ಬೆಳಗಾವಿಯಲ್ಲಿ ದಿಢೀರ್ ಆಲಿಕಲ್ಲು ಸಹಿತ ಮಳೆ ಅಬ್ಬರ: ವಾಹನ ಸವಾರರು ಪರದಾಟ

ಬೆಳಗಾವಿ, (ಮಾರ್ಚ್ 17): ಕರ್ನಾಟಕದಲ್ಲಿ (Karnataka) ಬೇಸಿಗೆಯ (Summer)  ತಾಪ ದಿನದಿಂದ ದಿನಕ್ಕೆ ಏರುತ್ತಿರುವ ಬೆನ್ನಲ್ಲೇ, ವರುಣದೇವ (Rain) ದಿಢೀರ್ ಪ್ರತ್ಯಕ್ಷನಾಗಿ ಧರೆಗೆ ತಂಪೆರೆದಿದ್ದಾನೆ. ಹೌದು… ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗುಡುಗು ಹಾಗೂ ಸಾಧಾರಣ ಮಳೆಯಾಗುತ್ತಿದ್ದು, ಬಿಸಿಲ ಬೇಗೆಯಿಂದ ತತ್ತರಿಸಿದ ಜನತೆಗೆ ವರುಣ ತಂಪೆರೆದಂತಾಗಿದೆ. ಕುಂದಾನಗರಿ ಬೆಳಗಾವಿ ಜಿಲ್ಲೆಯಲ್ಲಿ ಆಲಿಕಲ್ಲು ಮಳೆಯಾಗುತ್ತಿದೆ. ಶಿವಬಸವನಗರ, ನೆಹರು ನಗರ, ಎಸ್ ಪಿ ಕಚೇರಿ ಸುತ್ತಮುತ್ತ ಭಾರಿ ಆಲಿಕಲ್ಲು ಮಳೆಯಾಅಗುತ್ತಿದ್ದು, ಏಕಾಏಕಿ ಸುರಿದ…

Read More

ಡೆಹ್ರಾಡೂನ್‌ನ ಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ; ಯುವತಿಯರ ಗಾಯನಕ್ಕೆ ಮೆಚ್ಚುಗೆ – Kannada News | PM Narendra Modi visited Kali temple near Dehradun before inaugurating expressway

ಡೆಹ್ರಾಡೂನ್, ಏಪ್ರಿಲ್ 14: ದೆಹಲಿ, ಉತ್ತರಾಖಂಡ ಮತ್ತು ಉತ್ತರ ಪ್ರದೇಶಗಳನ್ನು ಸಂಪರ್ಕಿಸುವ ಪ್ರಮುಖ ಎಕ್ಸ್‌ಪ್ರೆಸ್‌ವೇ ಉದ್ಘಾಟನೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಡೆಹ್ರಾಡೂನ್‌ನ ಕಾಳಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ದೇಶದ ಸಮೃದ್ಧಿ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತಾ ಪ್ರಧಾನಿ ಮೋದಿ ಸುಮಾರು 15 ನಿಮಿಷಗಳ ಕಾಲ ದೇವಾಲಯದಲ್ಲಿ ಸಮಯ ಕಳೆದರು. ಪ್ರಧಾನಿ ಮೋದಿ ಭೇಟಿಗಾಗಿ ದೇವಾಲಯವನ್ನು ಹೂವುಗಳಿಂದ ಅಲಂಕರಿಸಲಾಗಿತ್ತು. ಪ್ರಧಾನಿ ಮೋದಿ ಆಗಮಿಸುತ್ತಿದ್ದಂತೆ ದೇವಾಲಯದ ಎದುರು ಯುವತಿಯರು ಅಯಿಗಿರಿ ನಂದಿನಿ ಭಕ್ತಿಗೀತೆಯನ್ನು ಹಾಡಿದರು….

