Headlines

ಆಂಥ್ರೋಪಿಕ್​ನಿಂದ ಉಚಿತ ಎಐ ಕೋರ್ಸ್​ಗಳು; ಕ್ಲಾಡ್ ಟ್ರೈನಿಂಗ್ ಮತ್ತು ಸರ್ಟಿಫಿಕೇಟ್ ಸಿಗುತ್ತೆ; ಪಡೆಯುವುದು ಹೇಗೆ? – Kannada News | Anthropic starts several free AI courses online, know where and how to find them

ಬೆಂಗಳೂರು, ಮಾರ್ಚ್ 5: ಆಂಥ್ರೋಪಿಕ್ (Anthropic) ಕಂಪನಿಯ ಎಐ ಟೆಕ್ನಾಲಜಿ ಶಕ್ತ ಉತ್ಪನ್ನಗಳು ದೈನಂದಿನ ಕೆಲಸಗಳನ್ನು ಸಲೀಸುಗೊಳಿಸಲು ಬಹಳ ನೆರವಾಗುತ್ತವೆ. ಅದರ ಕ್ಲಾಡ್​ನಂತಹ ಎಐ ಟೂಲ್​ಗಳು ಹೆಚ್ಚೆಚ್ಚು ಕೆಲಸಗಳನ್ನು ಆಟೊಮೇಟ್​ಗೊಳಿಸಬಲ್ಲುವು. ಆದರೆ, ಈ ಟೂಲ್​ಗಳನ್ನು ಹೇಗೆ ಬಳಸಬೇಕು ಎಂಬುದನ್ನು ಸರಿಯಾಗಿ ತಿಳಿದಿರಬೇಕು ಅಷ್ಟೇ. ಸಾಫ್ಟ್​ವೇರ್​ಗಳು ಬಹಳಷ್ಟು ಕೆಲಸಗಳನ್ನು ಆಟೊಮೇಟ್ ಮಾಡಿದ್ದವು. ಆದರೆ, ಸಾಫ್ಟ್​ವೇರ್ ಅನ್ನು ಹೇಗೆ ಬಳಸಬೇಕೆಂದು ಎನ್ನುವ ಜ್ಞಾನ ಇರಬೇಕು. ಹಾಗೆಯೇ, ಎಐ ಟೂಲ್​ಗಳ ಬಳಕೆ ಬಗ್ಗೆ ಜ್ಞಾನ ಅಗತ್ಯ. ಇದನ್ನು ಮನಗಂಡೇ ಆಂಥ್ರೋಪಿಕ್ ಸಂಸ್ಥೆ…

Read More

ಕೊಪ್ಪಳ ಗ್ಯಾಂಗ್‌ ರೇಪ್‌ ಪ್ರಕರಣಕ್ಕೆ ಟ್ವಿಸ್ಟ್: ತಾಲೂಕು ವೈದ್ಯಾಧಿಕಾರಿ ವಿರುದ್ಧವೇ ದಾಖಲಾಯ್ತು ಎಫ್​ಐಆರ್! – Kannada News | Koppal women harassment Case Takes Twist: FIR Filed Against Taluk Medical Officer for Alleged Evidence Tampering

ಕೊಪ್ಪಳ, ಜನವರಿ 1: ಕೊಪ್ಪಳ (Koppal) ಜಿಲ್ಲೆ ಯಲಬುರ್ಗಾದ ಮದ್ಲೂರಿನಲ್ಲಿ ನವೆಂಬರ್​​ನಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರೂ, ತಾಲೂಕು ವೈದ್ಯಾಧಿಕಾರಿಯು ಅತ್ಯಾಚಾರಿಗಳನ್ನು ರಕ್ಷಿಸಲು ಯತ್ನಿಸಿರುವುದು ಗೊತ್ತಾಗಿದೆ. ಸದ್ಯ ತಾಲೂಕು ವೈದ್ಯಾಧಿಕಾರಿ ವಿರುದ್ಧವೂ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ. ಯಲಬುರ್ಗಾ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಶಿವಕುಮಾರ್ ಸಾಕ್ಷಿ ನಾಶಪಡಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಶಿವಕುಮಾರ್ ವಿರುದ್ಧ ಯಲಬುರ್ಗಾ ಸಿಪಿಐ ಮೌನೇಶ್ವರ್‌ ಮಾಲಿಪಾಟೀಲ್…

