Headlines

ರಾಜ್ಯದಲ್ಲಿ 12 ಹೊಸ ಪೊಲೀಸ್ ಠಾಣೆಗಳ ಸ್ಥಾಪನೆ; ನಿಮ್ಮ ಜಿಲ್ಲೆಗೆ ಸಿಕ್ಕಿದ್ದೇನು? ಇಲ್ಲಿದೆ ನೋಡಿ

ಬೆಂಗಳೂರು ಮಾ.6: ರಾಜ್ಯದ ಮುಖ್ಯಮಂತ್ರಿ ಅವರು ಇಂದು (ಮಾ.6) ದಾಖಲೆಯ 17ನೇ ಬಜೆಟ್​​​ ಅನ್ನು ಮಂಡಿಸಿದ್ದಾರೆ. ಹಲವು ಕ್ಷೇತ್ರಗಳಿಗೆ ಭರಪೂರ ಅನುದಾನವನ್ನು ನೀಡಿದ್ದು, ಇದೀಗ ಪೊಲೀಸ್​​​​ ಇಲಾಖೆಗೂ ಹೆಚ್ಚಿನ ಅನುದಾನು ನೀಡಿದ್ದಾರೆ. ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಕೈಗಾರಿಕಾ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು, ನಾಗರಿಕರ ಸುರಕ್ಷತೆಗಾಗಿ ರಾಜ್ಯ ಸರ್ಕಾರವು 12 ಹೊಸ ಪೊಲೀಸ್ ಠಾಣೆಗಳನ್ನು ಮಂಜೂರು ಮಾಡಿದೆ. ಇದರಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಂಚಾರಿ ಪೊಲೀಸ್ ಠಾಣೆಗಳು ಸೇರಿವೆ. ಹೊಸ ಠಾಣೆಗಳಿಗೆ ಸುಸಜ್ಜಿತ ಕಟ್ಟಡ ಮತ್ತು ಆಧುನಿಕ ಉಪಕರಣಗಳನ್ನು…

Read More

ಲಕ್ನೋ ಕೋಚಿಂಗ್ ಸೆಂಟರ್​​ನ ಬೆಂಕಿ ದುರಂತದಲ್ಲಿ ಮೂವರು ಸಾವು; ಕಿಟಕಿಯಿಂದ ಹಾರಿದ ವಿದ್ಯಾರ್ಥಿಗಳು – Kannada News | Fire accident at Lucknow coaching centre 3 dead students jumped from building to escape

ಲಕ್ನೋ, ಜೂನ್ 22: ಉತ್ತರ ಪ್ರದೇಶದ ಲಕ್ನೋದ ಅಲಿಗಂಜ್ ಪ್ರದೇಶದಲ್ಲಿರುವ 3 ಅಂತಸ್ತಿನ ಕಮರ್ಷಿಯಲ್ ಕಾಂಪ್ಲೆಕ್ಸ್​​ನಲ್ಲಿ ಇಂದು ಮಧ್ಯಾಹ್ನ ಭೀಕರ ಬೆಂಕಿ ಅವಘಡ (Fire Accident) ಸಂಭವಿಸಿದೆ. ಈ ದುರಂತದಲ್ಲಿ ಮೂವರು ಮೃತಪಟ್ಟಿದ್ದಾರೆ. ಈ ಕಟ್ಟಡದಲ್ಲಿ ಕೋಚಿಂಗ್ ಸೆಂಟರ್ ಮತ್ತು ಗೇಮಿಂಗ್ ಜೋನ್ ಇತ್ತು. ಬೆಂಕಿ ಮತ್ತು ದಟ್ಟ ಹೊಗೆಯಿಂದ ಪಾರಾಗಲು ವಿದ್ಯಾರ್ಥಿಗಳು ಕಟ್ಟಡದ ಕಿಟಕಿಗಳಿಂದ ಜಿಗಿದು ಪ್ರಾಣ ಉಳಿಸಿಕೊಂಡಿರುವ ದೃಶ್ಯಗಳು ಎದೆ ನಡುಗಿಸುವಂತಿವೆ. ಅಗ್ನಿಶಾಮಕ ದಳದ ವಾಹನಗಳು ಬೆಂಕಿಯನ್ನು ಆರಿಸಲು ಪ್ರಯತ್ನಿಸುತ್ತಿವೆ. ಬೆಂಕಿ ಇಡೀ ಕಟ್ಟಡವನ್ನು…

