Headlines

ಮಹಾರಾಷ್ಟ್ರದ ಪಲ್ಘಾರ್ ಹೆದ್ದಾರಿಯಲ್ಲಿ ಭೀಕರ ಅಪಘಾತ; 13 ಜನ ಸಾವು, ಸರ್ಕಾರದಿಂದ 5 ಲಕ್ಷ ಪರಿಹಾರ ಘೋಷಣೆ – Kannada News | 13 people died 20 injured in Maharashtras Palghar highway accident CM announces Rs 5 lakh aid

ಮುಂಬೈ, ಮೇ 18: ಮಹಾರಾಷ್ಟ್ರದ ಪಲ್ಘಾರ್‌ನಲ್ಲಿ ಇಂದು ಭೀಕರ ಅಪಘಾತ (Accident) ಸಂಭವಿಸಿದೆ. ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿ ಮದುವೆಗೆ ಹೋಗುತ್ತಿದ್ದ ಮತ್ತೊಂದು ಸಣ್ಣ ಟ್ರಕ್‌ಗೆ ಟೆಂಪೋ ಡಿಕ್ಕಿ ಹೊಡೆದ ಪರಿಣಾಮದಿಂದಾಗಿ 13 ಜನರು ಸಾವನ್ನಪ್ಪಿದ್ದಾರೆ. ಕಾಸಾದ ಪ್ರದೇಶ ಪೊಲೀಸರ ಪ್ರಕಾರ, 40ಕ್ಕೂ ಹೆಚ್ಚು ಜನರು ಈ ಟೆಂಪೋದಲ್ಲಿ ಪ್ರಯಾಣಿಸುತ್ತಿದ್ದರು. ಇಂದು ಬೆಳಿಗ್ಗೆ 4 ಗಂಟೆಗೆ ಕಂಟೇನರ್ ಅಪಘಾತ ಸಂಭವಿಸಿ, ಟ್ರಕ್ ನಜ್ಜುಗುಜ್ಜಾಗಿದೆ. ಎರಡೂ ವಾಹನಗಳು ಪಲ್ಟಿಯಾದ ಕಾರಣದಿಂದ ಅನೇಕ ಪ್ರಯಾಣಿಕರು ಅಡಿಗೆ ಸಿಲುಕಿಕೊಂಡರು. ಈ ಘಟನೆಯ ನಂತರ ಪೊಲೀಸರು…

Read More

ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿಗಳಿಗೆ ಚಿಕಿತ್ಸೆ ನೀಡುವಂತಿಲ್ಲ: ಮಹತ್ವದ ಆದೇಶ – Kannada News | Karnataka Government doctors cannot treat inpatients in private hospitals

ಪ್ರಾತಿನಿಧಿಕ ಚಿತ್ರImage Credit source: ehealth.com ಬೆಂಗಳೂರು, ಜನವರಿ 28: ಸರ್ಕಾರಿ ವೈದ್ಯರು (government doctors) ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವುದಕ್ಕೆ ಸರ್ಕಾರ ನಿರ್ಬಂಧ ವಿಧಿಸಿದೆ. ಆ ಮೂಲಕ ಸರ್ಕಾರಿ ವೈದ್ಯರಿಗೆ ರಾಜ್ಯ ಸರ್ಕಾರ ಶಾಕ್​ ನೀಡಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿಗಳಿಗೆ ಚಿಕಿತ್ಸೆ ನೀಡುವುದು ಸರ್ಕಾರಿ ಕರ್ತವ್ಯಗಳ ನಿರ್ವಹಣೆಗೆ ಅಡ್ಡಿಯಾಗುತ್ತದೆ ಎಂಬ ಕಾರಣದಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಶಿಸ್ತು ಕ್ರಮದ ಎಚ್ಚರಿಕೆ ಕೂಡ ನೀಡಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ…

Read More

ಅಮೆರಿಕದ ಮುಂದಿನ ದಾಳಿ ಯಾರ ಮೇಲೆ? ವೆನಿಜುವೆಲಾ, ಕ್ಯೂಬಾ, ಇರಾನ್​ನಲ್ಲಿ ಒಂದೇ ಪ್ಯಾಟರ್ನ್; ಇದೆಯಾ ಚೀನಾ ಲಿಂಕ್?