Read More

ವಿಶೇಷ ಸಂಪುಟ ಸಭೆ ಅಂತ್ಯ: ಒಳ ಮೀಸಲಾತಿ ಹಂಚಿಕೆಗೆ ಕ್ರಾಂತಿಕಾರಿ ನಿರ್ಣಯ, ಯಾರಿಗೆ ಎಷ್ಟು? – Kannada News | Karnataka Cabinet Finalized SC Internal Reservation, here Is Details

ಬೆಂಗಳೂರು, (ಏಪ್ರಿಲ್ 24): ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ (SC Internal Reservation)  ಕುರಿತು ಸಿದ್ದರಾಮಯ್ಯ ಸರ್ಕಾರ ನಿರ್ಣಾಯಕ ತೀರ್ಮಾನ ಕೈಗೊಂಡಿದೆ. ಪರಿಶಿಷ್ಟ ಜಾತಿಗಳಿಗೆ ಲಭ್ಯವಿರುವ ಶೇ.15 ರಷ್ಟು ಮೀಸಲಾತಿಯಲ್ಲಿ ಸಮಾನವಾಗಿ ಹಂಚಿಕೆಗೆ ತೀರ್ಮಾನಿಸಿದೆ. ಅಂದರೆ ದಲಿತ ಎಡಗೈ 5, ಬಲಗೈ 5, ಇತರರಿಗೆ 5ರಷ್ಟು ಹಂಚಿಕೆಗೆ ನಿರ್ಧರಿಸಲಾಗಿದೆ. ಇದರೊಂದಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸುವ ಕ್ರಾಂತಿಕಾರಿ ನಿರ್ಣಯ ಕೈಗೊಂಡಿದೆ. Source link

Read More

ಎಐ ತಂತ್ರಜ್ಞಾನದ ಕುರಿತ ಕನ್ನಡ ಸಿನಿಮಾ ‘ಗರುಡ’; ಇದರಲ್ಲಿವೆ 4 ಪ್ರತ್ಯೇಕ ಕಥೆ – Kannada News | Garuda Kannada movie based on AI technology will have 4 different stories

ಎಲ್ಲ ಕ್ಷೇತ್ರಕ್ಕೂ ಈಗ ಎಐ (AI) ತಂತ್ರಜ್ಞಾನ ಕಾಲಿಡುತ್ತಿದೆ. ಈಗಾಗಲೇ ಅದು ಹಲವು ಕ್ಷೇತ್ರಗಳಲ್ಲಿ ಹೇರಳವಾಗಿ ಬಳಕೆ ಆಗುತ್ತಿದೆ. ಮುಂಬರುವ ದಿನಗಳಲ್ಲಿ ಜನರ ಮೇಲೆ ಮತ್ತು ಮಕ್ಕಳ ಮೇಲೆ ಎಐ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬ ಕುತೂಹಲ ಸಹಜ. ಎಐ ಎಂಬುದು ಜನರಿಗೆ ಮಾರಕವಾಗುತ್ತಾ ಅಥವಾ ಉಪಯೋಗ ಆಗುತ್ತಾ ಎಂಬ ವಿಷಯವನ್ನು ಇಟ್ಟುಕೊಂಡು ಕನ್ನಡದಲ್ಲಿ ‘ಗರುಡ’ (Garuda) ಸಿನಿಮಾ ತಯಾರಾಗಿದೆ. ಇತ್ತೀಚೆಗೆ ಈ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಆ ವೇಳೆ ಚಿತ್ರತಂಡದವರು ಮಾತನಾಡಿದರು….

