Headlines

ಏಪ್ರಿಲ್ 1ರಿಂದ ಫಾಸ್​ಟ್ಯಾಗ್ ವಾರ್ಷಿಕ ಪಾಸ್ ಶುಲ್ಕದಲ್ಲಿ ಏರಿಕೆ; ಇಲ್ಲಿದೆ ಹೊಸ ದರ

ನವದೆಹಲಿ, ಮಾರ್ಚ್ 15: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 2026-27ರ ಹಣಕಾಸು ವರ್ಷಕ್ಕೆ ಫಾಸ್​ಟ್ಯಾಗ್ ಶುಲ್ಕವನ್ನು (FASTag annual pass) ಪರಿಷ್ಕರಿಸಿದೆ. ಕಮರ್ಷಿಯಲ್ ಅಲ್ಲದ ವಾಹನಗಳ ವಾರ್ಷಿಕ ಫಾಸ್​ಟ್ಯಾಗ್ ಪಾಸ್ ಶುಲ್ಕದಲ್ಲಿ ಅಲ್ಪ ಏರಿಕೆ ಆಗಿದೆ. ಖಾಸಗಿ ಕಾರುಗಳು, ಜೀಪ್, ವ್ಯಾನ್​ಗಳ ಮಾಲೀಕರು ವಾರ್ಷಿಕ ಪಾಸ್​ನ ಬೆಲೆ 3,000 ರೂನಿಂದ 3,075 ರೂಗೆ ಏರಿಸಲಾಗಿದೆ. ಮುಂಬರುವ ಹಣಕಾಸು ವರ್ಷದಿಂದ, ಅಂದರೆ 2026ರ ಏಪ್ರಿಲ್ 1ರಿಂದ ಹೊಸ ದರಗಳು ಜಾರಿಗೆ ಬರುತ್ತವೆ. 2025ರಲ್ಲಿ ಸ್ವಾತಂತ್ರ್ಯೋತ್ಸವ ದಿನದಂದು ಫಾಸ್​ಟ್ಯಾಗ್ ವಾರ್ಷಿಕ ಪಾಸ್​ನ…

Read More

ಹೆಸರಘಟ್ಟದಲ್ಲಿ ಹಕ್ಕಿಜ್ವರ ದೃಢ: ಸಾರ್ವಜನಿಕರಿಗೆ ಆತಂಕ ಬೇಡ, ಜಾಗರೂಕತೆ ಅಗತ್ಯ – Kannada News | Hesaraghatta Bird Flu H5N1: Ensures Precautions Implemented, says Dinesh Gundu Rao

ಬೆಂಗಳೂರು, ಏಪ್ರಿಲ್​ 17: ಹೆಸರಘಟ್ಟದ ಮತ್ಕೂರು ಗ್ರಾಮದಲ್ಲಿ ಕೋಳಿಗಳಲ್ಲಿ ಹಕ್ಕಿಜ್ವರ (H5N1) ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರ ಸುರಕ್ಷತೆಗಾಗಿ ನಮ್ಮ ಸರ್ಕಾರವು ಸಮರೋಪಾದಿಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಜನರು ಆತಂಕಪಡುವ ಅಗತ್ಯವಿಲ್ಲ, ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao)​​ ಮಾಹಿತಿ ನೀಡಿದ್ದಾರೆ. ಹಕ್ಕಿಜ್ವರ ದೃಢ: ಒಂದು ವರ್ಷದವರೆಗೆ ನಿಷೇಧ  ಈ ಕುರಿತಾಗಿ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ಭೋಪಾಲ್‌ನ NIHSAD ಪ್ರಯೋಗಾಲಯದ ವರದಿಯ ಪ್ರಕಾರ, ಏಪ್ರಿಲ್​​ 14 ರಂದು ಮತ್ಕೂರಿನ…

Read More

ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ – Kannada News | Hassan: Garbage Dumped Back at Offenders’ Homes for Littering in Public Places

ಹಾಸನ, ಜನವರಿ 30: ಮಹಾನಗರ ಪಾಲಿಕೆಯ ಸಿಬ್ಬಂದಿ ಒಂದು ಲೋಡ್ ಕಸವನ್ನು ಮನೆಯ ಕಾಂಪೌಂಡ್‌ ಒಳಗೆ ಸುರಿಯುವ ಮೂಲಕ ನಗರದಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡುವವರಿಗೆ ಸರಿಯಾದ ಪಾಠ ಕಲಿಸಿದ್ದಾರೆ. ಹಾಸನ ನಗರದ ಉದಯಗಿರಿ ಬಡಾವಣೆ ರಸ್ತೆಯಲ್ಲಿ ಘಟನೆ ನಡೆದಿದೆ. ಕರಿಯಪ್ಪ ಮತ್ತು ದ್ಯಾವಮ್ಮ ಎಂಬುವವರ ಮನೆ ಮುಂದೆ ಕಸ ಸುರಿಯಲಾಗಿದೆ. ರಸ್ತೆ ಬದಿ ಕಸ ಸುರಿಯುತ್ತಿದ್ದ ಬಗ್ಗೆ ಮನೆ ಮಾಲೀಕರ ವಿರುದ್ಧ ಆರೋಪಗಳು ಕೇಳಿಬಂದ ಹಿನ್ನೆಲೆ ಪಾಲಿಕೆ ಹಲವು ಬಾರಿ ಎಚ್ಚರಿಕೆ ನೀಡಿದೆ. ಇದಕ್ಕೆ ಕ್ಯಾರೆ ಎನ್ನದೆ…