Read More

ಕ್ಷಮೆ ಕೇಳಿದ ಕಮಿಡಿಯನ್ ಪ್ರಣಿತ್, ಝಾಡಿಸಿದ ‘ಕಿರಿಕ್’ ಹುಡುಗಿ ಸಂಯುಕ್ತ – Kannada News | Samyuktha Hegde slams Pranit More’s apology over 370 biryani row, calling it shameful

ಕಮಿಡಿಯನ್​ಗಳು ಕೆಲವರು ಪದೇ ಪದೇ ಋಣಾತ್ಮಕ ಕಾರಣಕ್ಕೆ ಸುದ್ದಿ ಆಗುತ್ತಲೇ ಇದ್ದಾರೆ. ಕೆಲ ಕಮಿಡಿಯನ್​​ಗಳು ಹಾಸ್ಯದ ಹೆಸರಲ್ಲಿ ತೀರ ಅಶ್ಲೀಲ, ನೈತಿಕವಲ್ಲದ ವಿಷಯಗಳನ್ನು ಮಾತನಾಡಿ ಇಕ್ಕಟ್ಟಿಗೆ ಸಿಲುಕಿದ್ದಾರೆ ಮತ್ತು ಕಾನೂನಿನಂದ ಹಾಗೂ ಸಮಾಜದಿಂದ ತೀವ್ರ ಟೀಕೆ ಮತ್ತು ವಿಮರ್ಶೆಗೆ ಒಳಗಾಗುತ್ತಿದ್ದಾರೆ. ಕಮಿಡಿಯನ್ ಪ್ರಣಿತ್ ಮೋರೆ (Pranit More) ಇದೀಗ ಇಂಥಹದ್ದೇ ಒಂದು ಇಕ್ಕಟ್ಟಿಗೆ ಸಿಲುಕಿದ್ದಾರೆ. ಬಿಗ್​​ಬಾಸ್​​ಗೆ ಸಹ ಹೋಗಿ ಬಂದಿರುವ ಪ್ರಣಿತ್ ಮೋರೆ, ನಡೆಸಿಕೊಡುವ ಶೋ ಒಂದರಲ್ಲಿ ವ್ಯಕ್ತಿಯೊಬ್ಬ 370 ರೂಪಾಯಿ ಬಿರಿಯಾನಿ ಕೊಡಿಸಿ, ಯುವತಿಯನ್ನು ಹೇಗೆಲ್ಲ…

Read More

ಅಣ್ಣನ ಮೇಲಿನ ಕೋಪಕ್ಕೆ ಆತ ಸಾಕಿದ್ದ ನಾಯಿಗೆ ಗುಂಡಿಟ್ಟು ಕೊಂದ ಸಹೋದರ!: ಆರೋಪಿ ವಿರುದ್ಧ ಕೇಸ್ ದಾಖಲು​

ದೇವನಹಳ್ಳಿ, ಏಪ್ರಿಲ್​​ 03: ಅಣ್ಣನ ಮೇಲಿನ ಕೋಪಕ್ಕೆ ಆತ ಸಾಕಿದ್ದ ನಾಯಿಗೆ ಗುಂಡಿಟ್ಟು ವ್ಯಕ್ತಿಯೋರ್ವ ಹತ್ಯೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ರೆಡ್ಡಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಸಹೋದರ ವೆಂಕಟೇಶ್ ಮೇಲೆ ಇದ್ದ ಕೋಪಕ್ಕೆ ತಮ್ಮ ನಾರಾಯಣಸ್ವಾಮಿ ಈ ಕೃತ್ಯ ಎಸಗಿದ್ದು, ಆಸ್ತಿ ವಿಚಾರವಾಗಿ ಸಹೋದರರ ನಡುವೆ ಬಹು ಸಮಯದಿಂದ ಜಗಳ ನಡೆಯುತ್ತಿತ್ತು. ಈ ನಡುವೆ ತಾನು ಹೂಕೋಸು ಬೆಳೆದಿದ್ದ ಜಮೀನಿನಲ್ಲಿ ವೆಂಕಟೇಶ್​​ ಸಾಕಿದ್ದ ನಾಯಿ ಯಾವಾಗಲೂ ಸುತ್ತಾಡುತ್ತೆ ಎಂದು ಆರೋಪಿಸಿ ಸಹೋದರನ ಮನೆ…

