ನಿಮ್ಮ ನಗರದ ಗಾಳಿ ಎಷ್ಟು ಶುದ್ಧವಾಗಿದೆ? ಬೆಂಗಳೂರು, ಮೈಸೂರು, ಹುಬ್ಬಳ್ಳಿಯ ಇಂದಿನ ವಾಯು ಗುಣಮಟ್ಟ ಹೇಗಿದೆ? – Kannada News | Bengaluru AQI Improves Post Rain; Madikeri Cleanest, Kalaburagi Moderate Air

ಬೆಂಗಳೂರು, ಏ.23: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ಇಂದು ವಾಯು ಗುಣಮಟ್ಟವು ಮಿಶ್ರಫಲ ನೀಡಿದೆ. ಕಳೆದ ರಾತ್ರಿ ನಗರದ ಕೆಲವು ಭಾಗಗಳಲ್ಲಿ ಬಿದ್ದ ಹಗುರ ಮಳೆಯಿಂದಾಗಿ ಬೆಂಗಳೂರಿನ ಗಾಳಿಯ ಗುಣಮಟ್ಟವು ‘ತೃಪ್ತಿದಾಯಕ’ (Satisfactory) ಮಟ್ಟಕ್ಕೆ ತಲುಪಿದೆ. ಆದರೆ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಧೂಳಿನ ಪ್ರಮಾಣ ಹೆಚ್ಚಾಗಿದೆ. ನಗರದ ಸರಾಸರಿ AQI 78 ದಾಖಲಾಗಿದೆ. ಸಿಲ್ಕ್ ಬೋರ್ಡ್ ಮತ್ತು ಜಯನಗರದಲ್ಲಿ ಮಾಲಿನ್ಯ ಸ್ವಲ್ಪ ಹೆಚ್ಚಿದ್ದರೆ, ಸಿಟಿ ರೈಲ್ವೆ ನಿಲ್ದಾಣ ಮತ್ತು ಪೀಣ್ಯ ಭಾಗದಲ್ಲಿ ಗಾಳಿ ಶುದ್ಧವಾಗಿದೆ….

Read More

ಕರಾವಳಿ ಜನತೆಗೆ ಸಿಹಿ ಸುದ್ದಿ: ಏಪ್ರಿಲ್ 8 ರಿಂದ ಕುವೈತ್-ಮಂಗಳೂರು ನಡುವೆ ವಿಮಾನಯಾನ ಆರಂಭ, ಇಲ್ಲಿದೆ ವೇಳಾಪಟ್ಟಿ

ಮಂಗಳೂರು, ಏಪ್ರಿಲ್ 2: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿರುವ ದಕ್ಷಿಣ ಭಾರತದ ಪ್ರಯಾಣಿಕರಿಗೆ, ಅದರಲ್ಲೂ ವಿಶೇಷವಾಗಿ ಕರಾವಳಿ ಭಾಗದ ಜನರಿಗೆ ಜಜೀರಾ ಏರ್‌ವೇಸ್ (Jazeera Airways) ಭರ್ಜರಿ ಸಿಹಿ ಸುದ್ದಿ ನೀಡಿದೆ. ಏಪ್ರಿಲ್ 8ರಿಂದ ಸೌದಿ ಅರೇಬಿಯಾದ ದಮ್ಮಮ್ ಮೂಲಕ ಕುವೈತ್ ಮತ್ತು ಮಂಗಳೂರು (Mangalore) ನಡುವೆ ವಾರಕ್ಕೆ ಎರಡು ಬಾರಿ ವಿಶೇಷ ವಿಮಾನಯಾನ ಸೇವೆ ಆರಂಭವಾಗಲಿದೆ. ಭಾರತದ ನಾಲ್ಕು ನಗರಗಳಿಗೂ ಹೊಸ ವಿಮಾನಯಾನ ಸಂಪರ್ಕ ಜಜೀರಾ ಏರ್‌ವೇಸ್ ಭಾರತದ ನಾಲ್ಕು ಪ್ರಮುಖ ನಗರಗಳಾದ ಮಂಗಳೂರು, ಕೋಝಿಕ್ಕೋಡ್ (ಕ್ಯಾಲಿಕಟ್),…

