ಬೆಂಗಳೂರು: ಸೈರನ್​ನಿಂದ ತಪ್ಪಿತು ಕೆನರಾ ಬ್ಯಾಂಕ್ ಕಳ್ಳತನ ಯತ್ನ! – Kannada News | Burglary Attempt Foiled by Alarm at Canara Bank in Bengaluru’s Seshadripuram

ಬೆಂಗಳೂರು, ಫೆಬ್ರವರಿ 24: ಬೆಂಗಳೂರಿನ ಶೇಷಾದ್ರಿಪುರಂ ಮುಖ್ಯ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್‌ನಲ್ಲಿ ಕಳ್ಳತನ ಯತ್ನ ವಿಫಲವಾಗಿದೆ. ಭಾನುವಾರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಕಳ್ಳರು ಬ್ಯಾಂಕ್‌ನ ಎಡಭಾಗದಲ್ಲಿದ್ದ ಕಿಟಕಿ ಗ್ರಿಲ್ ಮುರಿದು ಒಳನುಗ್ಗಿದ್ದಾರೆ. ಬ್ಯಾಂಕ್‌ನೊಳಗಡೆ ಪ್ರವೇಶಿಸಿದ ಆರೋಪಿ ಸಿಸಿಟಿವಿ ವೈರ್‌ಗಳನ್ನು ಕತ್ತರಿಸಲು ಪ್ರಯತ್ನಿಸಿದಾಗ ಅಲಾರಾಂ ಮೊಳಗಿದೆ. ಅಲಾರಾಂ ಶಬ್ದ ಕೇಳಿದ ತಕ್ಷಣ ಕಳ್ಳ ಗಾಬರಿಯಾಗಿ ಬಂದ ದಾರಿಯಲ್ಲೇ ಪರಾರಿಯಾಗಿದ್ದಾನೆ. ಬ್ಯಾಂಕ್‌ನ ಭದ್ರತಾ ಸಿಬ್ಬಂದಿ ಅಲಾರಾಂ ಮೊಳಗಿದಾಗ ಪರಿಶೀಲಿಸಿದ್ದರೂ, ಕಿಟಕಿಯ ಬಳಿ ಹೋಗಿ ನೋಡದೆ ನಿರ್ಲಕ್ಷಿಸಿದ್ದಾರೆ. ಬೆಳಗ್ಗೆ ಬ್ಯಾಂಕ್…

Read More

ಚಿನ್ನಸ್ವಾಮಿಯಲ್ಲಿ IPL ಪಂದ್ಯಗಳಿಗೆ ಗೃಹ ಇಲಾಖೆ ಗ್ರೀನ್‌ಸಿಗ್ನಲ್‌: ತವರಿಗೆ ಮರಳುತ್ತಾ ಆರ್​ಸಿಬಿ? – Kannada News | Karnataka Home Department Grants Permission for International and IPL Matches at Bangaluru Chinnaswamy Stadium

ಬೆಂಗಳೂರು, ಜನವರಿ 17: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ಪ್ರಕರಣ ಬಳಿಕ ಚಿನ್ನಸ್ವಾಮಿಯಲ್ಲಿ ಆರ್​ಸಿಬಿ ಮ್ಯಾಚ್‌ಗಳು ನಡೆಯುವುದು ಡೌಟು ಎನ್ನಲಾಗುತ್ತಿತ್ತು. ಆದರೆ ಕರ್ನಾಟಕ ಗೃಹ ಇಲಾಖೆಯು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ನಡೆಸಲು ಅನುಮತಿ ನೀಡಿದೆ. ಆ ಮೂಲಕ ಆರ್​​ಸಿಬಿ ಅಭಿಮಾನಿಗಳಿಗೆ ಗುಡ್​ನ್ಯೂಸ್ ಸಿಕ್ಕಿದೆ. ಎನ್. ಕುನ್ನಾ ಸಮಿತಿಯು ನೀಡಿದ ಭದ್ರತೆ ಸೇರಿದಂತೆ ಹಲವು ಷರತ್ತುಗಳನ್ನು ಕೆಎಸ್‌ಸಿಎ ಪೂರೈಸಿದ ನಂತರವಷ್ಟೇ ಅಂತಿಮ ಅನುಮತಿ ನೀಡಲಾಗುವುದು ಎಂದು ಗೃಹ ಇಲಾಖೆ ತಿಳಿಸಿತ್ತು. ಈ…

Read More

Exam Success Tips: ಮಕ್ಕಳ ಪರೀಕ್ಷಾ ಒತ್ತಡ ನಿವಾರಣೆಗೆ ಪೋಷಕರು ಮಾಡಬೇಕಾದ್ದು ಏನು?

