ವಿವಿಧ ಪೋಸ್ಟ್ ಆಫೀಸ್ ಸ್ಕೀಮ್ಸ್; ಏಪ್ರಿಲ್-ಜೂನ್ ಕ್ವಾರ್ಟರ್ಗೆ ಬಡ್ಡಿದರ ಘೋಷಣೆ; ಇಲ್ಲಿದೆ ಪಟ್ಟಿ
ನವದೆಹಲಿ, ಮಾರ್ಚ್ 31: ಸರ್ಕಾರದಿಂದ ನಡೆಸಲಾಗುವ ಸಣ್ಣ ಉಳಿತಾಯ ಯೋಜನೆಗಳಿಗೆ (Small Savings Schemes) ಬಡ್ಡಿದರವನ್ನು ಪ್ರತೀ ಕ್ವಾರ್ಟರ್ಗೆ ಪರಿಷ್ಕರಿಸುತ್ತದೆ. 2026ರ ಏಪ್ರಿಲ್ನಿಂದ ಜೂನ್ವರೆಗಿನ ತ್ರೈಮಾಸಿಕ ಅವಧಿಗೆ (April-June quarter) ಬಡ್ಡಿದರ ಪರಿಷ್ಕರಿಸಿದೆ. ಹಿಂದಿನ ಕ್ವಾರ್ಟರ್ ಆದ ಜನವರಿ-ಮಾರ್ಚ್ ಅವಧಿಯಲ್ಲಿ ಇದ್ದ ದರಗಳನ್ನೇ ಮುಂದುವರಿಸಲಾಗಿದೆ. ಸತತ ಎಂಟು ಕ್ವಾರ್ಟರ್ಗಳಿಂದಲೂ ಬಡ್ಡಿದರ ಯಥಾಸ್ಥಿತಿಯಲ್ಲಿದೆ. ಕೊನೆಯ ಬಾರಿ ಬಡ್ಡಿದರದಲ್ಲಿ ಬದಲಾವಣೆ ಆಗಿದ್ದು 2024ರ ಜನವರಿ-ಮಾರ್ಚ್ ಕ್ವಾರ್ಟರ್ನಲ್ಲಿ. 2026ರ ಏಪ್ರಿಲ್-ಜೂನ್ ಕ್ವಾರ್ಟರ್ಗೆ ಸಣ್ಣ ಉಳಿತಾಯ ಯೋಜನೆಗಳ ವಾರ್ಷಿಕ ಬಡ್ಡಿದರ ಸುಕನ್ಯಾ ಸಮೃದ್ಧಿ…