ನವದೆಹಲಿ, ಜೂನ್ 9: ಅಮೆರಿಕ ಇರಾನ್ ಮೇಲೆ ಯಾಕೆ ಯುದ್ಧ ಮಾಡುತ್ತಿದೆ? ಇರಾನ್ ಪರಮಾಣು ಶಸ್ತ್ರಾಸ್ತ್ರ ತಯಾರಿಸುತ್ತಿದೆ ಎನ್ನುವ ಕಾರಣವೊಡ್ಡಿ ದಾಳಿ ಮಾಡುತ್ತಿರುವುದು ಮೇಲ್ನೋಟಕ್ಕೆ ಕಾಣುವ ಸಂಗತಿ. ಆದರೆ, ಇರಾನ್ ತನ್ನ ಪರಮಾಣು ಯೋಜನೆಯನ್ನು ಕೈಬಿಡುತ್ತೇನೆ ಎಂದು ಹಲವು ಬಾರಿ ವಾಗ್ದಾನ ಕೊಟ್ಟಿದೆ. ಆ ನಿಟ್ಟಿನಲ್ಲಿ ಇಂಟರ್ನ್ಯಾನಲ್ ಏಜೆನ್ಸಿಗಳಿಗೆ ಸಹಕಾರ ಕೂಡ ಕೊಟ್ಟಿದೆ. ಆದರೂ ಕೂಡ ಇಸ್ರೇಲ್ ಜೊತೆಗೂಡಿ ಅಮೆರಿಕವು ಇರಾನ್ ಮೇಲೆ ಎರಗಿದೆ. ಮೇಲ್ನೋಟಕ್ಕೆ ಕಾಣುವ ಮತ್ತೊಂದು ಕಾರಣವೆಂದರೆ, ಇರಾನ್ ಅನೇಕ ಭಯೋತ್ಪಾದಕ ಸಂಘಟನೆಗಳ ಬೆಂಬಲಿಗ…

Read More

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 25ರ ದಿನಭವಿಷ್ಯ

ಜನ್ಮಸಂಖ್ಯೆ 4, 5, 6ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಮಾರ್ಚ್ 25ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4) ನೀವು ಇತರರ ಜೊತೆಗೆ ಸ್ಪರ್ಧಿಸಬೇಕಿಲ್ಲ, ಆದರೆ ನಿಮ್ಮ ಸ್ಪರ್ಧೆ ಇರುವುದು ಈ ಹಿಂದೆ ಮಾಡಿದ ತಪ್ಪುಗಳಿಂದ ಆಚೆ ಬರುವುದರಲ್ಲಿ, ನಿರ್ಧಾರ ಮಾಡಿದಂತೆಯೇ ಬದುಕುವುದರಲ್ಲಿ ಎಂಬ ವಿಷಯ ಈ ದಿನ ಪ್ರಾಮುಖ್ಯ ಪಡೆದುಕೊಳ್ಳುತ್ತದೆ. ನೀವು ಯಾವುದೇ ಕ್ಷೇತ್ರಕ್ಕೆ…

