Headlines

ಬಿಹಾರದಲ್ಲಿ ಶಿಕ್ಷಕರ ನೇಮಕಾತಿ ವಿಳಂಬ ವಿರೋಧಿಸಿ ಪ್ರತಿಭಟನೆ; ಪೊಲೀಸರಿಂದ ಲಾಠಿಚಾರ್ಜ್ – Kannada News | Bihar teacher recruitment protest Police uses lathicharge on TRE 4 aspirants

ಪಾಟ್ನಾ, ಮೇ 8: ಬಿಹಾರದಲ್ಲಿ ಶಿಕ್ಷಕರ ನೇಮಕಾತಿ ಪರೀಕ್ಷೆ (TRE) ಬರೆದ ಅಭ್ಯರ್ಥಿಗಳನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್‌ ನಡೆಸಿದ್ದಾರೆ. ಇದರಿಂದ ಬಿಹಾರದಲ್ಲಿ (Bihar) ಉದ್ವಿಗ್ನ ವಾತಾವರಣ ಸೃಷ್ಟಿಯಾಯಿತು. ಶಿಕ್ಷಕರ ನೇಮಕಾತಿ ಪರೀಕ್ಷೆ 4.0 ರ ಅಧಿಸೂಚನೆ ವಿಳಂಬವಾದ ಬಗ್ಗೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು. ಇದರ ಪರಿಣಾಮವಾಗಿ, ಬಿಹಾರ ಸಾರ್ವಜನಿಕ ಸೇವಾ ಆಯೋಗ (BPSC) ಶಿಕ್ಷಕರ ನೇಮಕಾತಿ ಪರೀಕ್ಷೆಯ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಲು ಆಕಾಂಕ್ಷಿಗಳು ಸಾಮೂಹಿಕವಾಗಿ ಪ್ರತಿಭಟನೆ ನಡೆಸಿದ್ದರು. ಏಪ್ರಿಲ್ ಕಳೆದು ಮೇ ಎರಡನೇ ವಾರ…

Read More

Chanakya Niti: ಈ ನಿಯಮವನ್ನು ಪಾಲಿಸಿದರೆ ಜೀವನದಲ್ಲಿ ಸಂತೋಷ, ಶಾಂತಿ ಸದಾ ಕಾಲ ಇರುತ್ತದೆ – Kannada News | Chanakya Niti: Follow these tips from Chanakya to make your life peaceful and happy

ಶಾಂತಿ, ಸಂತೋಷ (Happiness), ನೆಮ್ಮದಿ ಎನ್ನುವಂತಹದ್ದು ಹೊರಗಿನಿಂದ ಬರುವಂತಹದ್ದಲ್ಲ, ಅದನ್ನು ನಮ್ಮೊಳಗೆ ನಾವು ಕಂಡುಕೊಳ್ಳಬೇಕು. ಶಾಂತಿ ಮತ್ತು ನೆಮ್ಮದಿಯನ್ನು ದುಡ್ಡಿನಿಂದಲೂ ಕೊಂಡುಕೊಳ್ಳಲು ಸಾಧ್ಯವಿಲ್ಲ. ಇದಲ್ಲದೆ ಜೀವನದಲ್ಲಿ ಮಾನಸಿಕ ನೆಮ್ಮದಿ, ಶಾಂತಿ ಇಲ್ಲ ಎಂದಾದರೆ ಬಾಳು ಕೂಡ ವ್ಯರ್ಥ. ಹೀಗಿರುವಾಗ ಸಂಘರ್ಷ, ಅನಗತ್ಯ ಮನಸ್ತಾಪಗಳನ್ನು ನಿವಾರಿಸಲು ಮತ್ತು ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ಸದಾ ಕಾಲ ಇರುವಂತೆ ಮಾಡಲು ಸಲಹೆಗಳನ್ನು ನೀಡಿದ್ದಾರೆ. ನಿಮ್ಮ ಜೀವನವೂ ಸಂತೋಷದಿಂದ ಕೂಡಿರಲು  ಚಾಣಕ್ಯರ ಈ ಸಲಹೆಗಳನ್ನು ತಪ್ಪದೇ ಪಾಲಿಸಿ. ಜೀವನದಲ್ಲಿ ಶಾಂತಿ,…