Read More

ಉಮರ್ ಸಂಬಂಧಿತ ಕಾರ್ಯಕ್ರಮಕ್ಕೆ ವಿರೋಧ: BJP ಪ್ರತಿಭಟನೆ ವೇಳೆ ಹೈಡ್ರಾಮಾ; ಪ್ರತಿಭಟನಾ ನಿರತರು ಖಾಕಿ ವಶಕ್ಕೆ – Kannada News | Umar Khalid Book Event in Bengaluru: BJP Protests Amidst Tight Police Security

ಬೆಂಗಳೂರು, ಏಪ್ರಿಲ್​​ 28: ದೊಮ್ಮಲೂರು ಸಮೀಪದ ಬೆಂಗಳೂರು ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಡೆದ ಉಮರ್ ಖಲೀದ್ ಅಂಡ್ ಹಿಸ್ ವರ್ಲ್ಡ್ ಪುಸ್ತಕ ಸಂಬಂಧ ಕಾರ್ಯಕ್ರಮಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. 2020ರ ದೆಹಲಿ ಗಲಭೆ ಪ್ರಕರಣದಲ್ಲಿ ಯುಎಪಿಎ ಅಡಿಯಲ್ಲಿ ಆರೋಪಿಯಾಗಿರುವ ಉಮರ್ ಖಲೀದ್ ಕುರಿತ ಈ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು ಎಂದು ಬಿಜೆಪಿ ಒತ್ತಾಯಿಸಿತ್ತು. ಹೀಗಾಗಿ ಕಾರ್ಯಕ್ರಮ ನಡೆಯುವ ಸ್ಥಳದ ಹೊರಗೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಆದರೆ, ಕಾರ್ಯಕ್ರಮ ಆರಂಭವಾಗುವ ಒಂದು ಗಂಟೆ ಮುನ್ನವೇ ಪೊಲೀಸರು…

Read More

ಹೊಸ ಇತಿಹಾಸ… ಯಾರಿಗೂ ಸಾಧ್ಯವಾಗದ ದಾಖಲೆ ಬರೆದ ಶ್ರೇಯಾಂಕಾ ಪಾಟೀಲ್ – Kannada News | Shreyanka Patil Creates New History in WPL 2026

WPL 2026: ವುಮೆನ್ಸ್​ ಪ್ರೀಮಿಯರ್ ಲೀಗ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಆಲ್​ರೌಂಡರ್ ಶ್ರೇಯಾಂಕಾ ಪಾಟೀಲ್ (Shreyanka Patil) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ 5 ವಿಕೆಟ್​ ಕಬಳಿಸುವ ಮೂಲಕ. ಈ ಐದು ವಿಕೆಟ್​ಗಳೊಂದಿಗೆ ಭರ್ಜರಿ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ. Source link

Read More

ಧರ್ಮೇಂದ್ರ ಕುಟುಂಬ ಹೇಮಾ ಮಾಲಿನಿಯನ್ನು ಒಂಟಿ ಮಾಡಿದೆ; ಕೇಳಿ ಬಂತು ಆರೋಪ – Kannada News | Dharmendra’s Demise: Shobhaa De on Hema Malini’s Dignity Amidst Family Snub

ನಟ ಧರ್ಮೇಂದ್ರ ಮತ್ತು ನಟಿ ಹೇಮಾ ಮಾಲಿನಿ 45 ವರ್ಷಗಳ ಕಾಲ ಒಟ್ಟಿಗೆ ಇದ್ದವರು. ಧರ್ಮೇಂದ್ರ ನವೆಂಬರ್ 24 ರಂದು ಕೊನೆಯುಸಿರೆಳೆದರು. ನಂತರ ನವೆಂಬರ್ 27 ರಂದು, ಡಿಯೋಲ್ ಕುಟುಂಬವು ಹೇಮಾ ಮಾಲಿನಿಯನ್ನು ನಿರ್ಲಕ್ಷಿಸಿ ಸಂತಾಪ ಸೂಚಿಸುವ ಸಭೆಯನ್ನು ಆಯೋಜಿಸಿತು. ಹೇಮಾ ಮಾಲಿನಿ ಮತ್ತು ಅವರ ಇಬ್ಬರು ಹೆಣ್ಣುಮಕ್ಕಳು ಸಹ ಸಂತಾಪ ಸೂಚಿಸುವ ಸಭೆಯಲ್ಲಿ ಕಾಣಿಸಲಿಲ್ಲ. ಅಷ್ಟೇ ಅಲ್ಲ, ಅಂತ್ಯಕ್ರಿಯೆ ನಡೆಯುತ್ತಿರುವಾಗ ಹೇಮಾ ಮಾಲಿನಿ ನೇರವಾಗಿ ಸ್ಮಶಾನಕ್ಕೆ ತಲುಪಿದರು. ಧರ್ಮೇಂದ್ರ ಅವರ ಎರಡು ಕುಟುಂಬಗಳ ನಡುವೆ ಭಿನ್ನಾಭಿಪ್ರಾಯಗಳಿರುವುದಕ್ಕೆ…

