Headlines

ಫೋಕ್ಸೋ ಕೇಸ್: ನಾಪತ್ತೆಯಾಗಿರುವ ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ – Kannada News | Koli kabbaliga community protest supporting mallikarjun mutya in kalaburagi for Take Back pocso Case

ಕಲಬುರಗಿ, (ಮಾರ್ಚ್ 02): ಅಪ್ರಾಪ್ತ ಬಾಲಕಿ ಜೊತೆ ಮಲ್ಲಿಕಾರ್ಜುನ ಮುತ್ಯಾ (mallikarjun mutya) ಅನುಚಿತ ವರ್ತನೆ ವಿಡಿಯೋ ವೈರಲ್ ಬೆನ್ನಲ್ಲೇ ಯಾದಗಿರಿಯ ಮಹಲ್ ರೋಜಾ ಮಠದ ಸ್ವಯಂ ಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಫೋಕ್ಸೋ ಪ್ರಕರಣ ದಾಖಲಾಗಿದ್ದು, ಇದರ ಬೆನ್ನಲ್ಲೇ ನಾಪತ್ತೆಯಾಗಿರುವ ಮುತ್ಯಾ ಅಜ್ಞಾತ ಸ್ಥಳದಿಂದಲೇ ಪ್ರಕರಣ ರದ್ದು ಕೋರಿ ಕಲಬುರಗಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇನ್ನೊಂದೆಡೆ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ದಾಖಲಿಸಿರುವ ‘ಸುಳ್ಳು’ ಪ್ರಕರಣ ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿ ಮಠದ ಭಕ್ತರ ಹಾಗೂ ಕೋಲಿ…

Read More

‘ಟಾಕ್ಸಿಕ್’ ಸಿನಿಮಾ ಟೀಸರ್ ಬಗ್ಗೆ ಅನುರಾಗ್ ಕಶ್ಯಪ್ ಹೇಳಿದ್ದೇನು? – Kannada News | Anurag Kashyap defends Yash’s Toxic movie

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾದ ಟೀಸರ್​​ ಕೆಲ ವಾರಗಳ ಹಿಂದೆ ಬಿಡುಗಡೆ ಆಗಿ ಭಾರಿ ವೈರಲ್ ಆಗಿತ್ತು. ಅತ್ಯಂತ ಕಡಿಮೆ ಅವಧಿಯಲ್ಲಿ ದಾಖಲೆ ಸಂಖ್ಯೆಯ ವೀಕ್ಷಣೆಗಳನ್ನು ‘ಟಾಕ್ಸಿಕ್’ ಸಿನಿಮಾ ಟೀಸರ್ ಗಳಿಸಿಕೊಂಡಿತ್ತು. ಸಿನಿಮಾದ ಟೀಸರ್ ನೋಡಿದವರು ಸಿನಿಮಾದ ರಿಚ್​​ಬೆಸ್, ಬೋಲ್ಡ್​​ನೆಸ್ ಅನ್ನು ಕೊಂಡಾಡಿದ್ದರು. ಆದರೆ ಇನ್ನು ಕೆಲವರು ಸಿನಿಮಾದ ಟೀಸರ್​​ನಲ್ಲಿರುವ ಕೆಲ ದೃಶ್ಯಗಳಿಗೆ ಆಕ್ಷೇಪ ಎತ್ತಿದ್ದರು. ‘ಟಾಕ್ಸಿಕ್’ ಸಿನಿಮಾದ ಟೀಸರ್ ಅಶ್ಲೀಲವಾಗಿದೆ, ಪುರುಷ ಅಹಂಕಾರದಿಂದ ತುಂಬಿದೆ ಎಂದೆಲ್ಲ ವಿಮರ್ಶೆ ಮಾಡಲಾಗಿತ್ತು. ಇದೀಗ ಬಾಲಿವುಡ್​ನ ಜನಪ್ರಿಯ ನಿರ್ದೇಶಕ…

