Video: ಗಾಯಗೊಂಡು ನಡೆಯಲು ಕಷ್ಟ ಪಡುತ್ತಿರುವ ತಾಯಿಗೆ ಹೆಗಲು ನೀಡಿದ ಪುಟಾಣಿ

ಪುಟಾಣಿಗಳ (little kids) ತೊದಲು ನುಡಿ, ತುಂಟಾಟ, ಅಪ್ಪ ಅಮ್ಮನ ಮುದ್ದಿಸುವ ರೀತಿ ನೋಡುವುದೇ ಚಂದ. ಕೆಲವೊಮ್ಮೆ ಈ ಪುಟಾಣಿ ಮಕ್ಕಳು ತಾವು ಮಾಡುವ ಕೆಲಸದಿಂದಲೇ ದೊಡ್ಡವರಂತೆ ಕಾಣುವುದಿದೆ.. ಇದೀಗ ಈ ಪುಟಾಣಿಯೂ ದೊಡ್ಡವರಂತೆ ನಡೆದುಕೊಂಡಿದೆ. ಗಾಯಗೊಂಡು ನಡೆಯಲು ಕಷ್ಟ ಪಡುತ್ತಿರುವ ತಾಯಿಯನ್ನು (mother) ಪುಟಾಣಿಯೊಂದು ತನ್ನ ಹೆಗಲ ಮೇಲೆ ಹೊತ್ತುಕೊಳ್ಳಲು ಪ್ರಯತ್ನಿಸಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು ನೆಟ್ಟಿಗರು ತಾಯಿ ಮಗನ ಬಾಂಧವ್ಯಕ್ಕೆ ಫಿದಾ ಆಗಿದ್ದಾರೆ. Leenesh Madhav ಹೆಸರಿನ ಫೇಸ್ಬುಕ್…

Read More

ಕೊಪ್ಪಳ: ಅಲ್ಪಸಂಖ್ಯಾತ ಇಲಾಖೆ ವಸತಿ ಶಾಲೆಯ ಪಿಯು ವಿದ್ಯಾರ್ಥಿನಿ ಗರ್ಭಿಣಿ! – Kannada News | PU Student Found Pregnant at Koppal Morarji Desai Residential School; Accused Arrested, Safety Concerns Raised

ಕೊಪ್ಪಳ, ಫೆಬ್ರವರಿ 24: ಕೊಪ್ಪಳ (Koppal) ಜಿಲ್ಲೆಯ ಅಲ್ಪಸಂಖ್ಯಾತ ಇಲಾಖೆ ವ್ಯಾಪ್ತಿಯ ಮೊರಾರ್ಜಿ ದೇಸಾಯಿ ವಸತಿಶಾಲೆಯಲ್ಲಿ ಪಿಯು ವಿದ್ಯಾರ್ಥಿನಿ ಗರ್ಭಿಣಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಮದುವೆಯಾಗುವುದಾಗಿ ಆಮಿಷವೊಡ್ಡಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದ್ದು, ಪ್ರಕರಣ ಸಂಬಂಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಮದುವೆಯಾಗುವುದಾಗಿ ನಂಬಿಸಿ ಆರೋಪಿಯು ವಿದ್ಯಾರ್ಥಿನಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ ಎನ್ನಲಾಗಿದೆ. ಮದುವೆಯ ಆಮಿಷವೊಡ್ಡಿ ಬಲವಂತದಿಂದ ದೈಹಿಕ ಸಂಪರ್ಕ ಬೆಳೆಸಿದ್ದಲ್ಲದೆ, ಈ ವಿಷಯವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಫೆಬ್ರವರಿ…

