ಹಾರ್ಮುಜ್ ಜಲಸಂಧಿಯಲ್ಲಿ ಮಹಾ ಸುಂಕದ ಸಮರ, ಟ್ರಂಪ್ ಅವರ ಶೇ.20 ಶುಲ್ಕದ ಬೇಡಿಕೆಗೆ ಇರಾನ್ ಕೌಂಟರ್ – Kannada News | Hormuz Strait Tariff War: Trump’s 20 percent Fee Sparks Iran Counter and Global Oil Crisis
ಟೆಹ್ರಾನ್, ಜುಲೈ 14: ಜಾಗತಿಕ ತೈಲ ಮಾರುಕಟ್ಟೆಯ ಜೀವನಾಡಿಯಾಗಿರುವ ಹಾರ್ಮುಜ್ ಜಲಸಂಧಿ(Hormuz Strait)ಯ ನಿಯಂತ್ರಣ ಮತ್ತು ಸುಂಕದ ವಿಚಾರವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ನಡುವೆ ತೀವ್ರ ಮಾತಿನ ಚಕಿಮಕಿ ನಡೆದಿದೆ. ಜಲಸಂಧಿಯ ಮೂಲಕ ಹಾದು ಹೋಗುವ ವಿಶ್ವದ ಎಲ್ಲಾ ವಾಣಿಜ್ಯ ಹಡಗುಗಳ ಸರಕುಗಳ ಮೇಲೆ ಬರೋಬ್ಬರಿ ಶೇ.20ರಷ್ಟು ಸುರಕ್ಷತಾ ಶುಲ್ಕ ವಿಧಿಸುವ ಟ್ರಂಪ್ ಯೋಜನೆ ಬಗ್ಗೆ ಇರಾನ್ ತಮಾಷೆ ಮಾಡಿದೆ. ಇದಕ್ಕೆ ಎಕ್ಸ್ ಪೋಸ್ಟ್ ಮೂಲಕ ಪ್ರತಿಕ್ರಿಯಿಸಿರುವ ಇರಾನ್ ವಿದೇಶಾಂಗ ಸಚಿವ ಸಯ್ಯದ್…