Read More

ಗಣಿತ ಪರೀಕ್ಷೆಯಲ್ಲಿ 51 ಅಂಕ ಗಳಿಸಿದ್ದ ಹುಡುಗ ಇವತ್ತು ಭಾರತದ ಅತಿದೊಡ್ಡ ಖಾಸಗಿ ಬಾಹ್ಯಾಕಾಶ ಕಂಪನಿ ಒಡೆಯ – Kannada News | Skyroot Aerospace founder Pawan Kumar Chandana’s inspirational story

ಬೆಂಗಳೂರು, ಜೂನ್ 17: ಒಬ್ಬ ವಿದ್ಯಾರ್ಥಿಯ ನೈಜ ಸಾಮರ್ಥ್ಯವನ್ನು ಪರೀಕ್ಷೆಯಲ್ಲಿ ಆತ ತೆಗೆದುಕೊಳ್ಳುವ ಅಂಕಗಳಿಂದ ಅಳೆಯಲಾಗದು. ಶಾಲೆಗೆ ಹೋಗದವರು, ಪರೀಕ್ಷೆಯಲ್ಲಿ ಫೇಲ್ ಆದವರು ಜೀವನದಲ್ಲಿ ಉನ್ನತ ಹಂತಕ್ಕೆ ಹೋದ ಲೆಕ್ಕವಿಲ್ಲದಷ್ಟು ನಿದರ್ಶನಗಳು ಸಿಗುತ್ತವೆ. ಅಂಥವರಲ್ಲಿ ಒಬ್ಬರು ‘ಸ್ಕೈರೂಟ್ ಏರೋಸ್ಪೇಸ್’ ಕಂಪನಿಯ ಸ್ಥಾಪಕ ಪವನ್ ಕುಮಾರ್ ಚಂದನಾ’. ಇವರು ಗಣಿತ ಪರೀಕ್ಷೆಯಲ್ಲಿ ನೂರಕ್ಕೆ 51 ಅಂಕ ಪಡೆದಿದ್ದರು. ಆದರೆ, ಇವತ್ತು ಗಣಿತವನ್ನೇ ಇವರು ತಮ್ಮ ಸಾಧನೆಯ ತಳಹದಿಯಾಗಿ ಮಾಡಿಕೊಂಡಿದ್ದಾರೆ. ಭಾರತದ ಬಾಹ್ಯಾಕಾಶ ರಂಗದಲ್ಲಿ ಕ್ರಾಂತಿ ಸೃಷ್ಟಿಸುತ್ತಿರುವ ಯುವ ಉದ್ಯಮಿ…

Read More

IND vs SA: ನಾಯಕನಾಗಿ ಮೊದಲ ಪಂದ್ಯದಲ್ಲೇ ಎಡವಿದ ವೈಭವ್ ಸೂರ್ಯವಂಶಿ – Kannada News | Vaibhav Suryavanshi: India U19’s Youngest Captain at 14, Struggles on Debut

ದಕ್ಷಿಣ ಆಫ್ರಿಕಾದ ಬೆನೋನಿಯಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ವೈಭವ್ ಮಾತ್ರವಲ್ಲದೆ, ಟೀಂ ಇಂಡಿಯಾದ ಅಗ್ರ ಕ್ರಮಾಂಕವೂ ಸಂಪೂರ್ಣವಾಗಿ ವಿಫಲವಾಯಿತು. ಜಾರ್ಜ್ ಮತ್ತು ವೈಭವ್ ನಂತರ, ವಿಕೆಟ್ ಕೀಪರ್ ಅಭಿಗ್ಯಾನ್ ಕುಂಡು ಮತ್ತು ವೇದಾಂತ್ ತ್ರಿವೇದಿ ಕೂಡ ಪರಿಣಾಮಕಾರಿ ಇನ್ನಿಂಗ್ಸ್ ಆಡುವಲ್ಲಿ ವಿಫಲರಾಗಿ ಪೆವಿಲಿಯನ್‌ ಸೇರಿಕೊಂಡರು. Source link