Read More

ದೆಹಲಿಯ ಎಐ ಶೃಂಗಸಭೆಯಲ್ಲಿ ಹೈಡ್ರಾಮಾ; ಶರ್ಟ್ ಬಿಚ್ಚಿ ಮೋದಿ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ – Kannada News | Indian Youth Congress stages shirtless protest at AI Impact summit

ನವದೆಹಲಿ, ಫೆಬ್ರವರಿ 20: ದೆಹಲಿಯ ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ (AI Impact Summit) ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಶರ್ಟ್ ಬಿಚ್ಚಿ, ಮೋದಿ ಹಾಗೂ ಟ್ರಂಪ್ ಫೋಟೋಗಳಿರುವ ಅಂಗಡಿಯನ್ನು ಕೈಯಲ್ಲಿ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಆ ಕಾರ್ಯಕರ್ತರು ಹೇಗೆ ಶೃಂಗಸಭೆಯ ಆವರಣದೊಳಗೆ ಪ್ರತಿಭಟನೆ ನಡೆಸಿದರು, ಈ ವೇಳೆ ಭದ್ರತಾ ಸಿಬ್ಬಂದಿ ಏನು ಮಾಡುತ್ತಿದ್ದರು ಎಂಬ ಪ್ರಶ್ನೆ ಎದ್ದಿದೆ. ಹಲವು ದೇಶಗಳ ನಾಯಕರು ಈ ಶೃಂಗಸಭೆಯಲ್ಲಿ ಪಾಲ್ಗೊಂಡಿರುವುದರಿಂದ…

Read More

ಕತ್ತರಿಸಿದರೂ ಸಾಯದೆ ಚಡಪಡಿಸುತ್ತಿರುವ ಮೀನು! ಮಲ್ಪೆ ಬಂದರಿನಲ್ಲಿ ಅಚ್ಚರಿ ಮೂಡಿಸಿದ ವಿಚಿತ್ರ ಘಟನೆ – Kannada News | Bangude Fish Still Alive After Being Cut at Malpe Harbour, Udupi, amazing Viral Video

ಉಡುಪಿ, ಜನವರಿ 27: ಗ್ರಾಹಕರಿಗೆ ನೀಡಲೆಂದು ಕತ್ತರಿಸಿದ ಬಂಗುಡೆ ಮೀನೊಂದು ಸಾಯದೆ ಮತ್ತೂ ಚಡಪಡಿಸಿದ ಅಚ್ಚರಿಯ ಘಟನೆ ಉಡುಪಿಯ ಮಲ್ಪೆ ಬಂದರಿನಲ್ಲಿ ನಡೆದಿದ್ದು, ಸ್ಥಳದಲ್ಲಿದ್ದವರನ್ನು ಬೆಚ್ಚಿಬೀಳಿಸಿದೆ. ಮಲ್ಪೆ ಬಂದರಿನಲ್ಲಿ ಮೀನು ಖರೀದಿಗೆ ಬಂದಿದ್ದ ಗ್ರಾಹಕರೊಬ್ಬರು, ಮೀನು ಮಾರಾಟ ಮಾಡುತ್ತಿದ್ದ ಮಹಿಳೆಯ ಬಳಿ ಬಂಗುಡೆ ಮೀನು ಖರೀದಿಸಿದ್ದಾರೆ. ಮೀನನ್ನು ಅಲ್ಲಿಯೇ ಕತ್ತರಿಸಿ ಕೊಡುವಂತೆ ಕೇಳಿಕೊಂಡಾಗ, ಮಹಿಳೆ ಮೀನನ್ನು ಕತ್ತರಿಸಿ ಟಬ್‌ಗೆ ಹಾಕಿದ್ದಾರೆ. ಆದರೆ, ಕತ್ತರಿಸಿದ ಬಳಿಕವೂ ಮೀನು ಜೀವಂತವಾಗಿ ಚಡಪಡಿಸುತ್ತಿರುವುದು ಗಮನಕ್ಕೆ ಬಂದಿದೆ. ಈ ವಿಚಿತ್ರ ದೃಶ್ಯವನ್ನು ಕಂಡು…

Read More