Read More

ಬೆಂಗಳೂರು: ಚಿತ್ರದುರ್ಗ ಬಸ್ ದುರಂತದ ಕಹಿ ನೆನಪು ಮಾಸುವ ಮುನ್ನವೇ ಡ್ರಂಕ್ ಆ್ಯಂಡ್ ಡ್ರೈವ್ ಮಾಡಿ ಸಿಕ್ಕಿಬಿದ್ದ ಖಾಸಗಿ ಬಸ್ ಚಾಲಕ – Kannada News | Private Bus Safety: Drunk Sea Bird Bus Driver Caught Incident Sparks Alarm Amid Bengaluru Checks

ಬೆಂಗಳೂರು, ಡಿಸೆಂಬರ್ 27: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗೊರ್ಲತ್ತು ಕ್ರಾಸ್ ಬಳಿ ನಡೆದ ಸೀ ಬರ್ಡ್ ಬಸ್ ದುರಂತದ ಬೆನ್ನಲ್ಲೇ, ಅದೇ ಕಂಪನಿಯ ಮತ್ತೊಬ್ಬ ಚಾಲಕನ ನಿರ್ಲಕ್ಷ್ಯ ಬೆಳಕಿಗೆ ಬಂದಿದೆ. ಪ್ರಯಾಣಿಕರ ಸುರಕ್ಷತೆ ಬಗ್ಗೆ ಆತಂಕ ಮೂಡಿಸುವಂತಹ ಈ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಬೆಂಗಳೂರಿನಿಂದ ಗೋವಾಕ್ಕೆ ಹೊರಟಿದ್ದ ಖಾಸಗಿ ಸೀ ಬರ್ಡ್ ಬಸ್ ಅನ್ನು ಮದ್ಯಪಾನ ಮಾಡಿ ಚಾಲನೆ ಮಾಡುತ್ತಿದ್ದ ಚಾಲಕ, ಉಪ್ಪಾರಪೇಟೆ ಸಂಚಾರಿ ಪೊಲೀಸರ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾನೆ….

Read More

ದಿನ ಭವಿಷ್ಯ: ಇಂದು ಈ ರಾಶಿಯವರು ಸುಲಭವನ್ನು ಸಂಕೀರ್ಣ ಮಾಡಿಕೊಳ್ಳುವರು – Kannada News | Horoscope April 18 Satursday 2026; Dina Rashi Bhavishya Today, Checkout the details here

ಮೇಷ ರಾಶಿ: ನಿಮ್ಮ ವಿಶ್ಲೇಷಣಾ ಶಕ್ತಿ ಇಂದಿನ ಪ್ರಮುಖ ಆಸ್ತಿಯಾಗಲಿದೆ. ಹಣದ ವ್ಯವಹಾರಗಳಲ್ಲಿ ನಿಖರತೆ ಅಗತ್ಯ. ವಿಶೇಷವಾಗಿ ಬಾಕಿ ಇರುವ ವಿಚಾರದ ಕಡೆ ಗಮನ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕೆಲಸದ ಗುಣಮಟ್ಟವು ಮೇಲಧಿಕಾರಿಗಳ ಗಮನ ಸೆಳೆಯಲಿದೆ. ಮೋಹದ ಕಾರಣದಿಂದ ನಿಮ್ಮವರ ತಪ್ಪನ್ನು ಹೇಳಲು ನೀವು ತಯಾರಿರುವುದಿಲ್ಲ. ಮಕ್ಕಳ ಜೊತೆ ಸಂತೋಷದಿಂದ ಕಳೆಯುವುದು ಅವರಿಗೂ ಖುಷಿಯಾಗುವುದು. ಬರಬೇಕಾದ ಹಣದ ಚಿಂತೆ ಬಹಳ ಕಾಡಬಹುದು. ವೃಷಭ ರಾಶಿ: ಹಣಕಾಸು ವಿಚಾರಗಳಲ್ಲಿ ಎಚ್ಚರಿಕೆಯಿಂದ ನಡೆದುಕೊಳ್ಳುವುದು ಒಳ್ಳೆಯದು. ಮಕ್ಕಳ ಜೊತೆಗೆ ಸಮಯ ಕಳೆಯುವುದು…

