Headlines

ವರದಾ-ಬೇಡ್ತಿ ನದಿ ಪ್ರಾಜೆಕ್ಟ್ ಖಂಡಿಸಿ ಬೃಹತ್ ಪ್ರತಿಭಟನೆ: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್ – Kannada News | Uttara Kannada All Political Party Leaders opposes to bedti varada river linking project at Sirsi rally

ಶಿರಸಿ, (ಜನವರಿ 11) : ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿ ಹರಿಯುವ ಅಘನಾಶಿನಿ-ಬೇಡ್ತಿ ನದಿ ತಿರುವು ಮಾಡಲು ಸರ್ಕಾರ ಮುಂದಾಗಿದೆ. ಈ ಯೋಜನೆಗಳು ಇಡೀ ಜಿಲ್ಲೆಗೆ ಮಾರಕ ಎಂದು ಜಿಲ್ಲೆಯ ಜನರು ಹೋರಾಟಕ್ಕೆ ಮುಂದಾಗಿದ್ದು, ಜಿಲ್ಲೆಯ ಶಿರಸಿಯಲ್ಲಿ ಜನ ಸಮಾವೇಶ ಮೂಲಕ ಸಾವಿರಾರು ಜನರು ಸೇರಿ ಸರ್ಕಾರದ ನಡೆ ವಿರೋಧಿಸಿದ್ದಾರೆ. ಇಂದು (ಜನವರಿ 11) ಶಿರಸಿಯ ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸ್ವಾಮಿಗಳ ನೇತೃತ್ವದಲ್ಲಿ ಹೋರಾಟ ನಡೆದಿದ್ದು, ಜಿಲ್ಲೆಯ ಎಲ್ಲಾ ಪಕ್ಷದ ಜನಪ್ರತಿನಿಧಿಗಳು, ಮಠಾಧೀಶರು ಸೇರಿದಂತೆ…

Read More

Sanjana Burli Engagement: ವೈದ್ಯನ ಜೊತೆ ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ ಸಂಜನಾ ಬುರ್ಲಿ

ನಟಿ ಸಂಜನಾ ಬುರ್ಲಿ ಅವರು ಕಿರುತೆರೆ ವೀಕ್ಷಕರಿಗೆ ಚಿರಪರಿಚಿತರು. ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಅವರು ನಟಿಸಿ ಗಮನ ಸೆಳೆದರು. ಈಗ ಅವರು ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ. ಈ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಸಂಜನಾ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದು ಅಭಿಮಾನಿಗಳಿಗೆ ಅಚ್ಚರಿ ತಂದಿದೆ. ಏಕೆಂದರೆ ಸಂಜನಾ ಅವರು ನಿಶ್ಚಿತಾರ್ಥ ಮಾಡಿಕೊಳ್ಳುವ ಬಗ್ಗೆ ಯಾವುದೇ ಸೂಚನೆಯನ್ನು ಕೊಟ್ಟಿರಲಿಲ್ಲ. ಸಂಜನಾ ಅವರು ಮದುವೆ ಆಗುತ್ತಿರುವ ಹುಡುಗನನ್ನೂ ಕೂಡ ಪರಿಚಯಿಸಿದ್ದಾರೆ. ಸಂಜನಾ ಮದುವೆ ಆಗುತ್ತಿರುವ ಹುಡುಗನ ಹೆಸರು ಸಮರ್ಥ್. ಅವರು ಚನ್ನಗಿರಿ…

Read More

ದಾಂಡೇಲಿ: ಶೌಚಕ್ಕೆ ಕುಳಿತಿದ್ದ ವ್ಯಕ್ತಿ ಮೇಲೆ ಮೊಸಳೆ ದಾಳಿ; ಸ್ಥಳೀಯರ ಸಮಯಪ್ರಜ್ಞೆಯಿಂದ ಬಚಾವ್!

