ಪತ್ನಿ ಜತೆ ಫೋನ್‌ನಲ್ಲಿ ಮಾತನಾಡುತ್ತಿರುವಾಗಲೇ ಸ್ಫೋಟ, ಸೌದಿಯಲ್ಲಿ ಉತ್ತರ ಪ್ರದೇಶ ಮೂಲದ ವ್ಯಕ್ತಿ ಸಾವು
ಸೌದಿ, ಮಾರ್ಚ್ 22: ಪತ್ನಿ ಜತೆ ಫೋನ್‌ನಲ್ಲಿ ಮಾತನಾಡುತ್ತಿರುವಾಗಲೇ ಸೌದಿಯಲ್ಲಿ ಇರಾನ್(Iran) ವೈಮಾನಿಕ ದಾಳಿ ನಡೆಸಿದ್ದು ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು ರವಿ ಗೋಪಾಲ್ ಎಂದು ಗುರುತಿಸಲಾಗಿದೆ. ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಬಘೈನ್ ಗ್ರಾಮದವರಾಗಿದ್ದಾರೆ. ರವಿಯ ಮೃತದೇಹವನ್ನು ಸ್ವದೇಶಕ್ಕೆ ತರಲು ಕುಟುಂಬವು ಹೆಣಗಾಡುತ್ತಿದ್ದು, ಅಧಿಕಾರಿಗಳು ಇಲ್ಲಿಯವರೆಗೆ ಮೌನವಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಮಾರ್ಚ್ 18ರ ರಾತ್ರಿ, ಕಾರ್ಖಾನೆಯಲ್ಲಿ ಕೆಲಸ ಮುಗಿಸಿದ ನಂತರ, ರವಿ ತನ್ನ ಪತ್ನಿ ರಿತು ಜೊತೆ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ, ಹಠಾತ್ ಸ್ಫೋಟ…