Headlines

ಪುಣೆ–ಬೆಂಗಳೂರು ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ: ಕಾಮಗಾರಿ ಯಾವಾಗ ಶುರು? ಏನೆಲ್ಲ ಉಪಯೋಗ? – Kannada News | Pune Bengaluru Greenfield Expressway: Final Approval Nears, Halving Travel Time

ಬೆಂಗಳೂರು, ಏಪ್ರಿಲ್​​ 16: ಕೇಂದ್ರ ಸರ್ಕಾರದಿಂದ ಶೀಘ್ರವೇ ಶುಭಸುದ್ದಿ ಸಿಗುವ ಸಾಧ್ಯತೆಯಿದ್ದು, ಪ್ರಸ್ತಾವಿತ ಪುಣೆ–ಬೆಂಗಳೂರು ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ ಯೋಜನೆಗೆ ಅಂತಿಮ ಮುದ್ರೆಗೆ ದಿನಗಣನೆ ಆರಂಭವಾಗಿದೆ. ಕೆಲವಾರಗಳಲ್ಲಿ ಇದರ ಮಾರ್ಗರೇಖೆಗೆ ಕೇಂದ್ರ ಅನುಮತಿ ನೀಡುವ ಸಾಧ್ಯತೆ ಇದೆ. ಭಾರತಮಾಲಾ ಯೋಜನೆಯಡಿ ರೂಪಿಸಲಾದ 25 ಗ್ರೀನ್‌ಫೀಲ್ಡ್ ಕಾರಿಡಾರ್‌ಗಳಲ್ಲಿ ಇದೂ ಒಂದಾಗಿದ್ದು, ಅನುಮೋದನಾ ಪ್ರಕ್ರಿಯೆ ಈಗ ಅಂತಿಮ ಹಂತದಲ್ಲಿದೆ. ಆ ಬಳಿಕ ಭೂಸ್ವಾಧೀನ ಪ್ರಕ್ರಿಯೆ ನಡೆದು, ಕಾಮಗಾರಿಯೂ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 700 ಕಿ.ಮೀ ಉದ್ದದ ಈ ಎಕ್ಸ್‌ಪ್ರೆಸ್‌ವೇ…

Read More

ನಿಮ್ಮ ಅತ್ತೆಯ ನೆಚ್ಚಿನ ಸೊಸೆಯಾಗಲು ಬಯಸಿದರೆ ಈ ಗುಣಗಳನ್ನು ಅಳವಡಿಸಿಕೊಳ್ಳಿ – Kannada News | Adopt these qualities to become your mother in law’s favorite daughter in law

ಅತ್ತೆ ಸೊಸೆಯ ಸಂಬಂಧ ಚೆನ್ನಾಗಿದ್ದರೆ, ಇಡೀ ಮನೆ ಚೆನ್ನಾಗಿರುತ್ತದೆ. ಆದರೆ ಅತ್ತೆ ಮತ್ತು ಸೊಸೆಯ (daughter-in-law) ನಡುವಿನ ಸಂಬಂಧವನ್ನು ದೀರ್ಘಕಾಲದವರೆಗೆ ಚೆನ್ನಾಗಿ ಪೋಷಿಸಿಕೊಂಡು ಹೋಗುವುದು ಅಷ್ಟು ಸುಲಭದ ಮಾತೇ ಅಲ್ಲ. ಇವರಿಬ್ಬರಲ್ಲೂ ಭಿನ್ನಾಭಿಪ್ರಾಯಗಳು ಕಂಡುಬಂದರೆ ಮನೆಯ ಶಾತಿಯೇ ಹಾಳಾಗುತ್ತದೆ. ಸಣ್ಣಪುಟ್ಟ ವಿಚಾರಗಳಿಗೂ ಮನಸ್ತಾಪಗಳು ಏರ್ಪಡುವ ಸಾಧ್ಯತೆ ಇರುತ್ತದೆ. ಅದರಲ್ಲೂ ಹೆಚ್ಚಿನ ಮನೆಗಳಲ್ಲಿ ಅತ್ತೆ ಮತ್ತು ಸೊಸೆಯ ನಡುವೆ ಹೊಂದಾಣಿಕೆಯೇ ಇರೋದಿಲ್ಲ. ಕ್ಷುಲ್ಲಕ ಕಾರಣಗಳಿಗೆ ಜಗಳಗಳು ನಡೆಯುತ್ತಿರುತ್ತವೆ. ಹೀಗಿರುವಾಗ ಸೊಸೆಯಾದವಳು ಈ ಕೆಲವೊಂದು ಗುಣಗಳನ್ನು ಅಳವಡಿಸಿಕೊಳ್ಳುವ ಮೂಲಕ ಅತ್ತೆ…

