Headlines

ಹೈದರಾಬಾದ್‌ನಲ್ಲಿ ಸೊಳ್ಳೆ ಪರದೆ ಧರಿಸಿ ಪ್ರತಿಭಟನೆ ನಡೆಸಿದ ಬಿಆರ್‌ಎಸ್ ಶಾಸಕ

ಹೈದರಾಬಾದ್, ಏಪ್ರಿಲ್ 2: ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಶಾಸಕ ಸುಧೀರ್ ರೆಡ್ಡಿ ಇಂದು ಹೈದರಾಬಾದ್​ನ (Hyderabad) ವಿಧಾನಸಭೆ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಗೆ ಸೊಳ್ಳೆ ಪರದೆ ಧರಿಸಿಕೊಂಡು, ಫಾಗಿಂಗ್ ಯಂತ್ರವನ್ನು ಹಿಡಿದುಕೊಂಡು ಆಗಮಿಸಿದ್ದಾರೆ. ಹೈದರಾಬಾದ್ ನಗರದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಸೊಳ್ಳೆ ಸಮಸ್ಯೆಯ ವಿರುದ್ಧ ಅವರು ಈ ವಿನೂತನ ಪ್ರತಿಭಟನೆ ನಡೆಸಿದ್ದಾರೆ. ಮೊದಲು ಮಾಧ್ಯಮ ಕೇಂದ್ರಕ್ಕೆ ಸೊಳ್ಳೆ ಪರದೆ ಮತ್ತು ಫಾಗಿಂಗ್ ಯಂತ್ರವನ್ನು ಕೊಂಡೊಯ್ಯಲು ಪ್ರಯತ್ನಿಸಿದಾಗ ಸುಧೀರ್ ರೆಡ್ಡಿ ಅವರಿಗೆ ವಿಧಾನಸಭೆ ಸಿಬ್ಬಂದಿ ಅನುಮತಿ ನಿರಾಕರಿಸಿದರು. ಭದ್ರತಾ ಸಿಬ್ಬಂದಿಯ…

Read More

‘ಹಿಂದೂ ಧರ್ಮಕ್ಕೆ ಮತಾಂತರ ಆಗಿಲ್ಲ, ಹೆಸರು ಬದಲಿಸಿಲ್ಲ’; ಉರ್ಫಿ ಜಾವೇದ್ ಸ್ಪಷ್ಟನೆ – Kannada News | Uorfi Javed denies converting to Hinduism changing name to Rita Bhardwaj Fake News

ತಮ್ಮ ವಿಭಿನ್ನ ಫ್ಯಾಷನ್ ಸ್ಟೈಲ್ ಹಾಗೂ ಮುಕ್ತ ಹೇಳಿಕೆಗಳಿಂದಲೇ ಸದಾ ಸುದ್ದಿಯಲ್ಲಿರುವ ನಟಿ, ಸೋಶಿಯಲ್ ಮೀಡಿಯಾ ಸ್ಟಾರ್ ಉರ್ಫಿ ಜಾವೇದ್ (Uorfi Javed) ಬಗ್ಗೆ ಒಂದು ಗಾಸಿಪ್ ಹಬ್ಬಿತ್ತು. ಅವರು ಹಿಂದೂ ಧರ್ಮಕ್ಕೆ (Hinduism) ಮತಾಂತರವಾಗಿದ್ದಾರೆ ಹಾಗೂ ತಮ್ಮ ಹೆಸರನ್ನು ರೀತಾ ಭಾರದ್ವಾಜ್ ಎಂದು ಬದಲಾಯಿಸಿಕೊಂಡಿದ್ದಾರೆ ಎಂದು ವದಂತಿ ಹಬ್ಬಿಸಲಾಗಿತ್ತು. ಆದರೆ ಅದನ್ನು ಅವರು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಈ ಕುರಿತು ಸುಳ್ಳು ಸುದ್ದಿ ಹರಡಿದ ಮಾಜಿ ಮಹಿಳಾ ಪತ್ರಕರ್ತೆಯೊಬ್ಬರ ವಿರುದ್ಧ ಉರ್ಫಿ ಜಾವೇದ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ….

