Headlines

‘ರಾಕಾ’ ಪೋಸ್ಟರ್ ರಿಲೀಸ್ ಬೆನ್ನಲ್ಲೆ Jr NTR ಸಿನಿಮಾದ ನಿರ್ದೇಶಕ ವೈರಲ್ ಆಗಿದ್ದೇಕೆ?

ಅಲ್ಲು ಅರ್ಜುನ್ (Allu Arjun) ನಟಿಸಿ ಅಟ್ಲಿ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾದ ಟೈಟಲ್ ಪೋಸ್ಟರ್ ನಿನ್ನೆಯಷ್ಟೆ ಬಿಡುಗಡೆ ಆಯ್ತು. ಸಿನಿಮಾಕ್ಕೆ ‘ರಾಕಾ’ ಎಂದು ಹೆಸರಿಟ್ಟಿದ್ದು, ಪೋಸ್ಟರ್​​ನಲ್ಲಿ ರಾಕ್ಷಸನ ರೀತಿ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದಾರೆ. ಪೋಸ್ಟರ್ ಬಗ್ಗೆ ಅಲ್ಲು ಅರ್ಜುನ್ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಪೋಸ್ಟರ್ ಬಿಡುಗಡೆ ಆದ ಬಳಿಕ ಜೂ ಎನ್​​ಟಿಆರ್ ಜೊತೆಗೆ ಸಿನಿಮಾ ಮಾಡಿದ್ದ ನಿರ್ದೇಶಕ ಟ್ರೆಂಡ್ ಆಗಲು ಆರಂಭಿಸಿದ್ದು, ಹಠಾತ್ತನೆ ಆ ನಿರ್ದೇಶಕನ ವಿಡಿಯೋಗಳು, ಹಳೆ ಸಂದರ್ಶನಗಳು ವೈರಲ್ ಆಗುತ್ತಿವೆ….

Read More

ಯಮ ಪಾಶದಂತೆ ಹಾರಿ ಬಂದ ಓಮ್ನಿ: ಪಾದಚಾರಿಗಳ ಮೇಲೆ ಎರಗಿದ ಭಯಾನಕ ದೃಶ್ಯ

ಬೆಳ್ತಂಗಡಿ, ಏ.13: ತಾಲೂಕಿನ ಕೊಡಬೈಲು ಎಂಬಲ್ಲಿ ಭಾನುವಾರ ಮಧ್ಯಾಹ್ನ ಅತೀ ವೇಗವಾಗಿ ಬಂದ ಓಮ್ನಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಪಾದಚಾರಿಗಳ ಮೇಲೆ ಉರುಳಿ ಬಿದ್ದಿರುವ ಭೀಕರ ಘಟನೆ ನಡೆದಿದೆ. ಈ ಘಟನೆಯಲ್ಲಿ ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ವರದಿಗಳ ಪ್ರಕಾರ, ಇಬ್ಬರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಬೊಲೆರೋ ಜೀಪ್‌ನಿಂದ ಇಳಿದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅತೀ ವೇಗವಾಗಿ ಬಂದ ಮಾರುತಿ ಓಮ್ನಿ ಕಾರು, ತೀಕ್ಷ್ಣವಾದ ತಿರುವಿನಲ್ಲಿ ನಿಯಂತ್ರಣ…

Read More

ಸುಡು ಬಿಸಿಲಿಗೆ ಬೆಂದ ಕರ್ನಾಟಕ: ಬೆಂಗಳೂರಿನಲ್ಲಿ ದಾಖಲೆ ಬರೆದ ತಾಪಮಾನ – Kannada News | Karnataka Weather Today: Mercury breaches 36 Celsius mark in Bengaluru

ಬೆಂಗಳೂರು, (ಏಪ್ರಿಲ್ 14): ಕರ್ನಾಟಕದಲ್ಲಿ (Karnataka) ಈ ಬಾರಿಯ ಬೇಸಿಗೆ ಬಿಸಿಲು ಜನರ ನೆತ್ತಿ ಸುಡುತ್ತಿದೆ. ರಾಜ್ಯದ 5ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದೆ. ಕಲಬುರಗಿ ಜಿಲ್ಲೆಯಲ್ಲಿ ಅತ್ಯಧಿಕವಾಗಿ 42 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ಈ ಬೇಸಿಗೆಯ ಹಂಗಾಮಿನಲ್ಲಿ ಗರಿಷ್ಠವಾಗಿದೆ. ಗದಗ, ರಾಯಚೂರು, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿಯೂ 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ತಾಪಮಾನ ದಾಖಲಾಗಿದ್ದು, ಇಲ್ಲಿನ ಜನರನ್ನು ಹೈರಾಣಿಗಿಸಿದೆ. ಇನ್ನು ಈ ಬಾರಿಯ ಬಿಸಿಲು ಸಿಲಿಕಾನ್ ಸಿಟಿ…

