ಮನಕಲಕುವ ಘಟನೆ: 2 ವರ್ಷದ ಮಗುವಿಗೆ ನೇಣು ಹಾಕಿ ತಾಯಿ ಸಹ ಆತ್ಮಹತ್ಯೆ

ತುಮಕೂರು, (ಮಾರ್ಚ್ 10): ಎರಡು ವರ್ಷದ ಮಗುವಿನ ಜೊತೆ ತಾಯಿ ಒಂದೇ ಕುಣಿಕೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ತುಮಕೂರು (Tumakuru) ಜಿಲ್ಲೆ ಗುಬ್ಬಿ ತಾಲ್ಲೂಕಿನ ಹಾಗಲವಾಡಿಯಲ್ಲಿ ನಡೆದಿದೆ, ಗಂಗಾಮಣಿ(30), ಪ್ರೇಕ್ಷಾ (2) ಮೃತರು. ಗಂಗಾಮಣಿ ತನ್ನೊಟ್ಟಿಗೆ ಏನು ಅರಿಯದ 2 ವರ್ಷದ ಮಗುವಿನ ಕುತ್ತಿಗೆಗೆ ಕುಣಿಕೆ ಹಾಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.  ಗರ್ಭಕೋಶದ ಸಮಸ್ಯೆಯಿಂದ ಮನನೊಂದು ಮಹಿಳೆ ಈ ದುಡುಕಿನ ನಿರ್ಧಾರ ಕೈಗೊಂಡಿದ್ದಾಳೆ ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ಇನ್ನೆರಡು ಮಕ್ಕಳು ಸಾವಿನ ಮನೆಯಿಂದ ಪಾರಾಗಿವೆ….

Read More

Video: ಹಳ್ಳಿಯಲ್ಲಿ ವ್ಯಕ್ತಿಯ ಮೇಲೆ ದಾಳಿ ಮಾಡಿ, ಮಂಚದ ಮೇಲೆ ಮಲಗಿದ ಹುಲಿ – Kannada News | Tiger Enters Village Near Bandhavgarh, Injures Man

ಉಮಾರಿಯಾ, ಡಿಸೆಂಬರ್ 30: ಮಧ್ಯಪ್ರದೇಶದ ಬಾಂಧವ್‌ಗಢ ಹುಲಿ ಅಭಯಾರಣ್ಯದ ಹೊರವಲಯದಲ್ಲಿರುವ ಹಳ್ಳಿಯೊಂದಕ್ಕೆ ಸೋಮವಾರ ಹುಲಿಯೊಂದು ನುಗ್ಗಿ, ವ್ಯಕ್ತಿಯೊಬ್ಬರ ಮೇಲೆ ದಾಳಿ ಮಾಡಿ, ನಂತರ ಮಂಚದ ಮೇಲೆ ಮಲಗಿರುವ ಘಟನೆ ನಡೆದಿದೆ. ಹುಲಿ ಗೋಪಾಲ್ ಕೋಲ್ ಎಂಬ ಯುವಕನ ಮೇಲೆ ದಾಳಿ ಮಾಡಿ, ಒಂದೇ ದಾಳಿಯಲ್ಲಿ ಅವರನ್ನು ನೆಲಕ್ಕೆ ಉರುಳಿಸಿತ್ತು. ಅವರ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಪ್ರಥಮ ಚಿಕಿತ್ಸೆಗಾಗಿ ಕಟ್ನಿ ಜಿಲ್ಲೆಯ ಬರ್ಹಿ ಆಸ್ಪತ್ರೆಗೆ ಕಳುಹಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಟ್ನಿಗೆ ಕರೆದೊಯ್ಯಲಾಯಿತು, ಅವರ ಜೊತೆ ಬಾಂಧವಗಢ…

Read More

ಚೇತರಿಕೆ ಕಾಣದ ಸಾಯಿ ಪಲ್ಲವಿ ಸಿನಿಮಾ; ನಿರ್ಮಾಪಕ ಆಮಿರ್​ಗೆ ನಷ್ಟ?

ಸಾಯಿ ಪಲ್ಲವಿ ಹಾಗೂ ಆಮಿರ್ ಖಾನ್ ಮಗ ಜುನೈದ್ ಖಾನ್ ನಟನೆಯ ‘ಏಕ್ ದಿನ್’ ಸಿನಿಮಾ ಬಾಕ್ಸ್ ಆಫೀಸ್​​​ನಲ್ಲಿ ಹೆಚ್ಚಿನ ಏಳ್ಗೆ ಕಾಣುತ್ತಿಲ್ಲ. ಬುಕ್ ಮೈ ಶೋನಲ್ಲಿ ಸಿನಿಮಾ ಉತ್ತಮ ರೇಟಿಂಗ್ ಪಡೆದುಕೊಂಡ ಹೊರತಾಗಿಯೂ ಚಿತ್ರಕ್ಕೆ ಕಡಿಮೆ ಕಲೆಕ್ಷನ್ ಆಗುತ್ತಿದೆ. ದೇಶಾದ್ಯಂತ ಚಿತ್ರಕ್ಕೆ ಸಾವಿರಾರು ಶೋಗಳನ್ನು ನೀಡಲಾಗಿತ್ತು. ಇದರ ಮಧ್ಯೆಯೂ ಸಿನಿಮಾ ಚೇತರಿಕೆ ಕಾಣುತ್ತಿಲ್ಲ. ಇದರಿಂದ ನಿರ್ಮಾಪಕರಿಗೆ ನಷ್ಟದ ಭೀತಿ ಎದುರಾಗಿದೆಯೇ ಎಂಬ ಪ್ರಶ್ನೆ ಅಭಿಮಾನಿಗಳಿಗೆ ಮೂಡಿದೆ. ‘ಏಕ್ ದಿನ್’ ಸಿನಿಮಾ ಮೇ 1ರಂದು ರಿಲೀಸ್ ಆಯಿತು….

Read More

ಸತೀಶ್ ಜಾರಕಿಹೊಳಿ ವಿರುದ್ಧ ಫೇಸ್‌ಬುಕ್‌ನಲ್ಲಿ ಸುಳ್ಳು ಪೋಸ್ಟ್; ಇಬ್ಬರು ಅಡ್ಮಿನ್‌ಗಳ ವಿರುದ್ಧ ಎಫ್‌ಐಆರ್ ದಾಖಲು

ಬೆಳಗಾವಿ, ಮೇ 31: ರಾಜ್ಯ ರಾಜಕೀಯ ವಲಯದಲ್ಲಿ ಪ್ರಭಾವಿ ನಾಯಕರಾಗಿರುವ ಸಚಿವ ಸತೀಶ್ ಜಾರಕಿಹೊಳಿ‌ (Satish Jarkiholi) ವಿರುದ್ಧ ಫೇಸ್‌ಬುಕ್‌ನಲ್ಲಿ ಸುಳ್ಳು ವದಂತಿ ಹರಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಎರಡು ಫೇಸ್‌ಬುಕ್ ಪೇಜ್‌ಗಳ ಅಡ್ಮಿನ್‌ಗಳ ವಿರುದ್ಧ ಬೆಳಗಾವಿ (belagavi) ಜಿಲ್ಲಾ ಸಿಇಎನ್ (ಸೈಬರ್ ಕ್ರೈಂ) ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಮುಖ್ಯಾಂಶಗಳು ಸತೀಶ್ ಜಾರಕಿಹೊಳಿ ವಿರುದ್ಧ ಫೇಸ್‌ಬುಕ್ ಪೋಸ್ಟ್ ಹರಿಬಿಟ್ಟ ಕಿಡಿಗೇಡಿಗಳು ಬೆಳಗಾವಿ ಸೈಬರ್ ಕ್ರೈಂ ಪೊಲೀಸರಿಂದ FIR ಸತೀಶ್ ಜಾರಕಿಹೊಳಿ ಬೆಂಗಲಿಗರಿಂದ ದೂರು…

Read More

ಬಾಡಿಗೆ ಹಣವೇ ಗತಿ, ನಟನೆ ಬಿಟ್ಟು ಊರಿಗೆ ಹೋಗುವ ನಿರ್ಧಾರ: ಅವಕಾಶಗಳಿಲ್ಲ ಎಂದ ದಿಗಂತ್ – Kannada News | Diganth Manchale said he is not getting enough movie offers planning to quit acting

ನಟ ದಿಗಂತ್ (Diganth) ಕನ್ನಡ ಚಿತ್ರರಂಗದ ಬಲು ಜನಪ್ರಿಯ ನಟ. ಚಿತ್ರರಂಗಕ್ಕೆ ಕಾಲಿರಿಸಿ ಇಪ್ಪತ್ತು ವರ್ಷಕ್ಕೂ ಹೆಚ್ಚು ಸಮಯವಾಗಿದೆ. ಈಗಲೂ ಕೆಲವಾರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ತೆಲುಗಿನ ಸ್ಟಾರ್ ನಟಿ ಸಮಂತಾರ ಹೊಸ ಸಿನಿಮಾನಲ್ಲಿ ನಟಿಸುತ್ತಿದ್ದು, ಕನ್ನಡದಲ್ಲಿಯೂ ದಿಗಂತ್ ಅವರ ಹೊಸ ಸಿನಿಮಾ ‘ರುದ್ರ ಕಾಲ’ ಸೆಟ್ಟೇರಿದೆ. ಸಿನಿಮಾ ಮುಹೂರ್ತದಲ್ಲಿ ಕನ್ನಡ ಚಿತ್ರರಂಗ, ಇಲ್ಲಿನ ನಟರ ಪರಿಸ್ಥಿತಿಗಳ ಬಗ್ಗೆ ಮನಬಿಚ್ಚಿ ಮಾತನಾಡಿದ ದಿಗಂತ್, ತಮಗೆ ಸಹ ಅವಕಾಶಗಳ ಕೊರತೆ ಕಾಡುತ್ತಿದೆ ಎಂದಿದ್ದಾರೆ. ಕನ್ನಡ ಚಿತ್ರರಂಗ ಸಾಕಷ್ಟು ಸಮಸ್ಯೆಗಳನ್ನು…

Read More

ಟ್ರಂಪ್ ಭೇಟಿ ವಿಚಾರ; ಪ್ರಧಾನಿ ಮೋದಿ ಪರ ಬ್ಯಾಟ್ ಬೀಸಿದ ಕಾಂಗ್ರೆಸ್ ನಾಯಕ ಶಶಿ ತರೂರ್ – Kannada News | Congress Leader Shashi Tharoor Backs PM Narendra Modi Over Donald Trump Meet in France

ನವದೆಹಲಿ, ಜೂನ್ 20: ಸಾಮಾನ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿಗಳನ್ನು ತೀವ್ರವಾಗಿ ಟೀಕಿಸುವ ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor) ಈ ಬಾರಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಭೇಟಿಯ ವಿಚಾರದಲ್ಲಿ ಪ್ರಧಾನಿ ಮೋದಿಯವರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ದೇಶದ ಹಿತಾಸಕ್ತಿ ಮತ್ತು ರಾಜತಾಂತ್ರಿಕತೆಯ ವಿಷಯ ಬಂದಾಗ ಪಕ್ಷದ ರಾಜಕೀಯವನ್ನು ಬದಿಗೆ ಸರಿಸಬೇಕು ಎಂದು ಶಶಿ ತರೂರ್ ಪ್ರತಿಪಾದಿಸಿದ್ದಾರೆ. ವಿಶ್ವ ರಾಜಕಾರಣದಲ್ಲಿ ಡೊನಾಲ್ಡ್ ಟ್ರಂಪ್ ಅವರ ನಡೆಗಳು ಮತ್ತು ಹೇಳಿಕೆಗಳು ಅತ್ಯಂತ ಅನಿರೀಕ್ಷಿತವಾಗಿರುತ್ತವೆ….

Read More

ರಶ್ಮಿಕಾ-ವಿಜಯ್ ದೇವರಕೊಂಡ ವಿವಾಹಕ್ಕೆ ಅಂತಿಮವಾಗಿ ಖರ್ಚಾಗಿದ್ದೆಷ್ಟು? – Kannada News | Vijay Deverakonda and Rashmika Wedding: How much virosh Couple spend on marriage

ಕಳೆದ ಒಂದು ವಾರದಿಂದ ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ (Rashmika Mandanna) ಅವರ ವಿವಾಹದ ಸುದ್ದಿ ಎಲ್ಲೆಡೆ ಟ್ರೆಂಡಿಂಗ್‌ನಲ್ಲಿದೆ. ವಿರೋಶ್ ವಿವಾಹದ ಹೆಸರು ಕೂಡ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾಗುತ್ತಿದೆ. ಹಲವು ವರ್ಷಗಳಿಂದ ಪ್ರೀತಿಸುತ್ತಿರುವ ವಿಜಯ್-ರಶ್ಮಿಕಾ ಫೆಬ್ರವರಿ 26 ರಂದು ರಾಜಸ್ಥಾನದ ಉದಯಪುರದಲ್ಲಿ ವಿವಾಹವಾದರು. ಅದಾದ ನಂತರ, ವಿಜಯ್ ಊರಲ್ಲಿ ಔತಣಕೂಟವಿತ್ತು, ಸತ್ಯ ನಾರಾಯಣ ವ್ರತ, ಇಡೀ ಹಳ್ಳಿಗೆ ಊಟ, ಹೈದರಾಬಾದ್‌ನಲ್ಲಿ ಅಭಿಮಾನಿಗಳಿಗೆ ಒಂದು ಔತಣಕೂಟ ಆಯೋಜಿಸಲಾಯಿತು. ಅಂತಿಮವಾಗಿ, ಚಲನಚಿತ್ರ ಮತ್ತು ರಾಜಕೀಯ ಸೆಲೆಬ್ರಿಟಿಗಳಿಗೆ ವಿವಾಹ ಆರತಕ್ಷತೆಯಲ್ಲಿ ಭಾಗವಹಿಸಿದರು. ವಿರೋಶ್…

Read More

ಸಿಎಂ ಡಿಕೆ ಶಿವಕುಮಾರ್ ಗೃಹ ಕಚೇರಿ ಕೃಷ್ಣಾ ಕಾರ್ಯಾರಂಭ – Kannada News | Karnataka CM DKS Begins Work from Kumarakrupa Roads Krishna Office

ಬೆಂಗಳೂರು, ಜೂನ್​​ 24: ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧಿಕೃತ ಗೃಹ ಕಚೇರಿ ಕೃಷ್ಣಾ ಕಾರ್ಯಾರಂಭ ಮಾಡಿದೆ. ಡಿ.ಕೆ. ಶಿವಕುಮಾರ್ ಅವರು ಕಚೇರಿಯಲ್ಲಿ ವಿಶೇಷ ಪೂಜೆ ನೆರವೇರಿಸುವ ಮೂಲಕ ತಮ್ಮ ಆಡಳಿತಾತ್ಮಕ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ. ಕುಮಾರಕೃಪಾ ರಸ್ತೆಯಲ್ಲಿರುವ ಈ ಕಚೇರಿಯು ಇನ್ನು ಮುಂದೆ ರಾಜ್ಯದ ಆಡಳಿತಾತ್ಮಕ ಚಟುವಟಿಕೆಗಳ ಪ್ರಮುಖ ಕೇಂದ್ರಬಿಂದುವಾಗಲಿದೆ. ಕಚೇರಿಯಲ್ಲಿ ಅಜ್ಜಯ್ಯನ ಭಾವಚಿತ್ರವನ್ನು ಅಳವಡಿಸಿರುವುದು ಕೂಡ ಗಮನ ಸೆಳೆದಿದೆ. ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ. Source link

Read More

Age Gap in Marriage: ತಮಗಿಂತ ವಯಸ್ಸಿನಲ್ಲಿ ಹಿರಿಯ ಮಹಿಳೆಯನ್ನು ಪುರುಷರು ವಿವಾಹವಾಗಬಾರದೇ? – Kannada News | Age Gap in Marriage: A Spiritual and Cultural Perspective on Men Marrying Older Women

ವಿವಾಹವೆಂಬುದು ಮನುಷ್ಯನ ಜೀವನದ ಒಂದು ಪ್ರಮುಖ ಘಟ್ಟ. ಇದು ದೈವ ಸಂಕಲ್ಪವೂ ಹೌದು. ವಿವಾಹಗಳಲ್ಲಿ ಪ್ರೇಮ ವಿವಾಹ, ಅರೇಂಜ್ ಮ್ಯಾರೇಜ್​​ ಸಾಮಾನ್ಯವಾಗಿವೆ. ಆದರೆ, ವಯಸ್ಸಿಗೆ ಪ್ರಾಶಸ್ತ್ಯ ನೀಡಬೇಕೇ, ಕೊಡಬಾರದೇ ಎಂಬ ಪ್ರಶ್ನೆ ಸದಾ ಕಾಡುತ್ತದೆ. ಗಂಡು ತಮ್ಮಿಗಿಂತ ವಯಸ್ಸಿನಲ್ಲಿ ಹೆಚ್ಚಿನ ಮಹಿಳೆಯರನ್ನು ಮದುವೆಯಾಗುವುದು ಶುಭವೇ ಅಶುಭವೇ ಎಂಬ ಪ್ರಶ್ನೆ ವ್ಯಾಪಕವಾಗಿ ಕೇಳಿಬರುತ್ತಿದೆ. ಈ ಎಲ್ಲ ಗೊಂದಲಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ….

Read More

ರಾಜ್ಯದ 30 ಮಂದಿ ಕೈದಿಗಳಿಗೆ ಜೈಲಿಂದ ಬಿಡುಗಡೆ ಭಾಗ್ಯ: ಸನ್ನಡತೆ ಆಧಾರದಲ್ಲಿ ರಿಲೀಸ್​​

ಬೆಂಗಳೂರು, ಮಾರ್ಚ್​​ 13: ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ 30 ಜೀವಾವಧಿ ಕೈದಿಗಳನ್ನು ಉತ್ತಮ ನಡೆಗುಣದ ಆಧಾರದ ಮೇಲೆ ಮುಂಗಡವಾಗಿ ಬಿಡುಗಡೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಪರಿಶೀಲನಾ ಸಮಿತಿ (Life Convict Review – LCR) ಶಿಫಾರಸಿನ ಮೇರೆಗೆ ರಾಜ್ಯ ಸರ್ಕಾರ ಈ ಕುರಿತು ಆದೇಶ ಹೊರಡಿಸಿದ್ದು, ಸಂವಿಧಾನದ ಆರ್ಟಿಕಲ್​​ 161 ಅನ್ವಯ ರಾಜ್ಯಪಾಲರ ಅನುಮೋದನೆಯೂ ಇದಕ್ಕೆ ದೊರೆತಿದೆ. ವಿವಿಧ ಕೇಂದ್ರ ಕಾರಾಗೃಹಗಳಿಂದ ಬಂದ 54 ಪ್ರಕರಣಗಳನ್ನು ಪರಿಶೀಲಿಸಿದ LCR ಸಮಿತಿ, ಅವುಗಳಲ್ಲಿ 30 ಜೀವಾವಧಿ…

Read More