Read More

ಜಿ.ಟಿ. ದೇವೇಗೌಡ ವಿರುದ್ಧ ಕುಮಾರಸ್ವಾಮಿ ಗರಂ: ಅವರು ನಮ್ಮೊಂದಿಗಿಲ್ಲ ಎಂದ ಕೇಂದ್ರ ಸಚಿವ! – Kannada News | Uion Minister HD Kumaraswamy Slams JDS MLA G.T. Devegowda Over Loyalty

ಮೈಸೂರು, ಫೆಬ್ರವರಿ 08: ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್​​ ಶಾಸಕ ಜಿ.ಟಿ. ದೇವೇಗೌಡ ನಮ್ಮ ಜೊತೆಯಲ್ಲಿ ಇಲ್ಲ ಎಂದು ಮೈಸೂರಿನಲ್ಲಿ ಕೇಂದ್ರ ಸಚಿವ ಹೆಚ್​.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಜಿ.ಟಿ. ದೇವೇಗೌಡ ಬೇರೆ ಮಹಾನ್ ನಾಯಕರ ಜೊತೆಯಲ್ಲಿದ್ದಾರೆ. ಪಕ್ಷದ ಬಗ್ಗೆ ನಿಯತ್ತು, ನಿಷ್ಠೆ ಇಲ್ಲದವರನ್ನು ಜೊತೆಯಲ್ಲಿಟ್ಟುಕೊಳ್ಳಬೇಕಾ? ನನ್ನ ಮುಂದೆ ಜಿ.ಟಿ. ದೇವೇಗೌಡ ಹೆಸರನ್ನು ಪ್ರಸ್ತಾಪ ಮಾಡಬೇಡಿ. ನನ್ನ ಮನಸ್ಸಿಗೆ ಬಹಳ ನೋವಾಗುವ ಘಟನೆ ನಡೆದಿದೆ. ನಾನು ರಾಜೀನಾಮೆ ಕೊಡುವ ತಪ್ಪನ್ನು ಏನು ಮಾಡಿದ್ದೆ? ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬಹಳಷ್ಟು ಜನ…

Read More

KKR vs SRH : ವೃತ್ತಿಜೀವನದ ಬೆಸ್ಟ್ ಕ್ಯಾಚ್ ಹಿಡಿದ ವರುಣ್ ಚಕ್ರವರ್ತಿ; ಹುಟ್ಟಿಕೊಳ್ತು ವಿವಾದ

ಕೋಲ್ಕತ್ತಾ ನೈಟ್ ರೈಡರ್ಸ್​ ವಿರುದ್ಧ ನಡೆದ ಐಪಿಎಲ್ 2026 ರ (IPL 2026) 6ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (KKR vs SRH) ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ (Abhishek Sharma) 48 ರನ್‌ಗಳ ಅಬ್ಬರದ ಇನ್ನಿಂಗ್ಸ್ ಆಡಿದರು. ಅವರ ಈ ಇನ್ನಿಂಗ್ಸ್​ನಲ್ಲಿ 4 ಸಿಕ್ಸರ್‌ಗಳು ಮತ್ತು 4 ಬೌಂಡರಿಗಳು ಸೇರಿದ್ದವು. ಆದರೆ ಅವರ ವಿಕೆಟ್ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಅಭಿಷೇಕ್ ಶರ್ಮಾ ಅವರ ವಿಕೆಟ್ ಅನ್ನು ಬ್ಲೆಸ್ಸಿಂಗ್ ಮುಜರಬಾನಿ ಪಡೆದರಾದರೂ, ವರುಣ್ ಚಕ್ರವರ್ತಿ…

Read More

Aadhar Supervisor Vacancy 2026: ನಿರುದ್ಯೋಗಿಗಳಿಗೆ ಗುಡ್​ನ್ಯೂಸ್​​; ನಿಮ್ಮದೇ ಜಿಲ್ಲೆಯ ಆಧಾರ್ ಕೇಂದ್ರಗಳಲ್ಲಿ ಉದ್ಯೋಗವಕಾಶ – Kannada News | Aadhar Jobs: CSC Recruitment for Supervisor and Operator Posts in Your District