Read More

‘ಶಾಂತಿ ಕ್ರಾಂತಿ’ ಸಿನಿಮಾದಿಂದ ಆದ ಸಾಲ ತೀರಿಸಲು ರವಿಚಂದ್ರನ್​​ಗೆ ಹಿಡಿದಿತ್ತು 15 ವರ್ಷ

ಕನ್ನಡ ಚಿತ್ರರಂಗದ ‘ಕನಸುಗಾರ’ ಎಂದೇ ಖ್ಯಾತರಾದ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅವರಿಗೆ ಇಂದು (ಮೇ 30) ಜನ್ಮದಿನದ ಸಂಭ್ರಮ. ಚಿತ್ರರಂಗದಲ್ಲಿ ಸದಾ ಹೊಸತನ, ಭವ್ಯತೆ ಹಾಗೂ ಅದ್ದೂರಿತನಕ್ಕೆ ಹೆಸರಾದ ರವಿಚಂದ್ರನ್ ಅವರ ಬದುಕಿನಲ್ಲಿ ‘ಶಾಂತಿ ಕ್ರಾಂತಿ’ ಸಿನಿಮಾ ದೊಡ್ಡ ಇತಿಹಾಸವನ್ನೇ ಸೃಷ್ಟಿಸಿದೆ. ಆರ್ಥಿಕವಾಗಿ ಈ ಚಿತ್ರ ರವಿಚಂದ್ರನ್ ಅವರನ್ನು ಸಾಲದ ಸುಳಿಗೆ ದೂಡಿತ್ತು. ಅವರ ಜನ್ಮದಿನದ ಈ ಸಂದರ್ಭದಲ್ಲಿ ಆ ದಿನಗಳ ಒಂದು ಮೆಲುಕು ಇಲ್ಲಿದೆ. 1991ರಲ್ಲಿ ತೆರೆಕಂಡ ‘ಶಾಂತಿ ಕ್ರಾಂತಿ’ ಚಿತ್ರವು ಕನ್ನಡ ಸೇರಿದಂತೆ ಒಟ್ಟು…

Read More

ಈ ವಾರ ಒಟಿಟಿಗೆ ಬಂದಿವೆ ಕೆಲ ನೋಡಲೇಬೇಕಾದ ಸಿನಿಮಾಗಳು: ಪಟ್ಟಿ ಇಲ್ಲಿದೆ

ಯೂಟ್ಯೂಬ್​​​ನಲ್ಲಿ ‘ಅಮೃತಾಂಜನ್’ ಹೆಸರಿನಲ್ಲಿ ತಮಾಷೆಯ ವಿಡಿಯೋಗಳನ್ನು ಮಾಡುತ್ತಿದ್ದ ಯುವಕರ ತಂಡ, ‘ಅಮೃತ-ಅಂಜನ್’ ಹೆಸರಿನ ಹಾಸ್ಯಮಯ ಸಿನಿಮಾ ಮಾಡಿದ್ದು, ಸಿನಿಮಾಕ್ಕೆ ಚಿತ್ರಮಂದಿರಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಈ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ವೀಕ್ಷಣೆಗೆ ಲಭ್ಯವಿದೆ. ಚಿತ್ರಮಂದಿರದಲ್ಲಿ ಬಿಡುಗಡೆ ಆದಾಗ ದೊಡ್ಡ ಮಟ್ಟದ ಸದ್ದು, ಸುದ್ದಿ ಮಾಡಿದ್ದ ತಮಿಳು ಸಿನಿಮಾ ‘ತಾಯ್ ಕಳವಿ’, ಇತ್ತೀಚೆಗೆ ಬಿಡುಗಡೆ ಆದ ಒಳ್ಳೆಯ, ಯೋಚನೆಗೆ ಪ್ರೇರೇಪಿಸುವ ಸಿನಿಮಾ ಇದೆಂಬ ವಿಮರ್ಶೆ ಇದಕ್ಕೆ ಸಿಕ್ಕಿತ್ತು. ಇದೀಗ ಈ ಸಿನಿಮಾ ಜಿಯೋ ಹಾಟ್​​ಸ್ಟಾರ್​​ನಲ್ಲಿ ಬಿಡುಗಡೆ ಆಗಿದೆ….