Read More

ತಾಯಿ ನಿಧನದ ದುಃಖದಲ್ಲೇ ಪರೀಕ್ಷೆ ಬರೆದು ಈಗ ಕರ್ನಾಟಕಕ್ಕೆ ಟಾಪರ್:ನೋವಲ್ಲೂ ಸಾಧಿಸಿದ ದಿಶಾ

ಮಂಗಳೂರು, (ಏಪ್ರಿಲ್ 09): ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ 1 ಫಲಿತಾಂಶ ಪ್ರಕಟವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಆಳ್ವಾಸ್‌ ಕಾಲೇಜಿನ ದಿಶಾ, ವಾಣಿಜ್ಯ ವಿಭಾಗದಲ್ಲಿ (ಕಾಮರ್ಸ್) 600ಕ್ಕೆ 600 ಅಂಕ ಗಳಿಸಿ ದಕ್ಷಿಣ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದಿದ್ದಾರೆ. ಪರೀಕ್ಷೆ ನಡೆಯುತ್ತಿದ್ದಾಗಲೇ ತಾಯಿಯನ್ನು ಕಳೆದುಕೊಂಡು ಮನಸ್ಸಿನಲ್ಲಿ ದುಃಖ, ಕಣ್ಣಲ್ಲಿ ನೀರು ತುಂಬಿಕೊಂಡು ಧೃತಿಗೆಡದೇ ಪರೀಕ್ಷೆ ಬರೆದು ಈಗ ಕರ್ನಾಟಕದ ಟಾಪರ್ ಆಗಿ ಹೊರಹೊಮ್ಮಿದ್ದಾಳೆ. ಈ ಮೂಲಕ ಮಾದರಿಯಾಗಿದ್ದಾಳೆ. ಇನ್ನು ದಿಶಾ ಸಾಧನೆಗೆ ಕುಟುಂಬಸ್ಥರು, ಕಾಲೇಜು ಆಡಳಿತ…

Read More

ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​​ ಖರ್ಗೆ ಭೇಟಿಯಾಗಿದ್ದೇಕೆ ಡಿ.ಕೆ. ಶಿವಕುಮಾರ್​? – Kannada News | DCM DK Shivakumar Meets AICC President Mallikarjun Kharge Amidst Karnataka Political Speculation

ಬೆಂಗಳೂರು, ಜನವರಿ 12: ಡಿಸಿಎಂ ಡಿ.ಕೆ. ಶಿವಕುಮಾರ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಗಳೂರಿನ ಸದಾಶಿವನಗರದಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಈ ದಿಢೀರ್ ಭೇಟಿಯು ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಮುಖ್ಯವಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ರಾಜ್ಯಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದೆ. ಇತ್ತೀಚಿನ ದಿನಗಳಲ್ಲಿ ರಾಜ್ಯ ಕಾಂಗ್ರೆಸ್​​ನ ನಾಯಕತ್ವ ಬದಲಾವಣೆ ಕುರಿತು ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿವೆ. ನವೆಂಬರ್, ಡಿಸೆಂಬರ್ ಮತ್ತು ಈಗ ಜನವರಿ ತಿಂಗಳಲ್ಲೂ…

Read More

ಧರ್ಮಸ್ಥಳ ಕೇಸ್​: ಬುರುಡೆ ಗ್ಯಾಂಗ್ ಸಂಪರ್ಕ ಮಾಡಿದ್ದ ಸ್ವಾಮೀಜಿ ರಹಸ್ಯ ರಿವೀಲ್ – Kannada News | Dharmasthala Case: New Revelations Surface Over Swamiji’s Reported Meeting With Burude Gang