Read More

U19 ವಿಶ್ವಕಪ್​ನಲ್ಲಿ ಗೆಲುವಿನ ಶುಭಾರಂಭ ಮಾಡಿದ ಯಂಗ್ ಇಂಡಿಯಾ – Kannada News | India U19 Dominates USA in World Cup Opener: Kundu (42*) & Patel (5 16) Shine

ಇಂದಿನಿಂದ ಆರಂಭವಾಗಿರುವ 19 ವರ್ಷದೊಳಗಿನವರ ಏಕದಿನ ವಿಶ್ವಕಪ್​ನಲ್ಲಿ ( U19 World Cup 2026) ಭಾರತ ಯುವ ತಂಡ ಗೆಲುವಿನ ಶುಭಾರಂಭ ಮಾಡಿದೆ. ಮಳೆ ಪೀಡಿತ ಈ ಪಂದ್ಯದಲ್ಲಿ ಟೀಂ ಇಂಡಿಯಾ, ಅಮೆರಿಕವನ್ನು (India vs USA) 6 ವಿಕೆಟ್‌ಗಳಿಂದ ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಅಮೆರಿಕ, ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿ 35.2 ಓವರ್‌ಗಳಲ್ಲಿ ಕೇವಲ 107 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಟೀಂ ಇಂಡಿಯಾ 4 ವಿಕೆಟ್‌ಗಳನ್ನು ಕಳೆದುಕೊಂಡು ಜಯದ ನಗೆ ಬೀರಿತು….

Read More

ಕರ್ನಾಟಕದಲ್ಲೂ ಲಾಂಚ್ ಆಯ್ತು ರಣ್ವೀರ್ ಸಿಂಗ್ ಒಡೆತನದ ವೋಡ್ಕಾ: ಬೆಲೆ ಎಷ್ಟು?

ರಣ್ವೀರ್ ಸಿಂಗ್, ಬಾಲಿವುಡ್​​ನ (Bollywood) ಸ್ಟಾರ್ ನಟ. ಸತತ ಸೋಲಿನಿಂದ ಕಂಗೆಟ್ಟಿದ್ದ ರಣ್ವೀರ್ ಸಿಂಗ್ ಅವರಿಗೆ ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳು ಮರು ಜೀವವನ್ನೇ ನೀಡಿವೆ. ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳ ಭರ್ಜರಿ ಯಶಸ್ಸು ರಣ್ವೀರ್ ಅವರನ್ನು ಮತ್ತೊಮ್ಮೆ ಬೇಡಿಕೆಯ ನಟರನ್ನಾಗಿ ಮಾಡಿದೆ. ರಣ್ವೀರ್ ಸಿಂಗ್ ಸ್ಟಾರ್ ನಟ ಆಗಿರುವ ಜೊತೆಗೆ ಒಳ್ಳೆಯ ಉದ್ಯಮಿ ಸಹ ಹೌದು. ಅವರು ಹಲವಾರು ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದಾರೆ. ಇತ್ತೀಚೆಗಷ್ಟೆ ಅವರು ಹೊಸ ಮದ್ಯದ ಉದ್ಯಮವನ್ನು ಸಹ ಪ್ರಾರಂಭಿಸಿದ್ದು,…

Read More

ಬೆಂಗಳೂರಿನಲ್ಲಿ ಆಟೋ ಗ್ಯಾಸ್ ಹಾಹಾಕಾರ: ಕಿಲೋಮೀಟರ್‌ಗಟ್ಟಲೆ ರಿಕ್ಷಾ ಸಾಲು! ಸಚಿವ ಮುನಿಯಪ್ಪ ಮನೆಗೆ ಮುತ್ತಿಗೆ ಎಚ್ಚರಿಕೆ

ಬೆಂಗಳೂರು, ಏಪ್ರಿಲ್ 3: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಆಟೋ ಎಲ್‌ಪಿಜಿ ಗ್ಯಾಸ್ ಅಭಾವ (Auto LPG Crisis) ವಿಕೋಪಕ್ಕೆ ತಲುಪಿದ್ದು, ಆಟೋ ಚಾಲಕರ ಬದುಕು ಬೀದಿಗೆ ಬಂದಿದೆ. ಗ್ಯಾಸ್ ಕೊರತೆ ಮತ್ತು ಅನಿಯಂತ್ರಿತ ದರ ಏರಿಕೆಯಿಂದ ಚಾಲಕರು ಕಂಗಾಲಾಗಿದ್ದಾರೆ. ಏತನ್ಮಧ್ಯೆ, ಸೋಮವಾರದೊಳಗೆ ಸಮಸ್ಯೆ ಬಗೆಹರಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಅವರಿಗೆ ‘ಪೀಸ್ ಆಟೋ’ ಸಂಘಟನೆ ಗಡುವು ನೀಡಿದೆ. ಇಲ್ಲದಿದ್ದರೆ ಸಚಿವರ ಮನೆಗೆ ಆಟೋ ಸಮೇತ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆಯನ್ನೂ ನೀಡಿದೆ….