Read More

ಕೃಷ್ಣನಗರ: ಸರ್ಕಾರಿ ಆಸ್ಪತ್ರೆಯಿಂದ ನವಜಾತ ಶಿಶು ನಾಪತ್ತೆ, ಮಹಿಳೆ ಹೊಟ್ಟೆಯಲ್ಲಿ ಮಗುವೇ ಇರಲಿಲ್ಲ ಎಂದ ವೈದ್ಯರು – Kannada News | Newborn Goes Missing from Government Hospital in Krishnanagar

ಕೃಷ್ಣನಗರ, ಜನವರಿ 30: ಸರ್ಕಾರಿ ಆಸ್ಪತ್ರೆ(Hospital)ಯಿಂದ ನವಜಾತ ಶಿಶು ಕಾಣೆಯಾಗಿರುವ ಘಟನೆ ಪಶ್ಚಿಮ ಬಂಗಾಳದ ನಾಡಿಯಾದಲ್ಲಿ ನಡೆದಿದೆ. ರೋಗಿಯ ಕುಟುಂಬವು ಆಸ್ಪತ್ರೆಯ ಬಾಗಿಲು ಮುಚ್ಚಿ ಪ್ರತಿಭಟಿಸಿತು. ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆರಿಗೆಯೂ ನಡೆದಿತ್ತು. ಆದರೆ ಮಗು ಮಾತ್ರ ಎಲ್ಲಿಗೆ ಹೋಗಿತು ಎಂಬುದೇ ಯಕ್ಷಪ್ರಶ್ನೆಯಾಗಿ ಉಳಿದಿದೆ. ಆದರೆ ಮಗುವನ್ನು ಮಾತ್ರ ಆಸ್ಪತ್ರೆ ವೈದ್ಯರು ಕೊಡಲೇ ಇಲ್ಲ, ಅದರ ಬದಲು ಆಕೆಯ ಹೊಟ್ಟೆಯಲ್ಲಿ ಮಗುವೇ ಇರಲಿಲ್ಲ ಎಂದು ಸುಳ್ಳು ಹೇಳಿದ್ದಾರೆ. ಮತ್ತೊಂದೆಡೆ, ಕೊನೆಯ ಅಲ್ಟ್ರಾ-ಸೋನೋಗ್ರಫಿಯಲ್ಲಿ 2…

Read More

Yadgir: ಮದ್ಯ ಕುಡಿಯಬೇಡಮ್ಮ ಎಂದಿದ್ದಕ್ಕೆ ಹೆತ್ತ ಮಗಳನ್ನೇ ಕತ್ತು ಹಿಸುಕಿ ಕೊಂದ ತಾಯಿ – Kannada News | Drunk Mother Strangles Daughter in Yadgiri After Plea to Quit Drinking

ಯಾದಗಿರಿ, ಫೆಬ್ರವರಿ 10: ಮದ್ಯದ ದಾಸಿಯಾಗಿದ್ದ ಮಹಿಳೆಯೊಬ್ಬಳು ಎಣ್ಣೆ ನಶೆಯಲ್ಲಿ ಹೆತ್ತ ಮಗಳನ್ನೇ ಕೊಂದಿರುವ ಹೃದಯ ವಿದ್ರಾವಕ ಘಟನೆ ಯಾದಗಿರಿ ನಗರದ ರಾಜೀವ್ ಗಾಂಧಿ ಬಡಾವಣೆಯಲ್ಲಿ ನಡೆದಿದೆ. ಪ್ರತಿಭಾ (11) ಮೃತ ಬಾಲಕಿಯಾಗಿದ್ದು, ಆರೋಪಿ ನಿರ್ಮಲಾಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ತಂದೆಯನ್ನ ಕಳೆದುಕೊಂಡಿದ್ದ ಬಾಲಕಿ ಪಾಲಿಗೆ ತಾಯಿಯೇ ವಿಲನ್​​ ಆಗಿದ್ದು, ಬಡತನ ಹಿನ್ನೆಲೆ ಆಡಿ ಬೆಳೆಯಬೇಕಾದ ವಯಸ್ಸಲ್ಲೇ ಶಾಲೆ ಬಿಟ್ಟು ದುಡಿಯೋಕೆ ಹೋಗ್ತಿದ್ದ ಪ್ರತಿಭಾ ಕ್ರೂರವಾಗಿ ಹತ್ಯೆಯಾಗಿದ್ದಾಳೆ. ಮಗಳ ಕೊಂದು ತಾಯಿಯ ನಾಟಕ ಇನ್ನು…