Read More

EPF Scheme 2026: ಕಡ್ಡಾಯ ಪಿಎಫ್ ಕಡಿತ 1,800 ರೂಗೆ ಸೀಮಿತ; ಹಣ ಹಿಂಪಡೆಯುವಿಕೆ ನಿಯಮಗಳಲ್ಲಿ ಬದಲಾವಣೆ ಗಮನಿಸಿ – Kannada News | EPF scheme 2026, mandatory PF deduction limit, withdrawal limit, eligibility and other rules

ನವದೆಹಲಿ, ಜುಲೈ 2: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ದಶಕಗಳ ಹಳೆಯ 1952ರ ಇಪಿಎಫ್ ಕಾಯ್ದೆಯನ್ನು ಬದಲಾಯಿಸಿ, ಹೊಸ ‘ಇಪಿಎಫ್ ಯೋಜನೆ 2026’ (EPF Scheme 2026) ಅನ್ನು ಜಾರಿಗೆ ತಂದಿದೆ. ಸಾಮಾಜಿಕ ಭದ್ರತಾ ಸಂಹಿತೆ 2020ರ (Code on Social Security) ಅಡಿಯಲ್ಲಿ ಈ ಹೊಸ ನಿಯಮಗಳನ್ನು ರೂಪಿಸಲಾಗಿದ್ದು, ದೇಶದ ಸುಮಾರು 8 ಕೋಟಿ ಸಕ್ರಿಯ ಉದ್ಯೋಗಿಗಳಿಗೆ ಇದು ನೇರವಾಗಿ ಅನ್ವಯಿಸಲಿದೆ. ಮಹತ್ವದ ನಿಯಮ ಬದಲಾವಣೆಯಲ್ಲಿ ಕಡ್ಡಾಯ ಪಿಎಫ್ ಕಡಿತವೂ ಸೇರಿದೆ. ಕಂಪನಿಗಳು ತಮ್ಮ…

Read More

Monsoon 2026: ಕೇರಳದಿಂದಲೇ ಮಾನ್ಸೂನ್ ಭಾರತವನ್ನು ಪ್ರವೇಶಿಸುವುದೇಕೆ? – Kannada News

ನವದೆಹಲಿ, ಜೂನ್ 3: ನಾಳೆ (ಜೂನ್ 4) ಮಾನ್ಸೂನ್ (Monsoon) ಕೇರಳವನ್ನು ತಲುಪಲಿದೆ. ಇದು ಅಧಿಕೃತವಾಗಿ ಭಾರತದಲ್ಲಿ ಮಳೆಗಾಲದ ಆರಂಭವನ್ನು ಸೂಚಿಸುತ್ತದೆ. ಈಗಾಗಲೇ ದೇಶಾದ್ಯಂತ ಪೂರ್ವ ಮಾನ್ಸೂನ್ ಮಳೆ ಶುರುವಾಗಿದೆ. ಹಾಗಾದರೆ, ಮಾನ್ಸೂನ್ ಕೇರಳದಿಂದಲೇ ಭಾರತವನ್ನು ಪ್ರವೇಶಿಸಲು ಕಾರಣವೇನು? ಮಾನ್ಸೂನ್ ಮಳೆಗಾಗಿ ಒತ್ತಡವನ್ನು ಹೇಗೆ ಸೃಷ್ಟಿಸುತ್ತವೆ? ಎಂಬ ಕುರಿತು ಮಾಹಿತಿ ಇಲ್ಲಿದೆ. ಜೂನ್ 4ರಂದು ಮಾನ್ಸೂನ್ ಕೇರಳವನ್ನು ತಲುಪಲಿದೆ. ಕೇರಳವು ಅರಬ್ಬಿ ಸಮುದ್ರದ ತೀರದಲ್ಲಿದೆ. ಅರಬ್ಬಿ ಸಮುದ್ರದ ಶಾಖೆಯು ಮೊದಲು ಭಾರತದ ಪಶ್ಚಿಮ ಕರಾವಳಿಯನ್ನು ತಲುಪುತ್ತದೆ. ಆ…

Read More

ಸರ್ಕಾರದಿಂದ ನೇರ ಕಾನೂನು ಸಲಹೆ; ವಾಟ್ಸಾಪ್​ನಲ್ಲಿ ಉಚಿತ ನ್ಯಾಯಸೇತು ಚಾಟ್​ಬೋಟ್ ಸೇವೆ – Kannada News | Get free legal advice, assistance from govt supported Nyaya Setu chatbot on WhatsApp