Read More

Video: ಪಿಸ್ತೂಲ್ ಹಿಡಿದು ಹೋದ ವ್ಯಕ್ತಿ, ಗಂಟೆಗಳಿಂದ ಆಗಿದ್ದ ಟ್ರಾಫಿಕ್ ಜಾಮ್ ನಿಮಿಷಗಳಲ್ಲಿ ಕ್ಲಿಯರ್

ಲಕ್ನೋ, ಏಪ್ರಿಲ್ 05: ಟ್ರಾಫಿಕ್ ಜಾಮ್ ಕ್ಲಿಯರ್ ಮಾಡಲು ವ್ಯಕ್ತಿಯೊಬ್ಬ ಪಿಸ್ತೂಲ್ ಹಿಡಿದು ಹೋದ ಘಟನೆ ಲಕ್ನೋದಲ್ಲಿ ನಡೆದಿದೆ. ಗಂಟೆಗಳಿಂದ ಇದ್ದ ಸಂಚಾರ ದಟ್ಟಣೆ ನಿಮಿಷಗಳಲ್ಲೇ ಕಡಿಮೆಯಾಗಿತ್ತು. ಇದೀಗ ವಿಡಿಯೋ ವೈರಲ್ ಆಗಿದೆ. ಸಹದತ್ ಗಂಜ್ ಪೊಲೀಸ್ ಠಾಣೆ ಪ್ರದೇಶದ ರಾಜಬ್ ಗಂಜ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, ಆ ವ್ಯಕ್ತಿ ಪಿಸ್ತೂಲ್ ಹಿಡಿದು ರಸ್ತೆಯಲ್ಲಿ ನಡೆಯುತ್ತಿರುವುದು ಪ್ರಯಾಣಿಕರಲ್ಲಿ ಭೀತಿ ಮೂಡಿಸಿತ್ತು. ಟ್ರಾಫಿಕ್ ತೆರವುಗೊಳಿಸಲು ಮತ್ತು ತನ್ನ ವಾಹನವನ್ನು ಮುಂದೆ ಸಾಗಿಸಲು ಪಿಸ್ತೂಲ್ ಬಳಸಿದ್ದಾರೆ….

Read More

‘ಅಮೃತಧಾರೆ’: ದೊಡ್ಡ ಸಾಧನೆ ಮಾಡಿದ ಮಲ್ಲಿ; ಜಯದೇವ್ ಬಾಳಲ್ಲಿ ಕತ್ತಲು

ಅಮೃತಧಾರೆ (Amruthadhaare) ಧಾರವಾಹಿಯು ಒಂದು ಮಹತ್ವದ ಘಟ್ಟ ತಲುಪಿದೆ ಎಂದರೂ ತಪ್ಪಾಗಲಾರದು. ಏಕೆಂದರೆ ಮಲ್ಲಿಗೆ ಮೋಸ ಮಾಡಬೇಕು ಎಂಬುದು ಜಯದೇವ್ ಅಲೋಚನೆ ಆಗಿತ್ತು ಮತ್ತು ಆ ಆಲೋಚನೆ ತಪ್ಪಾಯಿತು. ಇದು ಅವನಿಗೆ ತಿರುಮಂತ್ರವಾಗಿದೆ ಎಂದರೂ ತಪ್ಪಾಗಲಾರದು. ಈಗ ‘ಅಮೃತಧಾರೆ’ ಧಾರಾವಾಹಿ ಹೊಸ ತಿರುವನ್ನು ಪಡೆದುಕೊಂಡು ಸಾಗಲು ರೆಡಿ ಆಗಿದೆ. ಆ ಬಗ್ಗೆ ಇಲ್ಲಿ ನೋಡೋಣ. ಮಲ್ಲಿಗೆ ಮೋಸ ಮಾಡಬೇಕು ಎಂಬುದು ಜಯದೇವ್ ಆಲೋಚನೆ ಆಗಿತ್ತು. ಇದಕ್ಕಾಗಿ ಸುನೀಲ್ ಎಂಬ ವ್ಯಕ್ತಿಯನ್ನು ಮುಂದಕ್ಕೆ ಬಿಡಲಾಯಿತು. ಆತ ಮೋಸ ಮಾಡುವ…

