ಇಂದು ಯಾರೂ ರೈಲಿನಲ್ಲಿ ಓಡಾಡ್ಬೇಡಿ, ಇರಾನ್ ಜನರಿಗೆ ಇಸ್ರೇಲ್ ಎಚ್ಚರಿಕೆ, ಹೊಸ ಅಪಾಯದ ಮುನ್ಸೂಚನೆಯೇ?
ಟೆಲ್ ಅವಿವ್, ಏಪ್ರಿಲ್ 07: ಇರಾನ್(Iran) ಜನರು ರೈಲಿನಲ್ಲಿ ಪ್ರಯಾಣಿಸದಂತೆ ಇಸ್ರೇಲ್ ಎಚ್ಚರಿಕೆ ನೀಡಿದ್ದು, ಹೊಸ ಅಪಾಯದ ಮುನ್ನೆಚ್ಚರಿಕೆ ನೀಡಿದೆ. ಕಳೆದ ಐದು ವಾರಗಳಿಂದ ಮಧ್ಯಪ್ರಾಚ್ಯದಲ್ಲಿ ಯುದ್ಧ ನಡೆಯುತ್ತಿದೆ. ಫಾರ್ಸಿ ಭಾಷೆಯಲ್ಲಿ ಸಂದೇಶವೊಂದನ್ನು ಬಿಡುಗಡೆ ಮಾಡಿದ ಇಸ್ರೇಲ್ ಸೇನೆ ರೈಲಿನಲ್ಲಿ ಪ್ರಯಾಣಿದರೆ ಜೀವಕ್ಕೆ ಅಪಾಯವಿದೆ ಎಂದು ಹೇಳಿದೆ. ನಿಮ್ಮ ಸುರಕ್ಷತೆಗಾಗಿ ಇಂದು ರಾತ್ರಿ 9 ಗಂಟೆಯವರೆಗೆ ದೇಶಾದ್ಯಂತ ರೈಲುಗಳಲ್ಲಿ ಪ್ರಯಾಣಿಸುವುದನ್ನು ತಪ್ಪಿಸಿ ಎಂದು ಸೇನೆ ಹೇಳಿದೆ. ಟೆಹ್ರಾನ್ ವಾರಗಟ್ಟಲೆ ಇರಾನ್‌ನಾದ್ಯಂತ ಇಂಟರ್ನೆಟ್ ಅನ್ನು ನಿರ್ಬಂಧಿಸಿದೆ. ಇದರಿಂದಾಗಿ ಸಾಮಾನ್ಯ…