Read More

ಬೆಂಗಳೂರಿನ ಹೊರೆ ಇಳಿಸಲು ಬಜೆಟ್​ನಲ್ಲಿ ದೊಡ್ಡ ಘೋಷಣೆ: ರಾಜ್ಯದ 2ನೇ ಐಟಿ ಸಿಟಿಯಾಗಲಿದೆ ಮೈಸೂರು

ಬೆಂಗಳೂರು, ಮಾರ್ಚ್ 6: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಕರ್ನಾಟಕ ಬಜೆಟ್ 2026 ರಲ್ಲಿ ಬೆಂಗಳೂರಿನ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಮತ್ತು ರಾಜ್ಯದ ಇತರ ನಗರಗಳಲ್ಲಿ ತಂತ್ರಜ್ಞಾನ ವಲಯದ ಬೆಳವಣಿಗೆಯನ್ನು ಉತ್ತೇಜಿಸಲು ಮಹತ್ವದ ಯೋಜನೆಗಳನ್ನು ಪ್ರಕಟಿಸಲಾಗಿದೆ. ನವೋದ್ಯಮ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು ಬೆಂಗಳೂರು ಹೊರತುಪಡಿಸಿ, ಇತರೆ ನಗರಗಳಲ್ಲಿ 1000 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಉಪಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ಇದರಲ್ಲಿ, ಮೈಸೂರನ್ನು 2ನೇ ಐಟಿ ಸಿಟಿಯನ್ನಾಗಿ ಅಭಿವೃದ್ಧಿಪಡಿಸುವುದು ಸಹ ಪ್ರಮುಖವಾದದ್ದಾಗಿದೆ. ಹುಬ್ಬಳ್ಳಿ, ಕಲಬುರಗಿ, ಹೊಸಕೋಟೆ…

Read More

ಮತ್ತೆ ಮುನ್ನೆಲೆಗೆ ಬಂದ ವಿವಾದಿತ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ: ಪರ, ವಿರೋಧ ಚರ್ಚೆ ಶುರು – Kannada News

ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆImage Credit source: Tv9 Kannada ತುಮಕೂರು, ಜೂನ್​​ 11: ಹೇಮಾವತಿ ನೀರನ್ನು ಲಿಂಕಿಂಗ್ ಕೆನಾಲ್ ಮೂಲಕ ಕುಣಿಗಲ್​​ಗೆ ಹರಿಸುವ ನಿರ್ಧಾರ ತುಮಕೂರು ಜಿಲ್ಲೆಯಲ್ಲಿ ವಿವಾದ ಸೃಷ್ಟಿಸಿತ್ತು. ಕಾಮಗಾರಿ ಸ್ಥಳದಲ್ಲಿ ನಡೆದ ಭಾರಿ ಹೈಡ್ರಾಮಾ ಬಳಿಕ ಯೋಜನೆಗೆ ಬ್ರೇಕ್ ಬಿದಿತ್ತು. ಆದರೆ ಹತ್ತು ತಿಂಗಳ ಬಳಿಕ ಈ ಯೋಜನೆಗೆ ಸರ್ಕಾರ ಮರು ಜೀವ ನೀಡಲು ಮುಂದಾಗಿರೋದು ಜಿಲ್ಲೆಯ ಶಾಸಕರ ನಡುವೆಯೇ ಪರ-ವಿರೋಧಕ್ಕೆ ನಾಂದಿ ಹಾಡಿದೆ. ಹೀಗಾಗಿ ಮತ್ತೆ ವಿರೋಧ ಕಿಡಿ ಹೊತ್ತಿಕೊಳ್ಳುವ…

Read More

Inspiring: ಬ್ಯಾಂಕ್ ಸಾಲ ಕೊಡದಾಗ ಮನೆ ಖರ್ಚಿನಲ್ಲಿ ಹಣ ಉಳಿಸಿ ಬ್ಯುಸಿನೆಸ್ ಕಟ್ಟಿ ಯಶಸ್ವಿಯಾದ ಪ್ರತಿಭಾ ಶರ್ಮಾ – Kannada News | Pratibha Sharma’s successful entrepreneurship journey from small savings to women fitness centre

