Headlines

ಸತೀಶ್​​ ಜಾರಕಿಹೊಳಿ ಕೈತಪ್ಪಿತಾ ಕೆಪಿಸಿಸಿ ಅಧ್ಯಕ್ಷ ಸ್ಥಾನ? ಬಿ.ಕೆ. ಹರಿಪ್ರಸಾದ್​​ಗೆ ಒಲಿದ ಅದೃಷ್ಟ? – Kannada News

ಶಾಸಕ ಸತೀಶ್​​ ಜಾರಕಿಹೊಳಿ ಕೈತಪ್ಪಿತಾ ಕೆಪಿಸಿಸಿ ಅಧ್ಯಕ್ಷ ಸ್ಥಾನ?Image Credit source: deccanherald ಬೆಂಗಳೂರು, ಜೂನ್​​ 03: ಡಿಸಿಎಂ, ಮಂತ್ರಿ ಸ್ಥಾನ ಸೇರಿ ಕೆಪಿಸಿಸಿ (KPCC) ಅಧ್ಯಕ್ಷಗಿರಿಗೂ ರಾಜ್ಯ ಕಾಂಗ್ರೆಸ್ (Congress)​​ ಪಾಳಯದಲ್ಲಿ ತೀವ್ರ ವೈಪೋಟಿ ನಡೆದಿತ್ತು. ಆದರೆ ಅದಕ್ಕೀಗ ತೆರೆಬಿದ್ದಿದೆ. ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್‌ಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಫಿಕ್ಸ್​​ ಎನ್ನಲಾಗಿದ್ದು, ಮಂತ್ರಿ ಸ್ಥಾನದ ಜೊತೆ ಪಕ್ಷದ ಜವಾಬ್ದಾರಿ ಕೇಳಿದ್ದ ಸತೀಶ್ ಜಾರಕಿಹೊಳಿಗೆ ಭಾರಿ ನಿರಾಸೆಯಾಗಿದೆ. ಕೆಪಿಸಿಸಿ ಅಧ್ಯಕ್ಷರ ಹುದ್ದೆ ವಹಿಸಿಕೊಳ್ಳುವಂತೆ ಹೈಕಮಾಂಡ್ ನಾಯಕರಿಂದಲೇ ಬಿ.ಕೆ….

Read More

ಲ್ಯಾಂಬೋರ್ಗಿನಿ ಕಾರಿನ ಕಳ್ಳಾಟ ಬಟಾಬಯಲು: ಮುತ್ತಪ್ಪ ರೈ ಪುತ್ರನಿಗೆ ಮತ್ತೊಂದು ಸಂಕಷ್ಟ

ಬೆಂಗಳೂರು, (ಮಾರ್ಚ್ 27): ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ (Rikki Rai) ಮತ್ತೊಂದು ಸಂಕಷ್ಟ ಎದುರಾಗಿದೆ. ಈಗಾಗಲೇ ಕಾರು ಡ್ರಿಫ್ಟಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ರಿಕ್ಕಿ ವಿರುದ್ಧ ಇದೀಗ ಹೊಸ ಮತ್ತೊಂದು ವಂಚನೆ ಕೇಸ್ ದಾಖಲಾಗಿದೆ. ಹೌದು…ಬೆಂಗಳೂರಿನ ಎಂ.ಜಿ.ರಸ್ತೆಯ ಅನಿಲ್ ಕುಂಬ್ಳೆ ಸರ್ಕಲ್ ಬಳಿ ಡ್ರಿಫ್ಟಿಂಗ್ ಮಾಡಿದ್ದ  ಲ್ಯಾಂಬೋರ್ಗಿನಿ ಕಾರನ್ನ  ರಿಜಿಸ್ಟರ್ ಮಾಡಿಸಿಲ್ಲ ಎನ್ನುವುದು ಬೆಳಕಿಗೆ ಬಂದಿದೆ.  ದೆಹಲಿಯಲ್ಲಿ ಖರೀದಿಸಿದ್ದ  ಸುಮಾರು ಕೋಟಿ ಮೌಲ್ಯದ ಲ್ಯಾಂಬೋರ್ಗಿನಿ ಕಾರು ಕರ್ನಾಟಕದಲ್ಲಿ ರಿಜಿಸ್ಟರ್ ಮಾಡಿಸಿಲ್ಲ. ಹಾಗೇ RTO…

