ಸುಡುವ ಬಿಸಿಲಲ್ಲಿ ಹೈ ಟೆನ್ಷನ್ ಕಂಬ ಏರಿ ಕುಳಿತ ರೈತ! ವಿಂಡ್ ಪವರ್ ಕಂಪನಿ ವಿರುದ್ಧ ಭಾರಿ ಆಕ್ರೋಶ – Kannada News | Hunasihal Farmer’s Life at Risk: Protesting Wind Power Company’s Crop Destruction and Harassment
ಕೊಪ್ಪಳ, ಏ.18: ಜಿಲ್ಲೆಯ ಯಲಬುರ್ಗಾ ತಾಲೂಕಿನ ಹುಣಸಿಹಾಳ ಗ್ರಾಮದಲ್ಲಿ ವಿಂಡ್ ಪವರ್ ಕಂಪನಿಯ ದೌರ್ಜನ್ಯದ ವಿರುದ್ಧ ರೈತನೊಬ್ಬ ಆಕ್ರೋಶ ವ್ಯಕ್ತಪಡಿಸಿ, ಸುಮಾರು 400 ಮೀಟರ್ ಎತ್ತರದ ಹೈ ಟೆನ್ಷನ್ ವಿದ್ಯುತ್ ಕಂಬ ಏರಿ ಕುಳಿತಿದ್ದಾನೆ. ಮಧ್ಯಾಹ್ನದ ಸುಡುವ ಬಿಸಿಲನ್ನೂ ಲೆಕ್ಕಿಸದೆ ರೈತ ನಡೆಸುತ್ತಿರುವ ಈ ಪ್ರತಿಭಟನೆ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಹುಣಸಿಹಾಳ ಗ್ರಾಮದ ರೈತ ನಾಗರಾಜ್ ಗೊಂದಿ ಎಂಬುವವರ ಜಮೀನಿನಲ್ಲಿ ಬೆಳೆದಿದ್ದ ಶೇಂಗಾ ಬೆಳೆಯನ್ನು ಪವರ್ ಗ್ರೀಡ್ ವಿಂಡ್ ಪವರ್ ಸಿಬ್ಬಂದಿಗಳು ಹಾಳು ಮಾಡಿದ್ದಾರೆ. ಹೈ ಟೆನ್ಷನ್…