Read More

ಡಿಕೆ ಶಿವಕುಮಾರ್​ಗೆ ಸಿಎಂ ಪಟ್ಟ ಬಹುತೇಕ ಖಚಿತ: ರಾಮನಗರದಲ್ಲಿ ಭರ್ಜರಿ ಸಂಭ್ರಮಾಚರಣೆ

ರಾಮನಗರ, ಮೇ 27: ಡಿಕೆ ಶಿವಕುಮಾರ್ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಆಗುತ್ತಾರೆ ಎಂಬ ನಂಬಿಕೆಯೊಂದಿಗೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸುತ್ತಿದ್ದಾರೆ. ಅಧಿಕೃತ ಘೋಷಣೆಗೆ ಮೊದಲೇ ಪಟಾಕಿ ಸಿಡಿಸಿ, ಸಿಹಿ ಹಂಚಿ ಯುವ ಕಾಂಗ್ರೆಸ್ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದ್ದಾರೆ. ಆದರೆ, ಅಧಿಕಾರ ಹಂಚಿಕೆ ಸಂಬಂಧ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಡಿಕೆ ಶಿವಕುಮಾರ್ ಅವರಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಆದರೂ, ಸಿದ್ದರಾಮಯ್ಯ ನಾಯಕತ್ವ ಬದಲಾವಣೆಗೆ ಒಪ್ಪಿಕೊಂಡಿದ್ದಾರೆ ಮತ್ತು ಡಿಕೆ ಶಿವಕುಮಾರ್ ಮುಖ್ಯಮಂತ್ರಿ…

Read More

IND-W vs SL-W: ಭಾರತ- ಲಂಕಾ ನಡುವಿನ 4ನೇ ಟಿ20 ಪಂದ್ಯ ಎಲ್ಲಿ ಯಾವಾಗ ಎಷ್ಟು ಗಂಟೆಗೆ ಆರಂಭ? – Kannada News | India vs Sri Lanka Women 4th T20: Date, Time, Venue and How to Watch

ಭಾರತ ಹಾಗೂ ಶ್ರೀಲಂಕಾ (India Women vs Sri Lanka Women) ಮಹಿಳಾ ತಂಡಗಳ ನಡುವಿನ ಐದು ಪಂದ್ಯಗಳ ಟಿ20 ಸರಣಿಯ 4ನೇ ಪಂದ್ಯಕ್ಕಾಗಿ ಉಭಯ ತಂಡಗಳು ಸಜ್ಜಾಗಿವೆ. ಮುಂದಿನ ವರ್ಷ ನಡೆಯಲಿರುವ ಮಹಿಳಾ ಟಿ20 ವಿಶ್ವಕಪ್‌ ದೃಷ್ಟಿಯಿಂದ ಈ ಸರಣಿಯನ್ನು ಗಂಭೀರವಾಗಿ ಪರಿಗಣಿಸಿದ್ದ ಹರ್ಮನ್​ ಪಡೆ ನಿರೀಕ್ಷಿತ ಪ್ರದರ್ಶನ ನೀಡಿ ಸರಣಿಯನ್ನು ವಶಪಡಿಸಿಕೊಂಡಿದೆ. ಈಗಾಗಲೇ ಆಡಿರುವ ಮೊದಲ ಮೂರು ಪಂದ್ಯಗಳಲ್ಲಿ ಮೂರನ್ನೂ ತಂಡ ಗೆದ್ದಿದೆ. ಮೊದಲ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಮತ್ತು ಎರಡನೇ ಪಂದ್ಯದಲ್ಲಿ 7…

Read More

‘ಝೋಂಬಿ ಡ್ರಗ್ಸ್​ ಎನ್ನುವುದು ಏನೂ ಇಲ್ಲ’: ಗೃಹ ಸಚಿವ ಪರಮೇಶ್ವರ್

ಬೆಂಗಳೂರು, ಏಪ್ರಿಲ್ 10: ಇತ್ತೀಚಿಗೆ ಬೆಂಗಳೂರಿನ ರಸ್ತೆಯೊಂದರಲ್ಲಿ ಓರ್ವ ವ್ಯಕ್ತಿ ಗಂಟೆಗಟ್ಟಲ್ಲೇ ನಿಂತಲ್ಲೇ ನಿಂತಿದ್ದ ವೀಡಿಯೋ ಭಾರಿ ವೈರಲ್ ಆಗಿತ್ತು. ಆತ ಝೋಂಬಿ ಡ್ರಗ್ ಸೇವನೆಯ ಎಫೆಕ್ಟ್​ನಿಂದಾಗಿ ಹೀಗೆ ವರ್ತಿಸಿದ್ದಾನೆ ಎಂದು ವೀಡಿಯೋ ವೈರಲ್ ಮಾಡಲಾಗಿತ್ತು. ಈ ಕುರಿತು ತನಿಖೆ ನಡೆಸಿದ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್​ ಸಿಂಗ್, ಸುಳ್ಳು ಸುದ್ದಿ ಹರಡಲಾಗಿದೆ ಎಂದು ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಜಿ ಪರಮೇಶ್ವರ್ ಕೂಡ ಝೋಂಬಿ ಡ್ರಗ್ಸ್​ ಎನ್ನುವುದು ಏನೂ ಇಲ್ಲ, ಇದು…