Read More

Budget 2026: ಸೆಮಿಕಂಡಕ್ಟರ್ ಮಿಷನ್‌ಗೆ 40,000 ಕೋಟಿ ರೂ.; ಬಜೆಟ್ ಮಂಡನೆ ಬಳಿಕ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ – Kannada News | Union Budget 2026 Nirmala Sitharaman Briefs Media After Budget Speech

ನವದೆಹಲಿ, ಫೆಬ್ರವರಿ 1: ಇಂದು ದಾಖಲೆಯ 9ನೇ ಬಾರಿಗೆ ಬಜೆಟ್ (Budget 2026)  ಮಂಡಿಸಿದ ಬಳಿಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ಈ ವರ್ಷದ ಬಜೆಟ್​​ನ ಹೈಲೈಟ್​ಗಳನ್ನು ತಿಳಿಸಿದ್ದಾರೆ. ಭಾರತದ ಸೆಮಿಕಂಡಕ್ಟರ್ ಮಿಷನ್‌ಗೆ 40,000 ಕೋಟಿ ರೂ. ಉತ್ತೇಜನ ಸಿಗುತ್ತದೆ. ಸೆಮಿಕಂಡಕ್ಟರ್ ಮಿಷನ್ ಭಾರತದ ಸ್ಟಾಕ್ ಅನ್ನು ಬಲಪಡಿಸುವ ಮತ್ತು ಐಪಿ-ಸಂಬಂಧಿತ ವಿಷಯಗಳನ್ನು ಪರಿಹರಿಸುವ 2 ಪ್ರಮುಖ ಘೋಷಣೆಗಳನ್ನು ಒಳಗೊಂಡಿದೆ ಎಂದು ನಿರ್ಮಲಾ ಸೀತಾರಾಮನ್ (Nirmala Sitharaman) ಹೇಳಿದರು….

Read More

ಡ್ರಗ್ಸ್, ಅತ್ಯಾಚಾರ, ಮತಾಂತರ; ಭೋಪಾಲ್​​ನ ಅಕ್ಕ-ತಂಗಿಯರ ಲೈಂಗಿಕ ಜಾಲ ಪತ್ತೆ – Kannada News | From Slum To Villa Drugged forced to convert Bhopal Sisters Arrested for Sex Racket

ನವದೆಹಲಿ, ಫೆಬ್ರವರಿ 24: ಮಧ್ಯಪ್ರದೇಶದ ರಾಜಧಾನಿ ಭೋಪಾಲ್​ನಲ್ಲಿ ಒಂದು ಘಟನೆ ಆಘಾತಕಾರಿ ಅಲೆಗಳನ್ನು ಎಬ್ಬಿಸಿದೆ. ಭೋಪಾಲ್‌ನ (Bhopal) ಇಬ್ಬರು ಸಹೋದರಿಯರನ್ನು ಅತ್ಯಾಚಾರ, ಬಲವಂತದ ಮತಾಂತರ ಮತ್ತು ಯುವತಿಯರಿಗೆ ಉದ್ಯೋಗ ನೀಡುವ ನೆಪದಲ್ಲಿ ಲೈಂಗಿಕ ಜಾಲ ನಡೆಸುತ್ತಿದ್ದ ಆರೋಪದ ಮೇಲೆ ಬಂಧಿಸಲಾಗಿದೆ. ಬ್ಯೂಟಿಷಿಯನ್ ಮತ್ತು ಮಹಿಳೆಯೊಬ್ಬರು ನೀಡಿದ 2 ಪ್ರತ್ಯೇಕ ದೂರುಗಳಿಂದಾಗಿ ಭೋಪಾಲ್‌ನಲ್ಲಿ ಇಬ್ಬರು ಸಹೋದರಿಯರು ಮತ್ತು ಅವರ ಗ್ಯಾಂಗ್ ನಡೆಸುತ್ತಿದ್ದ ಲೈಂಗಿಕ ಮತ್ತು ಧಾರ್ಮಿಕ ಮತಾಂತರ ಜಾಲ ಬಯಲಾಗಿದೆ. ಛತ್ತೀಸ್‌ಗಢದ 21 ವರ್ಷದ ಮತ್ತು ಭೋಪಾಲ್‌ನ 30…

Read More

Ranji Trophy Semifinal: ಪಡಿಕ್ಕಲ್ ದ್ವಿಶತಕ, ಸ್ಮರಣ್ ಶತಕ; 700 ರನ್​ಗಳ ಗಡಿಯಂಚಿನಲ್ಲಿ ಕರ್ನಾಟಕ – Kannada News | Ranji Semi Final: Karnataka’s Mammoth 689/6; Padikkal Hits Maiden Double Century