ಮುಂಬೈನ ಪ್ರತಿಭಾ ಶರ್ಮಾ (Pratibha Sharma) ಅವರ ಕಥೆಯು ಮನೆಯ ಜವಾಬ್ದಾರಿಗಳ ನಡುವೆ ತಮ್ಮ ಕನಸುಗಳನ್ನು ಬಚ್ಚಿಡುವ ಮಹಿಳೆಯರಿಗೆ ಸ್ಫೂರ್ತಿಯಾಗಿದೆ. ವಿಜ್ಞಾನ ಪದವೀಧರೆ ಮತ್ತು ತಾಯಿಯಾಗಿ ಅವರು ಫಿಟ್ನೆಸ್ ಉದ್ಯಮದಲ್ಲಿ ಗಮನಾರ್ಹ ಕೊರತೆ ಇರುವುದನ್ನು ಗುರುತಿಸಿದರು. ಜಿಮ್ ಮತ್ತು ಫಿಟ್ನೆಸ್ ಸೆಂಟರ್ ಮಾಲೀಕರು ಗೃಹಿಣಿಯರನ್ನು ಮತ್ತು ಹೊಸ ತಾಯಂದಿರನ್ನು ನಿರ್ಲಕ್ಷಿಸುತ್ತಿರುವುದು ಅವರ ಅರಿವಿಗೆ ಬಂತು. ಈ ಆಲೋಚನೆಯು ಪ್ರತಿಭಾಗೆ ತನ್ನದೇ ಆದ ಮಾರ್ಗವನ್ನು ರೂಪಿಸಿಕೊಳ್ಳಲು ಪ್ರೇರಣೆ ನೀಡಿತು. ಸೀಮಿತ ಸಂಪನ್ಮೂಲಗಳ ನಡುವೆಯೂ, ಅವರು ತಮ್ಮ ಮೇಲೆ ನಂಬಿಕೆ…

Read More

12 ವರ್ಷದ ಬಳಿಕ ಕನ್ನಡಕ್ಕೆ ಮರಳಿದ ‘ಅಧ್ಯಕ್ಷ’ ನಟಿ ಹೆಬಾ ಪಟೇಲ್; ದಿಗಂತ್ ಜೊತೆ ಸಿನಿಮಾ – Kannada News | Adyaksha actress Hebah Patel new movie Rudra Kala in Kannada with Diganth Manchale

ನಟಿ ಹೆಬಾ ಪಟೇಲ್ (Hebah Patel) ಅವರು ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದೇ ಕನ್ನಡದ ‘ಅಧ್ಯಕ್ಷ’ ಸಿನಿಮಾ ಮೂಲಕ. ಆ ಚಿತ್ರದಲ್ಲಿ ಅವರು ಶರಣ್​ ಜೊತೆ ನಟಿಸಿದ್ದರು. ಬಳಿಕ ಅವರಿಗೆ ಪರಭಾಷೆಯಲ್ಲಿ ಸಾಕಷ್ಟು ಅವಕಾಶಗಳು ಸಿಕ್ಕವು. ತಮಿಳು, ತೆಲುಗು ಚಿತ್ರರಂಗದಲ್ಲೇ ಅವರು ಬ್ಯುಸಿ ಆದರು. ಈಗ ಬರೋಬ್ಬರಿ 12 ವರ್ಷಗಳ ಬಳಿಕ ಅವರು ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ. ದಿಗಂತ್ ಮಂಚಾಲೆ (Diganth Manchale) ಅಭಿನಯದ ‘ರುದ್ರ ಕಾಲ’ ಸಿನಿಮಾಗೆ ಹೆಬಾ ಪಟೇಲ್ ಅವರು ನಾಯಕಿ ಆಗಿದ್ದಾರೆ. ಈ…

Read More

ಎಲ್ಲವೂ ಉಲ್ಟಾ ಪಲ್ಟಾ… 9 ಪಂದ್ಯಗಳಲ್ಲೂ ಸೋಲು! – Kannada News | Rawalpindiz’s PSL 2026 Nightmare: 9 Losses in 10 Games

