LPG ಕೊರತೆ: ಬ್ಲ್ಯಾಕ್ ಮಾರ್ಕೆಟ್‌ನಲ್ಲಿ ಸಿಲಿಂಡರ್ ದರ 4 ಸಾವಿರ ರೂಪಾಯಿಗೆ ಏರಿಕೆ?
ಹುಬ್ಬಳ್ಳಿ, ಮಾರ್ಚ್ 11: ಹೋಟೆಲ್ ಉದ್ಯಮವು ತೀವ್ರ LPG ಸಿಲಿಂಡರ್ ಕೊರತೆಯಿಂದ ತತ್ತರಿಸಿದೆ. ವಾಣಿಜ್ಯ ಸಿಲಿಂಡರ್‌ಗಳು ಲಭ್ಯವಿಲ್ಲದೆ ಹೋಟೆಲ್ ಮಾಲೀಕರು ಪರದಾಡುತ್ತಿದ್ದಾರೆ. ಒಂದು ಸಿಲಿಂಡರ್‌ಗೆ 4,000-5,000 ನೀಡಲು ಸಿದ್ಧರಿದ್ದರೂ ಸಿಲಿಂಡರ್‌ಗಳು ಸಿಗುತ್ತಿಲ್ಲ ಎಂದು ಮಾಲೀಕರು ಅಳಲು ತೋಡಿಕೊಂಡಿದ್ದಾರೆ. ಈ ಸಮಸ್ಯೆಯಿಂದಾಗಿ ಹೋಟೆಲ್‌ಗಳು ದೋಸೆ, ಪೂರಿ ಸೇರಿದಂತೆ ಹಲವು ಖಾದ್ಯಗಳ ತಯಾರಿಕೆಯನ್ನು ನಿಲ್ಲಿಸಿವೆ. ಸಿಲಿಂಡರ್ ಕೊರತೆಯು ಕಾರ್ಮಿಕರ ಬದುಕಿನ ಮೇಲೆ ನೇರ ಪರಿಣಾಮ ಬೀರಿದೆ. ಹಲವು ಹೋಟೆಲ್‌ಗಳು ಈಗಾಗಲೇ ಕಾರ್ಮಿಕರ ಸಂಖ್ಯೆಯನ್ನು ಕಡಿತಗೊಳಿಸಿವೆ, ಇನ್ನೂ ಕೆಲವು ಹೋಟೆಲ್‌ಗಳು ಮುಚ್ಚುವ…