ಪುರುಷರಿಗೆ ದೊಡ್ಡ ಹೊಟ್ಟೆ ಬರುವುದಕ್ಕೆ ಕೇವಲ ಆಹಾರ ಮಾತ್ರ ಕಾರಣವಲ್ಲ! ಹಾಗಾದ್ರೆ ಯಾಕೆ ಈ ರೀತಿ ಆಗುತ್ತೆ? – Kannada News
ಇತ್ತೀಚಿನ ದಿನಗಳಲ್ಲಿ ಪುರುಷರಲ್ಲಿ ಹೊಟ್ಟೆ ಭಾಗದಲ್ಲಿ ಕೊಬ್ಬು (Belly Fat) ಹೆಚ್ಚಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಹೆಚ್ಚಿನವರು ಇದನ್ನು ಹೆಚ್ಚು ಆಹಾರ ಸೇವನೆ, ವ್ಯಾಯಾಮದ ಕೊರತೆ ಅಥವಾ ಅಸ್ವಸ್ಥ ಜೀವನಶೈಲಿಯ ಪರಿಣಾಮ ಎಂದುಕೊಳ್ಳುತ್ತಾರೆ. ಆದರೆ ಆರೋಗ್ಯ ತಜ್ಞರ ಪ್ರಕಾರ, ಕೆಲ ಸಂದರ್ಭಗಳಲ್ಲಿ ಹೊಟ್ಟೆ ಹೊರಬರುವುದಕ್ಕೆ ದೇಹದ ಒಳಗಿನ ಹಾರ್ಮೋನಲ್ ಬದಲಾವಣೆಗಳೂ ಕಾರಣವಾಗಬಹುದು. ವಯಸ್ಸು ಹೆಚ್ಚಾದಂತೆ ಪುರುಷರ ದೇಹದಲ್ಲಿ ಹಲವು ಹಾರ್ಮೋನಲ್ ಬದಲಾವಣೆಗಳು ಸಂಭವಿಸುತ್ತವೆ. ಅಸಮತೋಲನವಾದ ಆಹಾರ ಪದ್ಧತಿ, ಒತ್ತಡ, ನಿದ್ರಾಹೀನತೆ, ಶಾರೀರಿಕ ಚಟುವಟಿಕೆಯ ಕೊರತೆ ಮತ್ತು ಅಸ್ವಸ್ಥ ಜೀವನಶೈಲಿ…