Read More

Video: ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು

ಪಂಜಾಬ್, ಡಿಸೆಂಬರ್ 30: ಪಂಜಾಬ್​ನ ಅಮೃತಸರದಲ್ಲಿರುವ ಆಭರಣದಂಗಡಿಯಲ್ಲಿ ಬೆಳ್ಳಂಬೆಳಗ್ಗೆ ಕದಿಯಲೆಂದು ಹೋದ ಕಳ್ಳರು ಫಜೀತಿಗೆ ಸಿಲುಕಿರುವ ಘಟನೆ ನಡೆದಿದೆ. ಸಂಧು ಕಾಲೋನಿಯಲ್ಲಿರುವ ಅಂಗಡಿಗೆ ನುಗ್ಗಿದ ದರೋಡೆಕೋರರು ಆಭರಣ ವ್ಯಾಪಾರಿಯ ಮೇಲೆ ಗುಂಡು ಹಾರಿಸಿ, ಆವರಣದೊಳಗೆ ಎರಡು ಬಾರಿ ಗುಂಡು ಹಾರಿಸಿದರು. ಅದೃಷ್ಟವಶಾತ್, ಯಾವುದೇ ಗುಂಡುಗಳು ಆಭರಣ ವ್ಯಾಪಾರಿಗೆ ತಾಗಲಿಲ್ಲ. ಬುದ್ಧಿವಂತಿಕೆಯನ್ನು ಪ್ರದರ್ಶಿಸಿ, ಆಭರಣ ವ್ಯಾಪಾರಿ ದಾಳಿಕೋರರಲ್ಲಿ ಒಬ್ಬನನ್ನು ಸೋಲಿಸುವಲ್ಲಿ ಯಶಸ್ವಿಯಾದರು. ಈ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆರೋಪಿಗಳು ಮೋಟಾರ್ ಸೈಕಲ್‌ನಲ್ಲಿ ಬಂದಿದ್ದರು. ಪರಾರಿಯಾಗುವ ವೇಳೆ ಒಬ್ಬ…

Read More

ದ್ವಿಪೌರತ್ವ ಪ್ರಕರಣ; ರಾಹುಲ್ ಗಾಂಧಿ ವಿರುದ್ಧ ಕೇಸ್ ದಾಖಲಿಸಲು ಅಲಹಾಬಾದ್ ಹೈಕೋರ್ಟ್ ಆದೇಶ – Kannada News | Allahabad High Court Orders Case Against Congress Leader Rahul Gandhi In Dual Citizenship Case

ಅಲಹಾಬಾದ್, ಏಪ್ರಿಲ್ 17: ದ್ವಿಪೌರತ್ವದ ಆರೋಪದ ಮೇಲೆ ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ (Rahul Gandhi) ವಿರುದ್ಧ ಪ್ರಕರಣ ದಾಖಲಿಸಲು ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದ್ವಿಪೌರತ್ವ ಹೊಂದಿದ್ದಾರೆ ಎಂಬ ಆರೋಪಗಳನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಹಾಗೇ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯ ವಿರುದ್ಧ ಎಫ್‌ಐಆರ್ ದಾಖಲಿಸಲು ಪೊಲೀಸರಿಗೆ ಕೋರ್ಟ್ ಆದೇಶಿಸಿದೆ. ಉತ್ತರ ಪ್ರದೇಶ ಸರ್ಕಾರವು ಈ ಪ್ರಕರಣದ ಬಗ್ಗೆ ಸ್ವತಃ…