Read More

ಹೊಸ ವರ್ಷಕ್ಕೆ ಹೊಸ ರೂಲ್ಸ್​: ಫ್ರಿಡ್ಜ್, ಟಿವಿ ಖರೀದಿಸುವ ಮುನ್ನ ಸ್ಟಾರ್ ಲೇಬಲ್ ಕಡ್ಡಾಯವಾಗಿ​​ ಗಮನಿಸಲೇಬೇಕು – Kannada News | New Energy Star Rules: Appliances Must Have Labeling for Electricity Conservation

ಹೊಸ ವರ್ಷಕ್ಕೆ ಹೊಸ ಹೊಸ ರೂಲ್ಸ್​​​ಗಳನ್ನು ತರಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನಸಾಮಾನ್ಯರು ಪಾಲಿಸಲೇಬೇಕಾದ ಕೆಲವೊಂದು ನಿಯಮಗಳನ್ನು ತರಲು ಮುಂದಾಗಿದೆ. ಇದೀಗ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುವ ಸರ್ಕಾರದ ಪ್ರಯತ್ನದ ಭಾಗವಾಗಿ, ರೆಫ್ರಿಜರೇಟರ್‌ಗಳು, ಟೆಲಿವಿಷನ್‌ಗಳು, ಎಲ್‌ಪಿಜಿ ಗ್ಯಾಸ್ ಸ್ಟೌವ್‌ಗಳು, ಕೂಲಿಂಗ್ ಟವರ್‌ಗಳು ಸೇರಿದಂತೆ ಹೆಚ್ಚು ವಿದ್ಯುತ್​​ ಉಪಯೋಗವಾಗುವ ಉಪಕರಣಗಳಿಗೆ ಜನವರಿ 1 ರಿಂದ ಅಂದರೆ ನೆನ್ನೆಯಿಂದ ಇಂಧನ ದಕ್ಷತೆಯ ಸ್ಟಾರ್-ಲೇಬಲಿಂಗ್ (energy star labeling) ಕಡ್ಡಾಯವಾಗಲಿದೆ. ಪಿಟಿಐ ವರದಿ ಪ್ರಕಾರ, ಇಂಧನ ದಕ್ಷತೆ ಬ್ಯೂರೋ (ಬಿಇಇ)…

Read More

Video: ಸಿಲಿಕಾನ್ ಸಿಟಿಯನ್ನು ಜನರು ದೂರಿದ್ರು ಈ ನಗರವನ್ನು ಬಿಡಲ್ಲ; ಅಸಲಿ ಕಾರಣ ಬಿಚ್ಚಿಟ್ಟ ಬೆಂಗಳೂರಿನ ಟೆಕ್ಕಿ – Kannada News | A techie from Bengaluru says that despite the thousands of problems here, people will not leave Bengaluru.