ಸ್ವಂತ ಊರಿನಲ್ಲಿಯೇ ಕೆಲಸ ಮಾಡಬೇಕೆಂಬ ಹಂಬಲವಿರುವವರಿಗೆ ಇಲ್ಲಿದೆ ಗುಡ್​ ನ್ಯೂಸ್​. ಡಿಜಿಟಲ್ ಇಂಡಿಯಾ ಅಭಿಯಾನದಡಿ ಆಧಾರ್ ಸೇವೆಗಳನ್ನು ಜನಸಾಮಾನ್ಯರಿಗೆ ಹತ್ತಿರವಾಗಿಸಲು, ಸಿಎಸ್‌ಸಿ (CSC) ಇ-ಗವರ್ನೆನ್ಸ್ ಸರ್ವೀಸಸ್ ಇಂಡಿಯಾ ಲಿಮಿಟೆಡ್ ವತಿಯಿಂದ ಆಧಾರ್ ಮೇಲ್ವಿಚಾರಕ ಮತ್ತು ಆಪರೇಟರ್ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಈ ನೇಮಕಾತಿಯು ಅಭ್ಯರ್ಥಿಗಳಿಗೆ ತಮ್ಮದೇ ಜಿಲ್ಲೆಯ ಆಧಾರ್ ಸೇವಾ ಕೇಂದ್ರಗಳಲ್ಲಿ (ASKs) ಕೆಲಸ ಮಾಡುವ ಅಪೂರ್ವ ಅವಕಾಶವನ್ನು ನೀಡುತ್ತಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಮಾರ್ಚ್ 10ರ ವರೆಗೆ ಅರ್ಜಿ ಸಲ್ಲಿಸಲು…

Read More

ಬೆಂಗಳೂರು-ಮುಂಬೈ ಪ್ರಯಾಣಿಕರಿಗೆ ಗುಡ್ ನ್ಯೂಸ್: ಜೂನ್‌ನಿಂದ ಓಡಲಿದೆ ಸೂಪರ್ ಫಾಸ್ಟ್ ರೈಲು; ಬೆಳಗಾವಿ, ಹುಬ್ಬಳ್ಳಿ ಜನರಿಗೂ ಲಾಭ!

ಬೆಂಗಳೂರು, ಮೇ.14 : ಕರ್ನಾಟಕದ ರಾಜಧಾನಿ ಬೆಂಗಳೂರು ಮತ್ತು ದೇಶದ ವಾಣಿಜ್ಯ ನಗರಿ ಮುಂಬೈ ನಡುವೆ ವೇಗದ ರೈಲು ಸಂಪರ್ಕ ಕಲ್ಪಿಸುವ ದಶಕಗಳ ಬೇಡಿಕೆ ಈಗ ಈಡೇರುವ ಸಮಯ ಬಂದಿದೆ. ಈ ವರ್ಷದ ಜೂನ್ ಅಂತ್ಯದೊಳಗೆ ಈ ಮಾರ್ಗದಲ್ಲಿ ಹೊಸ ಸೂಪರ್ ಫಾಸ್ಟ್ ರೈಲು ಸಂಚಾರ ಆರಂಭಿಸಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ. ದೆಹಲಿಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿದ ಪ್ರಲ್ಹಾದ್ ಜೋಶಿ ಅವರು, ಕರ್ನಾಟಕದ ರೈಲ್ವೆ ಯೋಜನೆಗಳ ಕುರಿತು…

Read More

ಸರ್ಕಾರದ ಬೊಕ್ಕಸ ತುಂಬಿಸುವ ಇಲಾಖೆಗಳಿಗೆ ಬಿಸಿ ಮುಟ್ಟಿಸಿದ ಡಿಕೆಶಿ: ಅಧಿಕಾರಿಗಳಿಗೆ ನೀಡಿದ ಸೂಚನೆಗಳೇನು? – Kannada News | DK Shivakumar Reviews Commercial Taxes and Excise Department, Issues Key Directives

