GBA Election: ಚುನಾವಣೆ ನಡೆಸಲು ಹಣವಿಲ್ಲ, ಸಿಬ್ಬಂದಿಯೂ ಇಲ್ಲ! ಸೆಪ್ಟೆಂಬರ್ವರೆಗೆ ಗಡುವು ಕೋರಿ ಸುಪ್ರೀಂ ಕೋರ್ಟ್ ಕದ ತಟ್ಟಿದ ಚುನಾವಣಾ ಆಯೋಗ! – Kannada News | GBA Election Delay: State Election Commission Seeks Extension Until September 30
ನವದೆಹಲಿ, ಏಪ್ರಿಲ್ 25: ಬೆಂಗಳೂರು ನಗರ ಪಾಲಿಕೆಗಳ ಚುನಾವಣೆಯ ಕುರಿತಾಗಿ ಮಹತ್ವದ ವಿಚಾರ ಬೆಳಕಿಗೆ ಬಂದಿದೆ. ಕರ್ನಾಟಕ ರಾಜ್ಯ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಚುನಾವಣೆಯನ್ನು ಜೂನ್ 30ರೊಳಗೆ ನಡೆಸುವ ಬದಲು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲು ಮನವಿ ಮಾಡಿದೆ. ಜಾತಿಗಣತಿಯಲ್ಲೇ ನಿರತರಾಗಿರುವ ಸಿಬ್ಬಂದಿ ಸುಪ್ರೀಂ ಕೋರ್ಟ್ ನಿಗದಿಪಡಿಸಿದ್ದ ಗಡುವಿನೊಳಗೆ ಚುನಾವಣೆಯನ್ನು ಪೂರ್ಣಗೊಳಿಸಲು ಸಿಬ್ಬಂದಿ ಮತ್ತು ಹಣದ ಕೊರತೆ ಇದೆ ಎಂದು ಆಯೋಗ ತಿಳಿಸಿದೆ. ಇದೇ ವೇಳೆ ಜನಗಣತಿ ಕಾರ್ಯಗಳು…