Headlines

ಅಕ್ರಮ ಮರಳು ದಂಧೆ ವಿರುದ್ಧ ಸಮರ ಸಾರಿದ ಜೆಡಿಎಸ್​ ಶಾಸಕಿ ಮನೆಗೆ ನುಗ್ಗಿ ಧಮ್ಕಿ – Kannada News | Sand mafia In Raichur: A Gang threatens to Devadurga JDS MLA Karemma Nayak, case Book

ರಾಯಚೂರು, (ಜನವರಿ 20): ಅಕ್ರಮ ಮರಳು ದಂಧೆ (illegal sand mining )ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ದೇವದುರ್ಗ (Devadurga) ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಶಾಸಕಿ ಕರೆಮ್ಮ ನಾಯಕ್ (Karemma Nayak) ಮನೆಗೆ ನುಗ್ಗಿ ಧಮ್ಕಿ ಹಾಕಿರುವ ಆರೋಪ ಕೇಳಿಬಂದಿದೆ. ಕೃಷ್ಣಾ ನದಿ ತೀರದಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆಕೋರರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಪೊಲಿಸರಿಗೆ ಶಾಸಕಿ ಕರೆಮ್ಮ ಸೂಚನೆ ನೀಡಿದ್ದರು. ಈ ಸೂಚನೆ ಮೇರೆಗೆ ಪೊಲೀಸರು, ಅಕ್ರಮ ಮರಳು ದಂಧೆ ಮೇಲೆ ದಾಳಿ ಮಾಡಿದ್ದು, ಜೆಸಿಬಿ,ಟಿಪ್ಪರ್,…

Read More

ಗುರುಗ್ರಾಮದಲ್ಲಿ ಎನ್​ಕೌಂಟರ್; ಮೋಸ್ಟ್ ವಾಂಟೆಡ್ ಅಂತರ್​ರಾಜ್ಯ ಅಪರಾಧಿಯ ಬಂಧನ – Kannada News | Interstate criminal with Rs 1 lakh bounty arrested in Gurugram after encounter

ಗುರುಗ್ರಾಮ, ಜನವರಿ 5: ಹಲವು ರಾಜ್ಯಗಳಿಗೆ ಬೇಕಾಗಿದ್ದ, ಆತನನ್ನು ಹಿಡಿದುಕೊಟ್ಟವರಿಗೆ 1 ಲಕ್ಷ ರೂ. ಬಹುಮಾನ ಘೋಷಿಸಲಾಗಿದ್ದ ಅಂತರ್​ರಾಜ್ಯ ಅಪರಾಧಿಯನ್ನು ಗುರುಗ್ರಾಮ ಮತ್ತು ನುಹ್ ಪೊಲೀಸರ ಜಂಟಿ ತಂಡವು ಸಣ್ಣ ಎನ್‌ಕೌಂಟರ್ ಕಾರ್ಯಾಚರಣೆ ನಡೆಸಿ ಬಂಧಿಸಿದೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 50 ವರ್ಷದ ಅಪರಾಧಿ ಯಾದ್ ರಾಮ್ ಎಂಬುವವರು ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಾದ್ಯಂತ ಕೊಲೆ (Murder) ಯತ್ನ ಮತ್ತು ದರೋಡೆ ಸೇರಿದಂತೆ ಸುಮಾರು 2 ಡಜನ್ ಅಪರಾಧಗಳನ್ನು ಮಾಡಿದ್ದಾನೆ. ಆತನ…

Read More

ಬದಲಾದ ಲೆಕ್ಕಾಚಾರ… ಪಾಕಿಸ್ತಾನ್ ಸೂಪರ್​ ಲೀಗ್​ಗೆ ಕೈಕೊಟ್ಟ ಮ್ಯಾಕ್ಸ್​ವೆಲ್ – Kannada News | Glenn Maxwell pulls out of PSL 2026

ಆಸ್ಟ್ರೇಲಿಯಾ ತಂಡದ ಸ್ಫೋಟಕ ದಾಂಡಿಗ ಗ್ಲೆನ್ ಮ್ಯಾಕ್ಸ್​ವೆಲ್ (Glenn Maxwell) ಪಾಕಿಸ್ತಾನ್ ಸೂಪರ್ ಲೀಗ್​ನಿಂದ ಹಿಂದೆ ಸರಿದಿದ್ದಾರೆ. ಇದಕ್ಕೂ ಮುನ್ನ ಮ್ಯಾಕ್ಸ್​ವೆಲ್ ಅವರನ್ನು ಪೇಶಾವರ್ ಝಲ್ಮಿ ಫ್ರಾಂಚೈಸಿಯು ಡೈರೆಕ್ಟನ್ ಸೈನಿಂಗ್ ಆಯ್ಕೆ ಮೂಲಕ  ತಂಡಕ್ಕೆ ಸೇರಿಸಿಕೊಂಡಿದೆ ಎಂದು ವರದಿಯಾಗಿತ್ತು. Source link