ಖ್ಯಾತ ಶಿಕ್ಷಣ ತಜ್ಞರಾದ ಡಾ.ಗುರುರಾಜ ಕರ್ಜಗಿ ಯವರು ಟಿವಿ9ನ ವಿಶೇಷ ಪಾಡ್‌ಕಾಸ್ಟ್‌ನಲ್ಲಿ ಮಕ್ಕಳ ಪರೀಕ್ಷಾ ಒತ್ತಡ ನಿವಾರಣೆಗೆ ಪೋಷಕರು ಮಾಡಬೇಕಾಗಿರುವುದು ಏನು ಎಂಬುದರ ಕುರಿತು ಮಾಹಿತಿ ನೀಡಿದ್ದಾರೆ. ಪರೀಕ್ಷೆ ಎನ್ನುವುದು ಮಕ್ಕಳ ಜೀವನದ ಒಂದು ಅವಿಭಾಜ್ಯ ಅಂಗ. ಆದರೆ, ಪರೀಕ್ಷಾ ಸಮಯದಲ್ಲಿ ಪೋಷಕರು ತಮ್ಮ ಮಕ್ಕಳ ಮೇಲೆ ಒತ್ತಡ ಹಾಕುವುದನ್ನು ನಿಲ್ಲಿಸಬೇಕು. ಮಾನಸಿಕ ಒತ್ತಡವು ಓದಿದ ವಿಷಯಗಳನ್ನು ನೆನಪಿಸಿಕೊಳ್ಳಲು ಅಡ್ಡಿಪಡಿಸುತ್ತದೆ. ಧ್ಯಾನ ಮತ್ತು ಪ್ರಾಣಾಯಾಮವು ಮನಸ್ಸಿನ ವಿಶ್ರಾಂತಿಗೆ ಉತ್ತಮ ಮಾರ್ಗವಾಗಿದೆ. ಪೋಷಕರು ಮಕ್ಕಳ ಜೊತೆ ಕುಳಿತುಕೊಳ್ಳಿ, ಆದರೆ…

Read More

World Sleep Day 2026: ಆಹಾರ, ವ್ಯಾಯಾಮದಷ್ಟೇ ಉತ್ತಮ ನಿದ್ರೆಯೂ ನಮ್ಮ ಆರೋಗ್ಯಕ್ಕೆ ಅತ್ಯಗತ್ಯ

ನಮ್ಮ ಆರೋಗ್ಯಕ್ಕೆ ಊಟ, ನೀರು, ವ್ಯಾಯಾಮ ಎಷ್ಟು ಮುಖ್ಯವೋ ಅದೇ ರೀತಿ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸರಿಯಾದ ನಿದ್ರೆಯೂ (Sleep) ಅಷ್ಟೇ ಮುಖ್ಯ. ಆದ್ರೆ ಇಂದಿನ ಈ ಸ್ಮಾರ್ಟ್‌ ಫೋನ್‌ ಯುಗದಲ್ಲಿ ಜನ ಸರಿಯಾಗಿ ನಿದ್ರೆ ಮಾಡುತ್ತಿಲ್ಲ, ಇಡೀ ದಿನ ಮೊಬೈಲ್‌ ಫೋನ್‌ ನೋಡುತ್ತಾ ಸಮಯ ಕಳೆಯುತ್ತಾರೆ. ಹೀಗೆ ಸರಿಯಾಗಿ ನಿದ್ರೆ ಮಾಡದಿದ್ದರೆ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ನಿದ್ರೆಯ ಮಹತ್ವವನ್ನು ತಿಳಿಸಲು ಮತ್ತು ಉತ್ತಮ ನಿದ್ರೆ ಪಡೆಯುವುದು ಏಕೆ ಮುಖ್ಯ ಎಂಬುದರ ಕುರಿತು…

Read More

RCB vs GT Playing XI: ಫಿಲ್ ಸಾಲ್ಟ್​ಗೆ ಇಂಜುರಿ; ಬೆಥೆಲ್​ಗೆ ಮೊದಲ ಅವಕಾಶ – Kannada News | RCB vs GT Playing XI Royal Challengers Bengaluru vs Gujarat Titans Today IPL 2026 match Confirmed playing 11 details with name in Kannada