ದಾಂಡೇಲಿ, ಮೇ.3: ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ ಇಲ್ಲದ ಕಾರಣ ನದಿ ದಡಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರು ಮೊಸಳೆ ದಾಳಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಕುಳಗಿ ರಸ್ತೆಯಲ್ಲಿ ನಡೆದಿದೆ. ಕುಳಗಿ ನಿವಾಸಿ ಆನಂದ ಮಣ್ಣವಡ್ಡರ (42) ಎಂಬುವವರೇ ಮೊಸಳೆ ದಾಳಿಗೆ ಒಳಗಾದ ದುರ್ದೈವಿ. ಕುಳಗಿ ರಸ್ತೆಯ ಕಾಳಿ ನದಿ ದಡದಲ್ಲಿ ಆನಂದ ಅವರು ಶೌಚಕ್ಕೆಂದು ಕುಳಿತಿದ್ದಾಗ ಏಕಾಏಕಿ ನದಿಯಿಂದ ಬಂದ ಮೊಸಳೆ ಅವರ ಮೇಲೆರಗಿದೆ. ದಾಳಿಯಿಂದ ಕಂಗಾಲಾದ ಆನಂದ ಅವರು ಜೋರಾಗಿ…

Read More

ಉದ್ಘಾಟನೆಗೂ ಮುನ್ನವೇ ಸೋರುತ್ತಿದೆ ಕೊಪ್ಪಳ ರೈಲು ನಿಲ್ದಾಣ! – Kannada News | Koppala Railway Station Leaks Ahead of PM Modi’s Virtual Inauguration

ಕೊಪ್ಪಳ, ಜುಲೈ 17: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ಉದ್ಘಾಟಿಸಬೇಕಿದ್ದ ನವೀಕೃತ ಕೊಪ್ಪಳ ರೈಲು ನಿಲ್ದಾಣದಲ್ಲಿ ಉದ್ಘಾಟನೆಗೂ ಮುನ್ನವೇ ಸೋರಿಕೆ ಕಾಣಿಸಿಕೊಂಡಿದೆ. ಈ ಘಟನೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ನಿಲ್ದಾಣದ ಉದ್ಘಾಟನೆಗಾಗಿ ಸಿದ್ಧತೆಗಳು ನಡೆಯುತ್ತಿದ್ದವು. ವೇದಿಕೆ ನಿರ್ಮಾಣ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಆದರೆ, ಮಳೆಯಾದ ಕಾರಣ ನವೀಕೃತಗೊಂಡ ರೈಲು ನಿಲ್ದಾಣದ ಚಾವಣಿಯಿಂದ ನೀರು ಸೋರಿದ್ದು, ಕಾರ್ಯಕ್ರಮಕ್ಕೆ ಅಳವಡಿಸಿದ್ದ ಸೌಂಡ್ ಬಾಕ್ಸ್‌ಗಳು ನೀರಲ್ಲಿ ನೆನೆದು ಹೋಗಿವೆ. ಅಲ್ಲದೆ, ಪೈಪ್‌ಲೈನ್ ಸಹ ಹಾನಿಗೊಳಗಾಗಿ…

Read More

ಎಲ್‌ಪಿಜಿ ಕೊರತೆ, ದರ ಏರಿಕೆಗೆ ಸೆಡ್ಡು: ಹೋಟೆಲ್ ಕಸ ನೀಡಿ ಬಯೋಗ್ಯಾಸ್ ಪಡೆಯಲು ಮುಂದಾದ ಬೆಂಗಳೂರಿನ ಹೋಟೆಲ್‌ಗಳು! – Kannada News | Bengaluru Hotels to Ditch LPG for Bio Gas: Innovative ‘Waste for Gas’ Model to Beat Rising Fuel Prices

ಬೆಂಗಳೂರು, ಏಪ್ರಿಲ್ 16: ಜಾಗತಿಕ ಯುದ್ಧದ ಸನ್ನಿವೇಶ ಮತ್ತು ವಾಣಿಜ್ಯ ಬಳಕೆಯ ಎಲ್‌ಪಿಜಿ (LPG) ಸಿಲಿಂಡರ್ ಲಭ್ಯತೆ, ದರ ಅನಿಶ್ಚಿತತೆಯಿಂದ ಕಂಗಾಲಾಗಿರುವ ಬೆಂಗಳೂರಿನ ಹೋಟೆಲ್ ಮಾಲೀಕರು ಈಗ ಹೊಸ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ. ಸಂಪೂರ್ಣವಾಗಿ ಎಲ್‌ಪಿಜಿ ಗ್ಯಾಸ್ ಅವಲಂಬನೆಯನ್ನು ಕೈಬಿಟ್ಟು, ‘ಕಸದಿಂದ ರಸ’ ಎಂಬ ಪರಿಕಲ್ಪನೆಯಡಿ ಬಯೋಗ್ಯಾಸ್ (Bio-Gas) ಬಳಕೆಗೆ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಬೆಂಗಳೂರಿನ ಅನೇಕ ಹೋಟೆಲ್ ಮಾಲೀಕರು ಆ ನಿಟ್ಟಿನಲ್ಲಿ ಇದೀಗ ಕಾರ್ಯಪ್ರವೃತ್ತರಾಗಿದ್ದಾರೆ. ಕಸ ನೀಡಿ ಗ್ಯಾಸ್ ಪಡೆಯುವ ಯೋಜನೆ ಬೆಂಗಳೂರಿನ ಹೋಟೆಲ್‌ಗಳಿಂದ ಪ್ರತಿದಿನ ಟನ್…