Read More

ಬೆಂಗಳೂರು: ಕಬ್ಬನ್ ಪಾರ್ಕ್‌ನಲ್ಲಿ ಕಳೆಗಟ್ಟಿದ ಮಾವು ಮೇಳ, ಖರೀದಿಗೆ ಮುಗಿಬಿದ್ದ ಮಾವು ಪ್ರಿಯರು

ಬೆಂಗಳೂರು, ಮೇ 12: ಕಬ್ಬನ್ ಪಾರ್ಕ್‌ನಲ್ಲಿ ಆಯೋಜಿಸಲಾದ ಮಾವು ಮತ್ತು ಹಲಸು ಮೇಳ ಜನರನ್ನು ಸೆಳೆಯುತ್ತಿದೆ. ಮೇ 9 ರಂದು ಆರಂಭಗೊಂಡು ಮೇ 18 ರವರೆಗೆ ನಡೆಯುತ್ತಿರುವ ಈ ಮೇಳದಲ್ಲಿ ಮಾವು ಪ್ರಿಯರು ವಿವಿಧ ತಳಿಯ ಮಾವಿನ ಹಣ್ಣುಗಳಾದ ಮಲ್ಗೋವಾ, ನೀಲಂ, ತೂತಾಪುರಿ, ರಸಪುರಿ ಮತ್ತು ಹಲಸಿನ ಹಣ್ಣುಗಳಿಗೆ ಮುಗಿಬೀಳುತ್ತಿದ್ದಾರೆ. ಮಾವಿನಿಂದ ತಯಾರಿಸಿದ ಐಸ್ ಕ್ರೀಂ, ಜ್ಯೂಸ್, ಹಲ್ವಾ ಸೇರಿದಂತೆ ಹಲವು ಖಾದ್ಯಗಳು ಪ್ರವಾಸಿಗರ ಗಮನ ಸೆಳೆಯುತ್ತಿವೆ. ಚಿಕ್ಕಬಳ್ಳಾಪುರ, ರಾಮನಗರ ಸೇರಿದಂತೆ ಹಲವು ಭಾಗಗಳಿಂದ ರೈತರು ತಮ್ಮ…

Read More

ಕರ್ನಾಟಕದ ಕೈತಪ್ಪಿತಾ ಏರೋಸ್ಪೇಸ್ ಘಟಕ ಯೋಜನೆ?; ಬೆಳಗಾವಿ ಮೂಲದ ಏಕಸ್ ಗ್ರೂಪ್​ನಿಂದ ತಮಿಳುನಾಡಿನಲ್ಲಿ ಕ್ಲಸ್ಟರ್ ನಿರ್ಮಾಣ – Kannada News | Aequs Group of Belagavi to develop Aerospace and Defence cluster in Tamil Nadu’s Hosur

ಬೆಂಗಳೂರು, ಫೆಬ್ರುವರಿ 20: ಬೆಳಗಾವಿ ಮೂಲದ ಮ್ಯಾನುಫ್ಯಾಕ್ಚರಿಂಗ್ ಸಂಸ್ಥೆಯಾದ ಏಕಸ್ ಗ್ರೂಪ್ (Aequs Group) ತಮಿಳುನಾಡಿನಲ್ಲಿ ಬೃಹತ್ ಏರೋಸ್ಪೇಸ್ ಮತ್ತು ಡಿಫೆನ್ಸ್ ಕ್ಲಸ್ಟರ್​ವೊಂದನ್ನು (Aerospace and Defence manufacturing cluster) ನಿರ್ಮಿಸಲಿದೆ. ಬೆಂಗಳೂರು ಪಕ್ಕದ ಹೊಸೂರಿನ ಶೂಲಗಿರಿಯಲ್ಲಿರುವ ಸಿಪ್ಕಾಟ್ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣವಾಗುವ ಈ ಘಟಕಕ್ಕೆ 4,000 ಕೋಟಿ ರೂ ಹೂಡಿಕೆ ಆಗಲಿದೆ. ಏಕಸ್ ಕಂಪನಿ ತಾನೇ ಕೈಯಿಂದ 1,900 ಕೋಟಿ ರೂ ಹೂಡಿಕೆ ಮಾಡಲಿದೆ. ಉಳಿದ 2,100 ಕೋಟಿ ರೂ ಅನ್ನು ಅದರ ಪಾರ್ಟ್ನರ್ ಕಂಪನಿಗಳು…

