ಭಲೇ ಭೇಷ್… ಕನ್ನಡಿಗನ ಕಮಾಲ್ಗೆ ದಂಗಾದ ವಿರಾಟ್ ಕೊಹ್ಲಿ! – Kannada News | Virat Kohli’s Epic Reaction to Manish Pandey’s Blinder Catch!
ಐಪಿಎಲ್ನ 57ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವಿನ ಹೈ-ವೋಲ್ಟೇಜ್ ಪಂದ್ಯದಲ್ಲಿ ಕ್ರಿಕೆಟ್ ಪ್ರೇಮಿಗಳು ಎಂದಿಗೂ ಮರೆಯದ ಅದ್ಭುತ ಕ್ಷಣವೊಂದು ದಾಖಲಾಗಿದೆ. ಕೆಕೆಆರ್ ತಂಡದ ಅನುಭವಿ ಆಟಗಾರ ಮನೀಶ್ ಪಾಂಡೆ ಗಾಳಿಯಲ್ಲಿ ಹಕ್ಕಿಯಂತೆ ಜಿಗಿದು ಹಿಡಿದ ಅಸಾಧಾರಣ ಕ್ಯಾಚ್ ಇಡೀ ಕ್ರೀಡಾಂಗಣವನ್ನು ರೋಮಾಂಚನಗೊಳಿಸಿತು. ಕೇವಲ ಸೆಕೆಂಡುಗಳ ಅವಧಿಯಲ್ಲಿ ನಡೆದ ಈ ‘ಸೂಪರ್‌ಮ್ಯಾನ್’ ಸಾಹಸಕ್ಕೆ ನಾನ್-ಸ್ಟ್ರೈಕರ್ ಎಂಡ್‌ನಲ್ಲಿದ್ದ ರನ್-ಮಷಿನ್ ವಿರಾಟ್ ಕೊಹ್ಲಿ ದಿಗ್ಭ್ರಮೆಗೊಂಡರು. ಆರ್ಸಿಬಿ ಇನಿಂಗ್ಸ್ನ 18ನೇ ಓವರ್‌ನಲ್ಲಿ ಕೆಕೆಆರ್…