Headlines

ಕ್ಷಮಿಸು ಡಿಂಪಿ, ಮಹಿಳಾ ಕಾಲೇಜಿನ ಗೋಡೆಯ ಮೇಲೆ ಪ್ರೇಮ ಪುರಾಣ, ಆದ್ರೆ ಸೆಕ್ಯೂರಿಟಿ ಗಾರ್ಡ್ ಬೆಚ್ಚಿಬಿದ್ದಿದ್ದೇಕೆ?

ಧನಬಾದ್, ಏಪ್ರಿಲ್ 10: ಪ್ರೀತಿ(Love) ಎಂಬುದು ಒಂದು ಮಾಯೆ,   ಮನುಷ್ಯನನ್ನು ಯಾವ ಮಟ್ಟಕ್ಕೆ ಬೇಕಾದರೂ ಇಳಿಸುತ್ತೆ ಅಂತಾರೆ. ಆದರೆ ಧನ್‌ಬಾದ್‌ನ ಬಿಎಸ್‌ಎಸ್ (BSS) ಮಹಿಳಾ ಕಾಲೇಜಿನ ಮುಂದೆ ನಡೆದ ಘಟನೆ ಮಾತ್ರ ವಿದ್ಯಾರ್ಥಿನಿಯರಲ್ಲಿ ಮತ್ತು ಸಾರ್ವಜನಿಕರಲ್ಲಿ ಭೀತಿ ಮೂಡಿಸಿದೆ. ಒಬ್ಬ ಹತಾಶ ಪ್ರೇಮಿ ತನ್ನ ಪ್ರೇಯಸಿಯ ಕ್ಷಮೆ ಕೇಳಲು ಇಡೀ ಕಾಲೇಜಿನ ದ್ವಾರವನ್ನೇ ಪೋಸ್ಟರ್‌ಗಳಿಂದ ತುಂಬಿಸಿದ ಘಟನೆ ಗುರುವಾರ (ಏಪ್ರಿಲ್ 9) ನಡೆದಿದೆ. ಕಾಲೇಜಿನ ಮುಖ್ಯ ದ್ವಾರದ ಗೋಡೆಗಳ ಮೇಲೆ ಬಿಳಿ ಬಣ್ಣದ ದೊಡ್ಡ ಪೋಸ್ಟರ್‌ಗಳು ಪ್ರತ್ಯಕ್ಷವಾಗಿದ್ದವು….

Read More

‘ದಿ ಕೇರಳ ಸ್ಟೋರಿ 2’ ಸಿನಿಮಾ ವಿವಾದ: ಕೇರಳ ಹೈಕೋರ್ಟ್ ಮಹತ್ವದ ಆದೇಶ – Kannada News | Kerala high court says it will watch The Kerala Story 2 movie before giving order

‘ದಿ ಕೇರಳ ಸ್ಟೋರಿ 2’ (The Kerala Story 2) ಸಿನಿಮಾದ ಟೀಸರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಸಿನಿಮಾ ಫೆಬ್ರವರಿ 27ರ ಶುಕ್ರವಾರ ಬಿಡುಗಡೆ ಆಗಲಿದೆ. ಆದರೆ ‘ದಿ ಕೇರಳ ಸ್ಟೋರಿ 2’ ಸಿನಿಮಾಕ್ಕೆ ಹಲವೆಡೆ ತೀವ್ರ ವಿರೋಧ ವ್ಯಕ್ತವಾಗಿದೆ. ಸ್ವತಃ ಕೇರಳ ಸಿಎಂ ಪಿಣರಾಯಿ ವಿಜಯನ್, ‘ದಿ ಕೇರಳ ಸ್ಟೋರಿ 2’ ಸಿನಿಮಾವನ್ನು ಬಹಿಷ್ಕರಿಸುವಂತೆ ಆಗ್ರಹಿಸಿದ್ದಾರೆ. ಸಿನಿಮಾವು ಕೇರಳ ರಾಜ್ಯವನ್ನು ಕೆಟ್ಟ ರೀತಿಯಲ್ಲಿ ಬಿಂಬಿಸುತ್ತಿದೆ. ಧರ್ಮಗಳ ನಡುವೆ ಸಾಮರಸ್ಯ ಹಾಳು ಮಾಡುವ ಉದ್ದೇಶ ಸಿನಿಮಾಕ್ಕೆ ಇದೆ…