Read More

ಅಪ್ರಾಪ್ತೆ ಮೇಲೆ ಮ್ಯೂಸಿಕ್​​ ಮೈಲಾರಿ ಅತ್ಯಾಚಾರ ಕೇಸ್​​ಗೆ ಟ್ವಿಸ್ಟ್​​: ಸಂತ್ರಸ್ತೆ ವಿಡಿಯೋ ವೈರಲ್​​ – Kannada News | Twist in Music Mallari Assault Case, New Video of Minor Girl Goes Viral

ಬಾಗಲಕೋಟೆ, ಡಿಸೆಂಬರ್​​ 19: ಅಪ್ರಾಪ್ತೆ ಮೇಲೆ ಉತ್ತರ ಕರ್ನಾಟಕದ ಖ್ಯಾತ ಜನಪದ ಗಾಯಕ ಮ್ಯೂಸಿಕ್ ಮೈಲಾರಿ ಅತ್ಯಾಚಾರ ಪ್ರಕರಣ ಕೇಸ್​​ಗೆ ಟ್ವಿಸ್ಟ್​​ ಸಿಕ್ಕಿದೆ. ಸಂತ್ರಸ್ತೆಯದ್ದು ಎನ್ನಲಾದ ವಿಡಿಯೋವಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹೆಸರು ಕೆಡಿಸುವ ಉದ್ದೇಶದಿಂದ ನಾನು ಹಾಗೆಲ್ಲ ಹೇಳಿದ್ದೇನೆ, ನನ್ನದು ತಪ್ಪಾಗಿದೆ ಕ್ಷಮಿಸಿ ಎಂದು ಅಪ್ರಾಪ್ತೆ ಹೇಳಿರೋದು ವಿಡಿಯೋದಲ್ಲಿದೆ. ಮ್ಯೂಸಿಕ್​​ ಮೈಲಾರಿ ಅಣ್ಣ, ಲತಾ, ಶ್ರಾವಣಿ ಮತ್ತು ಡ್ಯಾನ್ಸರ್​​ ರುಕ್ಕು ಬಗ್ಗೆ ನಾನು ಏನೇನೋ ಮಅತಾಡಿದ್ದೇನೆ. ಅವರ ಹೆಸರು ಕೆಡಿಸುವ ಜೊತೆಗೆ, ನಾನು ಹೆಸರು ಮಾಡುವ…

Read More

ಕರ್ನಾಟಕ ಹವಾಮಾನ ವರದಿ: ಮಂಡ್ಯ, ಮೈಸೂರು ಸೇರಿದಂತೆ ಹಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ! – Kannada News | Bengaluru temperature: Light rain in South Karnataka, Dry weather elsewhere

ಮಂಡ್ಯ, ಮೈಸೂರು ಸೇರಿದಂತೆ ಹಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ! ಬೆಂಗಳೂರು, ಫೆಬ್ರವರಿ 21: ರಾಜ್ಯದಲ್ಲಿ ಹಲವು ದಿನಗಳಿಂದ ಶುಷ್ಕ ವಾತಾವರಣವೇ (Weather Forecast) ಆವರಿಸಿದ್ದು, ಇಂದು ಕೆಲ ಪ್ರದೇಶಗಳಲ್ಲಿ ಮಳೆರಾಯನ ಆಗಮನವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣಹವೆ ಇಂದೂ ಮುಂದುವರೆಯಲಿದ್ದು, ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಎಲ್ಲೆಲ್ಲಿ ಮಳೆ , ಒಣ ಹವೆ? ಚಾಮರಾಜನಗರ, ಕೊಡಗು, ಮೈಸೂರು, ಮಂಡ್ಯದಲ್ಲಿ ಗುಡಗು…