ಲಕ್ನೋದ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 2025-26ರ ರಣಜಿ ಟ್ರೋಫಿಯ ಸೆಮಿಫೈನಲ್‌ (Ranji Trophy Semi-final) ಪಂದ್ಯದಲ್ಲಿ ಉತ್ತರಾಖಂಡ್ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಕರ್ನಾಟಕ ( Karnataka vs Uttarakhand) ತಂಡ ಬೃಹತ್ ಮೊತ್ತ ಕಲೆಹಾಕಿದೆ. ಎರಡನೇ ದಿನದಾಟದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 689 ರನ್ ಕಲೆಹಾಕಿದೆ. ತಂಡದ ಪರ ಎರಡನೇ ದಿನದಾಟದಲ್ಲಿ ನಾಯಕ ದೇವದತ್ ಪಡಿಕ್ಕಲ್ (Devdutt Padikkal) ದ್ವಿಶತಕ ಸಿಡಿಸಿದರೆ, ಸ್ಮರಣ್ ರವಿಚಂದ್ರನ್ (Smaran Ravichandran) ಅಜೇಯ ಶತಕ ಸಿಡಿಸಿ…

Read More

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿತ: ಸ್ಥಳ ಪರಿಶೀಲನೆ ಬಳಿಕ ಲೋಕಾಯುಕ್ತ ಶಾಕಿಂಗ್ ಹೇಳಿಕೆ – Kannada News | Bowring Hospital Tragedy: Lokayukta to File Suo Motu Case Against Chief Secretary and Top Officials

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿತ ಸ್ಥಳದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್Image Credit source: tv9 ಬೆಂಗಳೂರು, ಏಪ್ರಿಲ್ 30: ಬೆಂಗಳೂರಿನ (Bengaluru) ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ಏಳು ಅಮಾಯಕರು ಬಲಿಯಾದ ಪ್ರಕರಣವನ್ನು ಕರ್ನಾಟಕ ಲೋಕಾಯುಕ್ತವು (Lokayukta) ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಘಟನಾ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್ ಅವರು, ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತ (Suo Motu Case)…

Read More

ಟಾಲಿವುಡ್​​ನಲ್ಲಿ ಉಲ್ಬಣಗೊಂಡ ನಿರ್ಮಾಪಕ vs ಪ್ರದರ್ಶಕ ವಿವಾದ: ಡಿಸಿಎಂ ಪವನ್​​ಗೆ ದೂರು

ತೆಲುಗು ಚಿತ್ರರಂಗದಲ್ಲಿ (Tollywood) ಸಿನಿಮಾ ನಿರ್ಮಾಪಕ ಮತ್ತು ಪ್ರದರ್ಶಕರ ನಡುವೆ ವಿವಾದ ಭುಗಿಲೆದ್ದಿದ್ದು, ಇತ್ತೀಚೆಗಷ್ಟೆ ಸಭೆ ನಡೆಸಿ ಸಂಧಾನ ನಡೆಸಿದ್ದರೂ ಸಹ ಸಮಸ್ಯೆ ಮುಗಿದಿಲ್ಲ. ನಿರ್ಮಾಪಕರು ಹಾಗೂ ಪ್ರದರ್ಶಕರು ಪರಸ್ಪರ ಬಹಿರಂಗವಾಗಿಯೇ ಪರಸ್ಪರ ಹೇಳಿಕೆ-ಪ್ರತಿಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದೀಗ ತೆಲಂಗಾಣ ಪ್ರದರ್ಶಕರು ‘ಪೆದ್ದಿ’ ಸಿನಿಮಾವನ್ನು ಬಿಡುಗಡೆ ಮಾಡುವುದಿಲ್ಲವೆಂದು ‘ಬೆದರಿಕೆ’ ಸಹ ಹಾಕಿದ್ದಾರೆ. ಇದೆಲ್ಲದರ ನಡುವೆ ಕೆಲ ನಿರ್ಮಾಪಕರು ಆಂಧ್ರ ಪ್ರದೇಶ ಡಿಸಿಎಂ ಮತ್ತು ಸ್ಟಾರ್ ನಟ ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡಿ ಕೆಲ ಮನವಿಗಳನ್ನು ಸಲ್ಲಿಸಿದ್ದು, ಪವನ್…

Read More

Siddaramaiah Political Life: ಪಕ್ಷೇತರ ಶಾಸಕನಿಂದ ಎರಡು ಬಾರಿ ಸಿಎಂ ಹುದ್ದೆಯವರೆಗೆ; ಸಿದ್ದರಾಮಯ್ಯನವರ ಸುದೀರ್ಘ ರಾಜಕಾರಣದ ಹಾದಿ ಇಲ್ಲಿದೆ