Read More

ಅಸ್ಸಾಂನ ಚಹಾ ತೋಟಕ್ಕೆ ಪ್ರಧಾನಿ ಭೇಟಿ, ಕಾರ್ಮಿಕರೊಂದಿಗೆ ಚಹಾ ಎಲೆಗಳ ಕಿತ್ತ ಮೋದಿ, ಸೆಲ್ಫಿ, ಒಂದಿಷ್ಟು ಹರಟೆ

ಪ್ರಧಾನಿ ನರೇಂದ್ರ ಮೋದಿ ಅಸ್ಸಾಂನಲ್ಲಿ ಎರಡು ಚುನಾವಣಾ ರ್ಯಾಲಿಗೂ ಮುನ್ನ ದಿಬ್ರುಗಢದಲ್ಲಿರುವ ಚಹಾ ತೋಟಕ್ಕೆ ಭೇಟಿ ನೀಡಿದ್ದಾರೆ. ಅವರು ಚಹಾವನ್ನು ಅಸ್ಸಾಂನ ಆತ್ಮವೆಂದು ಬಣ್ಣಿಸಿದ್ದಾರೆ. ಇಲ್ಲಿಂದ ಬರುವ ಚಹಾ ಪ್ರಪಂಚದಾದ್ಯಂತ ತಲುಪಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇಂದು ಬೆಳಗ್ಗೆ ದಿಬ್ರುಗಢದಲ್ಲಿ, ನಾನು ಒಂದು ಚಹಾ ತೋಟಕ್ಕೆ ಭೇಟಿ ನೀಡಿ ಇಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರೊಂದಿಗೆ ಸಂವಹನ ನಡೆಸಿದೆ. ಇದು ಬಹಳ ಸ್ಮರಣೀಯ ಅನುಭವವಾಗಿತ್ತು ಎಂದು ಪ್ರಧಾನಿ ಮೋದಿ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ. ಪ್ರತಿಯೊಂದು ಚಹಾ ತೋಟಗಾರ ಕುಟುಂಬಗಳ…

Read More

Horoscope Today: ಇಂದು ಈ ರಾಶಿಯವರು ಮಾನಸಿಕವಾಗಿ ಸದೃಢರಾಗಿರಿ

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮಾರ್ಚ್​ 29​, ಭಾನುವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಶುಕ್ಲ ಪಕ್ಷ, ಏಕಾದಶಿ ತಿಥಿಯಾಗಿದೆ. ಇಂದು ಡಾ. ಬಸವರಾಜ ಗುರೂಜಿಯವರು ಪ್ರತಿ ರಾಶಿಯವರಿಗೂ ಆರೋಗ್ಯ, ಆರ್ಥಿಕ ಸ್ಥಿತಿ, ಉದ್ಯೋಗ, ವ್ಯಾಪಾರ, ಕುಟುಂಬ ಮತ್ತು ವೈಯಕ್ತಿಕ ಸಂಬಂಧಗಳ ಕುರಿತು ವಿವರವಾದ ಸಲಹೆಗಳನ್ನು ನೀಡಿದ್ದಾರೆ. ಆಶ್ಲೇಷ ನಕ್ಷತ್ರದಲ್ಲಿ ಚಂದ್ರನ…

