T20 World Cup 2026: ಟಿ20 ವಿಶ್ವಕಪ್ಗೆ 15 ಸದಸ್ಯರ ಇಂಗ್ಲೆಂಡ್ ತಾತ್ಕಾಲಿಕ ತಂಡ ಪ್ರಕಟ – Kannada News | England T20 World Cup 2026 Provisional Squad: Brook Captain, Livingstone Out
ಮುಂದಿನ ವರ್ಷ ಅಂದರೆ 2026 ರ ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗಾಗಿ (T20 World Cup 2026) ಇಂಗ್ಲೆಂಡ್ ತನ್ನ ತಾತ್ಕಾಲಿಕ ತಂಡವನ್ನು ಪ್ರಕಟಿಸಿದೆ. ತಾತ್ಕಾಲಿಕ ತಂಡ ಎಂದರೆ ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಇಂಗ್ಲೆಂಡ್ ಈಗ ಆಯ್ಕೆ ಮಾಡಿರುವ ತಂಡದಲ್ಲಿ ಬದಲಾವಣೆಗಳನ್ನು ಮಾಡುವ ಅವಕಾಶ ಹೊಂದಿರುತ್ತದೆ. ಅಂದರೆ ಟಿ20 ವಿಶ್ವಕಪ್ಗೆ ಇದೇ ಅಂತಿಮ ತಂಡವಲ್ಲ. ವಾಸ್ತವವಾಗಿ ಐಸಿಸಿ (ICC) ನಿಯಮಗಳ ಪ್ರಕಾರ, ಎಲ್ಲಾ ತಂಡಗಳು ಪಂದ್ಯಾವಳಿಗೆ ಒಂದು ತಿಂಗಳ ಮೊದಲು ತಮ್ಮ ತಂಡಗಳನ್ನು ಘೋಷಿಸಬೇಕು….