ಅಯೋಧ್ಯೆ ರಾಮಮಂದಿರ ಕಾಣಿಕೆ ಕಳ್ಳತನ ಪ್ರಕರಣ: ಹೇಗಿತ್ತು ಗೊತ್ತಾ ಆರೋಪಿಗಳ ಕಳ್ಳಾಟ? ಸ್ಫೋಟಕ ಮಾಹಿತಿ ರಿವೀಲ್ – Kannada News | Ayodhya Ram Mandir Donation Theft: Accused Hide Stolen Cash in Toilets to Avoid CCTV; Crores Looted for Property Purchase
ಲಖನೌ, ಜುಲೈ 01: ರಾಮಮಂದಿರದ ಕಾಣಿಕೆ ಹಣ ಕಳ್ಳತನ ಪ್ರಕರಣ ಸಂಬಂಧ ಆರೋಪಿಗಳ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ. ಕಳವು ಮಾಡಿದ ಹಣವನ್ನು ಮೊದಲು ಮಂದಿರದ ಶೌಚಾಲಯಗಳಲ್ಲಿ ತಾತ್ಕಾಲಿಕವಾಗಿ ಅಡಗಿಸಿಡಲಾಗುತ್ತಿತ್ತು. ನಂತರ ಸೂಕ್ತ ಸಮಯ ಸಿಕ್ಕಾಗ ಅಲ್ಲಿಂದ ಹೊರಗೆ ಸಾಗಿಸಲಾಗುತ್ತಿತ್ತು. ಈ ಮೂಲಕ ಸಿಸಿಟಿವಿ ಕಣ್ಗಾವಲು ತಪ್ಪಿಸಲು ಆರೋಪಿಗಳು ಯೋಜಿತವಾಗಿ ಕಾರ್ಯಾಚರಣೆ ನಡೆಸಿದ್ದರು ಎಂದು ತಿಳಿದುಬಂದಿದೆ. ವಿಚಾರಣೆ ವೇಳೆ ಟ್ರಸ್ಟಿ ಹೆಸರೂ ಪ್ರಸ್ತಾಪ! ನ್ಯಾಯಾಲಯದ ಅನುಮತಿ ಬಳಿಕ, ಬಂಧಿತರಾಗಿರುವ ಎಂಟು ಆರೋಪಿಗಳ ಪೈಕಿ ಅವಿನಾಶ್ ಶುಕ್ಲಾನನ್ನು…