ನಮ್ಮ ಮೆಟ್ರೋದಿಂದ ಮದ್ಯಪ್ರಿಯರಿಗೆ ಶೀಘ್ರವೇ ಗುಡ್ನ್ಯೂಸ್? ಸೀಲ್ಡ್ ಲಿಕ್ಕರ್ ಬಾಟಲ್ ಸಾಗಾಟಕ್ಕೆ ಅನುಮತಿ? – Kannada News | Namma Metro Alcohol Policy Update: BMRCL Mulls Allowing Sealed Liquor Bottles on Delhi Model
ಬೆಂಗಳೂರು, ಫೆಬ್ರವರಿ 18: ಮದ್ಯಪ್ರಿಯರಿಗೆ ಬಿಎಂಆರ್ಸಿಎಲ್ ಶೀಘ್ರವೇ ಶುಭಸುದ್ದಿ ಕೊಡುವ ನಿರೀಕ್ಷೆ ಇದ್ದು, ಸೀಲ್ಡ್ ಮಾಡಿರುವ ಮದ್ಯದ ಬಾಟಲಿಗಳನ್ನು ನಮ್ಮ ಮೆಟ್ರೋ ರೈಲುಗಳಲ್ಲಿ ಸಾಗಿಸಲು ಅನುಮತಿ ನೀಡುವ ಸಾಧ್ಯತೆ ಇದೆ. ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಮೂಲಗಳ ಪ್ರಕಾರ, ಈ ವಿಷಯವನ್ನು ಹಲವು ಬಾರಿ ಚರ್ಚಿಸಲಾಗಿದ್ದು, ಇತ್ತೀಚಿನ ಸಭೆಯಲ್ಲಿಯೂ ಮತ್ತೆ ಪ್ರಸ್ತಾಪಿಸಲಾಗಿದೆ. ತಾತ್ವಿಕ ಅನುಮತಿ ದೊರೆತಿದ್ದರೂ, ಜಾರಿಗೆ ಬರಲು ಇನ್ನೂ ಸ್ವಲ್ಪ ಸಮಯ ಬೇಕಾಗಬಹುದು ಎನ್ನಲಾಗಿದೆ. ದೆಹಲಿ ಮಾದರಿಯನ್ನು ನಮ್ಮ ಮೆಟ್ರೋದಲ್ಲಿಯೂ ಅನುಸರಿಸುವ ಬಗ್ಗೆ ಚರ್ಚೆ…