Read More

ಡಿ. ಸುಧಾಕರ್​​ ಆರೋಗ್ಯದ ಬಗ್ಗೆ ಸಹೋದರನಿಂದ ಬಿಗ್​​ ಅಪ್ಡೇಟ್​: ಈಗ ಹೇಗಿದ್ದಾರೆ ಸಚಿವರು? – Kannada News | Minister D. Sudhakar’s Health Improves: Brother Confirms Recovery from Lung Infection

ಸಚಿವ ಡಿ. ಸುಧಾಕರ್​​ ಬೆಂಗಳೂರು/ಚಿತ್ರದುರ್ಗ, ಮೇ 02: ಶ್ವಾಸಕೋಶದ ಸೋಂಕಿನಿಂದಾಗಿ ಗಂಭೀರ ಸ್ಥಿತಿಯಲ್ಲಿರುವ ಯೋಜನೆ ಮತ್ತು ಸಾಂಖಿಕ‌ ಇಲಾಖೆ ಸಚಿವ ಡಿ. ಸುಧಾಕರ್ ಆರೋಗ್ಯದ ಬಗ್ಗೆ ಅವರ ಸಹೋದರ ಬಿಗ್​​ ಅಪ್ಡೇಟ್​​ ನೀಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಡಿ. ಕುಮಾರ್, ಸುಧಾಕರ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಅವರಿಗೆ ಪ್ರಜ್ಞೆ ಬಂದಿದ್ದು, ಕಣ್ಣುಬಿಟ್ಟು ನೋಡಿದ್ದಾರೆ. ಹೀಗಾಗಿ ನೂರಕ್ಕೆ ನೂರರಷ್ಟು ಅವರು ಗುಣಮುಖರಾಗುವ ವಿಶ್ವಾಸವಿದೆ. ಹಿರಿಯೂರಿಗೆ ಬಂದು ಸುಧಾಕರ್​​ ಮತ್ತೆ ಜನಸೇವೆ ಮಾಡಲಿದ್ದು, ಎಲ್ಲರೂ ಧೈರ್ಯ ಮತ್ತು…

Read More

ಒಂದು ತಿಂಗಳ ಕಾಲ ಚಹಾ ಸೇವಿಸದಿದ್ದರೆ ದೇಹದಲ್ಲಿ ಏನೆಲ್ಲಾ ಬದಲಾವಣೆಗಳನ್ನು ಸಂಭವಿಸುತ್ತವೆ? – Kannada News | What are the positive changes that occur in the body if stop drinking tea for a month?

ಚಹಾವನ್ನು (tea) ಬಹುತೇಕ ಎಲ್ಲರೂ ಇಷ್ಟಪಟ್ಟು ಸೇವನೆ ಮಾಡುತ್ತಾರೆ. ಅದರಲ್ಲೂ ಹೆಚ್ಚಿನ ಭಾರತೀಯರ ದಿನ ಆರಂಭವಾಗುವುದೇ ಒಂದು ಕಪ್‌ ಬಿಸಿ ಬಿಸಿ ಚಹಾದೊಂದಿದೆ. ಕೆಲವರಂತೂ ಬೆಳಗ್ಗೆ, ಕೆಲಸದಲ್ಲಿ ವಿರಾಮದ ಸಮಯದಲ್ಲಿ, ಸಂಜೆ ಹೊತ್ತು ಸೇರಿ ದಿನಕ್ಕೆ 5 ರಿಂದ 6 ಬಾರಿ ಚಹಾ ಸೇವಿಸುತ್ತಾರೆ. ಇದು ದೇಹಕ್ಕೆ ಎನರ್ಜಿ ನೀಡುವುದೇನೋ ನಿಜ ಆದರೆ ಈ ರೀತಿ ಅತಿಯಾಗಿ ಟೀ ಕುಡಿಯುವುದು ಒಳ್ಳೆಯದಲ್ಲ. ಚಹಾದಲ್ಲಿರುವ ಕೆಫೀನ್ ಮತ್ತು ಸಕ್ಕರೆ ಅತಿಯಾಗಿ ಸೇವಿಸಿದರೆ ನಿದ್ರೆ, ಜೀರ್ಣಕ್ರಿಯೆ ಮತ್ತು ಮಾನಸಿಕ ಆರೋಗ್ಯದ…

Read More

ಭೀಕರ ಅಪಘಾತ: ಪ್ರಭಾಸ್ ನಟನೆಯ ‘ಫೌಜಿ’ ಚಿತ್ರತಂಡದ ಸದಸ್ಯ ಸಾವು; ಶೂಟಿಂಗ್ ಸ್ಥಗಿತ – Kannada News | Prabhas starrer Fauzi shooting halted after crew member dies in road accident