Read More

ಸಿಎಂ ಆದ ಬಳಿಕ ಡಿಕೆ ಶಿವಕುಮಾರ್ ಬಂಪರ್ ಘೋಷಣೆ: ವಿದ್ಯಾರ್ಥಿಗಳಿಗೆ ಬಸ್ ಪಾಸ್ ಫ್ರೀ! – Kannada News

ಬೆಂಗಳೂರು, (ಜೂನ್ 03): ಡಿಕೆ ಶಿವಕುಮಾರ್ (DK Shivakumar)  ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಮೊದಲ ಸಚಿವ ಸಂಪುಟ ನಡೆಸಿದ್ದು, ವಿದ್ಯಾರ್ಥಿಗಳಿಗೆ ಬಸ್ ಪಾಸ್ ಫ್ರೀ  ಘೋಷಣೆ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆಶಿ,  ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಫ್ರೀ ಬಸ್​ ಪಾಸ್​ ನೀಡಲಾಗುವುದು ಎಂದು ಘೋಷಿಸಿದರು.  ಇದರೊಂದಿಗೆ ಬೇರೆ ಊರಿಗೆ ಹೋಗಿ ವ್ಯಾಸಂಗ ಮಾಡುವ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಸಂಪುಟ ಸಭೆ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿಕೆ ಶಿವಕುಮಾರ್ಶು ಭ ಗಳಿಗೆ,…

Read More

ಯೂನಿಫಾರಂ ಇದೆ ಎಂದು ಏನು ಬೇಕಾದ್ರೂ ಮಾಡುತ್ತೀರಾ? ಆರೋಪಿ ತಮ್ಮನನ್ನು ಬಂಧಿಸಿದ ಪೊಲೀಸರಿಗೆ ಹೈಕೋರ್ಟ್ ತರಾಟೆ – Kannada News | Karnataka High Court Takes dig at Chitradurga Police Over Arrested Accused Brother

ಕರ್ನಾಟಕ ಹೈಕೋರ್ಟ್​​Image Credit source: Getty Images ಬೆಂಗಳೂರು/ಚಿತ್ರದುರ್ಗ, (ಜೂನ್ 25): ಮದುವೆಯಾಗುವುದಾಗಿ ನಂಬಿಸಿ ಮಹಿಳೆಗೆ ವಂಚಿಸಿದ ಆರೋಪ ಎದುರಿಸುತ್ತಿದ್ದ ಪ್ರೊಬೇಷನರಿ ಸಬ್ಇನ್ಸ್‌ಪೆಕ್ಟರ್‌ವೊಬ್ಬರ ಸಹೋದರನನ್ನು ಬಂಧಿಸಿದ್ದ ಚಿತ್ರದುರ್ಗ (Chitradruga) ಮಹಿಳಾ ಠಾಣೆ ಪೊಲೀಸರ ಕ್ರಮವನ್ನು ಹೈಕೋರ್ಟ್‌ (Karnataka High Court) ಖಂಡಿಸಿದ್ದು, ತರಾಟೆಗೆ ತೆಗೆದುಕೊಂಡಿದೆ. ಆರೋಪಿಯ ಸಹೋದರನ ಬಂಧನ ಪ್ರಶ್ನಿಸಿ ಕುಟುಂಬಸ್ಥರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ, ಪ್ರಕರಣದಲ್ಲಿ ಆರೋಪಿ ತಮ್ಮನ ತಪ್ಪಿಲ್ಲದಿದ್ದರೂ ಬಂಧಿಸಿರುವುದೇಕೆ? ವಿನಾಕಾರಣ ಬಂಧಿಸುವುದು ಪೊಲೀಸರಿಗೆ ಆಟವಾಗಿದೆ….