Read More

‘ದಿ ರಾಯಲ್ ಕೋಹಿನೂರ್ ಹೈಸ್ಟ್’ – ಅಮೂಲ್ಯ ವಜ್ರದ ಇತಿಹಾಸಕ್ಕೆ ಮರುಜೀವ ನೀಡುವ ಗೌರವ್ ಕರ್ರಿರ್ ಅವರ ಪತ್ತೇದಾರಿ ಕಾದಂಬರಿ – Kannada News | Book Review: A New Historical Thriller Brings the Kohinoor Legend to Life

‘ದಿ ರಾಯಲ್ ಕೊಹಿನೂರ್ ಹೈಸ್ಟ್’ ಪುಸ್ತಕImage Credit source: TV9 Network ಭಾರತೀಯ ಸಾಹಿತ್ಯ ಲೋಕದಲ್ಲಿ ಐತಿಹಾಸಿಕ ಪತ್ತೇದಾರಿ (Historical Thriller) ಕಾದಂಬರಿಗಳು ಬರುವುದು ತುಂಬಾ ಅಪರೂಪ. ಈ ಕಾರಣಕ್ಕಾಗಿಯೇ ಹೊಸದಾಗಿ ಮಾರುಕಟ್ಟೆಗೆ ಬಂದಿರುವ ‘ದಿ ರಾಯಲ್ ಕೋಹಿನೂರ್ ಹೈಸ್ಟ್ – ಎ 1930ಸ್ ಸ್ಪೈ ಥ್ರಿಲ್ಲರ್’ (The Royal Kohinoor Heist – A 1930s Spy Thriller) ಕಾದಂಬರಿಯು ಓದುಗರಿಗೆ ಒಂದು ವಿಭಿನ್ನ ಅನುಭವವನ್ನು ನೀಡುತ್ತದೆ. ಹೊಸ ಲೇಖಕರಾದ ಗೌರವ್ ಎಸ್. ಕರ್ರಿರ್ (Gaurav…

Read More

ನನ್ನನ್ನು ಕೆಟ್ಟದಾಗಿ ಮುಟ್ಟಿದರು: ಕನ್ನಡದಲ್ಲಿ ಅಭಿನಯಿಸಿದ ಬಾಲಿವುಡ್ ನಟಿಯಿಂದ ಆರೋಪ – Kannada News | Actress Daisy Shah reveals bad experience with South Filmmaker during audition

ಕನ್ನಡದ ‘ಭದ್ರ’, ‘ಬಾಡಿಗಾರ್ಡ್’ ಹಾಗೂ ಹಿಂದಿಯ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ ಡೈಸಿ ಶಾ (Daisy Shah) ಅವರು ಈಗ ಕೆಲವು ಗಂಭೀರ ಆರೋಪ ಮಾಡಿದ್ದಾರೆ. ಕನ್ನಡ ಮಾತ್ರವಲ್ಲದೇ ತಮಿಳು, ಮರಾಠಿ, ಮಲಯಾಳಂ ಸಿನಿಮಾಗಳಲ್ಲೂ ಅವರು ಅಭಿನಯಿಸಿದ್ದಾರೆ. ಸಲ್ಮಾನ್ ಖಾನ್ ಅಭಿನಯದ ‘ಜೈ ಹೋ’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದ ನಟಿ ಡೈಸಿ ಶಾ ಅವರು, ದಕ್ಷಿಣ ಭಾರತದ ನಿರ್ಮಾಪಕನಿಂದ (South Filmmaker) ತಮಗೆ ಎದುರಾದ ಅತ್ಯಂತ ಮುಜುಗರದ ಮತ್ತು ಕಹಿ ಘಟನೆಯೊಂದನ್ನು ಇತ್ತೀಚಿನ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ….