Read More

ಒಂದೇ ದಿನ ಜಯದೇವ ಆಸ್ಪತ್ರೆಯಲ್ಲಿ 11 ರೋಗಿಗಳ ಸಾವು: ಆಗಿದ್ದೇನು? ಸ್ಪಷ್ಟನೆ ನೀಡಿದ ನಿರ್ದೇಶಕ – Kannada News | 11 Patients Die in a Single Day at Jayadeva Hospital: Director Explains the Cause

ಜಯದೇವ ಆಸ್ಪತ್ರೆ ವೈದ್ಯರ ಸುದ್ದಿಗೋಷ್ಠಿImage Credit source: tv9 kannada ಮೈಸೂರು, ಜೂನ್​​ 17: ಜಯದೇವ ಹೃದ್ರೋಗ ಆಸ್ಪತ್ರೆ (Jayadeva Hospital) ರಾಜ್ಯದಲ್ಲಿ ಅತ್ಯಂತ ಪ್ರಸಿದ್ಧಿ ಪಡೆದಿರುವ ಆಸ್ಪತ್ರೆ. ಹೃದಯ ಸಂಬಂಧಿ ಕಾಲೆಗಳಿಗೆ ಚಿಕಿತ್ಸೆ ನೀಡುವುದರಲ್ಲಿ ಎತ್ತಿದ ಕೈ. ಆದರೆ ಇಂತಹ ಆಸ್ಪತ್ರೆ ವಿರುದ್ಧ ಇದೀಗ ಗಂಭೀರ ಆರೋಪವೊಂದು ಕೇಳಿಬಂದಿದೆ. ಕಳೆದ 24 ಗಂಟೆಯಲ್ಲಿ ಮೈಸೂರಿನ (mysuru) ಜಯದೇವ ಆಸ್ಪತ್ರೆಯಲ್ಲಿ 11 ರೋಗಿಗಳು ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಮೃತ ರೋಗಿಗಳ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈದ್ಯರ…

Read More

ಹೈದರಾಬಾದ್ ತಂಡಕ್ಕೆ ಮಾರ್ನಸ್ ಲಬುಶೇನ್ ನಾಯಕ

ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಮಾರ್ನಸ್ ಲಬುಶೇನ್ ಮೊದಲ ಬಾರಿಗೆ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಆಡುತ್ತಿದ್ದು, ಬಯಸದೆ ಬಂದ ಭಾಗ್ಯವೆಂಬಂತೆ ತಮ್ಮ ಮೊದಲ ಸೀಸನ್‌ನಲ್ಲಿಯೇ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಲಬುಶೇನ್ ಹೈದರಾಬಾದ್ ಕಿಂಗ್ಸ್‌ಮೆನ್ ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ. ಪಾಕಿಸ್ತಾನ ಸೂಪರ್ ಲೀಗ್‌ನ ಈ ಹೊಸ ತಂಡದ ಜವಾಬ್ದಾರಿಯನ್ನು ಮಾರ್ನಸ್ ಲಬುಶೇನ್ ವಹಿಸಿಕೊಳ್ಳಲಿದ್ದಾರೆ ಎಂದು ಫ್ರಾಂಚೈಸಿ ಘೋಷಿಸಿದೆ. ವಾಸ್ತವವಾಗಿ ಮಾರ್ನಸ್ ಲಬುಶೇನ್ ಅವರಿಗೆ ಟಿ20 ಕ್ರಿಕೆಟ್‌ನಲ್ಲಿ ಹೆಚ್ಚಿನ ಅನುಭವವಿಲ್ಲ. ಅದರಲ್ಲೂ ಫ್ರಾಂಚೈಸ್ ಕ್ರಿಕೆಟ್​ನಲ್ಲಿ ಲಬುಶೇನ್ ಕೇವಲ ಬಿಗ್ ಬ್ಯಾಷ್ ಲೀಗ್‌ನಲ್ಲಿ ಆಡಿದ್ದು,…