Read More

ಚುನಾವಣೆ ಹತ್ತಿರ ಆದಾಗಲೇ ಡಿವೋರ್ಸ್ ವಿಷಯ ಬಹಿರಂಗ ಮಾಡಿದ್ದಕ್ಕೆ ದಳಪತಿ ವಿಜಯ್ ಗರಂ

ತಮಿಳುನಾಡು ಚುನಾವಣೆಯ (Tamil Nadu Elections) ಕಾವು ಏರುತ್ತಿರುವ ಬೆನ್ನಲ್ಲೇ, ನಟ ಮತ್ತು ರಾಜಕಾರಣಿ ದಳಪತಿ ವಿಜಯ್ ಅವರು ಬುಧವಾರ (ಏಪ್ರಿಲ್ 8) ತಿರುನಲ್ವೇಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾವೇಶದಲ್ಲಿ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದರು. ತಮ್ಮ ವೈಯಕ್ತಿಕ ಜೀವನದ ಏರಿಳಿತಗಳು ಮತ್ತು ತಮ್ಮ ಕೊನೆಯ ಸಿನಿಮಾ ‘ಜನ ನಾಯಕನ್’ ಎದುರಿಸುತ್ತಿರುವ ಸೆನ್ಸಾರ್ ಸಮಸ್ಯೆಗಳ ಹಿಂದೆ ರಾಜಕೀಯ ಷಡ್ಯಂತ್ರವಿದೆ ಎಂದು ಅವರು ಆರೋಪಿಸಿದ್ದಾರೆ. ವಿಚ್ಛೇದನದ ಸುದ್ದಿ ಹೊರಬಂದಿದ್ದರ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ದಳಪತಿ ವಿಜಯ್ (Thalapathy Vijay)…

Read More

ಕರ್ನಾಟಕದ ಅತಿದೊಡ್ಡ ಡಿಜಿಟಲ್ ಅರೆಸ್ಟ್ ಕೇಸ್​​​ ಭೇದಿಸಿದ ಖಾಕಿ​​​: 6 ಆರೋಪಿಗಳ ಬಂಧನ – Kannada News | Karnataka Police Crack State’s Biggest Digital Arrest Scam; 6 Accused Arrested

ಬೆಂಗಳೂರು, ಮೇ 25: ನಿನ್ನೆ ನಗರದಲ್ಲಿ ಕರ್ನಾಟಕದ ಅತಿದೊಡ್ಡ ಡಿಜಿಟಲ್ ಅರೆಸ್ಟ್​​​ ಪ್ರಕರಣವೊಂದು (Digital Arrest Fraud) ಬೆಳಕಿಗೆ ಬಂದಿತ್ತು. ವೃದ್ಧೆಯನ್ನು ಡಿಜಿಟಲ್​ ಅರೆಸ್ಟ್ ಮಾಡಿ ಬರೋಬ್ಬರಿ 24 ಕೋಟಿ ರೂ ವಂಚಿಸಿದ್ದ ಖದೀಮರ ಹೆಡೆಮುರಿ ಕಟ್ಟುವಲ್ಲಿ ಸೈಬರ್ ಕಮಾಂಡ್ ಪೊಲೀಸರು ಯಶಸ್ವಿಯಾಗಿದ್ದಾರೆ. ಒಟ್ಟು ಆರು ಆರೋಪಿಗಳನ್ನು ಬಂಧಿಸಿದ್ದಾರೆ (Arrest). ವಿಚಾರಣೆ ವೇಳೆ ಆರೋಪಿಗಳ ಹಿನ್ನೆಲೆ ಕಂಡು ಪೊಲೀಸರೇ ಶಾಕ್ ಆಗಿದ್ದಾರೆ. ಕರ್ನಾಟಕದಲ್ಲೂ ತನ್ನ ಗ್ಯಾಂಗ್​ನ್ನು​ ವಿಸ್ತರಿಸಿಕೊಂಡಿದ್ದ ಆರೋಪಿಗಳು ರಾಜ್ಯದಲ್ಲಿ ಹುಡುಗರನ್ನು ಇಟ್ಟುಕೊಂಡು ಮಾಹಿತಿ ಪಡೆಯುತ್ತಿದ್ದರು ಎಂಬ…

