ತೆಲುಗು ಚಿತ್ರರಂಗವನ್ನು ತುಳಿಯಲು ಯತ್ನಿಸುತ್ತಿದೆ ಬಾಲಿವುಡ್: ಆರೋಪ – Kannada News | Telugu Director accused that Bollywood trying to kill Tollywood
ಒಂದು ಸಮಯವಿತ್ತು, ಭಾರತೀಯ ಚಿತ್ರರಂಗ ಎಂದರೆ ಬಾಲಿವುಡ್ (Bollywood) ಎನ್ನಲಾಗುತ್ತಿತ್ತು, ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಅದು ಬದಲಾಗಿದೆ. ಭಾರತೀಯ ಚಿತ್ರರಂಗದ ಅತಿ ದೊಡ್ಡ ಉದ್ಯಮ ಎಂಬ ಹೆಸರು ಸಹ ಈಗ ಬಾಲಿವುಡ್ ಕೈಯಲ್ಲಿಲ್ಲ. ತೆಲುಗು ಚಿತ್ರರಂಗ ಭಾರತದ ಅತ್ಯಂತ ಲಾಭದಾಯಕ ಚಿತ್ರೋದ್ಯಮವಾಗಿ ಬೆಳೆದು ನಿಂತಿದೆ. ರಾಜಮೌಳಿ, ಪ್ರಭಾಸ್, ಅಲ್ಲು ಅರ್ಜುನ್ ಇನ್ನೂ ಕೆಲವು ಸ್ಟಾರ್ ನಟ, ನಿರ್ದೇಶಕರುಗಳು ತೆಲುಗು ಚಿತ್ರರಂಗವನ್ನು ಬಾಲಿವುಡ್ಗಿಂತಲೂ ಎತ್ತರಕ್ಕೆ ಕೊಂಡೊಯ್ದು ನಿಲ್ಲಿಸಿದ್ದಾರೆ. ಆದರೆ ತೆಲುಗು ಚಿತ್ರರಂಗದ ಈ ಜಿಗಿತವನ್ನು ಬಾಲಿವುಡ್ನ ಕೆಲವರಿಗೆ ಸಹಿಸಲಾಗುತ್ತಿಲ್ಲ,…