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ (Prabhas) ಅಭಿನಯದ ಬಹುನಿರೀಕ್ಷಿತ ‘ಫೌಜಿ’ ಚಿತ್ರತಂಡದಲ್ಲಿ ಭಾರಿ ದುರಂತ ಸಂಭವಿಸಿದೆ. ಚಿತ್ರೀಕರಣಕ್ಕಾಗಿ ತೆರಳುತ್ತಿದ್ದ ಚಿತ್ರತಂಡದ ವಾಹನ ಅಪಘಾತಕ್ಕೀಡಾಗಿದ್ದು, ಓರ್ವ ಸದಸ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಮತ್ತು ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯಿಂದಾಗಿ ಚಿತ್ರತಂಡಕ್ಕೆ ವಿಘ್ನ ಎದುರಾದಂತೆ ಆಗಿದೆ. ವ್ಯಕ್ತಿ ಮೃತಪಟ್ಟ ಕಾರಣದಿಂದ ‘ಫೌಜಿ’ (Fauzi) ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ. ಹೈದರಾಬಾದ್‌ನ ಹೊರವಲಯದಲ್ಲಿರುವ ರಾಮೋಜಿ ಫಿಲ್ಮ್ ಸಿಟಿಗೆ ಚಿತ್ರೀಕರಣಕ್ಕಾಗಿ ತಂಡವು ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಅಬ್ದುಲ್ಲಾಪುರಮೇಟ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ವಾಹನವು…

Read More

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 7ರ ದಿನಭವಿಷ್ಯ

ಮಕ್ಕಳೊಂದಿಗೆ ವಾಗ್ವಾದ ತಪ್ಪಿಸಲು ಮತ್ತು ಶಾಂತಿ ಕಾಪಾಡಲು ಮಹಾಲಕ್ಷ್ಮಿಯ ಮುಂದೆ ತುಪ್ಪದ ದೀಪ ಹಚ್ಚಿ. ಬಿಳಿ ಬಣ್ಣದ ಸಿಹಿತಿಂಡಿಯನ್ನು ನೈವೇದ್ಯ ಮಾಡಿ ಹಂಚಿ. ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4): ಸರ್ಕಾರಿ ಕೆಲಸಕ್ಕಾಗಿ ಪ್ರಯತ್ನ ಮಾಡುತ್ತಿರುವವರಿಗೆ ಬಹಳ ಉತ್ತಮವಾದ ಮಾರ್ಗದರ್ಶನ ದೊರೆಯುವ ಸಾಧ್ಯತೆಗಳು ಹೆಚ್ಚಿವೆ. ಅದೇ ರೀತಿ ಸರ್ಕಾರದಿಂದ ಸಿಗಬೇಕಾದ ಕಾಗದ- ಪತ್ರಗಳಿಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಅದನ್ನು ಪಡೆದುಕೊಳ್ಳಲು ಅನುಸರಿಸಬೇಕಾದ ವಿಧಾನದ ಬಗ್ಗೆ ತಿಳಿದುಬರಲಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ…

Read More

ಎಲ್ಲರ ಚಿತ್ತ ಲಕ್ಕುಂಡಿಯತ್ತ: ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಉತ್ಖನನ ಕಾರ್ಯ ಆರಂಭ – Kannada News | Historic Lakkundi Unveils Secrets: Excavation at Kote Veerabhadreshwara Temple

ಗದಗ, ಜ.16: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಉತ್ಖನನ ಕಾರ್ಯ ಇಂದಿನಿಂದ ಪ್ರಾರಂಭಗೊಂಡಿದೆ. ಸಿದ್ಧರಕೊಳ್ಳ ಎಂಬ ಸ್ಥಳದಲ್ಲಿ ಕೇವಲ 10 ಮೀಟರ್‌ ವ್ಯಾಪ್ತಿಯಲ್ಲಿ ಉತ್ಖನನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಲಕ್ಕುಂಡಿಯು ಕಲ್ಯಾಣ ಚಾಲುಕ್ಯರು, ರಾಷ್ಟ್ರಕೂಟರು ಮತ್ತು ಹೊಯ್ಸಳರು ಸೇರಿದಂತೆ ಅನೇಕ ರಾಜ ಮಹಾರಾಜರ ಆಳ್ವಿಕೆಗೆ ಒಳಪಟ್ಟಿದ್ದು, ಬಾದಾಮಿಗಿಂತಲೂ ಹೆಚ್ಚು ಐತಿಹಾಸಿಕ ಮಹತ್ವವನ್ನು ಹೊಂದಿದೆ ಎಂದು ಶಾಸನಗಳಲ್ಲಿ ಉಲ್ಲೇಖವಾಗಿದೆ. ಈ ಪ್ರದೇಶದಲ್ಲಿ ಉತ್ಖನನ ನಡೆಸಿದರೆ ಅಪಾರ ಪ್ರಮಾಣದ ಇತಿಹಾಸ ಬೆಳಕಿಗೆ ಬರಲಿದೆ ಎಂಬ ನಂಬಿಕೆ…

Read More