Read More

Horoscope Today 31 December: ಇಂದು ಈ ರಾಶಿಯವರಿಗೆ ನಂಬಿದವರಿಂದ ಮೋಸ ಹೋಗುವ ಸಾಧ್ಯತೆ

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ ಗುರೂಜಿ ಅವರು 31-12-2025 ಬುಧವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ತಿಳಿಸಿದ್ದಾರೆ. ಇಂದು 2025ರ ಕೊನೆಯ ದಿನವಾಗಿದ್ದು, ಆತ್ಮಾವಲೋಕನ ಮಾಡಿಕೊಳ್ಳಲು ಮತ್ತು 2026 ಕ್ಕೆ ಹೊಸ ಸಂಕಲ್ಪಗಳೊಂದಿಗೆ ಸಿದ್ಧರಾಗಲು ಕರೆ ನೀಡಿದ್ದಾರೆ. ಕೇವಲ ಹಣ ಸಂಪಾದನೆಯ ಗುರಿಯ ಬದಲು, ಉತ್ತಮ ಆಲೋಚನೆಗಳು ಮತ್ತು ದಾನ-ಧರ್ಮಗಳ ಮಹತ್ವವನ್ನು ಒತ್ತಿ ಹೇಳಿದ್ದಾರೆ. ಇಂದು ಮುಕ್ಕೋಟಿ ದ್ವಾದಶಿ ಇರುವುದರಿಂದ ಉಪವಾಸ ತ್ಯಜಿಸಿ, ದಾನ-ಧರ್ಮಗಳನ್ನು ಮಾಡಲು ಶುಭ ದಿನವಾಗಿದೆ. ರವಿ ಧನು ರಾಶಿಯಲ್ಲಿ ಮತ್ತು…

Read More

ನಿರ್ದೇಶಕ ಆರ್. ಚಂದ್ರು ಇನ್ಮುಂದೆ ಡಾ. ಆರ್. ಚಂದ್ರು; ಸಿಕ್ತು ಗೌರವ ಡಾಕ್ಟರೇಟ್ – Kannada News | Manipur International University to confer honorary doctorate on Director R. Chandru

R. Chandru ‘ತಾಜ್ ಮಹಲ್’, ‘ಚಾರ್ಮಿನಾರ್’, ‘ಕಬ್ಜ’ ಸಿನಿಮಾಗಳ ನಿರ್ದೇಶಕ ಆರ್. ಚಂದ್ರು ಅವರಿಗೆ ಮಣಿಪುರ ಇಂಟರ್ನ್ಯಾಷನಲ್ ಯೂನಿವರ್ಸಿಟಿಯು (MIU) ಗೌರವ ಡಾಕ್ಟರೇಟ್ (Honorary Doctorate) ನೀಡಿ ಗೌರವಿಸುವುದಾಗಿ ಘೋಷಿಸಿದೆ. ಸಿನಿಮಾ, ಕಲೆ, ಸಾಂಸ್ಕೃತಿಕ ಶ್ರೇಷ್ಠತೆ ಮತ್ತು ಸಮಾಜ ಸೇವೆಯಲ್ಲಿ ಆರ್. ಚಂದ್ರು ಅವರು ಮಾಡಿರುವ ಸಾಧನೆಯನ್ನು ಗುರುತಿಸಿ ಈ ಗೌರವವನ್ನು ನೀಡಲಾಗುತ್ತಿದೆ ಎಂದು ತಿಳಿಸಲಾಗಿದೆ. ಆರ್. ಚಂದ್ರು (R. Chandru) ಅವರಿಗೆ ಅಭಿಮಾನಿಗಳು ಮತ್ತು ಆಪ್ತರು ಅಭಿನಂದನೆ ತಿಳಿಸುತ್ತಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಕೇಶವವಾರ…

Read More

ಪ್ರಯಾಣಿಕರ ಗಮನಕ್ಕೆ: ಶನಿವಾರ ಬೆಳಿಗ್ಗೆ 4 ಗಂಟೆಯಿಂದಲೇ ಮೆಟ್ರೋ ಸೇವೆ, ವಿಶೇಷ ಏನು ಗೊತ್ತಾ? – Kannada News | Bangaluru Metro Saturday Timings | BMRCL Announces Special Early Metro Services for Bengaluru BDA Tree Planting and Walkathon on June 27