ಮಂಗಳೂರು, ಜೂನ್​ 13: ಧರ್ಮಸ್ಥಳದ (Dharmasthala Case) ವಿರುದ್ಧ ಹೆಣೆದಿದ್ದ ಕರಾಳ ಷಡ್ಯಂತ್ರ ಬಯಲಾಗುತ್ತಿದೆ. ಧರ್ಮಸ್ಥಳದಲ್ಲಿ ಶವ ಸಿಗುತ್ತೆ ಅಂತಾ SIT ಅಧಿಕಾರಿಗಳಿಂದ ಗುಂಡಿ ತೋಡಿಸಿದ್ದ ಮಾಸ್ಕ್​ಮ್ಯಾನ್ ಚಿನ್ನಯ್ಯ, ಹೈಕೋರ್ಟ್​​​​​​ನಲ್ಲಿ ರಿಟ್ ಅರ್ಜಿ ಸಲ್ಲಿಸುವ ಮೂಲಕ ತಮ್ಮದೇ ಬುರುಡೆ ಗ್ಯಾಂಗ್ ವಿರುದ್ಧ ತಿರುಗಿ ಬಿದ್ದಿದ್ದಾನೆ.  ನಿನ್ನೆ ಯಾರು ಪ್ರೊಡ್ಯೂಸರ್? ಎಷ್ಟು ಕೋಟಿ ಫಂಡಿಂಗ್? ಅನ್ನೋದೆಲ್ಲ ರಿವೀಲ್ ಆಗಿತ್ತು. ಜೊತೆ ನಟ ಪ್ರಕಾಶ್​​ರಾಜ್ ಹೆಸರನ್ನು ಉಲ್ಲೇಖಿಸಿದ್ದ. ಆದರೆ ಇಂದು ಧರ್ಮಸ್ಥಳ ಬುರುಡೆ ರಹಸ್ಯದ ಹಿಂದೆ ಸ್ವಾಮೀಜಿ ಸಂಪರ್ಕ ಇರುವುದು…

Read More

Dried Tulasi Plant: ಒಣಗಿದ ತುಳಸಿ ಗಿಡವನ್ನು ಕಸಕ್ಕೆ ಎಸೆಯಬೇಡಿ; ಮನೆಯಲ್ಲಿ ಸುಖ-ಸಮೃದ್ಧಿ ಹೆಚ್ಚಿಸಲು ಹೀಗೆ ಬಳಸಿ… – Kannada News

ಹಿಂದೂ ಧರ್ಮದಲ್ಲಿ ತುಳಸಿ ಸಸ್ಯಕ್ಕೆ ಅತ್ಯುನ್ನತ ಹಾಗೂ ಅತ್ಯಂತ ಪವಿತ್ರವಾದ ಸ್ಥಾನವನ್ನು ನೀಡಲಾಗಿದೆ. ತುಳಸಿ ಗಿಡದಲ್ಲಿ ಸಾಕ್ಷಾತ್ ಲಕ್ಷ್ಮಿ ದೇವಿಯೇ ನೆಲೆಸಿದ್ದಾಳೆ ಮತ್ತು ಈ ದೇವಿಯು ಭಗವಾನ್ ವಿಷ್ಣುವಿಗೆ ಅತ್ಯಂತ ಪ್ರಿಯಳಾಗಿದ್ದಾಳೆ ಎಂಬುದು ಧಾರ್ಮಿಕ ನಂಬಿಕೆ. ಇದೇ ಕಾರಣಕ್ಕೆ ತುಳಸಿ ಸಸ್ಯವು ಹಸಿರಾಗಿದ್ದಾಗ ಮಾತ್ರವಲ್ಲದೆ, ಅದು ಒಣಗಿದ ಮೇಲೂ ಅಷ್ಟೇ ಗೌರವದಿಂದ ಕಾಣಬೇಕೆಂದು ಧರ್ಮಗ್ರಂಥಗಳು ಸೂಚಿಸುತ್ತವೆ. ಒಂದು ವೇಳೆ ಮನೆಯಲ್ಲಿರುವ ತುಳಸಿ ಗಿಡವು ಒಣಗಿಹೋದರೆ, ಅದನ್ನು ಅಜಾಗರೂಕತೆಯಿಂದ ಕಸದ ಬುಟ್ಟಿಗೆ ಎಸೆಯದೆ, ಕೆಲವು ಆಧ್ಯಾತ್ಮಿಕ ನಿಯಮಗಳನ್ನು ಪಾಲಿಸುವ…