ಬೆಂಗಳೂರು, ಮೇ 28: ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah) ರಾಜೀನಾಮೆ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಎರಡನೇ ಅವಧಿಗೆ ಸಿಎಂ ಆಗಿದ್ದ ಸಿದದ್ದರಾಮಯ್ಯ ಒಟ್ಟು 8 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿರುವ ದಾಖಲೆ ಬರೆದಿದ್ದಾರೆ. 1983ರಲ್ಲಿ ವಿಧಾನಸಭೆಗೆ ಪ್ರವೇಶಿಸಿದ್ದ ಇವರು, ಎರಡು ಬಾರಿ ಉಪಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಸಮಾಜವಾದಿ ಹಿನ್ನೆಲೆಯಿಂದ ಬಂದ ಸಿದ್ದರಾಮಯ್ಯ ‘ಅಹಿಂದ’ ವರ್ಗಗಳ ಪ್ರಮುಖ ನಾಯಕರಾಗಿ ಗುರುತಿಸಿಕೊಂಡವರು. ಸಿದ್ದರಾಮಯ್ಯ ರಾಜಕೀಯದ ಹಾದಿ ಮೈಸೂರಿನ ಸಿದ್ದರಾಮನಹುಂಡಿಯವರಾದ ಸಿದ್ದರಾಮಯ್ಯನವರು, 1983ರಲ್ಲಿ ಮೊದಲ ಬಾರಿಗೆ…

Read More

‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ – Kannada News | Simple Suni Sheelam Moksha Kushal talk about new movie Moda Kavida Vaatavarana

ಹೊಸ ನಟ ಶೀಲಮ್ ಅವರು ಹೀರೋ ಆಗಿ ಅಭಿನಯಿಸಿರುವ ‘ಮೋಡ ಕವಿದ ವಾತಾವರಣ’ (Moda Kavida Vaatavarana) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಜೂನ್ 26ರಂದು ಈ ಚಿತ್ರ ಬಿಡುಗಡೆ ಆಗಲಿದೆ. ಸಿಂಪಲ್ ಸುನಿ ಅವರು ನಿರ್ದೇಶನ ಮಾಡಿದ ಈ ಸಿನಿಮಾದಲ್ಲಿ ಶೀಲಂ ಜೊತೆ ಸಾತ್ವಿಕಾ, ಮೋಕ್ಷಾ ಕುಶಾಲ್ ಅವರು ಕೂಡ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ‘ರಾಮ್‌ ಮೂವೀಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಮೈಸೂರು ರಮೇಶ್, ಶ್ರೀರಂಗರಾಜು, ಲೋಕೇಶ್ ಬೆಳವಾಡಿ, ಗೋವಾ ರಮೇಶ್ ನಿರ್ಮಾಣ ಮಾಡಿದ್ದಾರೆ….

Read More

ವಾಹನ ಸವಾರರೇ ಎಚ್ಚರ: ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಹದ್ದಿನ ಕಣ್ಣಿಟ್ಟಿದ್ದಾರೆ ಟ್ರಾಫಿಕ್ ಪೊಲೀಸರು! – Kannada News | Bengaluru Traffic Alert: Police Intensify Drunk and Drive Checks Across the City

ಬೆಂಗಳೂರು, ಡಿಸೆಂಬರ್ 27: ಹೊಸ ವರ್ಷಾಚರಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದಾದ್ಯಂತ ಪೊಲೀಸರು ಡ್ರಂಕ್ ಅಂಡ್ ಡ್ರೈವ್ ತಪಾಸಣೆ ತೀವ್ರಗೊಳಿಸಿದ್ದಾರೆ. ನಗರದ ಪ್ರಮುಖ ಜಂಕ್ಷನ್‌ಗಳು ಮತ್ತು ವೃತ್ತಗಳಲ್ಲಿ, ಅದರಲ್ಲೂ ವಿಶೇಷವಾಗಿ ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಮೆಜೆಸ್ಟಿಕ್ ಸಂಪರ್ಕಿಸುವ ಜಂಕ್ಷನ್‌ಗಳಲ್ಲಿ ಈ ಚೆಕ್‌ಗಳನ್ನು ನಡೆಸಲಾಗುತ್ತಿದೆ. ಕಳೆದ ಒಂದು ವಾರದಿಂದಲೂ ಬೆಂಗಳೂರಿನಲ್ಲಿ ನಿರಂತರವಾಗಿ ಡ್ರಂಕ್ ಅಂಡ್ ಡ್ರೈವ್ ತಪಾಸಣೆಗಳು ನಡೆಯುತ್ತಿದ್ದು, ಪ್ರತಿದಿನ ಸರಾಸರಿ 500ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಕುಡಿದು ವಾಹನ ಚಲಾಯಿಸುತ್ತಿರುವುದು ಕಂಡುಬಂದಲ್ಲಿ ವಾಹನವನ್ನು ಜಪ್ತಿ…

Read More