ಬೆಂಗಳೂರು, ಜೂನ್​​ 26: ಬಿಡಿಎ ಸಹಯೋಗದಲ್ಲಿ ನಾಳೆ ಅಂದರೆ ಜೂನ್​​ 27ರಂದು ಬೆಂಗಳೂರಿನ ಹಲವೆಡೆ ಸಸಿ ನೆಡುವ ಹಾಗೂ ವಾಕ್‌ಥಾನ್​​ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಹೀಗಾಗಿ ಸಾರ್ವಜನಿಕರ ಅನುಕೂಲಕ್ಕಾಗಿ ಬೆಳಗಿನಜಾವ 4 ಗಂಟೆಯಿಂದಲೇ ನಗರದಲ್ಲಿ ನಮ್ಮ ಮೆಟ್ರೋ (Namma Metro) ಸೇವೆ ಆರಂಭಗೊಳ್ಳಲಿದೆ. ಈ ವಿಶೇಷ ಮೆಟ್ರೋ ಸೇವೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಮನವಿ ಮಾಡಿದೆ. ಬಿಎಂಆರ್​ಸಿಎಲ್​ ಮಾಧ್ಯಮ ಪ್ರಕಟಣೆಯಲ್ಲಿ ಏನಿದೆ? ಬಿಎಂಆರ್​ಸಿಎಲ್​ ಈ ಕುರಿತಾಗಿ ಮಾಧ್ಯಮ ಪ್ರಕಟಣೆ ಹೊಡಿಸಿದೆ. ಬಿಡಿಎ ವತಿಯಿಂದ…

Read More

ವಿದೇಶಿ ಬಂಡವಾಳ ಸೆಳೆಯಲು ಭರ್ಜರಿ ಪ್ಲಾನ್: ಬಾಂಡ್ ತೆರಿಗೆ ಕಡಿತ ಮತ್ತು ಹೂಡಿಕೆ ನಿಯಮಗಳ ಸಡಿಲಿಕೆಗೆ ಕೇಂದ್ರ ಸರ್ಕಾರ ಮುಂದು – Kannada News

ನವದೆಹಲಿ, ಜೂನ್ 3: ಜಾಗತಿಕ ಮಾರುಕಟ್ಟೆಯಿಂದ ಭಾರತದತ್ತ ದೊಡ್ಡ ಪ್ರಮಾಣದಲ್ಲಿ ವಿದೇಶಿ ಬಂಡವಾಳವನ್ನು (Foreign Funds) ಆಕರ್ಷಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಅತ್ಯಂತ ಮಹತ್ವದ ಆರ್ಥಿಕ ಸುಧಾರಣೆಗಳಿಗೆ ಮುಂದಾಗಿದೆ. ದೇಶದ ಬಾಂಡ್ ಮಾರುಕಟ್ಟೆಯಲ್ಲಿ (Bond Market) ಹೂಡಿಕೆ ಮಾಡುವ ವಿದೇಶಿ ಹೂಡಿಕೆದಾರರ ಮೇಲಿನ ತೆರಿಗೆಯನ್ನು ಕಡಿತಗೊಳಿಸಲು ಮತ್ತು ಹೂಡಿಕೆಗೆ ಸಂಬಂಧಿಸಿದ ಕಠಿಣ ನಿಯಮಗಳನ್ನು ಸಡಿಲಗೊಳಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ವರದಿಗಳು ತಿಳಿಸಿವೆ. ಸರ್ಕಾರದ ಈ ಮಹತ್ವದ ನಿರ್ಧಾರದ ಹಿಂದಿರುವ ಕಾರಣಗಳೇನು? ಭಾರತವು ಜಾಗತಿಕ ಬಾಂಡ್…