Read More

ನಮ್ಮ ಬೆಂಬಲ ಭಾರತಕ್ಕೆ: ಚೀನಾ-ಪಾಕ್​​ ಸಂಬಂಧ ಬಲಗೊಳ್ಳುತ್ತಿದೆ, ಭಾರತಕ್ಕೆ ಎಚ್ಚರಿಕೆ ನೀಡಿದ ಬಲೂಚಿಸ್ತಾನ – Kannada News | Balochistan Seeks India Support Against China Pak Threat and Military Deployment

ಬಲೂಚಿಸ್ತಾನದ ಪ್ರಮುಖ ನಾಯಕ (Baloch Leader) ಮೀರ್ ಯಾರ್ ಬಲೂಚ್, ಪಾಕಿಸ್ತಾನ ಹಾಗೂ ಚೀನಾದ ನಡುವಿನ  ಸಂಬಂಧ ಬಗ್ಗೆ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗ ಮುಕ್ತ ಪತ್ರವೊಂದನ್ನು ಬರೆದಿದ್ದಾರೆ. ಬೀಜಿಂಗ್-ಇಸ್ಲಾಮಾಬಾದ್ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ, ಮುಂದಿನ ಕೆಲವು ತಿಂಗಳುಗಳಲ್ಲಿ ಚೀನಾ ತನ್ನ ಮಿಲಿಟರಿ ಪಡೆಗಳನ್ನು ಪಾಕಿಸ್ತಾನದ ಬಲೂಚಿಸ್ತಾನ್ ಪ್ರದೇಶದಲ್ಲಿ ನಿಯೋಜಿಸಬಹುದು ಎಂದು ಈ ಪತ್ರದಲ್ಲಿ ಹೇಳಿದ್ದಾರೆ. ಬಲೂಚಿಸ್ತಾನ್ ಪಾಕಿಸ್ತಾನದ ನಿಯಂತ್ರಣದಲ್ಲಿ ದಶಕಗಳಿಂದ ದಬ್ಬಾಳಿಕೆಯನ್ನು ಎದುರಿಸಿದೆ. ಹಿಂಸೆ ಮತ್ತು ಮಾನವ ಹಕ್ಕುಗಳ…

Read More

ಬೆಂಗಳೂರಿನ ಟ್ರಾಫಿಕ್ ನನ್ನನ್ನು ಆರೋಗ್ಯವಂತನನ್ನಾಗಿ ಮಾಡಿದೆ: 8 ಕೆಜಿ ತೂಕ ಇಳಿಸಿಕೊಂಡ ಟೆಕ್ಕಿ – Kannada News | Beat Bengaluru Traffic Stress: Techie’s Health Secret and WFH Impact

ಬೆಂಗಳೂರು, ಜ.23: ಜನದಟ್ಟಣೆಗೆ ವಿಶ್ವಪ್ರಸಿದ್ಧಯನ್ನು ಪಡೆದಿರುವ ಬೆಂಗಳೂರು ಟ್ರಾಫಿಕ್ (Bengaluru traffic health)​​​​​​ ಅನೇಕರಿಗೆ ಕಿರಿಕಿರಿಯನ್ನು ಉಂಟು ಮಾಡಿದ್ರೆ, ಈ ವ್ಯಕ್ತಿಯನ್ನು ಮಾತ್ರ ಆರೋಗ್ಯವಂತನಾಗಿ ಮಾಡಿದೆ ಎಂದು ಹೇಳಿದ್ದಾರೆ. ಜೀವನದಲ್ಲಿ ಆಗುವ ನಕಾರಾತ್ಮಕ ವಿಚಾರಗಳ ಬಗ್ಗೆ ತುಂಬಾ ತಲೆಬಿಸಿ ಮಾಡಿಕೊಳ್ಳಬಾರದು. ಅಂತಹ ವಿಷಯಗಳಿಂದ ಹೊಸ ದಾರಿಯನ್ನು ಕಂಡುಕೊಳ್ಳಬೇಕು ಎಂಬುದಕ್ಕೆ ಈ ವ್ಯಕ್ತಿ ಉದಾಹರಣೆ ನೋಡಿ.  ಟ್ರಾಫಿಕ್‌ ತನ್ನನ್ನು ಆರೋಗ್ಯವಂತನನ್ನಾಗಿ ಮಾಡಿದೆ ಎಂದು ಈ ವ್ಯಕ್ತಿ ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ….

