‘ಕರುಪ್ಪು’ ಸೂಪರ್ ಹಿಟ್ ಆದರೆ ಹಣ ಬಂದಿಲ್ಲವೆಂದ ಫೈನ್ಯಾನ್ಶಿಯರ್, ನಿರ್ದೇಶಕನ ಮೇಲೆ ಆಕ್ರೋಶ – Kannada News | Financier said Karuppu movie became super hit but he did not get money
ತಮಿಳು ಸ್ಟಾರ್ ನಟ ಸೂರ್ಯ (Suriya) ಅವರ ಇತ್ತೀಚಿನ ಚಿತ್ರ ‘ಕರುಪ್ಪು’ ಸೂಪರ್ ಹಿಟ್ ಎನಿಸಿಕೊಂಡಿದೆ. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 350 ಕೋಟಿಗೂ ಹೆಚ್ಚು ಮೊತ್ತ ಕಲೆ ಹಾಕಿದೆ ಎನ್ನಲಾಗುತ್ತಿದೆ. ನಿರ್ದೇಶಕ ಆರ್ ಬಾಲಾಜಿಯಂತೂ ಯಶಸ್ಸಿನ ಖುಷಿಯನ್ನು ಅನುಭವಿಸುತ್ತಿದ್ದಾರೆ. ನಟ ಸೂರ್ಯ ಅವರು, ಬಾಲಾಜಿಗೆ ಐಶಾರಾಮಿ ಕಾರೊಂದನ್ನು ಉಡುಗೊರೆಯಾಗಿ ಸಹ ನೀಡಿದ್ದಾರೆ. ಸಿನಿಮಾ ಹಿಟ್ ಎಂದು ನಿರ್ದೇಶಕ, ನಟ ಹೇಳುತ್ತಿರುವಾಗಲೇ ಆ ಸಿನಿಮಾಕ್ಕೆ ಫೈನ್ಯಾನ್ಸ್ ಮಾಡಿದ ವ್ಯಕ್ತಿಯೊಬ್ಬರು ಸಂದರ್ಶನವೊಂದರಲ್ಲಿ ಮಾತನಾಡಿದ್ದು, ತಾವು ಹಾಕಿದ ಬಂಡವಾಳದ 50% ಮಾತ್ರವೆ…