Read More

ಆರ್‌ಎಸ್‌ಎಸ್​ನವರು ಹಿಂದುಗಳಲ್ಲ, ಕೇವಲ ಹಿಂದುತ್ವವಾದಿಗಳು: ಯತೀಂದ್ರ ಸಿದ್ದರಾಮಯ್ಯ – Kannada News | RSS Members are Hindutvavadis, Not Hindus: Minister Yathindra Siddaramaiah Backs Priyank Kharge on Registration Row

ಮೈಸೂರು, ಜೂನ್ 16: ಆರ್‌ಎಸ್‌ಎಸ್‌ ಸದಸ್ಯರು ಹಿಂದುಗಳಲ್ಲ, ಬದಲಿಗೆ ಹಿಂದುತ್ವವಾದಿಗಳು ಎಂದು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಧರ್ಮದ ಹೆಸರಿನಲ್ಲಿ ಏನು ಬೇಕಾದರೂ ಮಾಡುವಂತಿಲ್ಲ. ಆರ್‌ಎಸ್‌ಎಸ್‌ ಅನ್ನು ಕೇವಲ ಸಾಂಸ್ಕೃತಿಕ ಸಂಘಟನೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಬದಲಾಗಿ, ಇದು ಬಿಜೆಪಿ ಪರವಾಗಿ ಕಾರ್ಯನಿರ್ವಹಿಸುವ ರಾಜಕೀಯ ಸಂಸ್ಥೆಯಾಗಿದೆ. ಆರ್‌ಎಸ್‌ಎಸ್‌ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿಗಳನ್ನು ಮತ್ತು ಹಣಕಾಸು ವ್ಯವಹಾರಗಳನ್ನು ಹೊಂದಿದೆ. ಈ ಆರ್ಥಿಕ ವ್ಯವಹಾರಗಳಿಗೆ ಲೆಕ್ಕಪತ್ರವನ್ನು ನೀಡಬೇಕು. ಎಲ್ಲರಿಗೂ ಒಂದೇ ಕಾನೂನು ಇರಬೇಕು….

Read More

ಕೋಗಿಲು ಕದನ: ಬಿಜೆಪಿ ವಿರುದ್ಧ ಸಚಿವ ಕೃಷ್ಣಭೈರೇಗೌಡ ಸ್ಫೋಟಕ ಆರೋಪ – Kannada News | Krishna Byregowda Slams BJP Over Politics in Kogilu Demolition

ಬೆಂಗಳೂರು, ಜನವರಿ 05: ಕೋಗಿಲು ಲೇಔಟ್‌ನಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಮನೆಗಳ ತೆರವಿನ ಸಂಬಂಧ ವಿಪಕ್ಷ ಬಿಜೆಪಿ ಆರೋಪಗಳಿಗೆ ಸಚಿವ ಕೃಷ್ಣಭೈರೇಗೌಡ ಕಿಡಿ ಕಾರಿದ್ದಾರೆ. ಒತ್ತುವರಿ ನಾವೇ ಮಾಡಿಸಿದ್ದಾಗಿದ್ರೆ ಯಾಕೆ ತೆರವು ಮಾಡ್ತಿದ್ವಿ? ಆರೋಪ ಮಾಡೋರು ಕಾಮನ್ ಸೆನ್ಸ್ ಇಟ್ಕೊಂಡು ಮಾತಾಡಬೇಕು ಎಂದಿದ್ದಾರೆ. ಅಲ್ಲದೆ ಅಲ್ಲಿ ಬಾಂಗ್ಲಾದೇಶದ ವಲಸಿಗರು ಇರೋದಾಗಿ ಆರೋಪ ಮಾಡ್ತಿದ್ದಾರೆ. ಅದು ನಿಜವಾದ್ರೆ ಅವರನ್ನು ಗುರುತಿಸಿವುದು ಕೇಂದ್ರ ಸರ್ಕಾರದ ಕೆಲಸ. ಕೇಂದ್ರ ಗೃಹ ಇಲಾಖೆ ಏನು ಮಾಡುತ್ತಿದ್ದೆ? ಬಿಜೆಪಿಯವರು ನಮ್ಮ ಹೆಗಲ ಮೇಲೆ ಬಂದೂಕು ಇಟ್ಟು…

Read More