Read More

ATMA Scheme Recruitment: ಹಾವೇರಿ ಕೃಷಿ ಇಲಾಖೆಯಲ್ಲಿ ಉದ್ಯೋಗಾವಕಾಶ; ಪರೀಕ್ಷೆಯಿಲ್ಲದೆ ನೇರ ನೇಮಕಾತಿ – Kannada News | Haveri Agriculture Dept ATMA Scheme Jobs: Technical Manager Posts Apply by July 25

ಹಾವೇರಿ ಕೃಷಿ ಇಲಾಖೆಯಲ್ಲಿ ಉದ್ಯೋಗಾವಕಾಶImage Credit source: Getty Images ಕೃಷಿ ಇಲಾಖೆಯು ಹಾವೇರಿ ಜಿಲ್ಲೆಯಲ್ಲಿ ‘ಆತ್ಮ’ (ATMA) ಯೋಜನೆಯಡಿ ಕಾರ್ಯನಿರ್ವಹಿಸಲು ಇಚ್ಛಿಸುವ ಅರ್ಹ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವನ್ನು ನೀಡಿದೆ. ಹಾವೇರಿ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿಯು ತಾಲೂಕು ತಾಂತ್ರಿಕ ವ್ಯವಸ್ಥಾಪಕರು ಹಾಗೂ ಸಹಾಯಕ ತಾಂತ್ರಿಕ ವ್ಯವಸ್ಥಾಪಕರು ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆಫ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಯಾವುದೇ ರೀತಿಯ ಲಿಖಿತ ಪರೀಕ್ಷೆ ಇರುವುದಿಲ್ಲ, ಬದಲಿಗೆ ವಿದ್ಯಾರ್ಹತೆ ಮತ್ತು ಅನುಭವದ ಆಧಾರದ…

Read More

ಬಿಹಾರದ ಕತಿಹಾರ್‌ನಲ್ಲಿ ಹಲವು ವಾಹನಗಳ ನಡುವೆ ಡಿಕ್ಕಿ; 10 ಜನ ಸಾವು, 25 ಮಂದಿಗೆ ಗಾಯ

ನವದೆಹಲಿ, ಏಪ್ರಿಲ್ 11: ಬಿಹಾರದ ಕೊರ್ಹಾ ಪೊಲೀಸ್ ಠಾಣೆ ವ್ಯಾಪ್ತಿಯ ಗೆರಾಬರಿ ಬಳಿ ನಡೆದ ರಸ್ತೆ ಅಪಘಾತದಲ್ಲಿ ಇಂದು 10 ಜನರು ಸಾವನ್ನಪ್ಪಿದ್ದಾರೆ. 25 ಜನರು ಗಾಯಗೊಂಡಿದ್ದಾರೆ. ಈ ಅಪಘಾತದಲ್ಲಿ (Accident) ಬಸ್ ಮತ್ತು ಪಿಕಪ್ ವಾಹನವು ಡಿಕ್ಕಿ ಹೊಡೆದಿದೆ. ಗಾಯಾಳುಗಳಿಗೆ ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಜನರನ್ನು ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಗುತ್ತಿದೆ. ಅಪಘಾತದ ನಂತರ ಪೊಲೀಸರು ಮತ್ತು ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ಗಾಯಗೊಂಡ ವ್ಯಕ್ತಿಗಳಿಗೆ ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆ ನೀಡಲಾಯಿತು. ಸುಮಾರು…

Read More

9 ಸಿಕ್ಸರ್, 32 ಎಸೆತಗಳಲ್ಲಿ 93 ರನ್..! ರಜತ್ ರೌದ್ರಾವತಾರಕ್ಕೆ ಗುಜರಾತ್ ವಿಲವಿಲ – Kannada News | Rajat Patidar’s IPL 2026 Qualifier 1 Heroics: RCB Captain Smashes 93 vs GT