Read More

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 22ರ ದಿನಭವಿಷ್ಯ

ಸ್ವಯಂವರ ಪಾರ್ವತಿ ಮಂತ್ರದ ಶ್ರವಣ, ಪಠಣವನ್ನು ಮಾಡಿ. ಯಾರು ಮದುವೆಗಾಗಿ ಪ್ರಯತ್ನ ಮಾಡುತ್ತಿದ್ದೀರಿ ಅಥವಾ ದಂಪತಿ ಮಧ್ಯೆ ವಿರಸ ಇದೆ ಅಂಥವರಿಗೆ ಸಮಸ್ಯೆಯಿಂದ ಹೊರಬರುವ ಮಾರ್ಗೋಪಾಯ ಗೋಚರಿಸುತ್ತದೆ. ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7): ನಿಮ್ಮಿಂದ ಹಲವರಿಗೆ ಈ ದಿನ ಅನುಕೂಲ- ಸಹಾಯ ಒದಗಿಬರಲಿದೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ವ್ಯಕ್ತಿಯೊಬ್ಬರ ಬಳಿ ಶಿಫಾರಸು ಮಾಡಿದರೆ ತನಗೆ ಕೆಲಸ ಸಿಗುವ ಸಾಧ್ಯತೆ ಹೆಚ್ಚಿದೆ ಎಂದು ನಿಮ್ಮನ್ನು ಹುಡುಕಿಕೊಂಡು ಬಂದು ಸಹಾಯ…

Read More

‘ಎರಡನೇ ಮದುವೆ ಆಗ್ತೀನಿ’; ಖುಷಿ ಸುದ್ದಿ ಕೊಟ್ಟ ಚಂದನ್ ಶೆಟ್ಟಿ – Kannada News | Chandan Shetty Confirms Second Marriage: Plans to Remarry in 2027

ಸಂಗೀತ ಸಂಯೋಜಕ, ರ‍್ಯಾಪರ್ ಹಾಗೂ ನಟ ಚಂದನ್ ಶೆಟ್ಟಿ ಅವರು ಈ ಮೊದಲು ನಿವೇದಿತಾ ಗೌಡ ಅವರನ್ನು ಮದುವೆ ಆಗಿದ್ದರು. ಬಿಗ್ ಬಾಸ್​​ನಲ್ಲಿ ಆದ ಪರಿಚಯ ಹಸೆಮಣೆವರೆಗೆ ಇವರನ್ನು ತಂದು ನಿಲ್ಲಿಸಿತು. ಮದುವೆ ಆಗಿ ಕೆಲವೇ ವರ್ಷಗಳಲ್ಲಿ ಇವರು ಬೇರೆ ಆದರು. ಈಗ ಇಬ್ಬರೂ ತಮ್ಮ ತಮ್ಮ ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಈಗ ಚಂದನ್ ಶೆಟ್ಟಿ ಅವರು ಎರಡನೇ ಮದುವೆ ಬಗ್ಗೆ ಮಾತನಾಡಿದ್ದಾರೆ. ವಿವಾಹ ಯಾವಾಗ ಎಂಬ ವಿಷಯ ರಿವೀಲ್ ಮಾಡಿದ್ದಾರೆ. ಚಿತ್ರರಂಗದ ಸೆಲೆಬ್ರಿಟಿಗಳಲ್ಲಿ ವಿಚ್ಛೇದನ ಸಾಮಾನ್ಯ…

Read More

ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್ ಸಫಾರಿಗೆ ತೆರಳಿದ್ದವರಿಗೆ ದರ್ಶನ ಕೊಟ್ಟ ಬೃಹತ್ ವ್ಯಾಘ್ರ: ಹೆಬ್ಬುಲಿ ವಿಡಿಯೋ ಇಲ್ಲಿದೆ ನೋಡಿ – Kannada News | Tiger Sighting at BRT Wildlife Sanctuary: Majestic Tiger Spotted During Safari at K.Gudi, Chamarajanagar