Read More

Ugadi Horoscope 2026: ಯುಗಾದಿ ಬಳಿಕ ಈ ರಾಶಿಗೆ ಕೀರ್ತಿ, ಪ್ರತಿಷ್ಠೆ ಮತ್ತು ಅನಿರೀಕ್ಷಿತ ಧನಲಾಭ ಪ್ರಾಪ್ತಿ

ಹಿಂದೂ ಪಂಚಾಂಗದ ಪ್ರಕಾರ, 2026ರ ಯುಗಾದಿ ಹಬ್ಬವನ್ನು ಮಾರ್ಚ್ 19, 2026, ಗುರುವಾರದಂದು ಆಚರಿಸಲಾಗುತ್ತದೆ. ಇದನ್ನು ಹಿಂದೂಗಳ ಪಾಲಿನ ಹೊಸ ವರ್ಷವಾಗಿ ಆಚರಿಸಲಾಗುತ್ತದೆ. ಈ ವರ್ಷ 12 ರಾಶಿಗಳ ಪೈಕಿ ಕೆಲವು ರಾಶಿಗಳಿಗೆ ಸಾಕಷ್ಟು ಶುಭ ಫಲಗಳು ಒದಗಿಬರಲಿದೆ. ಅದರಲ್ಲೂ ಧನುಸ್ಸು ರಾಶಿಯವರಿಗೆ ಸಾಕಷ್ಟು ಶುಭ ಫಲಗಳು ದೊರೆಯಲಿವೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ ಬಸವರಾಜ ಗುರೂಜಿಯವರು ಭವಿಷ್ಯ ನುಡಿದಿದ್ದಾರೆ. 2026ರ ಪರಾಭವನಾಮ ಸಂವತ್ಸರದ ಯುಗಾದಿ ವರ್ಷದ ಧನುಸ್ಸು ರಾಶಿಯ ಸಮಗ್ರ ಫಲಾಫಲಗಳನ್ನು…

Read More

ಕಲ್ಲಿದ್ದಲು ಅನಿಲೀಕರಣ ಯೋಜನೆಗೆ ಸಂಪುಟದಿಂದ 37,500 ರೂ ಅನುಮೋದನೆ; ಏನಿದರ ಉಪಯೋಗ? – Kannada News | Modi Cabinet’s Mega Push: Rs 37,500 Cr Coal Gasification to Cut Imports, Create 50K Jobs

ಕಲ್ಲಿದ್ದಲು ಅನಿಲೀಕರಣ ಪ್ರಕ್ರಿಯೆ ವಿವರಿಸಿದ ಸಚಿವ ಎ ವೈಷ್ಣವ್Image Credit source: PTI ನವದೆಹಲಿ, ಮೇ 13: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ (Union Cabinet) ಸಭೆಯು ‘ಮೇಲ್ಮೈ ಕಲ್ಲಿದ್ದಲು/ಲಿಗ್ನೈಟ್ ಅನಿಲೀಕರಣ’ (Surface Coal/Lignite Gasification) ಯೋಜನೆಗಳನ್ನು ಉತ್ತೇಜಿಸಲು 37,500 ಕೋಟಿ ರೂಪಾಯಿಗಳ ಬೃಹತ್ ಆರ್ಥಿಕ ನೆರವನ್ನು ಘೋಷಿಸಿದೆ. ಈ ಯೋಜನೆಯು ಭಾರತದ ಇಂಧನ ಭದ್ರತೆಯನ್ನು ಬಲಪಡಿಸುವ ಮತ್ತು ಆಮದು ಅವಲಂಬನೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಒಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ….