Read More

Bangalore Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಡಿಸೆಂಬರ್ 26ಕ್ಕೆ ಪವರ್ ಕಟ್ – Kannada News | Bangalore Power Cut on December 26: Electricity Outage in These Areas Due to BESCOM Maintenance

ಬೆಂಗಳೂರು, ಡಿಸೆಂಬರ್ 25: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ವ್ಯಾಪ್ತಿಯಲ್ಲಿ ಡಿಸೆಂಬರ್ 26, 2025ರಂದು ವಿದ್ಯುತ್ ವ್ಯತ್ಯಯ (Power Cut) ಉಂಟಾಗಲಿದೆ. 66/11 ಕೆವಿ ಕಗ್ಗೇನಹಳ್ಳಿ ಸಬ್‌ಸ್ಟೇಷನ್ ಕೇಬಲ್ ನಿರ್ವಹಣಾ ಕಾರ್ಯ ಹಿನ್ನೆಲೆಯಲ್ಲಿ ಈ ವಿದ್ಯುತ್ ವ್ಯತ್ಯಯ ಸಂಭವಿಸಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಜತೆಗೆ, ಎಕ್ಸ್​ ಸಂದೇಶದ ಮೂಲಕವೂ ಮಾಹಿತಿ ನೀಡಿದೆ. ಎಷ್ಟು ಗಂಟೆಯಿಂದ ಎಷ್ಟು ಗಂಟೆ ವರೆಗೆ ಪವರ್ ಕಟ್? ಬೆಸ್ಕಾಂ ಪ್ರಕಟಣೆಯಲ್ಲಿ ನೀಡಿದ ಮಾಹಿತಿ ಪ್ರಕಾರ, ಡಿಸೆಂಬರ್ 26ರಂದು ಬೆಳಗ್ಗೆ 11…

Read More

ದಾವಣಗೆರೆ ಬೈ ಎಲೆಕ್ಷನ್: ಬಿಜೆಪಿ ಮನೆಯೊಂದು 3 ಬಾಗಿಲು, ಕಾಂಗ್ರೆಸ್​​​​ ಮನೆಯೊಂದು ಎರಡು ಬಾಗಿಲು

ದಾವಣಗೆರೆ, (ಮಾರ್ಚ್ 13): ಜಿಲ್ಲೆಯಲ್ಲಿ ಭಿನ್ನಾಭಿಪ್ರಾಯ ಸರಿಪಡಿಸಲು ಹೋರಾಡುತ್ತಿರುವ ಬಿಜೆಪಿ (BJP) ಈಗ ಉಪಚುನಾವಣೆಯನ್ನು (Davanagere South By Election)  ಗೆದ್ದು ಕೊಳ್ಳುವ ನೆಪದಲ್ಲಾದರೂ ಭಿನ್ನಮತಕ್ಕೆ ಕೊನೆ ಹಾಡಲು ಸರ್ಕಸ್ ಮುಂದುವರಿಸಿದೆ. ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯ ಜೊತೆಗೆ ಎರಡೂ ಬಣಗಳನ್ನು ಕೂರಿಸಿ ಚರ್ಚೆ ನಡೆಸಲಾಗಿದೆ. ಇನ್ನು ಕಾಂಗ್ರೆಸ್​​​ನಲ್ಲೂ (Congress) ಸಹ ಅಭ್ಯರ್ಥಿ ಆಯ್ಕೆಯಲ್ಲಿ ಮುಸುಕಿನ ಗುದ್ದಾಟಗಳು ನಡೆಯುತ್ತಿವೆ. ಸಚಿವರಾದ ಜಮೀರ್ ಅಹಮ್ಮದ್ ಖಾನ್, ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದರೆ ಇನ್ನೊಂದೆಡೆ ಎಸ್​​ಎಸ್​ ಮಲ್ಲಿಕಾರ್ಜುನ ಇದಕ್ಕೆ…