ನವದೆಹಲಿ, ಜನವರಿ 5: ಕಾರ್ಪೊರೇಟ್, ಅಪರಾಧ, ಕುಟುಂಬ ಇತ್ಯಾದಿ ವಿವಿಧ ಕ್ಷೇತ್ರಗಳಲ್ಲಿ ಕಾನೂನು ವ್ಯಾಜ್ಯಗಳಿದ್ದಲ್ಲಿ ವಾಟ್ಸಾಪ್​ನಲ್ಲಿ ಉಚಿತವಾಗಿ ತಜ್ಞರ ಸಲಹೆ (Free legal advice) ಪಡೆಯಬಹುದು. ಇಂಥದ್ದೊಂದು ಸೇವೆಯನ್ನು ಸರ್ಕಾರವೇ ಆರಂಭಿಸಿದೆ. ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯವು (Ministry of law and justice) ವಾಟ್ಸಾಪ್​ನಲ್ಲಿ ನ್ಯಾಯ ಸೇತು (Nyaya Setu) ಎನ್ನುವ ಕಾನೂನು ಸೇವೆಯನ್ನು 2026ರ ಜನವರಿ 1ರಂದು ಆರಂಭಿಸಿದೆ. ಯಾರು ಬೇಕಾದರೂ ಇದರಿಂದ ಕಾನೂನು ಸಲಹೆಗಳನ್ನು ಪಡೆದುಕೊಳ್ಳಲು ಸಾಧ್ಯ. ಯಾವ ರೀತಿಯ ಕಾನೂನು…

Read More

ಮೋದಿ ಸಂಚರಿಸುವ ರಸ್ತೆ ಬಳಿ ಜಿಲೆಟಿನ್ ಕಡ್ಡಿ ಪತ್ತೆ: ತನಿಖೆ ಬಗ್ಗೆ ಕೇಂದ್ರ ವಲಯ ಡಿಐಜಿ ಮಾಹಿತಿ – Kannada News | Gelatin Sticks Found Near PM Modi’s Route; Central Range DGP Reveals Probe Details

ಬೆಂಗಳೂರು, ಮೇ 10: ಪ್ರಧಾನಿ ನರೇಂದ್ರ ಮೋದಿ  ಭೇಟಿ ವೇಳೆ ಬೆಂಗಳೂರಲ್ಲಿ ಭಾರೀ ಭದ್ರತಾ ಲೋಪದ ಶಂಕೆ ವ್ಯಕ್ತವಾಗಿದೆ. ಮೋದಿ ಅವರ ಕಾರ್ಯಕ್ರಮಕ್ಕೂ ಸುಮಾರು ಒಂದೂವರೆ ಗಂಟೆಗೂ ಮೊದಲು, ಕಗ್ಗಲೀಪುರದ ತಾತಗುಣಿ ಬಳಿಯ ಆರ್ಟ್ ಆಫ್ ಲಿವಿಂಗ್ ಆಶ್ರಮದ ಹೊರಗೆ ಎರಡು ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ. ನೈಸ್ ರಸ್ತೆ ಜಂಕ್ಷನ್‌ನಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ, ರಸ್ತೆಯಿಂದ 20-25 ಅಡಿ ದೂರದಲ್ಲಿರುವ ಕಾಂಪೌಂಡ್ ಬಳಿ ಅನುಮಾನಾಸ್ಪದ ಪ್ಯಾಕೆಟ್ ಒಂದನ್ನು ಕರ್ತವ್ಯ ನಿರತ ಕಾನ್‌ಸ್ಟೆಬಲ್ ಗಮನಿಸಿದ್ದಾರೆ. ಪರಿಶೀಲಿಸಿದಾಗ ಅದರಲ್ಲಿ…

