ಪಿಎಂ ಎಸ್ವೈಎಂ ಸ್ಕೀಮ್; ತಿಂಗಳಿಗೆ ಕೇವಲ 55 ರೂ ಹೂಡಿಕೆ; ಉತ್ತಮ ಮಾಸಿಕ ವರಮಾನ ಸೃಷ್ಟಿ
ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರಿಗೆಂದು ಸರ್ಕಾರ ವಿವಿಧ ನಿವೃತ್ತಿ ಸ್ಕೀಮ್ಗಳನ್ನು ನಡೆಸುತ್ತಿದೆ. ಇದರಲ್ಲಿ ಪಿಎಂ ಎಸ್ವೈಎಂ ಸ್ಕೀಮ್ ಕೂಡ ಒಂದು. ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆಯಲ್ಲಿ ಬಹಳ ಅಲ್ಪ ಹೂಡಿಕೆಯಲ್ಲಿ 3,000 ರೂಗಳ ಮಾಸಿಕ ಖಾತ್ರಿ ಪಿಂಚಣಿ ಸೃಷ್ಟಿಸಲು ಸಾಧ್ಯ. 2019ರಲ್ಲೇ ಈ ಸ್ಕೀಮ್ ಆರಂಭವಾಗಿದೆ. ಇಪಿಎಫ್, ಎನ್ಪಿಎಸ್ ಇತ್ಯಾದಿ ಸೌಲಭ್ಯ ಇಲ್ಲದ ಕೆಲಸಗಾರರು, ಉದ್ಯೋಗಿಗಳಿಗೆಂದು ಈ ಯೋಜನೆ ಇರುವುದು. ಬೀದಿಬದಿ ವ್ಯಾಪಾರಿಗಳು, ಕಟ್ಟಡ ನಿರ್ಮಾಣದ ಕೂಲಿಕಾರ್ಮಿಕರು, ಮನೆಗೆಲಸದವರು, ಸಣ್ಣ ವರ್ತಕರು ಇತ್ಯಾದಿ…