‘ಭೂತ್ ಬಂಗ್ಲ’ ಕಲೆಕ್ಷನ್: 3 ದಿನಕ್ಕೆ 100 ಕೋಟಿ ರೂಪಾಯಿ ಗಳಿಸಿದ ಅಕ್ಷಯ್ ಕುಮಾರ್ ಸಿನಿಮಾ – Kannada News | Akshay Kumar Bhooth Bangla worldwide Box Office Collection day 3 crosses Rs 100 crores
ಬಾಲಿವುಡ್‌ನ ಖ್ಯಾತ ನಟ ಅಕ್ಷಯ್ ಕುಮಾರ್ (Akshay Kumar) ಮತ್ತು ಹಿರಿಯ ನಿರ್ದೇಶಕ ಪ್ರಿಯದರ್ಶನ್ ಕಾಂಬಿನೇಷನ್ನಲ್ಲಿ ಬಂದ ‘ಭೂತ್ ಬಂಗ್ಲ’ (Bhooth Bangla) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಮಾಧಾನಕರ ಗಳಿಕೆ ಮಾಡಿದೆ. ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲೇ ಈ ಚಿತ್ರವು ವಿಶ್ವಾದ್ಯಂತ 100 ಕೋಟಿ ರೂಪಾಯಿಗಳ ಗಡಿಯನ್ನು ದಾಟುವ ಮೂಲಕ ಗಮನ ಸೆಳೆದಿದೆ. ಸುಮಾರು 14 ವರ್ಷಗಳ ಸುದೀರ್ಘ ಬಿಡುವಿನ ನಂತರ ಅಕ್ಷಯ್ ಕುಮಾರ್ ಮತ್ತು ಪ್ರಿಯದರ್ಶನ್ ಒಂದಾಗಿ ಮಾಡಿರುವ ಈ ಹಾರರ್-ಕಾಮಿಡಿ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ…