ಪೆನ್ಷನ್ ಹಣಕ್ಕಾಗಿ 90 ವರ್ಷದ ಅತ್ತೆಯನ್ನು ಎತ್ತಿಕೊಂಡು 9 ಕಿ.ಮೀ ನಡೆದ ಬುಡಕಟ್ಟು ಮಹಿಳೆ – Kannada News | Chhattisgarh tribal woman carries 90 year old mother in law on her shoulders walked 9 km for pension
ನವದೆಹಲಿ, ಮೇ 24: ಛತ್ತೀಸ್‌ಗಢದಲ್ಲಿ ಹೃದಯವಿದ್ರಾವಕ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. ಈ ವಿಡಿಯೋ ಹಳ್ಳಿಗಳ ಮೂಲಸೌಕರ್ಯಗಳ ಬಗ್ಗೆ ದೊಡ್ಡ ಪ್ರಶ್ನೆಯನ್ನು ಎತ್ತಿದೆ. ಮಹಿಳೆಯೊಬ್ಬರು ತಮ್ಮ 90 ವರ್ಷದ ಅತ್ತೆಯನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಕಾಡಿನ ಹಾದಿಯಲ್ಲಿ 9 ಕಿ.ಮೀ ದೂರ ಕಾಡಿನಲ್ಲಿ ನಡೆದಿದ್ದಾರೆ. ಇದು ಹಳೆಯ ವಿಕ್ರಮ-ಬೇತಾಳದ ಕತೆಗಳನ್ನು ಹೋಲುತ್ತದೆ. ಸುರ್ಗುಜಾ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದ್ದು, ಸುಖ್ಮಾನಿಯಾ ಬಾಯಿ ಎಂಬ ಮಹಿಳೆ ಬ್ಯಾಂಕಿನಿಂದ ಪಿಂಚಣಿ ಹಣ ಪಡೆಯಲು ತನ್ನ…