Read More

ಪ್ರೇಯಸಿ ಜೊತೆ ಕಾರಿನಲ್ಲಿ ಹೋಗುತ್ತಿರುವಾಗಲೇ ನಾಡಬಾಂಬ್​ ಸ್ಫೋಟಿಸಿದ ಪ್ರಿಯಕರ: ಆಗಿದ್ದೇನು? – Kannada News | Boyfriend Detonates Crude Bomb While Riding in Car With Girlfriend: What Happened

ಸುಟ್ಟುಕರಕಲಾದ ಕಾರುImage Credit source: tv9 kannada ತುಮಕೂರು, ಜೂನ್​​ 27: ಕಾರಿನಲ್ಲಿ ನಾಡಬಾಂಬ್ (nada bomb)​ ಸ್ಫೋಟಿಸಿಕೊಂಡು ಯುವಕ ಆತ್ಮಹತ್ಯೆ (death) ಮಾಡಿಕೊಂಡಿರುವಂತ ಭೀಕರ ಘಟನೆಯೊಂದು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಮೂಲದ ನಾಗೇಂದ್ರ (30) ಆತ್ಮಹತ್ಯೆ ಮಾಡಿಕೊಂಡ ಯುವಕ. ಇನ್ನು ಈ ದುರಂತದಲ್ಲಿ ಅಪಹರಣಕ್ಕೊಳಗಾಗಿದ್ದ ಯುವತಿ ಹಾಗೂ ಕಾರು ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಸ್ಥಳಕ್ಕೆ…

Read More

Gold Rate: ಗುರುವಾರ ಮತ್ತಷ್ಟು ಏರಿದ ಚಿನ್ನದ ಬೆಲೆ; ಗುರುವಾರ ಗ್ರಾಮ್​ಗೆ 70 ರೂ ಏರಿಕೆ – Kannada News | Gold Price Today on 23rd July 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಜುಲೈ 23: ಬಂಗಾರದ ದರ ಗುರುವಾರವೂ ಏರಿದೆ. ಇದರೊಂದಿಗೆ ಈ ಹಳದಿ ಲೋಹದ ಬೆಲೆ ಸತತ ಐದು ದಿನಗಳಿಂದ ಏರುತ್ತಲೇ ಬಂದಂತಾಗಿದೆ. ಗುರುವಾರ ಇದರ ಬೆಲೆ (Gold Price) ಗ್ರಾಮ್​ಗೆ 70 ರೂ ಹೆಚ್ಚಿದೆ. ನಿನ್ನೆ ಬರೋಬ್ಬರಿ 210 ರೂಗಳಷ್ಟು ಏರಿಕೆಯಾಗಿತ್ತು. ಇವತ್ತು, 18 ಕ್ಯಾರಟ್ ಚಿನ್ನದ ಬೆಲೆ 11,000 ರೂ ಗಡಿ ದಾಟಿ ಹೋಗಿದೆ. ವಿದೇಶಗಳಲ್ಲೂ ಸ್ವರ್ಣ ಬೆಲೆ ಭರ್ಜರಿ ಹೆಚ್ಚಳವಾಗಿದೆ. ಇನ್ನೊಂದೆಡೆ, ಬೆಳ್ಳಿ ಬೆಲೆ ಯಥಾಸ್ಥಿತಿ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ…

Read More

ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಕೇಸ್: ಸುಲಭವಾಗಿ ಜಾಮೀನು ಪರಿಗಣಿಸಲಾಗದು ಎಂದ ಕೋರ್ಟ್ – Kannada News | Yogeesh Gowda Case: Karnataka High Court Adjourns Bail Hearing of Ex Cop Chennakeshav Tingrikar