ಗುಜರಾತ್ ಟೈಟಾನ್ಸ್ ವಿರುದ್ಧದ ಐಪಿಎಲ್ 2026 ಕ್ವಾಲಿಫೈಯರ್ 1 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟಿದರ್ ಸಿಡಿಲಬ್ಬರದ ಬ್ಯಾಟಿಂಗ್‌ ಪ್ರದರ್ಶಿಸಿದರು. ನಿರ್ಣಾಯಕ ಪಂದ್ಯದಲ್ಲಿ ನಾಯಕನ ಇನ್ನಿಂಗ್ಸ್ ಆಡಿದ ರಜತ್ ಬಲಿಷ್ಠ ಗುಜರಾತ್ ಬೌಲಿಂಗ್ ವಿಭಾಗವನ್ನು ಹೈರಾಣಾಗಿಸಿದರು. ತಂಡ ಆರಂಭಿಕ ಆಘಾತಕ್ಕೆ ಸಿಲುಕಿಕೊಂಡಿದ್ದರೂ ತಾಳ್ಮೆಯಿಂದ ಇನ್ನಿಂಗ್ಸ್ ಕಟ್ಟಿದ ರಜತ್ ಆ ಬಳಿಕ ರೌದ್ರಾವತಾರ ತಾಳಿದರು ಇದರ ಪರಿಣಾಮವಾಗಿ ರಜತ್ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆ ಬಳಿಕ ಮತ್ತಷ್ಟು ಉಗ್ರರೂಪ ತಾಳಿದ ರಜತ್…

Read More

ಮಂಡ್ಯದಲ್ಲೊಂದು ಅಮಾನುಷ ಕೃತ್ಯ: ಕೈಮುಗಿದು ಬೇಡಿದ್ರೂ ವ್ಯಕ್ತಿಯನ್ನು ವಿವಸ್ತ್ರಗೊಳಿಸಿ ಹಲ್ಲೆ – Kannada News | Mandya brutal assault: Stone attack; FIR registered against 14 accused

ವ್ಯಕ್ತಿ ಮೇಲೆ ಹಲ್ಲೆ ಮಾಡುತ್ತಿರುವುದುImage Credit source: tv9 kannada ಮಂಡ್ಯ, ಫೆಬ್ರವರಿ 23: ಜಿಲ್ಲೆಯ ಪಾಂಡವಪುರ ತಾಲೂಕಿನ ಡಿಂಕಾ ಗ್ರಾಮದಲ್ಲಿ ಐವರ ಗುಂಪೊಂದು ಓರ್ವ ವ್ಯಕ್ತಿಗೆ ಮನಸೋ ಇಚ್ಛೆ ಮಾರಣಾಂತಿಕವಾಗಿ ಹಲ್ಲೆ (assault) ಮಾಡಿರುವಂತಹ ಘಟನೆ ನಡೆದಿದೆ. ಹುಡುಗಿ ವಿಚಾರವಾಗಿ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಕೈಮುಗಿದು ತಪ್ಪಾಯ್ತು ಎಂದರೂ ಬಿಡದೆ ಕಾಲಿನ ಮೇಲೆ ಸೈಜುಗಲ್ಲಿನಿಂದ  ಭೀಕರವಾಗಿ ಹಲ್ಲೆ ಮಾಡಿದ ಕಿರಾತಕರು ವ್ಯಕ್ತಿಯ ಕಾಲು ಮುರಿದಿದ್ದಾರೆ. ಇನ್ನು ತಾವೆಸಗಿದ ಕ್ರೌರ್ಯವನ್ನು ವಿಡಿಯೋ ಕೂಡ ಮಾಡಿದ್ದಾರೆ. ಇದೀಗ ಪಾಂಡವಪುರ…

Read More