ಸಿಎಂ ಡಿಕೆ ಶಿವಕುಮಾರ್​ ಸಭೆImage Credit source: x.com/DKShivakumar ಬೆಂಗಳೂರು, ಜೂನ್​​ 26: ಸಿಎಂ ಡಿಕೆ‌ ಶಿವಕುಮಾರ್ (DK Shivakumar) ತಮ್ಮ ಸರ್ಕಾರ ಆಡಳಿತ ಯಂತ್ರಕ್ಕೆ ಮತ್ತಷ್ಟು ವೇಗ ನೀಡುತ್ತಿದ್ದಾರೆ. ಕಳೆದ ವಾರ ಜಿಲ್ಲಾ ಡಿಸಿ, ಎಸ್​ಪಿಗಳ ಜೊತೆ ಸಭೆ ಮಾಡಿದ್ದ ಡಿಕೆ ಶಿವಕುಮಾರ್​ ಇಂದು ಇಲಾಖಾವಾರು ಮೀಟಿಂಗ್ ಮಾಡಿದರು. ಅದರಲ್ಲೂ ಸರ್ಕಾರದ ಖಜಾನೆ ತುಂಬುವ ಇಲಾಖೆಗಳು ಅಂದರೆ ಆದಾಯ ತೆರಿಗೆ ಇಲಾಖೆ ಮತ್ತು ಅಬಕಾರಿ. ಹೀಗಾಗಿ ಇವಗಳನ್ನ ಅರ್ಥ ಮಾಡಿಕೊಳ್ಳೋಕೆ ಸಿಎಂ ಹೆಜ್ಜೆ ಇಟ್ಟಿದ್ದರು. ಅದಕ್ಕಾಗಿ…

Read More

ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ

ದಿ ಹಂಡ್ರೆಡ್ ಲೀಗ್‌ನಲ್ಲಿ ಸನ್‌ರೈಸರ್ಸ್ ಲೀಡ್ಸ್ ತಂಡ ಪಾಕಿಸ್ತಾನಿ ಆಟಗಾರ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಸನ್‌ರೈಸರ್ಸ್ ಲೀಡ್ಸ್ ಐಪಿಎಲ್ ಫ್ರಾಂಚೈಸ್ ಸನ್‌ರೈಸರ್ಸ್ ಹೈದರಾಬಾದ್‌ನ ಅಂಗಸಂಸ್ಥೆಯಾಗಿದೆ. ಹೀಗಾಗಿ ವಿದೇಶಿ ಲೀಗ್‌ನಲ್ಲಿ ಪಾಕಿಸ್ತಾನಿ ಆಟಗಾರನನ್ನು ಖರೀದಿಸಿದ್ದಕ್ಕಾಗಿ ಫ್ರಾಂಚೈಸಿಯ ಮಾಲೀಕರಾದ ಕಾವ್ಯ ಮಾರನ್ ವಿರುದ್ಧ ಭಾರತೀಯರು ಕೋಪಗೊಂಡಿದ್ದು, ಸನ್‌ರೈಸರ್ಸ್ ಗ್ರೂಪ್ ಮೇಲೆ ಟೀಕೆಗಳ ಮಳೆಗರೆದಿದ್ದಾರೆ. ಇದೀಗ ಈ ವಿಷಯಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಪ್ರತಿಕ್ರಿಯಿಸಿದ್ದು, ವಿದೇಶಿ ಲೀಗ್‌ನಲ್ಲಿ ಯಾವ ತಂಡವು ಯಾವ ಆಟಗಾರನನ್ನು ಖರೀದಿಸುತ್ತದೆ ಎಂಬುದಕ್ಕೂ ನಮಗೂ ಯಾವುದೇ…

Read More

ಮಲ್ಲಿಕಾರ್ಜುನ್ ನಂಬಿ ಮೋಸ ಹೋಗಬೇಡಿ: ಎಚ್ಚರಿಕೆ ನೀಡಿದ ದಿನಕರ್ ತೂಗುದೀಪ – Kannada News | Darshan brother Dinakar Thoogudeepa viral post about Ex Manager Mallikarjun

ಹಲವು ವರ್ಷಗಳ ಕಾಲ ನಾಪತ್ತೆ ಆಗಿದ್ದ ದರ್ಶನ್ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ (Darshan Ex Manager Mallikarjun) ಇತ್ತೀಚೆಗೆ ದಿಢೀರ್ ಪ್ರತ್ಯಕ್ಷ ಆದರು. ಬಳಿಕ ಅವರು ಸುದ್ದಿಗೋಷ್ಠಿ ನಡೆಸಿ ಹಲವು ವಿಷಯಗಳ ಬಗ್ಗೆ ಸ್ಪಷ್ಟನೆ ನೀಡಿದರು. 7 ವರ್ಷ ತಾವು ಕಾಣೆ ಆಗಿದ್ದಕ್ಕೆ ಕಾರಣ ಏನು ಎಂಬುದನ್ನು ಕೂಡ ಅವರು ವಿವರಿಸಿದರು. ಆದರೆ ಈಗ ಮಲ್ಲಿಕಾರ್ಜುನ್ ವಿರುದ್ಧ ದರ್ಶನ್ ಸಹೋದರ ದಿನಕರ್ ತೂಗುದೀಪ (Dinakar Thoogudeepa) ಗುಡುಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಮಲ್ಲಿಕಾರ್ಜುನ್ ಬಗ್ಗೆ ಪೋಸ್ಟ್ ಮಾಡಿದ್ದಾರೆ….

Read More