ಬಾಂಗ್ಲಾದೇಶದಲ್ಲಿ ‘ಡೊನಾಲ್ಡ್ ಟ್ರಂಪ್’ ಎಮ್ಮೆಗೆ ಕೊನೆ ಕ್ಷಣದಲ್ಲಿ ಸಿಕ್ಕಿತು ಜೀವದಾನ, ಈದ್ ಬಲಿ ನಿಲ್ಲಿಸಿ ಮೃಗಾಲಯಕ್ಕೆ ಕಳುಹಿಸುವಂತೆ ಸರ್ಕಾರದ ಆದೇಶ
ಢಾಕಾ, ಮೇ 28: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರ ಪ್ರಸಿದ್ಧ ಕೇಶವಿನ್ಯಾಸವನ್ನು ಹೋಲುವ ಕೂದಲನ್ನು ಹೊಂದಿದ್ದರಿಂದ ಸಾಮಾಜಿಕ ಮಾಧ್ಯಮದಲ್ಲಿ ‘ಡೊನಾಲ್ಡ್ ಟ್ರಂಪ್’ ಎಂದೇ ಜಾಗತಿಕವಾಗಿ ವೈರಲ್ ಆಗಿದ್ದ ಬಾಂಗ್ಲಾದೇಶದ ಅಪರೂಪದ ಆಲ್ಬಿನೋ ಎಮ್ಮೆಯೊಂದಕ್ಕೆ ಕೊನೆಗೂ ಜೀವದಾನ ಸಿಕ್ಕಿದೆ. ಈದ್ ಹಬ್ಬದ ಸಂದರ್ಭದಲ್ಲಿ ಬಲಿ ನೀಡಲು ಈ ಎಮ್ಮೆಯನ್ನು ಮಾರಾಟ ಮಾಡಲಾಗಿತ್ತಾದರೂ, ಕೊನೆಯ ಕ್ಷಣದಲ್ಲಿ ಪ್ರಧಾನಿ ತಾರಿಕ್ ರೆಹಮಾನ್ ಅವರ ಸರ್ಕಾರವು ಮಧ್ಯಪ್ರವೇಶಿಸಿ ಬಲಿಯನ್ನು ತಡೆದಿದೆ. ಗೃಹ ಸಚಿವರ ಮಹತ್ವದ ಆದೇಶ ಬಾಂಗ್ಲಾದೇಶದ ಗೃಹ ಸಚಿವ…