂಲದ ಡ್ರುಬ್ಬನ್ ಓಟ್ಜರ್ ರಿನ್‌ಪೋಚೆ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯವನ್ನು ನಡೆಸಲಾಗುತ್ತಿದೆ ಎಂದರು. 2027ರ ಜನಗಣತಿಯನ್ನು ದೇಶದ ಅಭಿವೃದ್ಧಿಯ ದಿಕ್ಸೂಚಿ…

Read More

ಬೆಂಗಳೂರು ಪೊಲೀಸರ ಭರ್ಜರಿ ಬೇಟೆ: 34 ಕೋಟಿ ಮೌಲ್ಯದ ಡ್ರಗ್ಸ್​​ ವಶಕ್ಕೆ; 8 ಮಂದಿ ಬಂಧನ – Kannada News | Bengaluru Mega Drug Bust: Hebbal Police Seize MDMA Worth Rupees 34 Crore, Arrest 8 Accused

ವಶಕ್ಕೆ ಪಡೆಯಲಾದ ಡ್ರಗ್ಸ್​​Image Credit source: Tv9 Kannada ಬೆಂಗಳೂರು, ಮೇ 20: ಹೆಬ್ಬಾಳ ಪೊಲೀಸರು ಬೃಹತ್​​ ಡ್ರಗ್​​ ಜಾಲವೊಂದನ್ನು ಭೇದಿಸಿದ್ದು, ದೆಹಲಿಯಿಂದ ಬೆಂಗಳೂರಿಗೆ (Bengaluru) ಮಾದಕ ವಸ್ತುಗಳನ್ನು ತಂದು ಮಾರಾಟ ಮಾಡ್ತಿದ್ದ ಗ್ಯಾಂಗ್​​ನ ಹೆಡೆಮುರಿ ಕಟ್ಟಿದ್ದಾರೆ. ಎಂಟು ಜನ ಆರೋಪಿಗಳನ್ನು ಅರೆಸ್ಟ್ ಮಾಡಿರುವ ಪೊಲೀಸರು, ಈ ಒಂದೇ ತಂಡದಿಂದ ಸುಮಾರು 34 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್​​ ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ಈ ಜಾಲ ಮೂರು ಲೇಯರ್​​ಗಳಲ್ಲಿ ಕೆಲಸ ಮಾಡುತ್ತಿತ್ತು. ಮಾದಕ ವಸ್ತುಗಳ ಸಾಗಾಟಕ್ಕೆ ಆರೋಪಿಗಳು…

Read More

ಇದು ದ್ವಿಚಕ್ರ ವಾಹನ ಸವಾರರು ಓದಲೇ ಬೇಕಾದ ಸ್ಟೋರಿ: ಬೆಚ್ಚಿ ಬೀಳಿಸುವಂತಿದೆ ನಿಮ್ಹಾನ್ಸ್​​ ವರದಿ! – Kannada News | Road Safety: NIMHANS Reveals Fatal Brain Injuries in Bike Accidents

ಬೆಂಗಳೂರು, ಜನವರಿ 26: ನಗರಗಳಲ್ಲಿ ಅದರಲ್ಲೂ ರಾಜಧಾನಿ ಬೆಂಗಳೂರಲ್ಲಿ ಅಪಘಾತಗಳು ಮಾಮೂಲು ಎಂಬಂತಾಗಿದೆ. ಈ ಪೈಕಿ ಬೈಕ್​​ ಅಪಘಾತಗಳ ಸಂದರ್ಭ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರುವವರ ಬಗ್ಗೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಅಧ್ಯಯನವೊಂದು ನಡೆಸಿದ್ದು, ಈ ಅಂಕಿ ಅಂಶಗಳು ಬೆಚ್ಚಿಬೀಳಿಸುವಂತಿವೆ. ಸರಿಯಾಗಿ ಹೆಲ್ಮೆಟ್​​ ಧರಿಸದೇ ಇರುವುದು, ಅಥವಾ ಹೆಲ್ಮೆಟ್​​ ಇಲ್ಲದೆ ದ್ವಿಚಕ್ರ ಚಾಲನೆ ವೇಳೆ ನಡೆಯುವ ಅಪಘಾತಗಳು ಮೆದುಳಿನ ಗಾಯಕ್ಕೆ ಕಾರಣವಾಗುತ್ತಿವೆ. 2025ರಲ್ಲಿ ಚಿಕಿತ್ಸೆ ಪಡೆದ 1,500 ಮೆದುಳಿನ ಗಾಯ…

