ಪ್ಯಾಲೆಸ್ತೀನ್ ಸಿನಿಮಾ ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ಬಿಡುತ್ತಿಲ್ಲ: ಪ್ರಕಾಶ್ ರಾಜ್ ಅಸಮಾಧಾನ – Kannada News | Central Govt not allowing screening of Palestinian films: Prakash Raj expresses displeasure
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (BIFFes) ಉದ್ಘಾಟನೆ ಆಗಿದೆ. ಈ ಸಿನಿಮೋತ್ಸವಕ್ಕೆ ನಟ ಪ್ರಕಾಶ್ ರಾಜ್ ಅವರು ರಾಯಭಾರಿ ಆಗಿದ್ದಾರೆ. ಉದ್ಘಾಟನಾ ವೇದಿಕೆಯಲ್ಲಿ ಪ್ರಕಾಶ್ ರಾಜ್ ಅವರು ಹಲವು ವಿಚಾರಗಳ ಬಗ್ಗೆ ಮಾತನಾಡಿದರು. ‘ಸುಮಾರು 16 ವರ್ಷಗಳ ಹಿಂದೆ ಈ ಸಿನಿಮೋತ್ಸವವನ್ನು ನಾನು ಉದ್ಘಾಟನೆ ಮಾಡಿದ್ದೆ. ಆಗ ಒಂದು ಚೈತನ್ಯ ಇತ್ತು. ರಂಗನತಿಟ್ಟಿಗೆ ಬೇರೆ ಬೇರೆ ದೇಶದ ಹಕ್ಕಿಗಳು ಬರುವ ರೀತಿಯಲ್ಲಿ ಉತ್ಸವ ಆಗಬೇಕು ಎಂಬ ಚೈತನ್ಯದಿಂದ ಶುರುಮಾಡಿದ ಉತ್ಸವ ಇದು. 16 ವರ್ಷದ ಬಳಿಕ ನಟನಾಗಿ,…