ಅಬ್ಬರದ ಮಳೆಗೆ ರಾಯರ ಭಕ್ತರು ಕಂಗಾಲು: ನೆರವಿಗೆ ದೌಡಾಯಿಸಿದ ಮಂತ್ರಾಲಯ ಶ್ರೀಗಳು – Kannada News | Heavy Rain in Mantralaya: Swamiji Arranges Shelter and Aid for Devotees
ರಾಯಚೂರು, ಮೇ 24: ಜಿಲ್ಲೆಯಲ್ಲಿ ಭಾರೀ ಮಳೆ ಸುರಿದಿದೆ. ಇತ್ತ ರಾಯರ ಮಠದ ಪ್ರಾಂಗಣದಲ್ಲಿ ರಾತ್ರಿ ಮಲಗಿದ್ದ ಭಕ್ತರು ಮಳೆ ಅಬ್ಬರಕ್ಕೆ ಕಂಗಾಲಾಗಿದ್ದರು. ಈ ವೇಳೆ ಮಾಹಿತಿ ತಿಳಿದು ತಡ ರಾತ್ರಿ ಪ್ರಾಂಗಣಕ್ಕೆ ದೌಡಾಯಿಸಿದ ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥರು ಭಕ್ತರನ್ನು ಭೇಟಿ ಮಾಡಿ ಮಳೆಯಿಂದಾದ ಅಡಚಣೆ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಬಳಿಕ ಭಕ್ತರಿಗೆ ಶ್ರೀಮಠದ ಕಲ್ಯಾಣ ಮಂಟಪಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದ್ದು, ಖುದ್ದು ತಾವೇ ನಿಂತು ಭಕ್ತರನ್ನ ಸುರಕ್ಷಿತ ಸ್ಥಳಕ್ಕೆ ಕಳುಹಿಸಿಕೊಟ್ಟರು. ವಿಡಿಯೋ ನೋಡಿ. ಮತ್ತಷ್ಟು…