Read More

ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಸೇರಿದಂತೆ ಇಂದೂ ಹಲವೆಡೆ ಒಣ ಹವೆಯ ವಾತಾವರಣ – Kannada News | Bengaluru temperature: Dry weather in Karnataka, Clear sky in Bengaluru

ಬೆಂಗಳೂರು ಸೇರಿದಂತೆ ಇಂದೂ ಹಲವೆಡೆ ಒಣ ಹವೆಯ ವಾತಾವರಣ ಬೆಂಗಳೂರು, ಮಾರ್ಚ್​ 04: ಬೆಂಗಳೂರಿನಲ್ಲಿ ಸ್ಪಷ್ಟ ಆಕಾಶವಿರಲಿದ್ದು, ತಾಪಮಾನದಲ್ಲಿ ಕೊಂಚ ಏರಿಕೆಯಾಗಬಹುದು ಎಂದು ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಹಲವು ದಿನಗಳಿಂದ ತಾಪಮಾನ (Weather Forecast) ಹೆಚ್ಚಿದ್ದು, ಕೆಲ ದಿನಗಳಿಂದ ಒಣ ಹವೆಯ ವಾತಾವರಣವೇ ಕಂಡುಬಂದಿದೆ. ಆದರೆ ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಎಲ್ಲೆಲ್ಲಿ ಒಣ ಹವೆ? ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ…

Read More

ಬೆಂಗಳೂರಲ್ಲಿ ಲೇಡಿ ಡಾನ್ ಹಾವಳಿ? ರಿಯಲ್ ಎಸ್ಟೇಟ್ ಉದ್ಯಮಿ ಕಚೇರಿಗೆ ನುಗ್ಗಿ ಬೆದರಿಕೆ ಹಾಕಿ 10 ಲಕ್ಷ ರೂ. ಹಫ್ತಾಗೆ ಬೇಡಿಕೆ ಇಟ್ಟ ಮಹಿಳೆ – Kannada News | Bengaluru Real Estate Extortion Case Woman Posing as Youth Wing Chief Threatens Businessman for Rs 10 Lakh Huphta

ಬೆಂಗಳೂರು, ಮೇ 18: ಮಹಿಳೆಯೊಬ್ಬಳು ತಾನು ಸಂಘಟನೆಯೊಂದರ ಪ್ರಮುಖ ನಾಯಕಿ ಎಂದು ಹೇಳಿಕೊಂಡು ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಕಚೇರಿಗೆ ನುಗ್ಗಿ, ಜೀವ ಬೆದರಿಕೆ ಹಾಕಿ ಭಾರಿ ಮೊತ್ತದ ಹಣಕ್ಕೆ ಬೇಡಿಕೆ ಇಟ್ಟಿರುವ ಆಘಾತಕಾರಿ ಘಟನೆ ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಂಗೀತ ರಾಮ್ ಎಂಬ ಮಹಿಳೆ ಹಾಗೂ ಆಕೆಯೊಂದಿಗೆ ಬಂದಿದ್ದ ಇಬ್ಬರು ಪುರುಷರು ಸೇರಿ ರಿಯಲ್ ಎಸ್ಟೇಟ್ ಉದ್ಯಮಿ ವೆಂಕಟರಾಜು ಅವರಿಗೆ ಈ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಕೊಡಿಗೆಹಳ್ಳಿ ವ್ಯಾಪ್ತಿಯಲ್ಲಿರುವ ವೆಂಕಟರಾಜು…

Read More