ಹೈಕೋರ್ಟ್, ಚನ್ನಕೇಶವ ಟಿಂಗರಿಕರ್Image Credit source: google ಧಾರವಾಡ, ಮೇ 14: ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ (Yogesh Gowda murder case) 7 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಮಾಜಿ ಪೊಲೀಸ್ ಅಧಿಕಾರಿ ಚನ್ನಕೇಶವ ಟಿಂಗರಿಕರ್ (chennakeshava tingrikar), ಶಿಕ್ಷೆ ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಶಿಕ್ಷೆಯನ್ನು ಅಮಾನತ್ತಿನಲ್ಲಿಟ್ಟು ಜಾಮೀನು ಮಂಜೂರು ಮಾಡುವಂತೆ ಅವರ ಪರ ವಕೀಲರು ಮನವಿ ಮಾಡಿದ್ದು, ಸುಲಭವಾಗಿ ಜಾಮೀನು ಪರಿಗಣಿಸಲಾಗದು ಎಂದಿರುವ ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ಮತ್ತು…

Read More

ಜಗತ್ತಿನ 2ನೇ ಅತಿ ದೊಡ್ಡ ನಾವಿಕರ ಸರಬರಾಜು ದೇಶವಾಗಿ ಹೊರಹೊಮ್ಮಿದ ಭಾರತ – Kannada News | India Emerges as World Second Largest Supplier of Seafarers

ನವದೆಹಲಿ, ಜುಲೈ 28: ಭಾರತವು ಜಾಗತಿಕ ಸಾಗರ ಕ್ಷೇತ್ರದಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದೆ. 2015ರಲ್ಲಿ ವಿಶ್ವದಲ್ಲೇ 5ನೇ ಸ್ಥಾನದಲ್ಲಿದ್ದ ಭಾರತ, ಇದೀಗ 2026ರ ವೇಳೆಗೆ ವಿಶ್ವದ 2ನೇ ಅತಿ ದೊಡ್ಡ ನಾವಿಕರ ಸರಬರಾಜು ದೇಶವಾಗಿ ಹೊರಹೊಮ್ಮಿದೆ. ‘ಬಿಮ್ಕೋ-ಐಸಿಎಸ್ ಸೆಫೇರರ್ ವರ್ಕ್‌ಫೋರ್ಸ್ ರಿಪೋರ್ಟ್ 2026’ (BIMCO-ICS Seafarer Workforce Report 2026) ವರದಿಯ ಪ್ರಕಾರ, ಜಾಗತಿಕ ಹಡಗು ರವಾನೆ ಉದ್ಯಮಕ್ಕೆ ಭಾರತವು ಬರೋಬ್ಬರಿ 3,11,936 ನಾವಿಕ ವೃತ್ತಿಪರರನ್ನು ನೀಡುವ ಮೂಲಕ, ಜಾಗತಿಕ ಸಾಗರ ಕಾರ್ಮಿಕ ಶಕ್ತಿಯಲ್ಲಿ ಶೇ….

Read More

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ – Kannada News | Ancient Lord Sri Ram Idol found During Road Works in Vizag

ವಿಶಾಖಪಟ್ಟಣ, ಡಿಸೆಂಬರ್ 20: ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ (visakhapatnam) ರಸ್ತೆ ಕಾಮಗಾರಿಯ ಸಮಯದಲ್ಲಿ ಪ್ರಾಚೀನವಾದ ಶ್ರೀರಾಮನ ವಿಗ್ರಹ (Sri Ram Idol) ಪತ್ತೆಯಾಗಿದೆ. ರಸ್ತೆಗೆ ಡಾಂಬರು ಹಾಕಿದ ನಂತರ ಹೆಚ್ಚುವರಿಯಾದ ಮಣ್ಣನ್ನು ಎಲ್ಲೋ ಸುರಿಯಲಾಗಿತ್ತು. ಅದರಲ್ಲಿ ಶ್ರೀರಾಮನ ವಿಗ್ರಹ ಇರುವುದು ಸ್ಥಳೀಯರ ಗಮನಕ್ಕೆ ಬಂದಿದೆ. ಸೊಂಟದಿಂದ ತಲೆಯವರೆಗೆ ಮಾತ್ರ ಇರುವ ರಾಮನ ಕಲ್ಲಿನ ವಿಗ್ರಹ ಪತ್ತೆಯಾಗಿದೆ. ಈ ವಿಷಯ ಹರಡುತ್ತಿದ್ದಂತೆ, ರಾಮನ ಪ್ರತಿಮೆಯನ್ನು ನೋಡಲು ಜನರು ಜಮಾಯಿಸಿದರು. ಆ ರಾಮನ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥನೆ ಮಾಡಿದರು….

Read More