ಬೆಂಗಳೂರು, ಜುಲೈ 01: ಬೆಂಗಳೂರು (Bengaluru) ಅಂದ್ರೇನೆ ಅದೊಂದು ತರಹ ಮಾಯಲೋಕ. ಹೀಗಾಗಿ ಯುವಕ ಯುವತಿಯರು ಓದು ಮುಗಿಯುತ್ತಿದ್ದಂತೆ ಉತ್ತಮ ಅವಕಾಶಗಳು, ವೃತ್ತಿ ಬೆಳವಣಿಗೆ ಮತ್ತು ಆರ್ಥಿಕ ಸ್ವಾತಂತ್ರ್ಯ ಹೀಗೆ ಸಾಕಷ್ಟು ಆಯ್ಕೆಗಳಿಂದ ಬೆಂಗಳೂರಿನತ್ತ ಬರುತ್ತಾರೆ. ಸಂಚಾರ ದಟ್ಟಣೆ, ಹೆಚ್ಚುತ್ತಿರುವ ಬಾಡಿಗೆಗಳು, ನೀರಿನ ಸಮಸ್ಯೆಗಳು ಸೇರಿದಂತೆ ಇನ್ನಿತ್ತರ ವಿಚಾರಗಳ ಬಗ್ಗೆ ಟೀಕೆಗಳಿದ್ದರೂ ಇಲ್ಲಿಗೆ ಬರುವ ಜನರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಟೆಕ್ಕಿಯೊಬ್ಬರು ಸವಾಲುಗಳ ನಡುವೆ ಬೆಂಗಳೂರನ್ನು ತೊರೆಯದೇ ಜನರು ಇಲ್ಲೇ ನೆಲೆಸಿರುವುದು ಏಕೆ ಎನ್ನುವ ಬಗ್ಗೆ ಮಾತನಾಡಿದ್ದಾರೆ….

Read More

ಬೆಂಗಳೂರಿನಲ್ಲಿ ಕರಗ ವೈಭವ! ಮಲ್ಲಿಗೆ ಹೂವಿನ ಅಲಂಕಾರದಲ್ಲಿ ಕಂಗೊಳಿಸಿದ ದ್ರೌಪದಮ್ಮ; ಭಕ್ತಸಾಗರದಲ್ಲಿ ಮೊಳಗಿದ ಗೋವಿಂದ ನಾಮ

ಬೆಂಗಳೂರಿನ ಧಾರ್ಮಿಕ ವೈಭವದ ಪ್ರತೀಕವಾದ 'ಬೆಂಗಳೂರು ಕರಗ' ಉತ್ಸವವು ತಡರಾತ್ರಿ ಅತ್ಯಂತ ಅದ್ಧೂರಿಯಾಗಿ ಮತ್ತು ಸಾಂಪ್ರದಾಯಿಕವಾಗಿ ಸಂಪನ್ನಗೊಂಡಿದೆ. ತಿಗಳರಪೇಟೆಯ ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಆರಂಭವಾದ ಈ ಶಕ್ತ್ಯೋತ್ಸವವನ್ನು ಕಣ್ಣುಂಬಿಕೊಳ್ಳಲು ಭಕ್ತಸಾಗರವೇ ಹರಿದುಬಂದಿತ್ತು. ಅರ್ಚಕ ಎ. ಜ್ಞಾನೇಂದ್ರ ಅವರು ಸತತ 16ನೇ ಬಾರಿಗೆ ಮಲ್ಲಿಗೆ ಹೂವಿನಿಂದ ಅಲಂಕೃತಗೊಂಡ ದ್ರೌಪದಮ್ಮನ ಕರಗವನ್ನು ಹೊತ್ತು ಸಾಗಿದರು. ಧಾರ್ಮಿಕ ವಿಧಿವಿಧಾನಗಳ ನಂತರ ಹಸಿ ಕರಗ ದೇವಸ್ಥಾನದಿಂದ ಹೊರಬರುತ್ತಿದ್ದಂತೆ ಭಕ್ತರ ಹರ್ಷೋದ್ಗಾರ ಮುಗಿಲುಮುಟ್ಟಿತ್ತು. ಕೈಯಲ್ಲಿ ಖಡ್ಗ ಹಿಡಿದು 'ಗೋವಿಂದ.. ಗೋವಿಂದ..' ಎಂದು ನಾಮಸ್ಮರಣೆ ಮಾಡುತ್ತಿದ್ದ…

Read More