ಐಪಿಎಲ್ 2026 (IPL 2026) ರ 34ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ತಂಡ, ಗುಜರಾತ್ ಟೈಟಾನ್ಸ್ (RCB vs GT) ತಂಡವನ್ನು ಎದುರಿಸಿದೆ. ಈ ಆವೃತ್ತಿಯಲ್ಲಿ ಉಭಯ ತಂಡಗಳ ಮೊದಲ ಮುಖಾಮುಖಿ ಇದಾಗಿದೆ. ಹಾಗೆಯೇ ಆರ್​ಸಿಬಿ ತನ್ನ ಮೊದಲ ತವರು ನೆಲವಾದ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಕೊನೆಯ ಲೀಗ್ ಪಂದ್ಯವನ್ನು ಆಡುತ್ತಿದೆ. ಹೀಗಾಗಿ ಈ ಪಂದ್ಯ ಆರ್​​ಸಿಬಿ ಅಭಿಮಾನಿಗಳಿಗೆ ಬಹಳಷ್ಟು ವಿಶೇಷವಾಗಿದೆ. ವಾಸ್ತವವಾಗಿ ಆರ್​ಸಿಬಿ ಈ ಆವೃತ್ತಿಯಲ್ಲಿ ಎರಡು ತವರು ಮೈದಾನಗಳನ್ನು ಆಯ್ಕೆ…

Read More

ಜಿಟಿ ದೇವೇಗೌಡಗೆ ಬಿಗ್ ಶಾಕ್: ಸ್ವಪಕ್ಷದ ಶಾಸಕರನ್ನ ದೂರವಿಟ್ಟು ಜೆಡಿಎಸ್​​ ಸಮಾವೇಶ – Kannada News | Mysuru: Big Shock for GT Deve Gowda: JDS Convention keeps away MLAs from own party

ಮೈಸೂರು, ಮೇ 17: ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ, ಮಾಜಿ ಸಚಿವ ಜಿ.ಟಿ.ದೇವೇಗೌಡರ ತವರು ಅಂಗಳದಲ್ಲೇ ಇದೀಗ ದಳಪತಿಗಳು ಜನತಾದಳ ಸಮಾವೇಶ ಆಯೋಜಿಸಿದ್ದಾರೆ. ವಿಶೇಷವೆಂದರೆ, ಸಮಾವೇಶದಲ್ಲಿ ಶಾಸಕ ಜಿ.ಟಿ. ದೇವೇಗೌಡ ದೂರು ಉಳಿದಿದ್ದರೆ ಅವರ ಪುತ್ರ ಜಿ.ಟಿ. ಹರೀಶ್ ಗೌಡ ಮುಂದಾಳತ್ವದಲ್ಲಿ ಕಾರ್ಯಕ್ರಮ ನಡೆದಿದೆ. ಇನ್ನು ಸಮಾವೇಶದ ಬ್ಯಾನರ್‌ಗಳು ಮತ್ತು ಕಟೌಟ್‌ಗಳಲ್ಲಿ ಜಿ.ಟಿ. ದೇವೇಗೌಡ ಫೋಟೋಗೆ ಕೊಕ್​ ನೀಡಲಾಗಿದೆ. ಪಕ್ಷದಿಂದ ದೂರವಿದ್ದರೂ ಇತ್ತೀಚೆಗಷ್ಟೇ ಜಿ.ಟಿ.ದೇವೇಗೌಡ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರನ್ನು ಭೇಟಿ ಮಾಡಿದ್ದರು. ಆದರೆ,…

Read More

ಕರ್ನಾಟಕ ಹವಾಮಾನ ವರದಿ: ಮುಂದಿನ 3 ದಿನ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆಯ ಮುನ್ಸೂಚನೆ – Kannada News | Karnataka Weather Forecast: IMD Predicts Thunderstorms, Heavy Rain for Bengaluru, South Interior Districts for 3 Days

ಬೆಂಗಳೂರು, ಮೇ 2: ಕರ್ನಾಟಕದ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಗುಡುಗು, ಮಿಂಚು ಹಾಗೂ ಬಲವಾದ ಗಾಳಿ ಸಹಿತ ಮಳೆಯಾಗುವ (Weather Forecast) ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮುನ್ಸೂಚನೆ ನೀಡಿವೆ. ಮುನ್ಸೂಚನೆಯ ಮುಖ್ಯಾಂಶಗಳು ದಕ್ಷಿಣ ಒಳನಾಡು ಹವಾಮಾನ: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ಮತ್ತು ರಾಮನಗರ ಜಿಲ್ಲೆಗಳಲ್ಲಿ ಮೇ…

