Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಜನವರಿ 24ರ ದಿನಭವಿಷ್ಯ
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4): ದಿನವಿಡೀ ಪ್ರೊಡಕ್ಟಿವ್ ಆದಂಥ ಕೆಲಸ- ಕಾರ್ಯ, ಚಟುವಟಿಕೆಯಲ್ಲಿ ತೊಡಗಿಕೊಂಡಿರುತ್ತೀರಿ. ಸಂಬಂಧ- ಸ್ನೇಹದಲ್ಲಿ ಈ ಹಿಂದೆ ಯಾರಿಗೆ ಸಮಯ ನೀಡುವುದಕ್ಕೆ ಸಾಧ್ಯವಾಗಿಲ್ಲ ಎಂದು ನಿಮಗೆ ಅನಿಸಿರುತ್ತದೋ ಅಂಥವರ ಜತೆಗೆ ಕಾಲ ಕಳೆಯಲಿದ್ದೀರಿ. ಕೃಷಿ ಉತ್ಪನ್ನಗಳ ಮಾರ್ಕೆಟಿಂಗ್ ನಲ್ಲಿ ತೊಡಗಿಕೊಂಡಿದ್ದೀರಿ ಅಂತಾದಲ್ಲಿ ಆದಾಯದಲ್ಲಿ ಹೆಚ್ಚಳ ಆಗಲಿದೆ. ಇನ್ನು ಕೃಷಿಕರು ಕೆಲವು ಯಂತ್ರ- ಉಪಕರಣಗಳ ಖರೀದಿಗಾಗಿ ವಿಚಾರಣೆ ನಡೆಸಲಿದ್ದೀರಿ, ಅದಕ್ಕಾಗಿ ಕೊಟೇಷನ್ ಪಡೆದುಕೊಳ್ಳುವ ಸಾಧ್ಯತೆ…