ಮನೆಗೆ ಬೀಗ ಜಡಿದ ಖಾಸಗಿ ಫೈನಾನ್ಸ್: ವಾರದಿಂದ ಬೀದಿ ಬದಿಯೇ ವೃದ್ಧ ದಂಪತಿ ವಾಸ! – Kannada News | Elderly Couple Left on the Street After Home Locked by Private Finance in Hassan
ಹಾಸನ, ಜನವರಿ 18: ರಾಜ್ಯದಲ್ಲಿ ಖಾಸಗಿ ಫೈನಾನ್ಸ್ಗಳ ಹಾವಳಿ ಮಿತಿ ಮೀರುತ್ತಿದ್ದು, ಮನೆಗೆ ಬೀಗ ಜಡಿದ ಪರಿಣಾಮ ವೃದ್ಧ ದಂಪತಿ ಬೀದಿಗೆ ಬಂದ ಅಮಾನವೀಯ ಘಟನೆ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕೊರಟಕೆರೆ ಗ್ರಾಮದಲ್ಲಿ ನಡೆದಿದೆ. ಸಾಲ ಕಟ್ಟಿಲ್ಲ ಎಂದು ವೃದ್ಧ ದಂಪತಿ ಸಣ್ಣಯ್ಯ(80), ಜಯಮ್ಮ(75)ರನ್ನ ಫೈನಾನ್ಸ್ ಸಿಬಂದಿ ಹೊರಹಾಕಿದ್ದು, ಕೊರೆಯುವ ಚಳಿಯಲ್ಲೇ ಬೀದಿಯಲ್ಲಿ ವಾಸಮಾಡಬೇಕಾದ ಸ್ಥಿತಿ ಉದ್ಭವಿಸಿದೆ. ಕೋರ್ಟ್ ಆದೇಶ ಎಂದು ಮನೆ ಹಾಗೂ ಕೊಟ್ಟಿಗೆಗೂ ಬೀಗ ಹಾಕಿರುವ ಆರೋಪ ಕೇಳಿಬಂದಿದೆ. 2023ರಲ್ಲಿ ಮಗನ ಕ್ಯಾನ್ಸರ್…