ಚಾಮರಾಜನಗರ, ಮೇ 6: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಹುಲಿ ಸಂರಕ್ಷಿತ ಪ್ರದೇಶವಾದ ಬಿಳಿಗಿರಿರಂಗನ ಬೆಟ್ಟದಲ್ಲಿ (BRT) ಪ್ರವಾಸಿಗರಿಗೆ ಅದೃಷ್ಟವೋ ಎಂಬಂತೆ ಬೃಹತ್ ಗಾತ್ರದ ಹೆಬ್ಬುಲಿಯೊಂದು ದರ್ಶನ ನೀಡಿದೆ. ಯಳಂದೂರು ತಾಲೂಕಿನ ಕೆ.ಗುಡಿ ಅರಣ್ಯ ವ್ಯಾಪ್ತಿಯಲ್ಲಿ ಬೆಳ್ಳಂಬೆಳಗ್ಗೆ ಸಫಾರಿ ವಾಹನ ತೆರಳುತ್ತಿದ್ದಾಗ, ಪೊದೆಗಳ ನಡುವಿನಿಂದ ಬಂದ ಹುಲಿ ರಸ್ತೆಯಲ್ಲೇ ಕೆಲಕಾಲ ವಿಹರಿಸಿದೆ. ಪ್ರವಾಸಿಗರು ಅತಿ ಸಮೀಪದಿಂದ ಹುಲಿಯನ್ನು ಕಂಡು ಬೆರಗಾಗಿದ್ದಾರೆ. ಸಾಮಾನ್ಯವಾಗಿ ಹುಲಿಗಳು ಮನುಷ್ಯರ ವಾಹನ ಕಂಡ ತಕ್ಷಣ ಕಾಡಿನೊಳಗೆ ಓಡಿಹೋಗುತ್ತವೆ, ಆದರೆ ಈ ಹುಲಿ…

Read More

ಚಾಮರಾಜನಗರ: ಮುಳ್ಳುಹಂದಿಯ ಡೆಡ್ಲಿ ಅಟ್ಯಾಕ್​ಗೆ ಚಿರತೆ ಸಾವು! – Kannada News | Gundlupet: Porcupine Quills Kill Leopard in Ranganabetta Forest

ಚಾಮರಾಜನಗರ, ಮಾ.2: ಕಾಡಿನ ಕ್ರೂರ ಬೇಟೆಗಾರ ಚಿರತೆಯೊಂದು ತನ್ನ ಆಹಾರಕ್ಕಾಗಿ ನಡೆಸಿದ ಪ್ರಯತ್ನವೇ ಅದಕ್ಕೆ ಮುಳುವಾದ ಘಟನೆ ಗುಂಡ್ಲುಪೇಟೆ ತಾಲೂಕಿನ ರಂಗನಬೆಟ್ಟದಲ್ಲಿ ನಡೆದಿದೆ. ಕಾಡಿನಲ್ಲಿ ಪ್ರಾಣಿಗಳ ನಡುವೆ ಕಾದಾಟ ಉಂಟಾಗುವುದು ಸಹಜ, ಹುಲಿ, ಸಿಂಹ, ಚಿರತೆಗಳು ಹಾಗೂ ಆನೆಗಳ ಮೇಲೆ ಅಷ್ಟೊಂದು ಸುಲಭದಲ್ಲಿ ದಾಳಿ ಮಾಡಲು ಸಾಧ್ಯವಿಲ್ಲ. ಆದರೆ ಇದೀಗ ಚಿಕ್ಕ ಮುಳ್ಳುಹಂದಿಯೊಂದು ಚಿರತೆಯನ್ನು ಸೋಲಿಸಿ, ಕೊಂದಿದೆ. ಮುಳ್ಳುಹಂದಿಯನ್ನು ಬೇಟೆಯಾಡಲು ಹೋದ ಚಿರತೆಯು, ಹಂದಿಯ ತೀಕ್ಷ್ಣವಾದ ಮುಳ್ಳಿನೇಟಿಗೆ ಸಿಲುಕಿ ವಿಲವಿಲನೆ ಒದ್ದಾಡಿ ಪ್ರಾಣ ಬಿಟ್ಟಿದೆ. ಬಂಡೀಪುರ ಹುಲಿ…

Read More