Read More

ಕೇಂದ್ರ, ರಾಜ್ಯ ಸರ್ಕಾರಗಳ ಉದ್ಯೋಗ ಭರವಸೆ: 40ಕ್ಕೂ ಹೆಚ್ಚು ಮಂದಿಗೆ ವಂಚಿಸಿದ್ದ ತಂದೆ, ಮಗಳು ಅಂದರ್​ – Kannada News

ಬೆಂಗಳೂರು, ಜೂನ್​​ 09: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಉದ್ಯೋಗಗಳನ್ನು ಕೊಡಿಸುವುದಾಗಿ ನಂಬಿಸಿ 40ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳಿಗೆ ಒಟ್ಟು 5.30 ಕೋಟಿಗೂ ಅಧಿಕ ಹಣ ವಂಚನೆ ಮಾಡಿದ ಆರೋಪದಡಿ ಕೇಂದ್ರ ಅಪರಾಧ ವಿಭಾಗದ ಪೊಲೀಸರು (ಸಿಸಿಬಿ) ತಂದೆ-ಮಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಬೆಂಗಳೂರಿನ (Bengaluru) ನಿವಾಸಿಗಳಾದ ಎಂ.ಎ. ಮನ್ಸೂರ್ ಅಹ್ಮದ್ ಹಾಗೂ ಅವರ ಪುತ್ರಿ ಶಂಶಾದ್ ಬೇಗಂ ಎಂ.ಎಂ. ಎಂದು ಗುರುತಿಸಲಾಗಿದೆ. ತಮಗೆ ಹಿರಿಯ ಸರ್ಕಾರಿ ಅಧಿಕಾರಿಗಳು ಮತ್ತು ರಾಜಕೀಯ ನಾಯಕರೊಂದಿಗೆ ನಿಕಟ ಸಂಪರ್ಕವಿದ್ದು, ಅವರ ಮೂಲಕ ಸರ್ಕಾರಿ…

Read More

ಸೋಮನಾಥನ ಮೇಲೆ ದಾಳಿ ಮಾಡಿದವರೆಲ್ಲಾ ಸಮಾಧಿಯಾದರು, ಆದರೆ ಸೋಮನಾಥ ಅಲ್ಲೇ ನಿಂತಿದ್ದಾನೆ: ಮೋದಿ – Kannada News | Empires Faded, Somnath Endured: Modi Invokes History in Strong Message

ಅಹಮದಾಬಾದ್, ಜನವರಿ 11: ಘಜ್ನಿಯಿಂದ ಔರಂಗಜೇಬನವರೆಗೆ ಸೋಮನಾಥ ದೇವಾಲಯ(Somnath Temple)ದ ಮೇಲೆ ದಾಳಿ ಮಾಡಿದವರೆಲ್ಲಾ ಸಮಾಧಿಯಾದರು. ಆದರೆ ಸೋಮನಾಥ ಅದೆಲ್ಲವನ್ನೂ ನೋಡುತ್ತಾ ಅಲ್ಲೇ ನಿಂತಿದ್ದಾನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಘಜ್ನಿ 1026ರಲ್ಲಿ ಮೊದಲ ಬಾರಿಗೆ ಸೋಮನಾಥ ದೇವಾಲಯದ ಮೇಲೆ ದಾಳಿ ನಡೆಸಿ, ಚಿನ್ನಾಭರಣಗಳನ್ನೆಲ್ಲಾ ದೋಚಿದ್ದ ಈ ಘಟನೆ ನಡೆದು ಸಾವಿರ ವರ್ಷಗಳೇ ಸಂದಿವೆ. ಇದೀಗ ಪ್ರಧಾನಿ ಮೋದಿ ಆ ಘಟನೆಯ ಬಗ್ಗೆ ಮಾತನಾಡಿದ್ದಾರೆ. ಬಂದವರು ದಾಳಿ ಮಾಡಿ ಹೋಗಿ ಮಸಣ ಸೇರಿದರು ಆದರೆ ಸೋಮನಾಥ…

Read More