Read More

ಸಿನಿಮಾ ಸೋಲಿನ ಬಳಿಕ 15 ಕೋಟಿ ರೂ. ಸಂಭಾವನೆ ಬಿಟ್ಟುಕೊಟ್ಟ ಕಾರ್ತಿಕ್ ಆರ್ಯನ್ – Kannada News | TMMTMTTM actor Kartik Aaryan rs 15 cr remuneration cut after flop

ನಟ ಕಾರ್ತಿಕ್ ಆರ್ಯನ್ (Kartik Aaryan) ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. 2025ರ ಡಿಸೆಂಬರ್​​ನಲ್ಲಿ ಅವರು ನಟಿಸಿದ ‘ತು ಮೇರಿ ಮೇ ತೇರ ಮೇ ತೇರ ತು ಮೇರಿ’ (TMMTMTTM) ಸಿನಿಮಾ ಬಿಡುಗಡೆ ಆಯಿತು. ಕಾರ್ತಿಕ್ ಆರ್ಯನ್ ಅವರಿಗೆ ಜೋಡಿಯಾಗಿ ಅನನ್ಯಾ ಪಾಂಡೆ ಅವರು ಅಭಿನಯಿಸಿದ್ದರು. ಬಾಕ್ಸ್ ಆಫೀಸ್​​ನಲ್ಲಿ ಈ ಸಿನಿಮಾ ನಿರೀಕ್ಷಿತ ಪ್ರಮಾಣದ ಕಲೆಕ್ಷನ್ ಮಾಡಲಿಲ್ಲ. ಅದರಿಂದಾಗಿ ನಿರ್ಮಾಪಕರಿಗೆ ನಷ್ಟ ಆಗಿದೆ. ಹಾಗಾಗಿ ತಮ್ಮ ಪಾಲಿನ 15 ಕೋಟಿ ರೂಪಾಯಿ ಸಂಭಾವನೆಯನ್ನು (Remuneration)…

Read More

RCBಯ ಈ ದಾಂಡಿಗ ಬೌಲರ್‌ಗಳ ಪಾಲಿನ “ಸಿಂಹಸ್ವಪ್ನ” – Kannada News | Irfan Pathan labels this RCB star as nightmare for bowlers

ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್​-19 ರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಪ್ರಚಂಡ ಪ್ರದರ್ಶನ ನೀಡುತ್ತಿದೆ. ಈ ಪ್ರದರ್ಶನದೊಂದಿಗೆ ಓರ್ವ ಬ್ಯಾಟರ್ ಮಾತ್ರ ಎದುರಾಳಿ ಬೌಲರ್‌ಗಳ ನಿದ್ದೆಗೆಡಿಸಿದ್ದಾರೆ. ಅವರು ಮತ್ಯಾರೂ ಅಲ್ಲ, ಮಧ್ಯಮ ಕ್ರಮಾಂಕದ ಸ್ಫೋಟಕ ಬ್ಯಾಟರ್ ರಜತ್ ಪಾಟಿದಾರ್. ಟೀಮ್ ಇಂಡಿಯಾದ ಮಾಜಿ ಆಟಗಾರ ಮತ್ತು ಖ್ಯಾತ ವಿಶ್ಲೇಷಕ ಇರ್ಫಾನ್ ಪಠಾಣ್, ರಜತ್ ಪಾಟಿದಾರ್ ಅವರ ವಿಸ್ಫೋಟಕ ಬ್ಯಾಟಿಂಗ್​ಗೆ ಮಾರುಹೋಗಿದ್ದಾರೆ. ಅಲ್ಲದೆ ಅವರನ್ನು ಬೌಲರ್‌ಗಳ ಪಾಲಿನ “ಸಿಂಹಸ್ವಪ್ನ” ಎಂದು ಕರೆದಿದ್ದಾರೆ. ಪಠಾಣ್ ಮೆಚ್ಚುಗೆಗೆ ಕಾರಣವೇನು?…

Read More