ಪೆಟ್ರೋಲ್, ಡೀಸೆಲ್ ಕೊರತೆ ಇಲ್ಲ; ಪ್ರಧಾನಿ ಮೋದಿ ಮನವಿಯ ಬಳಿಕ ಸರ್ಕಾರ ಸ್ಪಷ್ಟನೆ – Kannada News | No Shortage Of Petrol and Diesel Petroleum Ministry Reassures After PM Modis Energy Conservation Appeal
ನವದೆಹಲಿ, ಮೇ 11: ಜಾಗತಿಕ ಪೂರೈಕೆ ಅಡಚಣೆಗಳ ನಡುವೆಯೂ ಇಂಧನ, ಎಲ್‌ಪಿಜಿ ದಾಸ್ತಾನುಗಳು ಸಾಕಷ್ಟು ಇವೆ ಎಂದು ಪೆಟ್ರೋಲಿಯಂ ಸಚಿವಾಲಯ ಸ್ಪಷ್ಟನೆ ನೀಡಿದೆ. ಹಾಗೇ, ಇಂಧನವನ್ನು ಕಡಿಮೆ ಪ್ರಮಾಣದಲ್ಲಿ ಬಳಸಲು ನಾಗರಿಕರಿಗೆ ಮನವಿ ಮಾಡಿದೆ. ದೆಹಲಿಯಲ್ಲಿ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ (ಮಾರುಕಟ್ಟೆ ಮತ್ತು ತೈಲ ಸಂಸ್ಕರಣಾಗಾರ) ಸುಜಾತಾ ಶರ್ಮಾ, ಗ್ರಾಹಕರಿಗೆ ನಿರಂತರ ಇಂಧನ ಪೂರೈಕೆಯನ್ನು ಒದಗಿಸಲು ಸರ್ಕಾರ ಹಲವಾರು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಿದರು. “ಭಾರತ ಸರ್ಕಾರ…