Read More

ಗ್ರೀನ್​ಲ್ಯಾಂಡ್ ದಕ್ಕೋವರೆಗೂ ಅಮೆರಿಕದಿಂದ ಐರೋಪ್ಯ ರಾಷ್​ಟ್ರಗಳಿಗೂ ಟ್ರಂಪ್ ಟ್ಯಾರಿಫ್ ಧಮ್ಕಿ; ಭಾರತಕ್ಕೇನು ಪಾಠ? – Kannada News | EU vs USA tariff conflict, what lessons India can learn from this

ನವದೆಹಲಿ, ಜನವರಿ 18: ಗ್ರೀನ್​ಲ್ಯಾಂಡ್ ಅನ್ನು ಕೊಡಲು ಒಪ್ಪದ ಡೆನ್ಮಾರ್ಕ್ ದೇಶದ ಪರವಾಗಿ ನಿಂತಿರುವ ಕೆಲ ಐರೋಪ್ಯ ದೇಶಗಳ ಮೇಲೆ ಡೊನಾಲ್ಡ್ ಟ್ರಂಪ್ (Donald Trump) ಶೇ. 10ರಷ್ಟು ಟ್ಯಾರಿಫ್ ಪ್ರಕಟಿಸಿದ್ದಾರೆ. ಫೆಬ್ರುವರಿ 1ರಿಂದ ಈ ಟ್ಯಾರಿಫ್ ಜಾರಿಗೆ ಬರುತ್ತದೆ. ಜೂನ್ 1ರಿಂದ ಈ ಟ್ಯಾರಿಫ್ ಶೇ. 25ಕ್ಕೆ ಏರಲಿದೆ. ಗ್ರೀನ್​ಲ್ಯಾಂಡ್ ದಕ್ಕುವವರೆಗೂ ಯೂರೋಪಿಯನ್ ದೇಶಗಳ ಮೇಲಿನ ಈ ಟ್ಯಾರಿಫ್ ಕ್ರಮ ಮುಂದುವರಿಯುತ್ತದೆ ಎಂದು ಟ್ರಂಪ್ ಎಚ್ಚರಿಕೆ ಕೊಟ್ಟಿದ್ದಾರೆ. ಅಮೆರಿಕದ ನಿಲುವನ್ನು ಖಂಡಿಸಿದ ಯೂರೋಪ್ ಡೆನ್ಮಾರ್ಕ್, ನಾರ್ವೆ,…

Read More

ಗುರುಗ್ರಾಮ: ನಿರ್ಮಾಣ ಹಂತದ ಗೋಡೆ ಕುಸಿದು 7 ಕಾರ್ಮಿಕರು ಸಾವು

ಗುರುಗ್ರಾಮ, ಮಾರ್ಚ್​ 10: ನಿರ್ಮಾಣ ಹಂತದ ಗೋಡೆ(Wall) ಕುಸಿದು 7 ಮಂದಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಸೋಮವಾರ ಸಂಜೆ ಸಿಧ್ರಾವಲಿ ಪ್ರದೇಶದ ಸಿಗ್ನೇಚರ್ ಗ್ಲೋಬಲ್ ಸೊಸೈಟಿಯಲ್ಲಿ ಈ ಘಟನೆ ಸಂಭವಿಸಿದೆ. ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಹಲವಾರು ಕಾರ್ಮಿಕರು ಟನ್‌ಗಳಷ್ಟು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗೋಡೆ ಇದ್ದಕ್ಕಿದ್ದಂತೆ ಕುಸಿದಾಗ ಸುಮಾರು 12 ರಿಂದ 15 ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಹೂತುಹೋದರು, ಸಿಲುಕಿಕೊಂಡಿದ್ದ ಕಾರ್ಮಿಕರನ್ನು ಭಿವಾಡಿಯ ಆಸ್ಪತ್ರೆಗೆ…

Read More