Read More

ವಾರಕ್ಕೆ 800 ರೂ. ಸಂಬಳ: ಜೀತಕ್ಕೆ ದುಡಿಯುತ್ತಿದ್ದ ಒಡಿಶಾ ಮುಲದ 24 ಮಂದಿ ಕಾರ್ಮಿಕರ ರಕ್ಷಣೆ – Kannada News | Odisha Bonded Laborers Rescued from Bagalkot Brick Kiln: Case Filled Against Owner

ರಕ್ಷಣೆ ಮಾಡಲಾದ ಕಾರ್ಮಿಕರುImage Credit source: Tv9 Kannada ಬಾಗಲಕೋಟೆ, ಫೆಬ್ರವರಿ 13: ಜಿಲ್ಲೆಯ ಇಳಕಲ್ ತಾಲೂಕಿನ ಸಂಕ್ಲಾಪುರ ಗ್ರಾಮದ ಇಟ್ಟಿಗೆ ಭಟ್ಟಿಯಲ್ಲಿ ಜೀತಕ್ಕೆ ದುಡಿಯುತ್ತಿದ್ದ ಐವರು ಬಾಲ ಕಾರ್ಮಿಕರು ಸೇರಿದಂತೆ ಒಡಿಶಾ ಮೂಲದ ಒಟ್ಟು 24 ಮಂದಿಯನ್ನು ಇಳಕಲ್ ತಹಶೀಲ್ದಾರ್, ಕಾರ್ಮಿಕ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ. ಈರಪ್ಪ ಕುಂಬಾರ ಎಂಬುವರ ಇಟ್ಟಿಗೆ ಭಟ್ಟಿಯಲ್ಲಿ ಇವರು ಕೆಲಸ ಮಾಡುತ್ತಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ. ಬಾಲ ಕಾರ್ಮಿಕ ನಿಷೇಧ‌‌ ಮತ್ತು ಜೀತ ಪದ್ಧತಿ ನಿಷೇಧ ಕಾಯ್ದೆಯಡಿ…

Read More

ತರಕಾರಿ ಮಾರಿ ಪ್ರಭುಲಿಂಗ ದೇವರಿಗೆ 16 ಲಕ್ಷ ರೂ. ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಅಣ್ಣನ ಮಕ್ಕಳಿಂದಲೇ ಬರ್ಬರ ಹತ್ಯೆ – Kannada News | Philanthropist Who Donated Rs 16 Lakh Silver Door to Prabhulinga Temple Brutally Murdered by Relatives in Bagalkot

ದಾನಜ್ಜಿ ಅಲಿಯಾಸ್ ಚಂದ್ರವ್ವ ನೀಲಗಿ ಬಾಗಲಕೋಟೆ, ಜನವರಿ 15: ಬಾಗಲಕೋಟೆ (Bagalkot) ಜಿಲ್ಲೆಯ ಜಗದಾಳ ಗ್ರಾಮದಲ್ಲಿ 80 ವರ್ಷದ ವೃದ್ಧೆ ದಾನಜ್ಜಿ ಅಲಿಯಾಸ್ ಚಂದ್ರವ್ವ ನೀಲಗಿ ಅವರನ್ನು ಅಣ್ಣನ ಮಕ್ಕಳೇ ಆಸ್ತಿಗಾಗಿ ಹತ್ಯೆ ಮಾಡಿದ್ದಾರೆ. 11 ಎಕರೆ ಆಸ್ತಿಗಾಗಿ ಈ ಅಮಾನವೀಯ ಕೃತ್ಯ ಎಸಗಲಾಗಿದೆ ಎಂಬುದು ತಿಳಿದುಬಂದಿದೆ. ಬಾಗಲಕೋಟೆ ಜಿಲ್ಲೆ ತೇರದಾಳ ಮತ್ತು ರಬಕವಿಬನಹಟ್ಟಿ ಭಾಗದಲ್ಲಿ ದಾನಜ್ಜಿ ಎಂದೇ ಹೆಸರಾಗಿದ್ದ ಚಂದ್ರವ್ವ ನೀಲಗಿ ಅವರ ಕೊಲೆ ಸ್ಥಳೀರನ್ನು ಆಘಾತಕ್ಕೀಡು ಮಾಡಿದೆ. ತರಕಾರಿ ಮಾರಟ ಮಾಡಿ ಜೀವನ, ದಾನದಿಂದಲೇ…

Read More