Read More

ಸ್ನೇಹಮಯಿ ಕೃಷ್ಣ ದಿಢೀರ್ ಬಂಧನದಿಂದ ಹಲವು ಅನುಮಾನ: ಕೋರ್ಟ್​ಗೆ ಆಡಿಯೋ ಸಲ್ಲಿಸುವ ಮುನ್ನವೇ ಅರೆಸ್ಟ್ ಮಾಡಿದ್ದೇಕೆ? – Kannada News | Snehamayi Krishna Arrested by CCB Before Submitting Audio Evidence in Court; Questions Raised Over MUDA Row

ಮೈಸೂರು, ಫೆಬ್ರವರಿ 21: ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ (Snehamayi Krishna) ಅವರನ್ನು ಬೆಂಗಳೂರು ಸಿಸಿಬಿ ಪೊಲೀಸರು (CCB Police) ವಶಕ್ಕೆ ಪಡೆದುಕೊಂಡು, ಸತತ 17 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಮುಡಾ ಮಾಜಿ ಆಯುಕ್ತ ಡಿಬಿ ನಟೇಶ್, ತಮ್ಮ ವಿರುದ್ಧ ಸ್ನೇಹಮಯಿ ಕೃಷ್ಣ ನಕಲಿ ಆಡಿಯೋ ಸೃಷ್ಟಿಸಿ ಬಿಡುಗಡೆ ಮಾಡಿದ್ದಾರೆ ಎಂದು ಸಿಸಿಬಿಗೆ ನೀಡಿದ ದೂರಿನ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ, ಸ್ನೇಹಮಯಿ ಕೃಷ್ಣ ಅವರು ಕೋರ್ಟ್‌ಗೆ ಪ್ರಮುಖ ಆಡಿಯೋ ಮತ್ತು ದಾಖಲೆಗಳನ್ನು ಸಲ್ಲಿಸಲು…

Read More

ಐಪಿಎಲ್​ನಲ್ಲಿ ಯಾರಿಂದಲೂ ಸಾಧ್ಯವಾಗದ ದಾಖಲೆ ಬರೆದ ಸರ್ಫರಾಝ್ ಖಾನ್

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಇತಿಹಾಸದಲ್ಲಿ ಯಾರಿಂದಲೂ ಸಾಧ್ಯವಾಗದ ವಿಶೇಷ ದಾಖಲೆಯೊಂದನ್ನು ಸರ್ಫರಾಝ್ ಖಾನ್ (Sarfaraz Khan) ಬರೆದಿದ್ದಾರೆ. ಅದು ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸ್ಫೋಟಕ ಹಾಫ್ ಸೆಂಚುರಿ ಸಿಡಿಸುವ ಮೂಲಕ ಎಂಬುದು ವಿಶೇಷ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 11ನೇ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್​ಕೆ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ತಂಡ 20 ಓವರ್​ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 250…

Read More

ಉರುಸ್ ಮೆರವಣಿಗೆ ವೇಳೆ ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರ ಮೇಲೆ ಹಲ್ಲೆ – Kannada News | Bangarpet Uruss: Moral Policing Assault on Hindu Youth; KGF SP Investigates

ಕೋಲಾರ, ಜ.22: ಜಿಲ್ಲೆಯ ಬಂಗಾರಪೇಟೆ ಪಟ್ಟಣದ ದರ್ಗಾ ಮೈದಾನದಲ್ಲಿ ನಡೆಯುತ್ತಿರುವ ಉರುಸ್ ಮೆರವಣಿಗೆಯ ವೇಳೆ ನೈತಿಕ ಪೊಲೀಸ್‌ಗಿರಿ ನಡೆದ ಘಟನೆ ವರದಿಯಾಗಿದೆ.ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಎಂಬ ಕಾರಣಕ್ಕೆ ಗಲಾಟೆ ನಡೆದಿದೆ. ಈ ವೇಳೆ ಮುಸ್ಲಿಂ ಯುವಕರು ಹಿಂದೂ ಯುವಕರ ಮೇಲೆ ಹಲ್ಲೆ ಕೂಡ ಮಾಡಿದ್ದಾರೆ. ಮುಸ್ಲಿಂ ಯುವಕ-ಯುವತಿಯರ ಜೊತೆಗಿದ್ದ ಹಿಂದೂ ಯುವಕರ ಮೇಲೆ ದಾಳಿ ನಡೆದಿದೆ. ಘಟನೆ ಸಂಬಂಧ ಮುಸ್ಲಿಂ ಯುವತಿ ಚಾಂದಿನಿ ನೀಡಿದ ದೂರಿನ ಆಧಾರದ ಮೇಲೆ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ…

Read More