ಇರಾನ್-ಇಸ್ರೇಲ್, ಅಮೆರಿಕ ಸಂಘರ್ಷ; ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿದ ಭಾರತೀಯರನ್ನು ಕರೆತರಲಿವೆ 58 ವಿಮಾನಗಳು – Kannada News | Indian Airlines to operate 58 Flights To The Gulf Region Today to evacuate citizens
ನವದೆಹಲಿ, ಮಾರ್ಚ್ 4: ಇರಾನ್- ಇಸ್ರೇಲ್, ಅಮೆರಿಕದ (Iran-Israel Conflict) ನಡುವೆ ದಾಳಿ-ಪ್ರತಿದಾಳಿ ಮುಂದುವರೆದಿದೆ. ಹೀಗಾಗಿ, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾಗಿರುವುದರಿಂದಾಗಿ ಭಾರತದಿಂದ ವಿಮಾನ ಸಂಚಾರವನ್ನು ರದ್ದುಗೊಳಿಸಲಾಗಿತ್ತು. ಇಂದು ಆ ಪ್ರದೇಶದಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಕರೆತರಲು 58 ವಿಮಾನಗಳು ಗಲ್ಫ್ ರಾಷ್ಟ್ರಗಳಿಗೆ ಹಾರಾಟ ನಡೆಸಲಿವೆ. ಮಧ್ಯಪ್ರಾಚ್ಯ ಬಿಕ್ಕಟ್ಟಿನ ಮಧ್ಯೆ 1,221ಕ್ಕೂ ಹೆಚ್ಚು ಭಾರತೀಯ ವಿಮಾನಯಾನ ಸಂಸ್ಥೆಗಳು ಮತ್ತು 388 ವಿದೇಶಿ ವಿಮಾನಯಾನ ಸೇವೆಗಳನ್ನು ರದ್ದುಗೊಳಿಸಲಾಗಿದೆ. ಪಶ್ಚಿಮ ಏಷ್ಯಾದ ಕೆಲವು ಭಾಗಗಳಲ್ಲಿ ವಾಯುಪ್ರದೇಶಗಳನ್ನು ಮುಚ್ಚಲಾಗಿದೆ. “ಸಿಕ್ಕಿಬಿದ್ದ ಪ್ರಯಾಣಿಕರ ಸಂಚಾರಕ್ಕೆ ಅನುಕೂಲವಾಗುವಂತೆ…