ಟಿ20 ಲೀಗ್​ನಲ್ಲಿ ಹೊಸ ತಂಡವೊಂದು ಕಣಕ್ಕಿಳಿದಾಗ ಅಲ್ಲಿ ಸಂಭ್ರಮವಿರುತ್ತದೆ, ಅದರೊಂದಿಗೆ ಹೊಸ ಇತಿಹಾಸ ಬರೆಯುವ ಹಂಬಲವಿರುತ್ತದೆ. ಆದರೆ 2026ರ ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ರಾವಲ್ಪಿಂಡೀಸ್ ತಂಡದ ಪಾಲಿಗೆ ಎಲ್ಲವೂ ಉಲ್ಟಾ ಪಲ್ಟಾ. ಏಕೆಂದರೆ ಆಡಿದ ಚೊಚ್ಚಲ ಟೂರ್ನಿಯಲ್ಲೇ ಅತ್ಯಂತ ಹೀನಾಯ ಪ್ರದರ್ಶನ ನೀಡಿದೆ. ಅದು ಸಹ ಬರೋಬ್ಬರಿ 9 ಪಂದ್ಯಗಳಲ್ಲಿ ಸೋಲು ಕಾಣುವ ಮೂಲಕ. ಸೋಲಿನ ಸರಪಳಿ: ಮೊಹಮ್ಮದ್ ರಿಝ್ವಾನ್ ನೇತೃತ್ವದಲ್ಲಿ ಕಣಕ್ಕಿಳಿದ ರಾವಲ್ಪಿಂಡೀಸ್ ತಂಡವು ಟೂರ್ನಿಯ ಆರಂಭದಲ್ಲೇ ಸತತ 7 ಪಂದ್ಯಗಳನ್ನು ಸೋಲನುಭವಿಸಿತ್ತು. ಈ ಸೋಲಿನೊಂದಿಗೆ…

Read More

ಉತ್ತರ ಭಾರತದತ್ತ ಹೊರಟಿತೇಕೆ ತೆಲುಗು ಚಿತ್ರರಂಗ, ‘ಪುಷ್ಪ’ ಬಳಿಕ ಈಗ ‘ಪೆದ್ದಿ’ – Kannada News | Ram Charan starrer Peddi movie to host grand promotional event at Bhopal

ತೆಲುಗು ಚಿತ್ರರಂಗ (Tollywood), ಭಾರತದ ಅತ್ಯಂತ ಲಾಭದಾಯಕ ಚಿತ್ರರಂಗ. ಇತರೆ ಚಿತ್ರರಂಗಗಳಿಗೆ ಹೋಲಿಸಿದರೆ ಇಲ್ಲಿ ಗೆಲ್ಲುವ ಚಿತ್ರಗಳ ಸರಾಸರಿ ಸಂಖ್ಯೆ ಹೆಚ್ಚು. ತೆಲುಗು ಸಿನಿಮಾಗಳು ಭಾರಿ ದೊಡ್ಡ ಮೊತ್ತದ ಹಣವನ್ನೂ ಸಹ ಗಳಿಕೆ ಮಾಡುತ್ತವೆ. ಮಾತ್ರವಲ್ಲದೆ ತೆಲುಗು ಚಿತ್ರರಂಗ ಹೆಚ್ಚು ವರ್ಸಟೈಲ್ ಚಿತ್ರರಂಗ. ಇಲ್ಲಿ ಎಲ್ಲ ರೀತಿಯ ಸಿನಿಮಾಗಳು ನಿರ್ಮಾಣ ಆಗುತ್ತದೆ. ವಿವಿಧ ಸ್ಥರಗಳ ಟಾಪ್ ನಾಯಕರುಗಳಿದ್ದಾರೆ. ಭಾರಿ ನಿರ್ಮಾಪಕರ ಸಂಖ್ಯೆಯೂ ಸಹ ದೊಡ್ಡದಾಗಿಯೇ ಇದೆ. ಇತ್ತೀಚೆಗೆ ತೆಲುಗು ಚಿತ್ರರಂಗ ನಿಧಾನಕ್ಕೆ ಉತ್ತರ ಭಾರತದತ್ತ ಹೆಜ್ಜೆ ಹಾಕುತ್ತಿದೆ….

Read More