Read More

ಈ ರಾಶಿಯವರಿಗೆ ವಿದೇಶದಲ್ಲಿ ಉದ್ಯೋಗ ಸಿಗುವ ಭಾಗ್ಯ: ಹೊಸ ಜವಾಬ್ದಾರಿ ಖಂಡಿತ

ಮಾರ್ಚ್ 15ರಿಂದ 21ರವರೆಗೆ ಮೂರನೇ ವಾರ. ಉದ್ಯೋಗಸ್ಥರಿಗೆ ವಿದೇಶ ಪ್ರವಾಸ ಆಸೆ ಅಧಿಕ, ಕಿರಿಕಿರಿ ಕೆಲವರಿಗೆ, ಒತ್ತಡದ ಸುಧಾರಣೆಗೆ ಪ್ರಯತ್ನ ಇವೆಲ್ಲ ಬೇಕಾಗುವುದು. ಅಂತರಿಕ ಕಲಹ ಶಮನವಾಗಲಿದೆ. ​ ಮೇಷ: ಉದ್ಯೋಗದಲ್ಲಿ ಸ್ಥಿರತೆ ಇರಲಿದೆ. ಹೊಸ ಜವಾಬ್ದಾರಿಗಳು ಉನ್ನತ ಸ್ಥಾನಕ್ಕೆ ದಾರಿಯಾಗಲಿವೆ. ಉದ್ಯಮ ಸ್ಥಾಪನೆಗೆ ಇದು ಸಕಾಲ. ವೃತ್ತಿ ನಿಮಿತ್ತ ಕಿರು ಪ್ರಯಾಣ ಸಂಭವಿಸುವುದು. ಹಿರಿಯ ಅಧಿಕಾರಿಗಳ ಬೆಂಬಲ ಸಿಗಲಿದೆ. ​ವೃಷಭ: ವೃತ್ತಿ ಬದಲಾವಣೆಗೆ ಪ್ರಯತ್ನಿಸುತ್ತಿದ್ದರೆ ಯಶಸ್ಸು ಸಿಗಲಿದೆ. ವಿದೇಶಿ ಕಂಪನಿಗಳಲ್ಲಿ ಉದ್ಯೋಗಾವಕಾಶ ಅಥವಾ ಉದ್ಯೋಗದ ಕಾರಣ…

Read More

ಮಾರ್ಚ್ 19ಕ್ಕೆ ‘ಟಾಕ್ಸಿಕ್’ ಬದಲು ರಿಲೀಸ್ ಆಗಲಿದೆ ‘ಲವ್ ಮಾಕ್ಟೇಲ್ 3’ ಸಿನಿಮಾ – Kannada News | Love Mocktail 3 movie will release on March 19 after Toxic film postponed

ಮಾರ್ಚ್ 19ರಂದು ‘ಟಾಕ್ಸಿಕ್’ (Toxic) ಸಿನಿಮಾ ನೋಡಲು ಸಿನಿಪ್ರಿಯರು ಕಾದಿದ್ದರು. ಆದರೆ ಕಾರಣಾಂತರಗಳಿಂದ ಆ ಸಿನಿಮಾದ ರಿಲೀಸ್ ದಿನಾಂಕವನ್ನು ಮುಂದೂಡಲಾಗಿದೆ. ಈಗ ‘ರಾಕಿಂಗ್ ಸ್ಟಾರ್’ ಯಶ್ ನಟನೆಯ ‘ಟಾಕ್ಸಿಕ್’ ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗುತ್ತಲೇ, ಆ ದಿನಾಂಕದಲ್ಲಿ ‘ಲವ್ ಮಾಕ್ಟೇಲ್ 3’ (Love Mocktail 3) ಸಿನಿಮಾವನ್ನು ಬಿಡುಗಡೆ ಮಾಡಲು ಡಾರ್ಲಿಂಗ್ ಕೃಷ್ಣ ಸಜ್ಜಾಗಿದ್ದಾರೆ. ಆ ಮೂಲಕ ಅವರು ಅಭಿಮಾನಿಗಳಿಗೆ ಗುಡ್​ ನ್ಯೂಸ್ ನೀಡಿದ್ದಾರೆ. ಯುಗಾದಿಯ ರಜೆ, ಅದರ ಬೆನ್ನಲ್ಲಿಯೇ ಶುರುವಾಗುವ ವೀಕೆಂಡ್ ಸೇರಿದಂತೆ ಮಾರ್ಚ್…

Read More