Read More

ಪತಿಯ ಎದುರೇ ಸಮಂತಾಗೆ ಪ್ರಪೋಸ್ ಮಾಡಿದ ಅಭಿಮಾನಿ; ರಾಜ್ ರಿಯಾಕ್ಷನ್ ಏನು? – Kannada News | Fan Proposed Samantha Ruth Prabhu in Front Of Her Husband Raj Nidhimoru

ಸಮಂತಾ ಅಭಿನಯದ ‘ಮಾ ಇಂಟಿ ಬಂಗಾರಂ’ ಸಿನಿಮಾದ ಕಾರ್ಯಕ್ರಮದ ವೇಳೆ ಫನ್ ಘಟನೆ ನಡೆದಿದೆ. ಕಾರ್ಯಕ್ರಮಕ್ಕೆ ಬಂದಿದ್ದ ಅಭಿಮಾನಿಯೊಬ್ಬ ದಿಢೀರನೆ ವೇದಿಕೆ ಏರಿದ್ದಾನೆ. ನೇರವಾಗಿ ಸಮಂತಾ ಅವರ ಬಳಿ ಬಂದು ಮಂಡಿಯೂರಿ ನಿಂತು, ಕೈಯಲ್ಲಿದ್ದ ಹೂವಿನ ಗುಚ್ಛವನ್ನು ನೀಡಿ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾನೆ. ಅಭಿಮಾನಿ ಪ್ರಪೋಸ್ ಮಾಡುವಾಗ ಸಮಂತಾ ಪಕ್ಕದಲ್ಲೇ ಅವರ ಪತಿ ರಾಜ್ ನಿದಿಮೋರು ಕುಳಿತಿದ್ದರು. ಈ ಇಡೀ ಪ್ರಸಂಗವನ್ನು ಕಂಡು ಪತಿ ರಾಜ್ ಸೇರಿದಂತೆ ವೇದಿಕೆ ಮೇಲಿದ್ದ ಉಳಿದ ಕಲಾವಿದರು ನಕ್ಕಿದ್ದಾರೆ. ಅಭಿಮಾನಿಯ ಈ…

Read More

ಮುಂಗಾರು ಬಿತ್ತನೆಗೆ ಮುನ್ನ ರೈತರಿಗೆ ಖುಷಿ ಸುದ್ದಿ, ಯೂರಿಯಾ ಬೆಲೆ ಅರ್ಧಕರ್ಧ ಕುಸಿತ – Kannada News

ಯೂರಿಯಾ ಎರಚುತ್ತಿರುವ ರೈತImage Credit source: Getty Images ನವದೆಹಲಿ, ಜೂನ್ 11: ಭಾರತದ ರೈತರಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ದೊಡ್ಡ ನಿರಾಳತೆ ನೀಡುವ ಸುದ್ದಿಯೊಂದರ ಪ್ರಕಾರ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಯೂರಿಯಾ ಗೊಬ್ಬರದ (Urea fertilizer) ಆಮದು ಬೆಲೆ ಭಾರಿ ಪ್ರಮಾಣದಲ್ಲಿ ಕುಸಿದಿದೆ. ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ರಸಗೊಬ್ಬರ ಸಂಸ್ಥೆ (‘NFL’ – ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್) ಇತ್ತೀಚೆಗೆ ಆಯೋಜಿಸಿದ್ದ ಜಾಗತಿಕ ಟೆಂಡರ್‌ನಲ್ಲಿ ಯೂರಿಯಾ ಬೆಲೆ ಗಣನೀಯವಾಗಿ ಇಳಿಕೆಯಾಗಿರುವುದು ಕಂಡುಬಂದಿದೆ. ಎನ್‌ಎಫ್‌ಎಲ್ ನಡೆಸಿದ 1.7 ಮಿಲಿಯನ್ ಟನ್…

Read More